ದಿವ್ಯಸಿದ್ಧ ಮಂತ್ರ ಮತ್ತು ಯೋಗ ಸಾಮರ್ಥ್ಯದಿಂದ ಸನಾತನವನ್ನು ಸತತ ರಕ್ಷಿಸುವ ಪರಾತ್ಪರ ಗುರು ಡಾ. ಆಠವಲೆಯವರ ಮಹಾಮೃತ್ಯುಯೋಗ ನಿವಾರಿಸಿದ ಮತ್ತು ಈಶ್ವರಿ ರಾಜ್ಯದ ಸ್ಥಾಪನೆಯ ಅಡೆತಡೆ ದೂರ ಮಾಡುವ ಯೋಗತಜ್ಞ ದಾದಾಜಿ ವೈಶಂಪಾಯನ !

ಪರಾತ್ಪರ ಗುರು ಡಾ. ಆಠವಲೆ ಹಾಗೂ ಯೋಗತಜ್ಞ ದಾದಾಜಿ ವೈಶಂಪಾಯನ

೯.೪.೨೦೨೦ ರಂದು ಯೋಗತಜ್ಞ ದಾದಾಜಿಯವರ ಪುಣ್ಯತಿಥಿ ಇದೆ; ಯೋಗತಜ್ಞ ದಾದಾಜಿಯವರು ಕಾಲದ ಪರದೆಯನ್ನು ದಾಟಿ ಕಾಲಾತೀತ ಅಥವಾ ಭವಿಷ್ಯದ ಅನೇಕ ಘಟನೆಗಳನ್ನು ಹೇಳುತ್ತಿದ್ದರು ಹಾಗೂ ಜನರ ಹಿತಕ್ಕಾಗಿ ಅವಶ್ಯಕತೆ ಇದ್ದಲ್ಲಿ ಅನಿಷ್ಟ ಘಟನೆಗಳನ್ನು ತಡೆಯುತ್ತಿದ್ದರು. ದಾದಾಜಿಯವರ ಈ ನಿರಪೇಕ್ಷ ಪ್ರೇಮಭಾವದಿಂದ ಸನಾತನ ಸಂಸ್ಥೆಯು ಇನ್ನೂ ಜೀವಂತವಾಗಿದೆ ಹಾಗೂ ಕಾರ್ಯನಿರತವಾಗಿದೆ. ಇದು ಕೇವಲ ಯೋಗತಜ್ಞ ದಾದಾಜಿಯವರ ಕೃಪಾಶೀರ್ವಾದವೇ ಕಾರಣವಾಗಿದೆ. ಯೋಗತಜ್ಞ ದಾದಾಜಿ ವೈಶಾಂಪಾಯನರ ಈ ಅದ್ವಿತೀಯ ಅವತಾರ ಕಾರ್ಯದ ವಿಶ್ಲೇಷಿಸುವ ಅಮೂಲ್ಯ ಕ್ಷಣದ, ಪರತ್ಪರ ಗುರು ಡಾ. ಜಯಂತ ಆಠವಲೆಯವರ ಕೃತಜ್ಞತಾಶಬ್ಧಗಳಲ್ಲಿ ಮಂಡಿಸುತ್ತಿದ್ದೇವೆ.

