ಚಾತುರ್ಮಾಸ

ಚಾತುರ್ಮಾಸದ ಮಹತ್ವ, ವೈಶಿಷ್ಟ್ಯಗಳೇನು ? ಈ ಅವಧಿಯಲ್ಲಿ ಯಾವೆಲ್ಲ ವ್ರತಗಳನ್ನು ಮಾಡಬೇಕು ? ಮುಂತಾದ ಮಾಹಿತಿ ಗಳನ್ನು ವಾಚಕರಿಗಾಗಿ ನೀಡುತ್ತಿದ್ದೇವೆ.

ಮಂಗಳಗೌರಿ

‘ಮಂಗಳಗೌರಿಯು ಸೌಭಾಗ್ಯ ದಾಯಕ ದೇವತೆಯಾಗಿದ್ದಾಳೆ. ಇದು ನವವಿವಾಹಿತ ಹುಡುಗಿಯರು ಮಾಡಬೇಕಾದ ವ್ರತವಾಗಿದೆ. ವಿವಾಹವಾದ ನಂತರ ಐದರಿಂದ ಏಳು ವರ್ಷಗಳ ಕಾಲ ಶ್ರಾವಣ ಮಾಸದಲ್ಲಿನ ಪ್ರತಿ ಮಂಗಳವಾರ ಈ ವ್ರತವನ್ನು ಮಾಡುವುದಿರುತ್ತದೆ. ಇದರಲ್ಲಿ ಶಿವ ಮತ್ತು ಗಣಪತಿಯೊಂದಿಗೆ ಗೌರಿಪೂಜೆಯನ್ನು ಮಾಡುತ್ತಾರೆ.

ಜೀವಂತಿಕಾಪೂಜೆ

ಈ ವ್ರತವನ್ನು ಶ್ರಾವಣ ಮಾಸದಲ್ಲಿ ಪ್ರತಿ ಶುಕ್ರವಾರ ಮಾಡುತ್ತಾರೆ. ‘ಜೀವಂತಿಕಾ ಅಥವಾ ‘ಜೀವತಿಯು ಈ ವ್ರತದ ಅಧಿದೇವತೆಯಾಗಿದ್ದಾಳೆ. ಇವಳು ಸಣ್ಣ ಮಕ್ಕಳನ್ನು ರಕ್ಷಿಸುತ್ತಾಳೆ. ಮೊದಲನೆಯ ಶುಕ್ರವಾರದಂದು ಗೋಡೆಯ ಮೇಲೆ ಗಂಧದಿಂದ ಜೀವತಿಯ ಚಿತ್ರವನ್ನು ಬಿಡಿಸಿ ಸ್ತ್ರೀಯರು ಅದನ್ನು ಪೂಜಿಸುತ್ತಾರೆ. ಇತ್ತೀಚಿನ ಕಾಲದಲ್ಲಿ ಮುದ್ರಿಸಿದ ಭಾವಚಿತ್ರಗಳನ್ನು ಪೂಜಿಸುತ್ತಾರೆ.

ಪಿಠೋರಿ (ದರ್ಶ) ಅಮಾವಾಸ್ಯೆ

ಶ್ರಾವಣ ಮಾಸದಲ್ಲಿನ ಅಮಾವಾಸ್ಯೆ ಯೆಂದರೆ ಪಿಠೋರಿ ಅಮಾವಾಸ್ಯೆ. ಸಂತಾನಪ್ರಾಪ್ತಿಗಾಗಿ ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ.

(ಮುಂದುವರಿಯುವುದು)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)