ತಮ್ಮ ೯೯ ನೇ ವಯಸ್ಸಿನಲ್ಲಿಯೂ ಸಾಧಕನನ್ನು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಸಿದ್ಧಪಡಿಸುವ ಯೋಗತಜ್ಞ ದಾದಾಜಿ ವೈಶಂಪಾಯನರ ಅದ್ವಿತೀಯ ಅವತಾರಿ ಕಾರ್ಯವನ್ನು ಗುರುತಿಸಿದ ಶ್ರೀ. ಅತುಲ ಪವಾರ್ !

ಯೋಗತಜ್ಞ ದಾದಾಜಿ ವೈಶಂಪಾಯನ

‘ಪರಾತ್ಪರ ಗುರು ಡಾಕ್ಟರರ ಕೃಪೆ ಯಿಂದ ನನಗೆ ಯೋಗತಜ್ಞ ದಾದಾಜಿಯವರ ಸೇವೆಯ ಅವಕಾಶ ಸಿಕ್ಕಿತು. ಅವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು. ನಾನು ೫ ವರ್ಷ ಯೋಗತಜ್ಞ ದಾದಾಜಿಯವರ ಸೇವೆಯಲ್ಲಿದ್ದೆನು. ಆಗ ದಾದಾಜಿಯವರು ನಾಶಿಕ್‌ನಲ್ಲಿ ವಾಸಿಸುತ್ತಿದ್ದರು. ದಾದಾಜಿಯವರು ಸೇವೆಗೆ ಅವಕಾಶವನ್ನು ನೀಡುವಾಗ ಸೂಕ್ಷ್ಮದಲ್ಲಿ ನನ್ನನ್ನು ಪರೀಕ್ಷೆ ಮಾಡಿಯೇ ನೀಡಿದ್ದರು, ಎಂದು ನನಗನಿಸಿತು. ನನ್ನ ಗುರು ‘ಪರಾತ್ಪರ ಗುರು ಡಾಕ್ಟರ್ ಮತ್ತು ನನಗೆ ಸೇವೆಯನ್ನು ಕೊಡುವ ‘ಯೋಗತಜ್ಞ ದಾದಾಜಿಯವರು ಇವರಿಬ್ಬರ ಹೆಸರು ಬೇರೆಯಾಗಿದ್ದರೂ, ‘ಒಳಗಿಂದ ಅವರಿಬ್ಬರೂ ಒಂದೇ ಆಗಿದ್ದರು, ಎಂದು ನನಗನಿಸುತ್ತದೆ. ಯೋಗತಜ್ಞ ದಾದಾಜಿಯವರು ನನಗೆ ಹೇಗೆ ಕಲಿಸಿದರು, ನನ್ನಿಂದ ಹೇಗೆ ಸೇವೆಯನ್ನು ಮಾಡಿಸಿಕೊಂಡರು, ಎನ್ನುವ ವಿಷಯದ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

 ಯೋಗತಜ್ಞ ದಾದಾಜಿ ವೈಶಂಪಾಯನ

ಯೋಗತಜ್ಞ ದಾದಾಜಿಯವರು ತಮ್ಮ ೧೬ ನೇ ವಯಸ್ಸಿನಲ್ಲಿ ಹಿಮಾಲಯದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಮಾಡಲಾರಂಭಿಸಿದರು. ಅಲ್ಲಿ ಅವರಿಗೆ ಹಠಯೋಗಿ ಬಾಲಯೋಗಿಜೀ, ಪ್ರಹ್ಲಾದಜೀ, ವಿಶ್ವಾಸಜೀ, ಗೋವಿಂದಜೀ, ಜ್ಞಾನಸಾಗರಜೀ, ನರೇಂದ್ರ ಸ್ವಾಮೀಜಿ ಮುಂತಾದ ಅನೇಕ ಸಾಧು-ಸಂತರ ಮತ್ತು ಋಷಿಗಳ ದರ್ಶನ ಮತ್ತು ಸಹವಾಸವೂ ಲಭಿಸಿತು. ಹಿಮಾಲಯದಲ್ಲಿ ವಾಸಿಸುವ ಪ.ಪೂ. ಆನಂದ ಸ್ವಾಮೀಜಿ ಯವರು ಅವರಿಗೆ ಗುರುಮಂತ್ರದ ಉಪದೇಶವನ್ನು ಮಾಡಿದರು. ಯೋಗತಜ್ಞ ದಾದಾಜಿಯವರ ಯೋಗಸಾಧನೆಯು ಅನನ್ಯವಾಗಿತ್ತು; ಅವರಿಗೆ ಅಷ್ಟ ಸಿದ್ಧಿಗಳು ಪ್ರಾಪ್ತವಾಗಿದ್ದವು.