೧. ಮನೆಯವರಂತೆ ಪ್ರೀತಿಸುವ ಯೋಗತಜ್ಞ ಪ.ಪೂ. ದಾದಾಜಿ

 ‘ನನ್ನ ಗುರು ಸಂತ ಭಕ್ತರಾಜ ಮಹಾರಾಜರು ೧೯೯೫ ರಲ್ಲಿ ದೇಹ ತ್ಯಾಗ ಮಾಡಿದರು. ತದನಂತರ ಅಧ್ಯಾತ್ಮದ ವಿಷಯದಲ್ಲಿ ಎಲ್ಲವನ್ನೂ ಮನಸ್ಸು ಬಿಚ್ಚಿ ಮಾತನಾಡಲು ನನಗೆ ಯಾರೂ ಇರಲಿಲ್ಲ. ಆಕಸ್ಮಿಕವಾಗಿ ೨೦೦೫ ರಲ್ಲಿ ನನಗೆ ಯೋಗತಜ್ಞ ದಾದಾಜಿ ವೈಶಂಪಾಯನರ ಪರಿಚಯವಾಯಿತು ಮತ್ತು ನಂತರ ಅವರೊಂದಿಗೆ ನನ್ನ ಆತ್ಮೀಯತೆ ಎಷ್ಟು ಹೆಚ್ಚಾಯಿತೆಂದರೆ, ಅವರೊಂದಿಗಿರುವಷ್ಟು ಆತ್ಮೀಯತೆ ವ್ಯವಹಾರದಲ್ಲಿಯೂ ಯಾರೊಂದಿಗೂ ಆಗಿರಲಿಲ್ಲ. ನನಗೆ ಅವರೊಂದಿಗೆ ಎಲ್ಲವನ್ನೂ ಮನಸ್ಸುಬಿಚ್ಚಿ ಮಾತನಾಡಲು ಆಗುತ್ತಿತ್ತು. ಇದಕ್ಕೆ ಅವರ ಸ್ವಭಾವವೇ ಕಾರಣವಾಗಿತ್ತು. ನಮ್ಮಿಬ್ಬರ ವಯಸ್ಸಿನಲ್ಲಿ ೨೩ ವರ್ಷಗಳ ಅಂತರವಿದ್ದರೂ ಅವರು ಎಂದಿಗೂ ಅದನ್ನು ಅರಿವಾಗಲು ಬಿಡುತ್ತಿರಲಿಲ್ಲ. ಅವರು ಕೊನೆಯವರೆಗೆ ನನ್ನನ್ನು ಮನೆಯವರಂತೆ ಪ್ರೀತಿಸಿದರು. ಅವರ ಮುಖವನ್ನು ನೋಡಿದಾಗ ಎಷ್ಟು ಪ್ರೀತಿಯಿತ್ತೆಂದರೆ ‘ಅವರ ಮುಖವನ್ನು ನೋಡುತ್ತಲೇ ಇರಬೇಕು, ಎಂದೆನಿಸುತ್ತಿತ್ತು. ಅವರ ಮಾತಿನಲ್ಲಿ ಎಷ್ಟು ಮಾಧುರ್ಯವಿತ್ತೆಂದರೆ ‘ಅವರ ಮಾತನ್ನು ಕೇಳುತ್ತಲೇ ಇರಬೇಕು ಎಂದೆನಿಸುತ್ತಿತ್ತು.

೨. ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರೆಂದರೆ ದೇಹಧಾರಿ ಋಷಿ ಮತ್ತು ಪ್ರೀತಿಯ ಸಾಗರ !

‘ಪ.ಪೂ. ದಾದಾಜಿಯವರು ಋಷಿಗಳಂತೆ ಅನೇಕ ವರ್ಷಗಳವರೆಗೆ ಕಠಿಣ ತಪಶ್ಚರ್ಯವನ್ನು ಮಾಡಿದ್ದರು, ಹಾಗೆಯೇ ಋಷಿಗಳಂತೆ ಅವರಲ್ಲಿ ಅನೇಕ ಸಿದ್ಧಿಗಳೂ ಇದ್ದವು. ಕೆಲವು ಋಷಿಗಳು ‘ಕೋಪಗೊಂಡರೆ, ಶಾಪ ಕೊಡುವರು ಎಂದು ಭಯವಿರುತ್ತದೆ, ಆದರೆ, ಇವರ ಬಗ್ಗೆ ಮಾತ್ರ ಎಂದಿಗೂ ಹಾಗೆ ಅನಿಸುತ್ತಿರಲಿಲ್ಲ; ಅದಕ್ಕೆ ಕಾರಣವೆಂದರೆ ಪ.ಪೂ. ದಾದಾಜಿಯೆಂದರೆ ಪ್ರೀತಿಯ ಸಾಗರವಾಗಿದ್ದರು !

೩. ತಂದೆಯಂತೆ ಪ್ರೀತಿಸುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು !

