ಶ್ರೀವಿಷ್ಣುವಿನ ‘ಶ್ರೀಜಯಂತಾವತಾರದ ಕಾರ್ಯ ಮತ್ತು ವೈಶಿಷ್ಟ್ಯಗಳು

ಪರಾತ್ಪರ ಗುರು ಡಾ. ಆಠವಲೆಯವರಿಗೆ ಯಾವುದೇ ಕೊರತೆ (ಸ್ಥೂಲ ಅಥವಾ ಸೂಕ್ಷ್ಮ) ಇಲ್ಲದಿದ್ದರೂ, ಅವರ ವೈಯಕ್ತಿಕ ಜೀವನವು ಒಬ್ಬ ಸನ್ಯಾಸಿಗಿಂತಲೂ ಸರಳ ಮತ್ತು ಸಾಮಾನ್ಯವಾಗಿದೆ. ‘ಸಾಧಕರಿಗಾಗಿ ಏನೆಲ್ಲವನ್ನೂ ಮಾಡಿಯೂ ತಾನು ಮಾತ್ರ ಏನೂ ಮಾಡದಂತೆ ಇರುವುದು, ಇದು ಅವರ ಜೀವನಶೈಲಿಯಾಗಿದೆ.

ವಿವಿಧ ಸಂತರ ಮಾರ್ಗದರ್ಶನಕ್ಕನುಸಾರ ಪ್ರತ್ಯಕ್ಷ ಕೃತಿ ಮಾಡಿ ಅಧ್ಯಾತ್ಮಶಾಸ್ತ್ರವನ್ನು ಅಧ್ಯಯನ ಮಾಡಿದ ಪರಾತ್ಪರ ಗುರು ಡಾ. ಆಠವಲೆ !

ಆ ಗಡಿಬಿಡಿಯಲ್ಲಿಯೂ ಪ.ಪೂ.ಗುರುದೇವರು ನಮಗೆಲ್ಲರಿಗೂ ಅವರ ದರ್ಶನ ಪಡೆಯಲು ಕಳುಹಿಸಿದರು ಹಾಗೂ ‘ಸಂತರು ದೇಹತ್ಯಾಗ ಮಾಡಿದಾಗ ಎಂತಹ ಸ್ಪಂದನಗಳ ಅರಿವಾಗುತ್ತದೆ ಹಾಗೂ ಸಾಮಾನ್ಯ ಜನರು ದೇಹತ್ಯಾಗ ಮಾಡಿದಾಗ ಅಲ್ಲಿನ ವಾತಾವರಣ ಹೇಗಿರುತ್ತದೆ, ಎನ್ನುವುದನ್ನು ಅಧ್ಯಯನ ಮಾಡಲು ಹೇಳಿದರು.

‘ವಿವಿಧ ಧಾರ್ಮಿಕ ಕೃತಿಗಳ ಸೂಕ್ಷ್ಮ ಪರೀಕ್ಷಣೆ, ಇದು ಹಿಂದೂ ಧರ್ಮಕಾರ್ಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಕೊಡುಗೆ !

‘ಪ.ಪೂ. ಡಾಕ್ಟರರು ಸತತವಾಗಿ ‘ಪಂಚ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಸ್ತರದಲ್ಲಿ ಏನು ಅರಿವಾಗುತ್ತದೆಯೋ, ಅದಕ್ಕಿಂತ ಸೂಕ್ಷ್ಮದಲ್ಲಿ ಏನು ಅರಿವಾಗುತ್ತದೆಯೋ, ಅದು ಹೆಚ್ಚು ಮಹತ್ವದ್ದಾಗಿರುತ್ತದೆ, ಎಂದು ಹೇಳುತ್ತಾರೆ. ಅನೇಕ ಸಾಧಕರಿಗೆ ಅವರ ಪ್ರೇರಣೆಯಿಂದ ಮತ್ತು ಕೃಪೆಯಿಂದ ಸೂಕ್ಷ್ಮ ಸ್ತರದಲ್ಲಿನ ಘಟನೆಗಳು ತಿಳಿಯತೊಡಗಿದವು.