ಯೋಗತಜ್ಞ ದಾದಾಜಿಯವರು ಕಡಿಮೆ ಸಮಯದಲ್ಲಿ ಸಿದ್ಧಪಡಿಸಿದ ಉತ್ತಮ ಶಿಷ್ಯನೆಂದರೆ ಶ್ರೀ. ಅತುಲ ಪವಾರ್

‘ಯೋಗತಜ್ಞ ದಾದಾಜಿಯವರು ತಮ್ಮ ಸೇವೆಗಾಗಿ ಒಬ್ಬ ಸಾಧಕನನ್ನು ಅವರಲ್ಲಿಗೆ ಕಳುಹಿಸಲು ಹೇಳಿದರು. ಆಗ ‘ಉತ್ತಮವಾಗಿ ಅವರ ಸೇವೆ ಯಾರು ಮಾಡಬಹುದು ಎಂದು ವಿಚಾರ ಮಾಡುವಾಗ ಶ್ರೀ. ಅತುಲ ಪವಾರ್ ಯೋಗತಜ್ಞರ ಸೇವೆಗೆ ಹೋದರೆ ಯೋಗ್ಯವಿದೆ, ಎಂದು ದೇವರು ನನಗೆ ಸೂಚಿಸಿದರು. ಅನಂತರ ಅತುಲ ಯೋಗತಜ್ಞ ದಾದಾಜಿಯವರ ಸೇವೆಯನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದಾನೆಂದು ಅವರು ಆಗಾಗ ನನ್ನ ಮುಂದೆ ಹೊಗಳುತ್ತಿದ್ದರು. ಅವನು ಮಾಡಿದ ಅಪ್ರತಿಮ ಸೇವೆಯು ಕೇವಲ ಯೋಗತಜ್ಞ ದಾದಾಜಿಯವರ ಬೋಧನೆಯಿಂದಲೇ ಮಾಡಲು ಸಾಧ್ಯವಾಯಿತು. ಒಬ್ಬ ಉತ್ಕೃಷ್ಟ ಶಿಷ್ಯನನ್ನು ತಯಾರಿಸಿದ್ದಕ್ಕಾಗಿ ನಾನು ಯೋಗತಜ್ಞ ದಾದಾಜಿಯವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆ ಸಲ್ಲಿಸುತ್ತೇನೆ. – (ಪರಾತ್ಪರ ಗುರು) ಡಾ. ಆಠವಲೆ

೧. ತಮ್ಮ ೯೯ ನೇ ವಯಸ್ಸಿನಲ್ಲಿಯೂ ತಮ್ಮ ಕೃತಿಗಳಿಂದ ಕಲಿಸುವ ಯೋಗತಜ್ಞ ದಾದಾಜಿ !