ನನ್ನ ಮೇಲೆ ಮತ್ತು ಸನಾತನ ಸಂಸ್ಥೆಯ ಮೇಲೆ ಸೂಕ್ಷ್ಮದಿಂದ ಮತ್ತು ಸ್ಥೂಲದಿಂದ ಬಂದ ಸಂಕಟಗಳ ಸರಣಿಯನ್ನು ದೂರಗೊಳಿಸಲು ಅವರು  ಹಗಲು ರಾತ್ರಿ ಸರ್ವಸ್ವವನ್ನು ಪಣಕ್ಕಿಟ್ಟು ಪ್ರಯತ್ನಿಸುತ್ತಿದ್ದರು ಮತ್ತು ಆ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯಲ್ಲಿ ಮರಳಿ ಹಿಂತಿರುಗಿಸಬೇಕೆನ್ನುವ ಅಪೇಕ್ಷೆ ಎಳ್ಳಷ್ಟೂ ಇರುತ್ತಿರಲಿಲ್ಲ. ಪ.ಪೂ. ದಾದಾಜಿಯವರು ಹೇಗೆ ಮತ್ತು ಎಷ್ಟು ಸಹಾಯ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಲು ಬಿಡುತ್ತಿರಲಿಲ್ಲ. ಪ.ಪೂ. ದಾದಾಜಿಯವರು ಸಹಾಯ ಮಾಡಲು ಆರಂಭಿಸಿದಾಗ ನಮ್ಮಿಬ್ಬರ ಪರಿಚಯವಾಗಿರಲಿಲ್ಲ. ಇದರರ್ಥ ನನಗೆ ಅವರ ಪರಿಚಯವಿರಲಿಲ್ಲ; ಆದರೆ ಅವರಿಗೆ ನನ್ನ ಪರಿಚಯವಿತ್ತು. ಯಾವುದೇ ಆಪತ್ಕಾಲದ ವಿಷಯದ ಕುರಿತು ನಾವು ಅವರಿಗೆ ತಿಳಿಸಿದಾಗ, ಅವರು ತಕ್ಷಣವೇ ‘ಹೌದು, ನನಗೆ ತಿಳಿದಿದೆ ಮತ್ತು ಇದಕ್ಕಾಗಿ ನಾನು ಉಪಾಯವನ್ನೂ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ಯೋಗತಜ್ಞ ದಾದಾಜಿಯವರಂತಹ ದಾರ್ಶನಿಕ ಸಂತರಿಗೆ ಅವರಲ್ಲಿರುವ ದಿವ್ಯ ಶಕ್ತಿಯಿಂದ ಸನಾತನದ ಮೇಲೆ ಬಂದೆರಗುವ ಯಾವುದೇ ಸಂಕಟದ ವಿಷಯವು ಮೊದಲೇ ಅವರಿಗೆ ತಿಳಿದಿರುತ್ತಿತ್ತು ಮತ್ತು ಅದರ ನಿವಾರಣೆಗಾಗಿ ಎಂದಿಗೂ ತಡ ಮಾಡದೇ ಉಪಾಯವನ್ನು ಆರಂಭಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯದ ಕಡೆಗೆ ಯಾವುದೇ ಗಮನ ಕೊಡುತ್ತಿರಲಿಲ್ಲ. ಸಂಕಟಗಳು ಬಂದೆರಗುವ ಮೊದಲೇ ಅವರು ಅನೇಕ ಪ್ರತಿಬಂಧಕಾತ್ಮಕ ಉಪಾಯಗಳನ್ನು ಮಾಡಿ ಪ್ರತಿಯೊಂದು ಕ್ಷಣವೂ ನಮ್ಮೆಲ್ಲರ ರಕ್ಷಣೆ ಮಾಡುತ್ತಿದ್ದರು. ಸನಾತನದ ಸಹಾಯಕ್ಕಾಗಿ ತತ್ಪರತೆಯಿಂದ ಧಾವಿಸುವ ವಾತ್ಸಲ್ಯ ಸ್ವರೂಪ ದಾದಾಜಿಯವರ ನಿರಪೇಕ್ಷ ಪ್ರೀತಿಯನ್ನು ನೋಡಿ ಮನಸ್ಸು ಅವಾಕ್ಕಾಗುತ್ತಿತ್ತು. ಯೋಗತಜ್ಞ ದಾದಾಜಿಯವರ ಬಗ್ಗೆ ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ನನಗೆ ಆಯಾಸ ಹೆಚ್ಚಾದ ದಿನವೇ ಅಥವಾ ಸ್ವಲ್ಪ ಆರಾಮವೆನಿಸಿದ ದಿನದಂದು ಸರಿಯಾಗಿ ಪ.ಪೂ. ದಾದಾಜಿಯವರ ದೂರವಾಣಿ ಕರೆ ಬರುತ್ತಿತ್ತು. ಒಮ್ಮೆ ನಾನು ಅವರಿಗೆ ‘ದಾದಾಜಿ ನೀವು ನನ್ನ ಆಯಾಸ ಹೆಚ್ಚಾದ ದಿನ ಅಥವಾ ನನಗೆ ಸ್ವಲ್ಪ ಆರಾಮ ಅನಿಸಿದ ದಿನವೇ ಸರಿಯಾಗಿ ದೂರವಾಣಿ ಕರೆಯನ್ನು ಮಾಡುತ್ತೀರಿ ? ಎಂದು ಕೇಳಿದಾಗ, ಅವರು ‘ನಮ್ಮಿಬ್ಬರದು ಜಾಯಿಂಟ್ ಅಕೌಂಟ್ ಆದ್ದರಿಂದ ತಿಳಿಯುತ್ತದೆ ಎಂದು ಹೇಳಿದ್ದರು.