ಘೋರ ಆಪತ್ಕಾಲದಲ್ಲಿ ಹೊಸ ಹೊಸ ಆಧ್ಯಾತ್ಮಿಕ ಉಪಾಯ ಪದ್ಧತಿಗಳನ್ನು ಶೋಧಿಸಿ ಮನುಕುಲದ ಕಲ್ಯಾಣಕ್ಕಾಗಿ ಕಾರ್ಯನಿರತರಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಸಾಧನೆಯನ್ನು ಆರಂಭಿಸಿದ ನಂತರ ನನಗೆ ‘ಕಾಯಿಲೆಗಳ ಕಾರಣಗಳು ಕೇವಲ ಶಾರೀರಿಕ ಹಾಗೂ ಮಾನಸಿಕವಾಗಿರದೆ ಆಧ್ಯಾತ್ಮಿಕ ಕೂಡ ಆಗಿರುತ್ತವೆ, ಎಂಬುದು ಜಿಜ್ಞಾಸೆಯಿಂದಾಗಿ ತಿಳಿಯಿತು. ಆಗ ನನಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರ ಮಹತ್ವ ತಿಳಿಯಿತು; ಏಕೆಂದರೆ ಅವುಗಳನ್ನು ನಿರ್ಮೂಲನೆ ಮಾಡುವುದರಿಂದ ವ್ಯಕ್ತಿ ಸಾತ್ತ್ವಿಕನಾಗುತ್ತಾನೆ ಮತ್ತು ಸಾತ್ತ್ವಿಕನಾದ ನಂತರ ಅವನ ಹೆಚ್ಚಿನ ಮಾನಸಿಕ ತೊಂದರೆಗಳು ದೂರವಾಗುತ್ತವೆ.

ವಿವಿಧ ವೈಜ್ಞಾನಿಕ ಉಪಕರಣಗಳ ಮೂಲಕ ಆಧ್ಯಾತ್ಮಿಕ ಸಂಶೋಧನೆ !

ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಉಚ್ಚಮಟ್ಟದ ಸಂತರು ಪ್ರತಿಯೊಂದು ಘಟಕದಲ್ಲಿನ ಸ್ಪಂದನಗಳನ್ನು ನಿಖರವಾಗಿ ಗುರುತಿಸಬಲ್ಲರು ಹಾಗೂ ಅವರು ಹೇಳಿರುವ ಜ್ಞಾನವು ‘ಪ್ರಮಾಣವೂ ಆಗಿರುತ್ತದೆ; ಆದರೆ ಇಂದು ಅನೇಕ ಜನರಿಗೆ ಆಧುನಿಕ ವೈಜ್ಞಾನಿಕ ಸತ್ತ್ವಪರೀಕ್ಷೆಯಲ್ಲಿ ಸಿದ್ಧಪಡಿಸಿದ ಜ್ಞಾನವೇ ಸತ್ಯವೆಂದು ಅನಿಸುತ್ತದೆ.

ಗುರುಗಳು ಜೀವದಶೆಯಲ್ಲಿ ಈಶ್ವರನಲ್ಲಿ ಏನು ಬೇಡುತ್ತಾರೆ ?

ಹೇ ಈಶ್ವರಾ (ಪಾಂಡುರಂಗಾ), ನನ್ನ ಮೋಕ್ಷ ಪ್ರಾಪ್ತಿಯ ವ್ರತವನ್ನು ಯಾವನು ಮುಂದೆ ನಡೆಸುವವನಿದ್ದಾನೆಯೋ, ಅವನಿಗೆ ನೀನು ನನ್ನೆಡೆಗೆ ಬರಲು ಪ್ರೋತ್ಸಾಹಿಸು. ಹೇ ಭಗವಂತಾ, ನನ್ನ ಮೇಲೆ ಕೃಪೆಮಾಡು ಮತ್ತು ಯಾವನು ಬ್ರಹ್ಮಜ್ಞಾನದಲ್ಲಿ (ಮೋಕ್ಷವಿದ್ಯೆಯಲ್ಲಿ) ಶ್ರೇಷ್ಠನಾಗಿದ್ದಾನೆಯೋ, ಯಾವನ ಕೀರ್ತಿಯು ತ್ರಿಲೋಕದಲ್ಲಿ ಹರಡುವುದಿದೆಯೋ, ಅಂತಹ ಶಿಷ್ಯನನ್ನು ನನಗೆ ಕೊಡು.

ಗುರುಪೂರ್ಣಿಮೆಯೆಂದರೆ ಪರಬ್ರಹ್ಮಸ್ವರೂಪಿ ಶ್ರೀಕೃಷ್ಣನ ಆದಿಶಕ್ತಿ ಪೂಜೆ !

ಗುರುಪೂರ್ಣಿಮೆಯೆಂದರೆ ಚೈತನ್ಯರೂಪಿ ಮೂಲತತ್ತ್ವದ ಪೂಜೆ ಯಾಗಿದೆ; ಏಕೆಂದರೆ ಅದೇ ಎಲ್ಲೆಡೆ ಎಲ್ಲ ಜಡ-ಚೇತನ ಸ್ವರೂಪದಲ್ಲಿ ಕಾರ್ಯ ಮಾಡುತ್ತಿದ್ದು ನಾವು ಅದನ್ನು ಗುರುತಿಸಲು ಅದರ ಸ್ವರೂಪಕ್ಕನುಸಾರ ಬೇರೆ ಬೇರೆ ಹೆಸರನ್ನು ಕೊಡುತ್ತೇವೆ. ವಾಸ್ತವದಲ್ಲಿ ಆದಿಶಕ್ತಿ ಗುರುತತ್ತ್ವದ ಸ್ವರೂಪವು ಎಲ್ಲೆಡೆ ಒಂದೇ ಆಗಿದೆ.

ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಉಚ್ಚಕೋಟಿಯ ಜಿಜ್ಞಾಸುವೃತ್ತಿಯನ್ನು ತೋರಿಸುವ ಕೆಲವು ಪ್ರಶ್ನೆಗಳು !

‘ಪರಾತ್ಪರ ಗುರು ಡಾ. ಆಠವಲೆಯವರಿಗೆ ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡೂ ರೀತಿಯ ಪ್ರಶ್ನೆಗಳು ನಿರ್ಮಾಣವಾಗುತ್ತವೆ. ಸ್ಥೂಲದಲ್ಲಿನ ಅತ್ಯಂತ ಚಿಕ್ಕ-ಪುಟ್ಟ ವಿಷಯಗಳ, ಉದಾಹರಣೆಗೆ ಧ್ವನಿಚಿತ್ರೀಕರಣದಲ್ಲಿನ ತಾಂತ್ರಿಕ ವಿಷಯಗಳು, ಯಜ್ಞ-ಯಾಗಾದಿ ಕೃತಿಗಳ ಹಿಂದಿನ ಶಾಸ್ತ್ರ ಇತ್ಯಾದಿಗಳನ್ನು ತಿಳಿದುಕೊಳ್ಳುವ ಬಗ್ಗೆ ಅವರಲ್ಲಿ ಜ್ಞಾಸೆಯಿರುತ್ತದೆ.

‘ಸೂಕ್ಷ್ಮದಲ್ಲಿ ಏನಾಗುತ್ತದೆ ? ಹಾಗೂ ಅದರ ಹಿಂದಿನ ಶಾಸ್ತ್ರವೇನು ? ಇವುಗಳ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಜಿಜ್ಞಾಸೆಯನ್ನು ದೇವರು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಸಾಧಕರ ಮಾಧ್ಯಮದಿಂದ ಪೂರ್ಣ ಮಾಡುವುದು !

‘ಜೂನ್ ೨೦೧೬ ರಲ್ಲಿ ಪ.ಪೂ. ಆಬಾ ಮತ್ತು ಪೂ. (ಸೌ.) ಮಂಗಲಾಅಜ್ಜಿಯವರು ಸುಮಾರು ಒಂದು ವಾರ ಆಶ್ರಮದಲ್ಲಿದ್ದರು. ಪ.ಪೂ. ಡಾಕ್ಟರರು ಪ.ಪೂ. ಆಬಾ ಇವರಿಗೆ, ‘ತಮಗೆ ಸಮಯವಿದ್ದಾಗ ಹೇಳಿರಿ. ನಾನು ಬರುವೆನು, ಎಂದು ಹೇಳಿದರು. ಇದರಿಂದ ಅವರ ಜ್ಞಾನವನ್ನು ಪಡೆದುಕೊಳ್ಳಲುವ ಮತ್ತು ಸಮಷ್ಟಿಗಾಗಿ ಅದರ ಲಾಭವನ್ನು ಪಡೆದುಕೊಳ್ಳುವ ಪರಾಕೋಟಿಯ ತಳಮಳವು ಕಾಣಿಸುತ್ತದೆ;

ಪರಾತ್ಪರ ಗುರು ಡಾ. ಆಠವಲೆ ಇವರಲ್ಲಿನ ಜಿಜ್ಞಾಸುವೃತ್ತಿಯ ವಿಷಯದಲ್ಲಿ ಆಧ್ಯಾತ್ಮಿಕ ವಿಶ್ಲೇಷಣೆ

ಪರಾತ್ಪರ ಗುರು ಡಾಕ್ಟರರು ಈ ಭಗವಂತನವರೆಗೆ ತಲುಪಿರುವರು, ಎಂದರೆ ಅವರಿಗೆ ಅವನ ಪ್ರಾಪ್ತಿಯಾಗಿದೆ. ಅವರು ಸಮಷ್ಟಿಗಾಗಿ ಇರುವ ಜಿಜ್ಞಾಸೆ ಮತ್ತು ಅದರಿಂದ ಲಭಿಸುವ ಜ್ಞಾನ ಇವುಗಳ ಮೂಲಕ ಇತರ ಜೀವಗಳಲ್ಲಿನ ಮಾಯೆಯ ಪರದೆಯನ್ನು ದೂರ ಮಾಡುತ್ತಿರುವರು. ಇದರಿಂದಾಗಿ ಇಂತಹ ಜೀವಗಳಿಗೂ ಭಗವಂತನವರೆಗೆ ತಲುಪಲು ಸಾಧ್ಯವಾಗುವುದು.