೧ ಅ. ವಸ್ತುಗಳು ಸರಿಯಾದ ಸಮಯಕ್ಕೆ ಕೈಗೆ ಸಿಗಬೇಕೆಂದು ಅವುಗಳನ್ನು ಹೇಗೆ ಜೊಡಿಸಬೇಕೆಂದು ಕಲಿಸುವಾಗ ಸಾಧಕನಲ್ಲಿ ನಿರ್ಮಾಣ ಮಾಡಿದ ವಿಶ್ವಾಸ ! : ದಾದಾಜಿಯವರ ಕೋಣೆಯಲ್ಲಿ ಅನೇಕ ಮಹತ್ವದ ವಸ್ತುಗಳು, ಉದಾ. ಅಮೂಲ್ಯ ವಸ್ತುಗಳನ್ನು, ಪೂಜೆಯ ಸಾಹಿತ್ಯಗಳನ್ನು ಕಪಾಟಿನಲ್ಲಿ ಅಥವಾ ಕೆಳಗೆ ಇಡಲಾಗುತ್ತಿತ್ತು. ದಾದಾಜಿಯವರು ನನ್ನನ್ನು ಅವರ ಪಕ್ಕದಲ್ಲಿ ಕುಳ್ಳಿರಿಸಿ ‘ವಸ್ತುಗಳನ್ನು ಯಾವ ಪದ್ಧತಿಯಲ್ಲಿಡಬೇಕೆಂಬುದನ್ನು ಕಲಿಸಿದರು. ನಂತರ ದಾದಾಜಿಯವರಿಗೆ ಯಾವುದಾದರೂ ವಸ್ತು ಬೇಕಾಗಿದ್ದರೆ ಅಥವಾ ಅವರಿಗೆ ಅದು ಸಿಗದಿದ್ದರೆ ಆಗ ಅವರು ನನಗೆ ಅದನ್ನು ಹುಡುಕಲು ಹೇಳುತ್ತಿದ್ದರು ಹಾಗೂ ಕೆಳಗೆ ಇಟ್ಟಿರುವ ಎಲ್ಲ ವಸ್ತುಗಳನ್ನು ಸರಿಯಾಗಿಡಲು ಹೇಳುತ್ತಿದ್ದರು. ಒಮ್ಮೆ ಅವರು ನನಗೆ ಹೇಳಿದರು, “ನಾನು ಇಂದಿನವರೆಗೆ ಈ ವಸ್ತುಗಳನ್ನು ಮತ್ತು ಸಾಹಿತ್ಯಗಳನ್ನು ಯಾರಿಗೂ ಸ್ಪರ್ಷ ಮಾಡಲು ಬಿಡುತ್ತಿರಲಿಲ್ಲ. ಇಂದಿನ ವರೆಗೆ ನಾನೇ ಈ ಎಲ್ಲ ವಸ್ತುಗಳನ್ನು ಜೋಪಾನ ಮಾಡುತ್ತಿದ್ದೆನು. ಇಂದು ಮೊದಲ ಬಾರಿ ನಾನು ನಿನಗೆ ಈ ವಸ್ತುಗಳನ್ನು ಸ್ಪರ್ಷ ಮಾಡಲು ಬಿಡುತ್ತಿದ್ದೇನೆ. ಅನಂತರ ಕ್ರಮೇಣ ಕೋಣೆಯ ಸಾಹಿತ್ಯಗಳ ಬಗ್ಗೆ ನನಗೆ ಪರಿಚಯವಾಯಿತು, ಅನಂತರ ಏನಾದರೂ ವಸ್ತು ಅಥವಾ ಮಹತ್ವದ ಕಾಗದಪತ್ರ ಅವರಿಗೆ ಬೇಕಾಗಿದ್ದರೆ ಅದು ಅವರಿಗೆ ಸಿಗದಿರುವಾಗ ಅವರು ನನಗೆ ಕೇಳುತ್ತಿದ್ದರು. ನನಗೆ ಅದು ತಕ್ಷಣ ಸಿಗುತ್ತಿತ್ತು. ಇದು ಹೀಗೆಯೇ ಮುಂದುವರಿಯುತ್ತಾ ಹೋಯಿತು. ಆಗ ಅವರು ನನಗೆ “ಜಾಣನಾಗಿದ್ದಿ, ನೀನು ನನ್ನನ್ನು ಗೆದ್ದೆ ಎಂದು ಹೇಳುತ್ತಿದ್ದರು, ಈ ರೀತಿಯಲ್ಲಿ ಅವರು ನನ್ನನ್ನು ಸಿದ್ಧಪಡಿಸಿದರು. ತದ್ವಿರುದ್ಧ ಕೆಲವೊಮ್ಮೆ ಯಾವುದೇ ವಸ್ತು ಸಿಗದಿದ್ದರೆ, ಅವರೇ ಅದನ್ನು ಹೇಳುತ್ತಿದ್ದರು. ಇದರಿಂದ ೯೯ ವರ್ಷದ ದಾದಾಜಿಯವರ ಸ್ಮರಣಶಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ.