೪. ದೈವೀ ಸಿದ್ಧಿಯ ಉಪಯೋಗವನ್ನು ಯಾವಾಗಲೂ ಜನಕಲ್ಯಾಣಕ್ಕಾಗಿ ಮಾಡುವುದು

ಪೃಥ್ವಿಯ ಮೇಲಿನ ಉಚ್ಚ ಆಧ್ಯಾತ್ಮಿಕ ಕ್ಷಮತೆ ಹೊಂದಿದ್ದ ಕೆಲವೇ ಬೆರಳೆಣಿಕೆಯಷ್ಟು ಸಂತರಲ್ಲಿ ಒಬ್ಬರೆಂದರೆ ಯೋಗತಜ್ಞ ದಾದಾಜಿ ! ಅವರು ತನ್ನ ೧೬ ನೇ  ವಯಸ್ಸಿನಿಂದಲೇ ಸಾಧನೆ ಪ್ರಾರಂಭಿಸಿದರು. ಹಿಮಾಲಯದಲ್ಲಿ ಮರಗಟ್ಟುವ ಚಳಿಯಲ್ಲಿ  ತಪಶ್ಚರ್ಯದಂತಹ ಕಠಿಣ ಸಾಧನೆಯನ್ನು ಮಾಡಿದರು. ವಿಶೇಷವೆಂದರೆ ಈ ತಪಶ್ಚರ್ಯೆಯಿಂದ ಅವರಿಗೆ ಪ್ರಾಪ್ತವಾದ ಆಧ್ಯಾತ್ಮಿಕ ಬಲ ಹಾಗೆಯೇ ದೈವಿ ಸಿದ್ಧಿಗಳ ಉಪಯೋಗವನ್ನು ಅವರು ಯಾವಾಗಲೂ ಜನಕಲ್ಯಾಣಕ್ಕಾಗಿಯೇ ಉಪಯೋಗಿಸಿದರು. ದಾದಾಜಿಯವರ ಉಪಾಯಗಳ ವೈಶಿಷ್ಟ್ಯವೆಂದರೆ ಅವರು ಸ್ಥೂಲ ಮತ್ತು ಸೂಕ್ಷ್ಮ ಇವೆರಡೂ ಸ್ತರಗಳಲ್ಲಿ ಉಪಾಯಗಳನ್ನು ಮಾಡುತ್ತಿದ್ದರು. ಅವರ ಸಿದ್ಧ ಮಂತ್ರಗಳಲ್ಲಿ ಎಷ್ಟು ಶಕ್ತಿಯಿದೆಯೆಂದರೆ, ಮಂತ್ರಪಠಣದಿಂದ ಸಾಧಕರಿಗೆ ಅನೇಕ ರೀತಿಯ ಲಾಭಗಳಾಗುತ್ತಿತ್ತು. ಅವರು ಸಿದ್ಧಗೊಳಿಸಿದ ದತ್ತಮಾಲಾ ಮಂತ್ರಪಠಣದಿಂದ ಬಂದಂತಹ ಒಂದು ಅನುಭೂತಿಯೆಂದರೆ ರಾಮನಾಥಿ ಆಶ್ರಮದ ಧ್ಯಾನ ಮಂದಿರದಲ್ಲಿ ಸಾಧಕರು ಈ ಮಂತ್ರದ ಪಠಣವನ್ನು ಮಾಡುತ್ತಿರುವಾಗ ಸ್ವಲ್ಪ ಸಮಯದ ಬಳಿಕ ಧ್ಯಾನ ಮಂದಿರದ ಹೊರಗಿನ ಪರಿಸರದಲ್ಲಿ ತನ್ನಿಂತಾನೇ ೩೦೦ ಕ್ಕಿಂತಲೂ ಹೆಚ್ಚು ಔದುಂಬರ ಗಿಡದ ಸಸಿಗಳ ಉಗಮವಾಯಿತು. ಇದು ‘ಮಂತ್ರವು ವಾತಾವರಣದಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ ? ಎನ್ನುವುದರ ದೃಶ್ಯ ಪರಿಣಾಮವನ್ನು ತೋರಿಸುವ ಉದಾಹರಣೆಯಾಗಿದ್ದು, ಅದರಿಂದ ಅವರ ಮಂತ್ರ ಸಾಮರ್ಥ್ಯದ ಅರಿವಾಗುತ್ತದೆ.

