ಚಾತುರ್ಮಾಸ

ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ, ಚಾತುರ್ಮಾಸದ ಮಹತ್ವ, ವೈಶಿಷ್ಟ್ಯಗಳೇನು ? ಈ ಅವಧಿಯಲ್ಲಿ ಯಾವೆಲ್ಲ ವ್ರತಗಳನ್ನು ಮಾಡಬೇಕು ? ಮುಂತಾದ ಮಾಹಿತಿಗಳನ್ನು ವಾಚಕರಿಗಾಗಿ ನೀಡುತ್ತಿದ್ದೇವೆ.

ಹರಿತಾಲಿಕಾ

ಅ. ತಿಥಿ : ಭಾದ್ರಪದ ಶುಕ್ಲ ತೃತೀಯಾ

ಆ. ಇತಿಹಾಸ ಮತ್ತು ಉದ್ದೇಶ : ಪಾರ್ವತಿಯು ಈ ವ್ರತವನ್ನು ಮಾಡಿ ಶಿವನನ್ನು ಪ್ರಾಪ್ತಮಾಡಿಕೊಂಡಳು; ಆದುದರಿಂದ ಮನಸ್ಸಿನಂತೆ ಪತಿಯು ಸಿಗಬೇಕೆಂದು ಹಾಗೂ ಅಖಂಡ ಸೌಭಾಗ್ಯ ಪ್ರಾಪ್ತಿಗಾಗಿ ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ.

೩. ವ್ರತವನ್ನು ಆಚರಿಸುವ ಪದ್ಧತಿ : ಪ್ರಾತಃಕಾಲದಲ್ಲಿ ಮಂಗಲ ಸ್ನಾನವನ್ನು ಮಾಡಿ ಪಾರ್ವತಿ ಮತ್ತು ಅವಳ ಸಖಿಯರ ಮೂರ್ತಿಗಳನ್ನು ತಂದು ಶಿವಲಿಂಗಸಹಿತ ಪೂಜಿಸುತ್ತಾರೆ ರಾತ್ರಿ ಜಾಗರಣೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಉತ್ತರಪೂಜೆ ಮಾಡಿ ಲಿಂಗ ಮತ್ತು  ಮೂರ್ತಿಯನ್ನು ವಿಸರ್ಜಿಸುತ್ತಾರೆ.  (ಮುಂದುವರಿಯುವುದು)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)