೧ ಆ. ‘ವಸ್ತುಗಳನ್ನು ಖರೀದಿಸುವ ಮೊದಲು ಅಭ್ಯಾಸ ಮಾಡಲು ಹೇಳಿ ಸರಿಯಾದ ಬೆಲೆಯಲ್ಲಿ ಹೇಗೆ ಖರೀದಿಸಬೇಕು ಎಂಬುದನ್ನು ಕಲಿಸುತ್ತಿದ್ದರು : ಕೆಲವೊಮ್ಮೆ ತುಂಬಾ ಸೇವೆಗಳಿದ್ದರೆ ಅಥವಾ ಹೊರಗಿನ ಯಾವುದಾದರೂ ವಸ್ತುಗಳನ್ನು ತರಲಿಕ್ಕಿದ್ದರೆ ದಾದಾಜಿಯವರು ನನಗೆ “ಇಂದು ಸೇವೆಗೆ ಹೆಚ್ಚು ಆದ್ಯತೆಯನ್ನು ಕೊಡು, ನಿನ್ನ ಜಪವನ್ನು ನಾನು ಮಾಡುತ್ತೇನೆ ಎಂದು  ಹೇಳುತ್ತಿದ್ದರು. ಮನೆಯಲ್ಲಿ ಯಾರಿಗಾದರೂ ಅಥವಾ ದಾದಾಜಿರವರಿಗೆ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ಯಾವುದೇ ವಸ್ತುವನ್ನು ಖರೀದಿ ಮಾಡಲಿಕ್ಕಿದ್ದರೆ, ಮುಂದಿನಂತೆ ವಿಚಾರ ಮಾಡಬೇಕಾಗುತ್ತಿತ್ತು. ‘ಆ ವಸ್ತುವಿನ ಯೋಗ್ಯವಾದ ಬೆಲೆ ಎಷ್ಟಿದೆಯೆಂದು ನೋಡಲು ೨ – ೩ ಅಂಗಡಿಗಳಿಗೆ ಹೋಗಿ ಅದರ ಬೆಲೆಯನ್ನು ಪರಿಶೀಲಿಸಬೇಕು, ಬೆಲೆ ಕಡಿಮೆಯಿದ್ದರೆ, ಅದರ ಗುಣಮಟ್ಟ ಹೇಗಿದೆ ?, ಎಂಬುದನ್ನು ನೋಡಬೇಕು, ನಂತರವೇ ಆ ವಸ್ತುವನ್ನು ಖರೀದಿ ಮಾಡಬೇಕು. ಅಂಗಡಿಯವರಿಗೆ ಒಂದು ವಸ್ತುವಿನ ಬೆಲೆಯೆಷ್ಟೆಂದು ಕೇಳಬೇಕು, ಅನಂತರ ವಿಚಾರ ಮಾಡಿ ಹೇಗೆ ಮಿತವ್ಯಯ ಮಾಡಬಹುದು ?, ಎಂಬುದನ್ನು ಅವರು ನನಗೆ ಕಲಿಸಿದರು. ‘ಝೆರಾಕ್ಸ್ ತೆಗೆಯುವಾಗ ‘ಸಣ್ಣ ಪೇಪರ್‌ನಲ್ಲಿ ಆದಷ್ಟು ಹೆಚ್ಚು ವಿಷಯವನ್ನು ಹೇಗೆ ಸೆಟ್ ಮಾಡಬಹುದು ?, ಎಂಬುದನ್ನು ಅವರು ಚಿಂತನೆ ಮಾಡುತ್ತಿದ್ದರು.

