೧. ಸಪ್ತರ್ಷಿಗಳ ಆಜ್ಞೆಯಂತೆ ಜಯಪುರದಿಂದ ಅಯೋಧ್ಯೆಯತ್ತ ಪ್ರಸ್ಥಾನ !
‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೩೧.೭.೨೦೨೦ ರಂದು ಅಯೋಧ್ಯೆಗೆ ಹೋಗಬೇಕು. ಈ ಸಲ ಅವರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ವತಿಯಿಂದ ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸುವರ್ಣ ದಾನ ನೀಡಬೇಕು, ಎಂದು ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮೂಲಕ ಆಜ್ಞೆಯನ್ನು ಮಾಡಿದ್ದರು. ಈ ಆಜ್ಞೆಗನುಸಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೩೧.೭.೨೦೨೦ ರಂದು ಜಯಪುರದಿಂದ ೭೦೦ ಕಿ.ಮೀ. ದೂರ ಪ್ರಯಾಣ ಮಾಡಿ ಅಯೋಧ್ಯೆಗೆ ತಲುಪಿದರು.
೨. ಪಂಚಮಹಾಭೂತಗಳ ಪ್ರತೀಕವಾಗಿರುವ ೫ ಸುವರ್ಣಮಣಿಗಳ ಅರ್ಪಣೆ !
ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪಂಚಮಹಾಭೂತಗಳ ಪ್ರತೀಕವೆಂದು ೫ ಸುವರ್ಣಮಣಿಗಳನ್ನು ತಯಾರಿಸಿಕೊಂಡರು. ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೃಷ್ಟಿಯು ಆ ಮಣಿಗಳ ಮೇಲೆ ಬೀಳಬೇಕೆಂದು’, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸುವರ್ಣಮಣಿಗಳ ಛಾಯಾಚಿತ್ರವನ್ನು ಅವರಿಗೆ ಕಳುಹಿಸಿದರು. ಸನಾತನದ ಮೂರು ಗುರುಗಳ ಚೈತನ್ಯಮಯ ದೃಷ್ಟಿಯಿಂದ ಭರಿತವಾದ ಈ ೫ ಮಣಿಗಳನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೩೧.೭.೨೦೨೦ ರಂದು ಅಯೋಧ್ಯೆಯ ಕಾರಸೇವಕಪುರಮ್‌ಗೆ ಹೋಗಿ ಶ್ರೀರಾಮಜನ್ಮಭೂಮಿ ಮಂದಿರ ನ್ಯಾಸದ ಅಧ್ಯಕ್ಷ ಶ್ರೀ. ಚಂಪತ ರಾಯ್‌ಜಿ ಇವರಲ್ಲಿ ದಾನದ ಸ್ವರೂಪದಲ್ಲಿ ಕೊಟ್ಟರು.
೩. ಶಿವಕ್ಷೇತ್ರದೊಂದಿಗೆ ಸಂಬಂಧಿಸಿದ ಮಣ್ಣು ಮತ್ತು ಜಲವನ್ನು ಶ್ರೀರಾಮಮಂದಿರಕ್ಕಾಗಿ ಅರ್ಪಿಸುವುದು, ಇದು ‘ಹರಿಹರ ಸಂಗಮವಾಗಿದೆ !