೫. ಕಾಲದ ಪರದೆಯನ್ನು ದಾಟಿ ಅದನ್ನು ಅರಿಯುವ ಯೋಗತಜ್ಞ ದಾದಾಜಿಯವರ ದಾರ್ಶನಿಕತೆ

‘ವಾಲ್ಮೀಕಿ ಋಷಿಗಳು ರಾಮ ಜನಿಸುವ ಮೊದಲೇ ರಾಮಾಯಣವನ್ನು ಬರೆದರು ಮತ್ತು ಮುಂದೆ ಅಕ್ಷರಶಃ ಅದೇ ರೀತಿ ರಾಮಾಯಣ ಘಟಿಸಿತು ಎನ್ನುವುದನ್ನು ನಾವು ಓದಿದ್ದೇವೆ. ಆಗ ‘ಇದು ಹೇಗೆ ಸಾಧ್ಯ ? ಎನ್ನುವ  ಸಂಶಯವನ್ನು ವ್ಯಕ್ತಪಡಿಸುವ ಪ್ರತಿಕ್ರಿಯೆ ಹೆಚ್ಚಿನ ಜನರ ಮನಸ್ಸಿನಲ್ಲಿ ಬರುತ್ತದೆ. ಇವೆಲ್ಲ ಸತ್ಯವಿದೆ ಎಂದು ಪ.ಪೂ. ಯೋಗತಜ್ಞ ದಾದಾಜಿ ವೈಶಂಪಾಯನರು ಅನೇಕ ವರ್ಷಗಳ ಮೊದಲೇ ಬರೆದು, ಬಳಿಕ ಬಹಿರಂಗ ಪಡಿಸಿರುವ ಅನೇಕ ಭವಿಷ್ಯವಾಣಿಯಿಂದ ತಿಳಿಯಬಹುದು. ಯೋಗತಜ್ಞ ದಾದಾಜಿಯವರು ಕಾಲದ ಪರದೆಯನ್ನು ದಾಟಿ ಭೂತಕಾಲ ಅಥವಾ ಭವಿಷ್ಯಕಾಲದ ಅನೇಕ ಘಟನೆಗಳನ್ನು ಹೇಳುತ್ತಿದ್ದರು ಮತ್ತು ಜನಕಲ್ಯಾಣಕ್ಕೆ ಆವಶ್ಯಕವಿದ್ದರೆ ಆ ಕೆಟ್ಟ ಘಟನೆಗಳನ್ನು ದೂರಗೊಳಿಸುತ್ತಿದ್ದರು. ಅವರು ನನ್ನ ಮತ್ತು ‘ಸನಾತನ ಸಂಸ್ಥೆಯ ಸಂದರ್ಭದಲ್ಲಿಯೂ ಭವಿಷ್ಯವಾಣಿಯನ್ನು ಹೇಳಿದ್ದರು. ಆಶ್ಚರ್ಯದ ವಿಷಯವೆಂದರೆ ಅವರೊಂದಿಗೆ ಸ್ಥೂಲದಲ್ಲಿ ಪರಿಚಯವಾಗುವ ಮೊದಲೇ ಅವರು ೨೦೦೪ರಲ್ಲಿ ನನ್ನ ಮಹಾಮೃತ್ಯುಯೋಗದ ಮತ್ತು ಪರಾತ್ಪರ ಗುರು ದೇಶಪಾಂಡೆಕಾಕಾರ ದೇಹತ್ಯಾಗದ ಭವಿಷ್ಯವಾಣಿಯನ್ನು ನುಡಿದಿದ್ದರು. (೨೪.೯.೨೦೧೦ ರಂದು ಪರಾತ್ಪರ ಗುರು ದೇಶಪಾಂಡೆ ಕಾಕಾರವರ ದೇಹತ್ಯಾಗವಾಯಿತು) ಅವರು ಅದನ್ನು ೨೦೧೦ ರಲ್ಲಿ ಬಹಿರಂಗಪಡಿಸಿದರು. ಪ.ಪೂ. ದಾದಾಜಿಯವರು ಆಯಾ ಸಮಯದಲ್ಲಿ ನುಡಿದ ಭವಿಷ್ಯವಾಣಿಯಲ್ಲಿ ಮಾಡಿರುವ ನನ್ನ ಕಾರ್ಯದ ಉಲ್ಲೇಖವೆಂದರೆ ‘ಸನಾತನ ಸಂಸ್ಥೆಯ ಕಾರ್ಯದ ಉಲ್ಲೇಖವಾಗಿದೆ.