೧ ಇ. ಅನುಷ್ಠಾನಕ್ಕಾಗಿ ಮಾಹಿತಿಯನ್ನು ಸಂಗ್ರಹಿಸಲು ‘ವರ್ತಮಾನ ಕಾಲದಲ್ಲಿರುವುದು ಹಾಗೂ ‘ದೈವೀ ನಿಯೋಜನೆಯನ್ನು ಸ್ವೀಕರಿಸುವ ವಿಷಯವನ್ನು ದಾದಾಜಿಯವರು ಕಲಿಸುತ್ತಿದ್ದರು : ದಾದಾಜಿಯವರು ನನಗೆ ವರ್ತಮಾನಕಾಲದಲ್ಲಿರಲು ಕಲಿಸಿದರು. ಒಮ್ಮೆ ನನಗೆ ಅವರು ಅನುಷ್ಠಾನಕ್ಕಾಗಿ ಸ್ಥಳವನ್ನು ನೋಡಲು ದೂರದ ಊರಿಗೆ ಕಳುಹಿಸುವವರಿದ್ದರು. ಅವರು ನನಗೆ “ನಾಳೆಯೆ ಹೊರಡು, ಎಂದು ಹೇಳಿದ್ದರು, ನನಗೆ ಎಲ್ಲವೂ ಹೊಸದಾಗಿತ್ತು; ಆದರೆ ಅಲ್ಲಿಗೆ ಹೋಗಲು ಎಲ್ಲ ವ್ಯವಸ್ಥೆಗಳು ತನ್ನಿಂತಾನೇ ಆಗುತ್ತಾ ಹೋಯಿತು. ಎಲ್ಲವನ್ನೂ ದಾದಾಜಿಯವರೆ ಸೂಕ್ಷ್ಮದಿಂದ ಮಾಡುತ್ತಿದ್ದಾರೆಯೇ ಎಂದು ಅನಿಸಿತು. ಅಲ್ಲಿಗೆ ಹೋಗಿ ನಾನು ಉಳಿಯುವ ಹಾಗೂ ಊಟತಿಂಡಿಗಳ ವ್ಯವಸ್ಥೆಯಿದೆಯೇ ? ವೃದ್ಧ ಸಾಧಕರಿಗಾಗಿ ಶೌಚಾಲಯ ಮತ್ತು ಮಲಗುವ ವ್ಯವಸ್ಥೆ ಇದೆಯೇ ?, ಇತ್ಯಾದಿ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದೆನು ಹಾಗೂ ‘ದಾದಾಜಿಯವರನ್ನು ಅಲ್ಲಿಗೆ ಹೇಗೆ ಕರೆದುಕೊಂಡು ಹೋಗುವುದು ? ವಾಹನದ ಸೌಲಭ್ಯವಿದೆಯೇ ? ಇತ್ಯಾದಿ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ ನಂತರ ನನಗೆ ದಾದಾಜಿಯವರ ದೂರವಾಣಿ ಕರೆ ಬಂದಿತು. ಅವರು “ದೇವರಿಂದ ಈಗಷ್ಟೇ ದೈವೀ ಸಂದೇಶ ಬಂದಿದೆ ‘ಏನೋ ಕಾರಣದಿಂದ ಅನುಷ್ಠಾನವನ್ನು ಸದ್ಯ ರದ್ದುಪಡಿಸಿರಿ ಎಂದು ಹೇಳಿದ್ದಾರೆ. ಆದ್ದರಿಂದ ನೀನು ತಕ್ಷಣ ಹಿಂದಿರುಗಿ ಬಾ, ಎಂದರು. ನನ್ನ ಎಲ್ಲ ಮಾಹಿತಿಯು ಸಂಗ್ರಹವಾದ ನಂತರ ದಾದಾಜಿಯವರ ದೂರವಾಣಿ ಕರೆ ಬಂತು. ಇದರಿಂದ ‘ಇದೆಲ್ಲವೂ ದೈವೀ ನಿಯೋಜನೆಯಾಗಿತ್ತು, ಎಂಬುದು ಅರಿವಾಯಿತು. ‘ನನಗೆ ಅಲ್ಲಿಗೆ ಕಳುಹಿಸಿ ಎಲ್ಲ ಮಾಹಿತಿಯನ್ನು ಸಂಗ್ರಹಿಸುವುದು, ಎಂಬುದು ಒಂದು ನಿಮಿತ್ತವಾಗಿತ್ತು. ನನ್ನನ್ನು ಅಲ್ಲಿಗೆ ಕಳುಹಿಸಿ ಎಲ್ಲ ಮಾಹಿತಿಯನ್ನು ಸಂಗ್ರಹಿಸುವುದು ಒಂದು ದೈವೀ ನಿಮಿತ್ತವಾಗಿತ್ತು. ನನಗೆ ‘ವರ್ತಮಾನ ಕಾಲದಲ್ಲಿರುವುದು, ದೈವೀ ನಿಯೋಜನೆಯಂತೆ ಆಜ್ಞಾಪಾಲನೆ ಮಾಡುವುದು, ಇತ್ಯಾದಿ ಕಲಿಸಲು ಇದೆಲ್ಲವೂ ಆಗುತ್ತದೆ. ಇಂತಹ ಅನೇಕ ಪ್ರಸಂಗಗಳಿಂದ ಅವರು ನನಗೆ ವರ್ತಮಾನ ಕಾಲದಲ್ಲಿರಲು ಕಲಿಸಿದರು. ನಿಯೋಜನೆಗನುಸಾರ ಜಪ ಅಥವಾ ಅನುಷ್ಠಾನವನ್ನು ನಿರ್ಧರಿಸಲಾಗಿರುತ್ತದೆ; ಆದರೆ ದೇವತೆಗಳ ಸಂದೇಶ ಬಂದ ನಂತರ ಅದನ್ನು ಮುಂದೂಡುವುದು ಅಥವಾ ನಿಯೋಜನೆಯನ್ನು ಬದಲಾಯಿಸುವುದು, ಹೀಗೆ ಅವರು ಅನೇಕ ಬಾರಿ ಮಾಡಿದ್ದಾರೆ.