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀರಾಮ ಮಂದಿರದ ಭೂಮಿಪೂಜೆಗಾಗಿ ಪ್ರತ್ಯಕ್ಷ ಶಿವನ ನಿವಾಸ ಸ್ಥಾನವಾಗಿರುವ ಕೈಲಾಸ ಪರ್ವತದ ಮಣ್ಣು, ಕೈಲಾಸಚರಣಸ್ಪರ್ಶದ ಮಣ್ಣು, ಕೈಲಾಸ ಗೌರಿಕುಂಡದ ಮಣ್ಣು ಮತ್ತು ಮಾನಸ ಸರೋವರದ ಜಲವನ್ನು ಅರ್ಪಣೆ ಮಾಡಿದರು. ಈ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, “ಕೈಲಾಸ ಪರ್ವತದ ಮಣ್ಣು ಮತ್ತು ಮಾನಸ ಸರೋವರದ ಜಲ ಶ್ರೀರಾಮಮಂದಿರದ ಭೂಮಿಪೂಜೆಗಾಗಿ ತಲುಪುವುದು, ಇದು ಒಂದು ರೀತಿಯ ‘ಹರಿಹರ ಸಂಗಮ’ವಾಗಿದೆ. ಶ್ರೀರಾಮನು (ಹರಿ) ಸತತ ಶಿವನ ಸ್ಮರಣೆಯನ್ನು ಮಾಡುತ್ತಾನೆ ಮತ್ತು ಭಗವಾನ ಶಿವನು (ಹರ) ಶ್ರೀರಾಮನ ಜಪ ಮಾಡುತ್ತಾನೆ. ಹರಿ ಮತ್ತು ಹರ ಇವರಿಬ್ಬರೂ ಒಂದೇ ಆಗಿದ್ದಾರೆ. ಹರಿ ಮತ್ತು ಹರನ ಈ ಸಂಗಮವು ಸನಾತನ ಸಂಸ್ಥೆಗೆ ಆಶೀರ್ವಾದವಾಗಿದೆ” ಎಂದು ಹೇಳಿದರು. ಇದುವರೆಗೆ ಅನೇಕ ತೀರ್ಥಕ್ಷೇತ್ರಗಳ ಮಣ್ಣು ಅಯೋಧ್ಯೆಗೆ ಬಂದಿವೆ; ಆದರೆ ಕೈಲಾಸ ಪರ್ವತದ ಮಣ್ಣು ಇಲ್ಲಿಗೆ ಬಂದಿರಲಿಲ್ಲ. ಈ ಕುರಿತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, ‘ಶಿವನೇ ನನ್ನನ್ನು ಮಾಧ್ಯಮವನ್ನಾಗಿಸಿ ಕೈಲಾಸ ಪರ್ವತದ ಮಣ್ಣನ್ನು ಇಲ್ಲಿಗೆ ತಲುಪಿಸಿದನು’, ಎಂದು ಹೇಳಿದರು.
೩ ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಯೋಧ್ಯೆಯ ಪ್ರಯಾಣದ ಕುರಿತು ಮತ್ತು ಕೈಲಾಸ ಪರ್ವತದ ಮಣ್ಣನ್ನು ಅರ್ಪಿಸುವ ಬಗ್ಗೆ ಜಯಪುರ (ರಾಜಸ್ಥಾನ)ದ ಶಿವಭಕ್ತ ಶ್ರೀ. ವಾರಿದ ಸೋನಿ ಇವರಿಗೆ ಸ್ವಪ್ನದೃಷ್ಟಾಂತ : ೨೦೧೯ ನೇ ಇಸವಿಯಲ್ಲಿ ಜಯಪುರ (ರಾಜಸ್ಥಾನ)ನ ಶಿವಭಕ್ತ ಶ್ರೀ. ವಾರಿದ ಸೋನಿ ಇವರ ಮಾರ್ಗದರ್ಶನಕ್ಕನುಸಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಅವರೊಂದಿಗಿರುವ ಕೆಲವು ಸಾಧಕರು ಕೈಲಾಸ-ಮಾನಸ ಸರೋವರ ಯಾತ್ರೆಯನ್ನು ಮಾಡಿದ್ದರು. ಶ್ರೀ. ವಾರಿದ ಸೋನಿಯವರು ಕಳೆದ ಅನೇಕ ವರ್ಷಗಳಿಂದ ಕೈಲಾಸ-ಮಾನಸ ಸರೋವರದ ಯಾತ್ರೆಯನ್ನು ಮಾಡುತ್ತಿದ್ದಾರೆ. ೨೮.೭.೨೦೨೦ ರಂದು ಶ್ರೀ. ವಾರಿದ ಸೋನಿಯವರಿಗೆ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅಯೋಧ್ಯೆಗೆ ಹೋಗುವರು. ಅವರಿಗೆ ರಾಮಮಂದಿರದ ಭೂಮಿಪೂಜೆಗಾಗಿ ಅರ್ಪಣೆ ಮಾಡಲು ಕೈಲಾಸ ಪರ್ವತದ ಮಣ್ಣನ್ನು ಕೊಡೋಣ’, ಎಂದು ಸ್ವಪ್ನ ದೃಷ್ಟಾಂತವಾಯಿತು. ಅದಕ್ಕನುಸಾರ ಅವರು ಕೈಲಾಸ ಪರ್ವತದ ಮಣ್ಣು ಮತ್ತು ಮಾನಸ ಸರೋವರದ ಜಲವನ್ನು ೩೦.೭.೨೦೨೦ ರಂದು ಜಯಪುರದಲ್ಲಿರುವ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಂದು ಕೊಟ್ಟರು.