೬. ಪ.ಪೂ. ದಾದಾಜಿಯವರು ಪ.ಪೂ. ಡಾಕ್ಟರರ ಮೇಲೆ ಬಂದೆರಗಿದ್ದ ಮಹಾಮೃತ್ಯುಯೋಗದಂತಹ ಭಯಾನಕ ಸಂಕಟವನ್ನು ತಮ್ಮ ದೈವಿ ಶಕ್ತಿಯಿಂದ ದೂರಗೊಳಿಸುವುದು

ಪ.ಪೂ. ದಾದಾಜಿಯವರ ದೈವಿ ಬೆಂಬಲದಿಂದ ನನ್ನ ಮೇಲೆ ಅನೇಕ ಬಾರಿ ಬಂದಂತಹ ಮಹಾಮೃತ್ಯುಯೋಗದಂತಹ ಸಂಕಟಗಳು ದೂರವಾಗಿವೆ. ಪ.ಪೂ. ದಾದಾಜಿಯವರು ಅತ್ಯಂತ ಕಠಿಣ ಸಾಧನೆಯನ್ನು ಮಾಡಿ ನನ್ನ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿಯನ್ನು ವಹಿಸುತ್ತಿದ್ದರು. ಪ.ಪೂ. ದಾದಾಜಿಯವರು ‘ನೀವು ಸುರಕ್ಷಿತವಾಗಿದ್ದರೆ ಮಾತ್ರ ನಿಮ್ಮ ಅಧ್ಯಾತ್ಮಪ್ರಸಾರದ ಕಾರ್ಯ ಮುಂದುವರಿಯುವುದು; ಆದ್ದರಿಂದ ನಿಮ್ಮ ಆಯುಷ್ಯದ ದಾರವನ್ನು ಗಟ್ಟಿಯಾಗಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ, ಎಂದರು.

೨೦೦೭ ರಿಂದ  ನನಗೆ ಅನೇಕ ಮೃತ್ಯುಯೋಗಗಳು ಬಂದವು. ೨೦೧೦ ರ ಮುಂದಿನ ನನ್ನ ಭವಿಷ್ಯವನ್ನು ಯಾವುದೇ ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳಿರಲಿಲ್ಲ; ಏಕೆಂದರೆ ಆಗ ನಾನು ಜೀವಂತ ಇರಲು ಸಾಧ್ಯವಿರಲಿಲ್ಲ. ಹೀಗಿದ್ದರೂ ಪ.ಪೂ. ದಾದಾಜಿ ವೈಶಂಪಾಯನರು ಮಾಡಿರುವ ಅಖಂಡ ಅನುಷ್ಠಾನದಿಂದಲೇ ನಾನು ಇಂದಿಗೂ ಜೀವಂತವಾಗಿದ್ದು, ಪ್ರತಿದಿನ ಅನೇಕ ಗಂಟೆಗಳ ಕಾಲ ಗ್ರಂಥ ಬರವಣಿಗೆಯ ಸೇವೆಯನ್ನು ಮಾಡುತ್ತಿದ್ದೇನೆ ಮತ್ತು ಇಂದಿಗೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ಅಲ್ಪಸ್ವಲ್ಪ ಕಾರ್ಯನಿರತನಾಗಿದ್ದೇನೆ. ಇದರಿಂದ ನಾನು ಶಬ್ದಗಳಲ್ಲಿ  ಹೇಳ ಬಯಸುವುದೇನೆಂದರೆ, ನಾನು ಮತ್ತು ಸನಾತನ ಸಂಸ್ಥೆ ಇಂದಿಗೂ ಜೀವಂತವಾಗಿದೆ ಮತ್ತು ಕಾರ್ಯನಿರತವಾಗಿದೆಯೆಂದರೆ ಅದು ಕೇವಲ ಪ.ಪೂ. ದಾದಾಜಿಯವರ ಕೃಪಾಶೀರ್ವಾದಿಂದಲೇ ಆಗಿದೆ.