೨. ಸನಾತನದ ಸಂಸ್ಕಾರ ಮತ್ತು ಪರಾತ್ಪರ ಗುರುದೇವರ ಬೋಧನೆಯಿಂದಾಗಿ ದಾದಾಜಿಯವರಿಂದ ಅನೇಕ ಬಾರಿ ಪ್ರಶಂಸೆ !

೨ ಅ. ರದ್ದಿಯ ಚೀಲದಲ್ಲಿ ಸಿಕ್ಕಿದ ಹಣವನ್ನು ದಾದಾಜಿಯವರಿಗೆ ಹಿಂದಿರುಗಿ ಕೊಟ್ಟಾಗ ಅವರು ಪ್ರಾಮಾಣಿಕತೆಗಾಗಿ ಪ್ರಶಂಸೆ ಮಾಡುತ್ತಾರೆ : ನಾನು ದಾದಾಜಿವರಲ್ಲಿಗೆ ಹೋದ ನಂತರ ಕೆಲವೇ ತಿಂಗಳುಗಳಲ್ಲಿ ಅವರು ತಮ್ಮ ಕೋಣೆಯ ಕೆಲವು ಅನಾವಶ್ಯಕ ವಸ್ತುಗಳು ಹಾಗೂ ರದ್ದಿ ಪೇಪರ್‌ಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ‘ಇದರಲ್ಲಿ ರದ್ದಿ ಪೇಪರ್ ಇದೆ, ಇದನ್ನು ಹೊರಗೆ ಇಡು ಎಂದು ಹೇಳಿದರು. ನಾನು ಚೀಲದಲ್ಲಿನ ಪೇಪರ್‌ಗಳನ್ನು ಸರಿಯಾಗಿಡೋಣವೆಂದು ಅದನ್ನು ಹೊರಗೆ ತೆಗೆದಾಗ ಆ ಚೀಲದಲ್ಲಿ ಒಂದು ಬಟ್ಟೆಯಲ್ಲಿ ಕಟ್ಟಿ ಇಟ್ಟಿರುವ ಸ್ವಲ್ಪ ಹಣ ಕಾಣಿಸಿತು. ನಾನು ಅದನ್ನು ಹಾಗೆಯೇ ಒಯ್ದು ದಾದಾಜಿಯವರಿಗೆ ತೋರಿಸಿ ‘ಇದು ನೀವು ಕೊಟ್ಟಿರುವ ರದ್ದಿಯ ಚೀಲದಲ್ಲಿತ್ತು, ಎಂದು ಹೇಳಿದೆ. ಆಗ ಅವರು “ನೀನು ಎಷ್ಟು ಪ್ರಾಮಾಣಿಕನಾಗಿದ್ದಿ ! ನಿನ್ನ ಜಾಗದಲ್ಲಿ ಬೇರೆ ಯಾರೇ ಇರುತ್ತಿದ್ದರೂ ಅವರು ಆ ಹಣವನ್ನು ಕದಿಯುತ್ತಿದ್ದರು. ನಿನ್ನ ಬಗ್ಗೆ ಆಶ್ಚರ್ಯವೆನಿಸುತ್ತದೆ ! ಎಂದು ಹೇಳಿದರು. ಅವರಿಗೆ ತುಂಬಾ ಸಂತೋಷವಾಯಿತು. ಸನಾತನದ ಸಂಸ್ಕಾರ ಮತ್ತು ಪರಾತ್ಪರ ಗುರುದೇವರ ಬೋಧನೆಯಿಂದಾಗಿಯೇ ಇಂತಹ ಪ್ರಶಂಸೆಯಾಗುತ್ತಿತ್ತು. ನಂತರ ನನಗೆ ‘ಬಹುಶಃ ಅವರು ನನ್ನ ಪರೀಕ್ಷೆ ಮಾಡಿರಬಹುದು; ಏಕೆಂದರೆ, ಅವರು ಸರ್ವಜ್ಞರಾಗಿದ್ದಾರೆ ! ಎಂದು ಅನಿಸಿತು.