೪. ಶರಯೂ ನದಿಯ ಆರತಿಯ ಸಮಯಕ್ಕೆ ಘಟಿಸಿದ ದೈವೀ ಘಟನೆ !
ಶರಯೂ ನದಿಯ ದಂಡೆಯ ಮೇಲೆ ಪ್ರತಿದಿನ ಸಾಯಂಕಾಲ ೭ ರಿಂದ ೭.೧೫ ಈ ಸಮಯಕ್ಕೆ ನದಿಗೆ ಆರತಿಯನ್ನು ಮಾಡಲಾಗುತ್ತದೆ. ಅಯೋಧ್ಯೆಯ ಹಿಂದುತ್ವನಿಷ್ಠ ವೈದ್ಯ ರಾಮಪ್ರಕಾಶ ಪಾಂಡೆ ಇವರು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಈ ಆರತಿಗೆ ಉಪಸ್ಥಿತರಿರಲು ಆಮಂತ್ರಣವನ್ನು ನೀಡಿದ್ದರು. ಅದಕ್ಕನುಸಾರ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶರಯೂ ನದಿಯ ಆರತಿಯಲ್ಲಿ ಪಾಲ್ಗೊಂಡರು.
೪ ಅ. ಶ್ವಾನವು ಹತ್ತಿರ ಬರುವ ಪ್ರಸಂಗದಿಂದ ಗುರುತತ್ತ್ವವು ಜೊತೆಗಿರುವ ಬಗ್ಗೆ ಬಂದ ಅನುಭೂತಿ ! : ಶರಯೂ ನದಿಯ ಆರತಿಗಾಗಿ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನದಿ ದಂಡೆಗೆ ಹೋದಾಗ ಅವರ ಹತ್ತಿರ ಒಂದು ನಾಯಿಯು ಬಂದು ನಿಂತಿತು. ಆಗ ಆ ನಾಯಿಯು ಇಷ್ಟೊಂದು ಹತ್ತಿರ ಬಂದು ನಿಂತಿರುವುದನ್ನು ನೋಡಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯವೆನಿಸಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಈ ನಾಯಿಯು ದತ್ತಗುರುಗಳ ಶ್ವಾನವಾಗಿರುವುದು ಅರಿವಾಯಿತು. ‘ಗುರುತತ್ತ್ವವು ಸತತವಾಗಿ ನಮ್ಮೊಂದಿಗಿರುವ ಬಗ್ಗೆ ಈ ಅನುಭೂತಿಯಾಗಿದೆ’, ಎಂದು ಅವರು ಹೇಳಿದರು.
೪ ಆ. ಅರ್ಚಕರು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೈಯಲ್ಲಿ ದೀಪವನ್ನು ಕೊಟ್ಟು ಆರತಿ ಬೆಳಗಲು ಹೇಳುವುದು : ಅನೇಕ ಅರ್ಚಕರು ಮೇಲ್ಡಂಡೆಯಲ್ಲಿ ನಿಂತು ಶರಯೂ ನದಿಗೆ ಆರತಿ ಮಾಡುತ್ತಿದ್ದರು. ಆರತಿಯು ಪೂರ್ಣವಾಗುತ್ತಿದ್ದಂತೆಯೇ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಎಲ್ಲಿ ನಿಂತಿದ್ದರೋ, ಅಲ್ಲಿರುವ ಅರ್ಚಕರು ಅವರನ್ನು ಕರೆದರು ಮತ್ತು ಆರತಿಯ ದೀಪವನ್ನು ಅವರ ಕೈಯಲ್ಲಿ ಕೊಟ್ಟು, “ಮಾತಾಜಿಯವರೇ, ತಾವು ಸಹ ಶರಯೂ ನದಿಗೆ ಆರತಿಯನ್ನು ಬೆಳಗಿರಿ”, ಎಂದರು. ಆ ಸಮಯದಲ್ಲಿ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಭಾವಜಾಗೃತಿಯಾಯಿತು. ಅವರು ಭಾವಾವಸ್ಥೆಯಲ್ಲಿ ಶರಯೂ ನದಿಗೆ ಆರತಿಯನ್ನು ಬೆಳಗಿದರು.
