‘ಗುರುಪೂರ್ಣಿಮೆಯ ಸಮಯದಲ್ಲಿ ಪ್ರಕಟಿಸಲಾದ ಆತ್ಮೋನ್ನತಿಯ ಮಾರ್ಗದರ್ಶಿ ಕೈಪಿಡಿಯಲ್ಲಿ ಕೆಲವು ಸಾಧಕರ ಆಧ್ಯಾತ್ಮಿಕ ಮಟ್ಟವು ಕಡಿಮೆಯಾಗಿದೆ. ಮಟ್ಟ ಕಡಿಮೆಯಾಗಿದ್ದರಿಂದ ಸಾಧಕರಿಗೆ ನಿರಾಶೆಯಾಗುತ್ತದೆ. ವರ್ಷವಿಡಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿ ಅಪೇಕ್ಷಿತವಿರುವಷ್ಟು ಪ್ರಯತ್ನಗಳು ಆಗದಿರುವುದರಿಂದ ಆಧ್ಯಾತ್ಮಿಕ ಮಟ್ಟವು ಕಡಿಮೆಯಾಗುತ್ತದೆ. ವರ್ಷವಿಡೀ ಒಳ್ಳೆಯ ಪ್ರಯತ್ನಗಳನ್ನು ಮಾಡುವುದರಿಂದ ಸಾಧಕರ ಆಧ್ಯಾತ್ಮಿಕ ಮಟ್ಟವು ಶೇ. ೧ ರಷ್ಟು ಹೆಚ್ಚಾಗುತ್ತದೆ. ಹೀಗಿರುವಾಗ ನಿರಂತರವಾಗಿ ಹೆಚ್ಚು ಪ್ರಯತ್ನಿಸುವುದರಿಂದ ಅದು ಶೇ. ೨ ರಷ್ಟು ಕೂಡ ಹೆಚ್ಚಾಗಬಹುದು. ಮಟ್ಟ ಕಡಿಮೆಯಾಗುವುದರ ಹಿಂದೆ ಶಾರೀರಿಕ ಅನಾರೋಗ್ಯ, ಮಾನಸಿಕ ತೊಂದರೆ, ಕೆಟ್ಟ ಶಕ್ತಿಗಳ ಆಕ್ರಮಣ, ಸಾಂಸಾರಿಕ ಸಮಸ್ಯೆಗಳು, ಮಾಯೆಯಲ್ಲಿ ಮಗ್ನರಾಗುವುದು ಇದರೊಂದಿಗೆ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಗಾಂಭೀರ್ಯದಿಂದ ಮಾಡದಿರುವುದು, ಸಮಷ್ಟಿ ಸೇವೆಯಲ್ಲಿ ಗಂಭೀರ ತಪ್ಪುಗಳನ್ನು ಮಾಡುವುದು ಮುಂತಾದ ಅನೇಕ ಅಂಶಗಳ ಸಮಾವೇಶವಿರುತ್ತದೆ.
ಮಟ್ಟ ಕಡಿಮೆಯಾಗಿರುವ ಸಾಧಕರು ನಕಾರಾತ್ಮಕ ವಿಚಾರವನ್ನು ಮಾಡದೇ ‘ನನ್ನ ಸಾಧನೆಯ ಪ್ರಯತ್ನಗಳಲ್ಲಿ ಎಲ್ಲಿ ಕಡಿಮೆ ಬಿದ್ದಿದ್ದೇನೆ ?, ಎಂಬುವುದನ್ನು ತತ್ತ್ವನಿಷ್ಠತೆಯೊಂದಿಗೆ ಅಧ್ಯಯನ ಮಾಡಿ. ನಮ್ಮ ಸಾಧಕ ಪರಿವಾರ ಮತ್ತು ಸಹಸಾಧಕರ ಸಹಾಯವನ್ನು ಪಡೆದುಕೊಳ್ಳಿರಿ. ‘ನನ್ನ ಸಾಧನೆಯ ಮಾರ್ಗ ಯೋಗ್ಯವಿದೆಯೇ ?, ಎನ್ನುವ ಸಂದರ್ಭದಲ್ಲಿ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವವರಿಗೆ ಮತ್ತು ಜವಾಬ್ದಾರ ಸಾಧಕರಿಗೆ ಕೇಳಿಕೊಳ್ಳಿರಿ. ಒಂದು ವೇಳೆ ನಾವು ೧ ಹೆಜ್ಜೆ ಹಿಂದೆ ಹೋದರೂ, ಮನಃಪೂರ್ವಕವಾಗಿ ಪ್ರಯತ್ನಿಸಿದರೆ ಪುನಃ ೪ ಹೆಜ್ಜೆ ಮುಂದೆ ಹೋಗಬಲ್ಲೆವು, ಎಂಬ ವಿಷಯವನ್ನು ಮನಸ್ಸಿನಲ್ಲಿ ಬಿಂಬಿಸಿರಿ. ಅಧ್ಯಾತ್ಮದಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವವಿರುವುದರಿಂದ ಸಾಧನೆಯ ಪ್ರಯತ್ನವನ್ನು ತಳಮಳ ಮತ್ತು ದೃಢತೆಯೊಂದಿಗೆ ಮಾಡಿರಿ.
ಸಾಧಕರೇ, ‘ನನ್ನ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಲಿಲ್ಲ, ಎಂಬ ನಕಾರಾತ್ಮಕ ವಿಚಾರದಲ್ಲಿ ಮುಳುಗದೇ ಸಕಾರಾತ್ಮಕವಾಗಿದ್ದು ತಳಮಳದೊಂದಿಗೆ ಪ್ರಯತ್ನ ಮಾಡುವ ಆನಂದವನ್ನು ಪಡೆದುಕೊಳ್ಳಿರಿ. – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಸನಾತನ ಆಶ್ರಮ, ರಾಮನಾಥಿ, ಗೋವಾ (೨೧.೭.೨೦೨೦)