೨ ಆ. ದಾದಾಜಿಯವರಿಗೆ ಎಲ್ಲವೂ ತಿಳಿಯುವುದರಿಂದ ತಮ್ಮ ಭವಿಷ್ಯವನ್ನು ಜ್ಯೋತಿಷ್ಯರಿಂದ ತಿಳಿದುಕೊಳ್ಳಲು ಸಾಧಕನು ನಿರಾಕರಿಸಿದ ನಂತರ ದಾದಾಜಿಯವರು ‘ನಿನ್ನಲ್ಲಿ ಶಕ್ತಿ ಮತ್ತು ಯುಕ್ತಿಯೂ ಇದೆ, ಎಂದು ಹೇಳಿ ಅವನನ್ನು ಪ್ರಶಂಸೆ ಮಾಡುವುದು : ಒಮ್ಮೆ ದಾದಾಜಿ ಮತ್ತು ನಾನು ವಾಹನದಲ್ಲಿ ನಾಶಿಕ್‌ನಲ್ಲಿನ ಗೋದಾವರಿ ಕುಂಡದ ಪರಿಸರದಲ್ಲಿ ಪ್ರದಕ್ಷಿಣೆ ಹಾಕಲು ಹೋಗಿದ್ದೆವು. ರಾಮಕುಂಡದ ಸಮೀಪ ನದಿಯ ದಡದಲ್ಲಿ ಜ್ಯೋತಿಷ್ಯರು ಕುಳಿತಿರುತ್ತಾರೆ. ದಾದಾಜಿಯವರು ವಾಹನದಿಂದಲೇ ಜ್ಯೋತಿಷ್ಯರನ್ನು ನೋಡಿ ನನಗೆ “ಆ ಜ್ಯೋತಿಷ್ಯರನ್ನು ಕರಿಯಿರಿ ಎಂದು ಹೇಳಿದರು. ನನ್ನ ಭವಿಷ್ಯವನ್ನು ಕೇಳೋಣ, ಎಂದರು. ನನಗೆ  ದಾದಾಜಿಯವರು ಹೀಗೇಕೆ ಹೇಳುತ್ತಿದ್ದಾರೆ ? ಎಂದು ಆಶ್ಚರ್ಯವೆನಿಸಿತು ಮತ್ತು ಅವರೆ ಸ್ವತಃ ಭವಿಷ್ಯವನ್ನು ತಿಳಿದಿದ್ದಾರೆ. ಆ ಭವಿಷ್ಯ ಹೇಳುವವರ ಭಾಗ್ಯವಿರಬಹುದು, ಅವರಿಗೆ ದಾದಾಜಿಯವರ ಸತ್ಸಂಗ ದೊರೆಯಲಿಕ್ಕಿದ್ದಿರಬಹುದು ಅಥವಾ ಅವರ ಪೂರ್ವಜನ್ಮದ ಪುಣ್ಯವಿರಬಹುದು; ಆದ್ದರಿಂದ ದಾದಾಜಿಯವರು ಹೀಗೆ ಹೇಳುತ್ತಿರಬಹುದು, ಎಂದೆನಿಸಿತು. ನಾನು ಆ ಜ್ಯೋತಿಷ್ಯರ ಸಮೀಪವೇ ವಾಹನವನ್ನು ನಿಲ್ಲಿಸಿ ಅವರನ್ನು ವಾಹನದೊಳಗೆ ಕರೆದೆ. ದಾದಾಜಿಯವರು ಅವರಿಗೆ “ನನ್ನ ಕೈ ನೋಡಿ ನನ್ನ ಭವಿಷ್ಯವನ್ನು ಹೇಳಿ, ಎಂದರು, ಜ್ಯೋತಿಷ್ಯರು ಅವರ ಭವಿಷ್ಯವನ್ನು ಹೇಳಿದರು. ನಂತರ ದಾದಾಜಿಯವರು ನನಗೆ ಹೇಳಿದರು, “ನಿನಗೆ ಕೇಳಲಿಕ್ಕಿದೆಯೆ ? ಕೈ ತೋರಿಸಲಿಕ್ಕಿದೆಯೆ ? ಎಂದು ಕೇಳಿದರು. ಆಗ ನಾನು “ನೀವಿರುವಾಗ ನಾನೇಕೆ ಕೈ ತೋರಿಸಲಿ ? ನೀವು ಎಲ್ಲವನ್ನೂ ತಿಳಿದವರು ! ಎಂದು ಹೇಳಿದೆ, ಆಗ ಅವರು “ನಿನ್ನಲ್ಲಿ ಶಕ್ತಿ ಮತ್ತು ಯುಕ್ತಿ ಎರಡೂ ಇದೆ ಎಂದು ಹೇಳಿದರು.