೪ ಇ. ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಆರತಿ ಬೆಳಗುವಾಗ ಶರಯೂ ನದಿಯ ನೀರಿನ ಮಟ್ಟವು ಹೆಚ್ಚಾಗುವುದು, ಇದು ಶುಭಸಂಕೇತ ! : ವಿಶೇಷವೆಂದರೆ ಈ ಸಮಯದಲ್ಲಿ ಶರಯೂ ನದಿಯಲ್ಲಿನ ನೀರಿನ ಮಟ್ಟವು ಹೆಚ್ಚಾಗಿತ್ತು. ಕೆಲವು ಗಂಟೆಗಳ ನಂತರ ನದಿದಂಡೆಯ ಕೆಲವು ಪರಿಸರಗಳಲ್ಲಿ ನೆರೆ ಬರುವ ಸ್ಥಿತಿ ಇರುವುದಾಗಿ ಸರಕಾರವು ಘೋಷಿಸಿತು. ಈ ಬಗ್ಗೆ ಸಪ್ತರ್ಷಿಗಳಿಗೆ ತಿಳಿಸಿದಾಗ ಅವರು, “ಶ್ರೀರಾಮಮಂದಿರಕ್ಕಾಗಿ ಭೂಮಿಪೂಜೆಯು ನಡೆಯುತ್ತಿರುವುದರಿಂದ ಶರಯೂ ನದಿಗೆ ಆನಂದವಾಗಿದೆ. ಶರಯೂ ನದಿಯ ನೀರಿನಲ್ಲಿ ಹೆಚ್ಚಳವಾಗುವುದು, ಇದು ಶುಭಸಂಕೇತವಾಗಿದೆ”. ಎಂದು ಹೇಳಿದರು. – ಶ್ರೀ. ವಿನಾಯಕ ಶಾನಭಾಗ, ಅಯೋಧ್ಯೆ (೧.೮.೨೦೨೦)
ಕೃತಜ್ಞತೆಗಳು !
‘ಪರಾತ್ಪರ ಗುರು ಡಾ. ಆಠವಲೆಯವರು ಎಲ್ಲೆಡೆ ರಾಮರಾಜ್ಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವ ಕಾರ್ಯವನ್ನು ಮಾಡುತ್ತಿರುವಾಗ ಶ್ರೀರಾಮಜನ್ಮಭೂಮಿಯ ಸಮಸ್ಯೆಯು ಬಗೆ ಹರಿಯುವುದು, ಶ್ರೀರಾಮಮಂದಿರದ ನಿರ್ಮಾಣ ಕಾರ್ಯವು ಆರಂಭವಾಗುವುದು, ಇದು ದೈವೀ ನಿಯೋಜನೆಯಾಗಿದೆ. ಹಿಂದೆ ಶ್ರೀರಾಮಜನ್ಮಭೂಮಿಯ ಮೊಕದ್ದಮೆಯ ತೀರ್ಪು ಬಂದ ನಂತರವೂ ಮಹರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅಯೋಧ್ಯೆಗೆ ಹೋಗಿ ಶ್ರೀರಾಮಜನ್ಮಭೂಮಿಯಲ್ಲಿನ ರಾಮಲಲ್ಲಾನ ದರ್ಶನ ಪಡೆಯಲು ಆಜ್ಞೆ ನೀಡಿದ್ದರು. ಈಗಲೂ ಮಹರ್ಷಿಗಳೇ ಈ ಅರ್ಪಣೆಯನ್ನು ನೀಡುವ ಆಜ್ಞೆಯನ್ನು ಮಾಡಿದರು ಮತ್ತು ಅದಕ್ಕಾಗಿ ಶಿವಕ್ಷೇತ್ರದ ಮಣ್ಣು ಮತ್ತು ಜಲ ಇವುಗಳೂ ಈಶ್ವರೀ ನಿಯೋಜನೆ ಗನುಸಾರ ಲಭ್ಯವಾದವು ! ಈ ಐತಿಹಾಸಿಕ ಮತ್ತು ದೈವೀ ಕ್ಷಣಗಳ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ’ಯು ಅಯೋಧ್ಯೆಯಲ್ಲಿ ಉಪಸ್ಥಿತರಿರುವುದು, ಇದು ಕೂಡ ಒಂದು ದೈವೀ ಯೋಗವೇ ಆಗಿದೆ ! ಇದು ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ವಿಷ್ಣುತತ್ತ್ವದ ಅನುಭೂತಿಯಾಗಿದೆ. ಅದಕ್ಕಾಗಿ ಪ್ರಭು ಶ್ರೀರಾಮ, ಮಹರ್ಷಿಗಳು, ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳು. – ಶ್ರೀ. ವಿನಾಯಕ ಶಾನಭಾಗ