೭. ಸನಾತನದ ಆಧಾರಸ್ತಂಭ

ಯೋಗತಜ್ಞ ದಾದಾಜಿಯವರು ಯಾವ ಕ್ಷಣ ಸನಾತನದ ಸಂಪರ್ಕಕ್ಕೆ ಬಂದರೋ, ಆ ಕ್ಷಣದಿಂದ ಅವರು ಸನಾತನದ ಪ್ರತಿಯೊಬ್ಬ ಸಾಧಕರ ಹಾಗೆಯೇ ಸನಾತನದ ಕಾರ್ಯದ ಆಧ್ಯಾತ್ಮಿಕ ಸ್ತರದ ಪಾಲಕತ್ವ ಸ್ಥಾನವನ್ನು ಸ್ವೀಕರಿಸಿದರು. ಸನಾತನದ ಸಾಧಕರಿಗೆ ತೊಂದರೆಯಾಗುತ್ತಿದ್ದಾಗ ಅವರು ತಮ್ಮ ಆಧ್ಯಾತ್ಮಿಕ ಸಾಮರ್ಥ್ಯವನ್ನು ಸನಾತನದ ಬೆಂಗಾವಲಾಗಿರಿಸಿದರು. ಇದರಿಂದ  ಅವರು ಸನಾತನಕ್ಕೆ ಬಹುದೊಡ್ಡ ಆಧಾರಸ್ತಂಭವಾಗಿದ್ದರು. ಪ್ರತಿಯೊಂದು ಕ್ಷಣವೂ ಮತ್ತು ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಮತ್ತು ಅತ್ಯಂತ ಕಡಿಮೆ ಪ್ರಾಣಶಕ್ತಿಯು ಇರುವಾಗಲೂ ಸನಾತನದ ಬೆನ್ನೆಲುಬಾಗಿ ಯೋಗತಜ್ಞ ದಾದಾಜಿಯವರು ದೃಢವಾಗಿ ನಿಂತರು. ಅವರ ದೈವಿ ಬೆಂಬಲದಿಂದಲೇ ಸಾಧಕರಿಗೆ ತೊಂದರೆಗಳ ನಿವಾರಣೆಯೂ ಆಗುತ್ತಿತ್ತು.

ಮಧ್ಯಂತರದಲ್ಲಿ ಸನಾತನದ ಸಾಧಕರಿಗೆ ತೊಂದರೆ ಕೊಡುವುದು ಮತ್ತು ಸಂಸ್ಥೆಯ ರಾಷ್ಟ್ರ ಮತ್ತು ಧರ್ಮದ ಜಾಗೃತಿ ಕಾರ್ಯವನ್ನು ನಿಲ್ಲಿಸುವುದು ಕೆಟ್ಟ ಶಕ್ತಿಗಳ ಆಯೋಜನೆಯಾಗಿತ್ತು. ಪ.ಪೂ. ದಾದಾಜಿಯವರು ಆಯಾ ಸಮಯಕ್ಕೆ ಮಾಡಿದ ಅನುಷ್ಠಾನಗಳಿಂದ ಪ್ರತಿಯೊಂದು ಸಮಯದಲ್ಲಿಯೂ ಸನಾತನದ ಸಾಧಕರ ತೊಂದರೆಗಳು ದೂರವಾಯಿತು. ಪ.ಪೂ. ದಾದಾಜಿಯವರು ಸನಾತನದ ಸಾಧಕರ ಮೇಲೆ ಎರಗಲಿದ್ದ ದೊಡ್ಡ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ದೂರಗೊಳಿಸಲು ತ್ರ್ಯಂಬಕೇಶ್ವರ, ನರಸೋಬಾವಾಡಿ, ಗಾಣಗಾಪುರ, ಹಿಮಾಲಯದ ಅನೇಕ ಸ್ಥಳಗಳಲ್ಲಿ ಹಾಗೆಯೇ ತಿರುಪತಿಯಲ್ಲಿ ಅನೇಕ ಅನುಷ್ಠಾನಗಳನ್ನು ನಿರಂತರವಾಗಿ ನಡೆಸುತ್ತಿದ್ದರು. ನನ್ನ ಮೇಲೆ ಮತ್ತು ಸನಾತನದ ಮೇಲಿನ ಪ್ರೀತಿಯಿಂದ ಅತ್ಯಧಿಕ ನಿರ್ಗುಣ ಸ್ಥಿತಿಯಲ್ಲಿದ್ದರೂ ಅನೇಕ ತೊಂದರೆಗಳನ್ನು ಅನುಭವಿಸಿ ಈ ವಯಸ್ಸಿನಲ್ಲಿಯೂ  ವಿವಿಧ ಅನುಷ್ಠಾನಗಳನ್ನು ಮಾಡುವುದು ದಾದಾಜಿಯವರಂತಹ ಬಹುದೊಡ್ಡ ವಿಭೂತಿ ಪುರುಷರೇ ಮಾಡಬಲ್ಲರು. ಇದರಿಂದಲೇ ಸನಾತನದ ಸಾಧಕರು ಇಂತಹ ಘೋರ ಆಪತ್ಕಾಲದಲ್ಲಿಯೂ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿದೆ. ಪ.ಪೂ. ದಾದಾಜಿಯವರ ಕೃಪಾಶೀರ್ವಾದದಿಂದಲೇ ಇದು ಸಾಧ್ಯವಾಗುತ್ತಿದೆ. ಸನಾತನದ ಮೇಲೆ ಅವರ ಮತ್ತೊಂದು ದೊಡ್ಡ ಕೃಪೆಯೆಂದರೆ ಅವರು ಸನಾತನದ ಶ್ರೀ. ಅತುಲ ಪವಾರ ಎಂಬ ಸಾಧಕನ ಮೇಲೆ ಅನಂತ ಕೃಪೆಯನ್ನು ಮಾಡಿ ಅವನನ್ನು ತಮ್ಮ ಬಳಿ ಸೇವೆಗಾಗಿ ಇಟ್ಟುಕೊಂಡರು. ಇದರಿಂದ ಅವನ ಸಾಧನೆಯಲ್ಲಿಯೂ ಒಳ್ಳೆಯ ಪ್ರಗತಿಯಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ.