೨ ಇ. ‘ಸೇವೆಗಾಗಿ ಸರಿಯಾದ ಸಾಧಕನನ್ನು ಆರಿಸಿದ್ದೀರಿ, ಎಂದು ಬೇರೆಯವರು ಹೇಳಿದಾಗ ದಾದಾಜಿಯವರು ಹೌದು ಎನ್ನುವುದು: ಅನೇಕ ಸಾಧಕರು ದಾದಾಜಿಯವರಿಗೆ “ದಾದಾಜಿ ನೀವು ನಿಮ್ಮ ಸೇವೆಗಾಗಿ ಯೋಗ್ಯವಾದ ಸಾಧಕನನ್ನೇ ಆರಿಸಿದ್ದೀರಿ, ‘ನಿಮಗೆ ಹೇಗೆ ಬೇಕೋ ಹಾಗೆ ಅವನು ಹೊಂದಾಣಿಕೆಯಾಗುತ್ತಾನೆ ಎಂದು ಹೇಳುತ್ತಿದ್ದರು. ಆಗ ದಾದಾಜಿ ಮುಗುಳ್ನಗುತ್ತಾ “ಹೌದು ಅತ್ಯಂತ ಪ್ರಾಮಾಣಿಕ ಹಾಗೂ ಜಾಣನಾಗಿದ್ದಾನೆ. ಅವನ ಪತ್ನಿ ಸಂತಳಾಗಿದ್ದಾಳೆ, ಎನ್ನುತ್ತಿದ್ದರು. (ಶ್ರೀ. ಅತುಲ ಇವರ ಪತ್ನಿ ಪೂ. (ಸೌ.) ಅಶ್ವಿನಿ ಪವಾರ್ ಇವರು ಸನಾತನದ ಸಂತರು. – ಸಂಕಲನಕಾರರು)

೩. ಮನಸ್ಸಿನ ಬೇಸರವನ್ನು ದೂರಗೊಳಿಸಲು ದಾದಾಜಿಯವರು ಹೇಳಿದ ಉಪಾಯ

ನನ್ನ ಮನಸ್ಸಿಗೆ ಬೇಸರವಾದಾಗ, ನಿರಾಶೆಯಾದಾಗ ದಾದಾಜಿಯವರಿಗೆ ಅದು ತಿಳಿಯುತ್ತದೆ. ಆಗ ಅವರು “ಹಾಗಾದಾಗ ನಾವು ಶಾಂತವಾಗಿ ಕಣ್ಣುಮುಚ್ಚಿ ತನ್ನ ಇಷ್ಟದೇವತೆಯ ರೂಪವನ್ನು ಸ್ಮರಿಸಬೇಕು ಹಾಗೂ ದೇವರಿಗೆ ಶರಣಾಗಿ ಎಲ್ಲವನ್ನೂ ಹೇಳಬೇಕು. ದೇವರ ಮಾನಸ ಪೂಜೆ ಮಾಡಬೇಕು. ಅದರಿಂದ ಮನಸ್ಸು ಹಗುರವಾಗಿ ಚೈತನ್ಯ ಸಿಗುತ್ತದೆ ಎಂದು ಹೇಳುತ್ತಿದ್ದರು, ಯೋಗತಜ್ಞ ದಾದಾಜಿಯವರು ನನ್ನ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕ್ಷಮತೆಯನ್ನು ಹೆಚ್ಚಿಸಿದರು ಹಾಗೂ ವಿವಿಧ ಪ್ರಕಾರದ ಸೇವೆಗಳನ್ನು ಮಾಡಿಸಿಕೊಂಡರು. ನನಗೆ ಸೇವೆಯ ಅವಕಾಶವನ್ನು ನೀಡಿ ಅವರು ನನ್ನ ಉದ್ಧಾರ ಮಾಡಿದರು ಮತ್ತು ನನಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಆಶೀರ್ವಾದವನ್ನು ಕೂಡ ಮಾಡಿದರು. ಈ ವಿಷಯದಲ್ಲಿ ಅವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು ! – ಶ್ರೀ. ಅತುಲ ಪವಾರ್, ಸನಾತನ ಆಶ್ರಮ, ದೇವದ, ಪನವೇಲ್ (೧೩.೩.೨೦೨೦)