ಕೃತಜ್ಞತೆ

ಇಂತಹ ಯೋಗತಜ್ಞ ದಾದಾಜಿಯವರ ಪಿತೃತುಲ್ಯ ಆಸರೆ ಲಭಿಸುವುದು ಈಶ್ವರನು ಸನಾತನದ ಮೇಲೆ ಮಾಡಿರುವ ಬಹುದೊಡ್ಡ ಕೃಪೆಯಾಗಿದ್ದು, ಇದರಿಂದಲೇ ಸನಾತನ ಸಂಸ್ಥೆಯ ಕಾರ್ಯವಿಸ್ತಾರ ಹೆಚ್ಚಾಗುತ್ತಿದೆ. ದಾದಾಜಿಯವರು ಸನಾತನಕ್ಕೆ ದೊರೆತ ಅಮೂಲ್ಯ ಮತ್ತು ಅದ್ವಿತೀಯ ವರದಾನವಾಗಿದೆ. ಅವರ ಋಣವನ್ನು ತೀರಿಸುವುದು, ಸರ್ವಥಾ ಅಸಾಧ್ಯ ಕೋಟಿಯ ವಿಷಯವಾಗಿದೆ. ಯೋಗತಜ್ಞ ದಾದಾಜಿ ವೈಶಂಪಾಯನರಂತಹ ಸಿದ್ಧ ಪುರುಷರು ಭಾರತಕ್ಕೆ ಮತ್ತು ಹಿಂದೂ ಧರ್ಮಕ್ಕೆ ಲಭಿಸಿದ್ದು, ನಮ್ಮ ಭಾಗ್ಯವೇ ಆಗಿದೆ. ‘ಅವರ ಕೃಪಾಶೀರ್ವಾದ ನಮ್ಮ ಮೇಲೆ ಅಖಂಡ ಇರಲಿದೆ ಮತ್ತು ಈಶ್ವರೀ ರಾಜ್ಯದ ಸ್ಥಾಪನೆಯಾಗಲಿದೆ, ಎಂದು ನಮಗೆ ದೃಢ ವಿಶ್ವಾಸವಿದೆ. ಯೋಗತಜ್ಞ ದಾದಾಜಿಯವರು ದೇಹತ್ಯಾಗ ಮಾಡಿದ್ದರೂ, ‘ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಎಂದು ನಾವು ಅನುಭವಿಸುತ್ತಿದ್ದೇವೆ. ಯೋಗತಜ್ಞ ದಾದಾಜಿಯವರ ವಿಷಯದಲ್ಲಿ ಎಷ್ಟೇ ಬರೆದರೂ, ಲೇಖನ ಮುಗಿಯುವುದಿಲ್ಲ; ಆದ್ದರಿಂದ ಅವರ ಚರಣಗಳಲ್ಲಿ ಅನಂತ ಕೃತಜ್ಞತೆಯನ್ನು ವ್ಯಕ್ತಪಡಿಸಿ ನನ್ನ ಲೇಖನಕ್ಕೆ ವಿರಾಮ ನೀಡುತ್ತೇನೆ. – (ಪರಾತ್ಪರ ಗುರು) ಡಾ. ಆಠವಲೆ