ಅಯೋಧ್ಯೆಯಲ್ಲಿರುವ ಪ್ರಭು ಶ್ರೀರಾಮಚಂದ್ರನ ಗುರುಕುಲ, ಶರಯೂ ಮಾತೆ ಮತ್ತು ಭಕ್ತ ಶಿರೋಮಣಿ ಹನುಮಂತ ಇವರ ಕೆಲವು ಸ್ಮೃತಿಗಳ ಪವಿತ್ರ ದರ್ಶನ !

೧. ಪ್ರಭು ಶ್ರೀರಾಮಚಂದ್ರನ ಗುರುಕುಲವಾಗಿದ್ದ ಮಹರ್ಷಿ ವಸಿಷ್ಠರ ಆಶ್ರಮ

ಮಹರ್ಷಿ ವಸಿಷ್ಠರು ಪ್ರಭು ಶ್ರೀರಾಮನ ಗುರುಗಳು. ಅಯೋಧ್ಯೆಯಲ್ಲಿರುವ ಮಹರ್ಷಿ ವಸಿಷ್ಠರ ಆಶ್ರಮವು ಶ್ರೀರಾಮನ ಗುರುಕುಲವಾಗಿದೆ. ಇದೇ ಸ್ಥಳದಲ್ಲಿ ಪ್ರಭು ಶ್ರೀರಾಮ ಮತ್ತು ಅವನ ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಇವರು ಗುರು ವಸಿಷ್ಠರಿಂದ ಲೌಕಿಕ ಶಿಕ್ಷಣವನ್ನು ಪಡೆದರು.

೨. ಅಯೋಧ್ಯೆಯ ಮಹರ್ಷಿ ವಸಿಷ್ಠರ ಆಶ್ರಮದಲ್ಲಿರುವ ಶರಯೂ ನದಿಯ ಉಗಮಸ್ಥಾನ

ಶ್ರೀ ಗುರು ವಸಿಷ್ಠ ಋಷಿಗಳ ಆಶ್ರಮದಲ್ಲಿರುವ ವಸಿಷ್ಠರ ಕುಂಡದಿಂದ ಅಯೋಧ್ಯೆಯಲ್ಲಿ ಶರಯೂ ಮಹಾನದಿ ಉದ್ಭವಿಸಿದಳು. ಪ್ರಾಚೀನ ಕಾಲದಲ್ಲಿ ಅಯೋಧ್ಯೆಯ ಮಹಾರಾಜಾ ಛಾಕನು ಒಮ್ಮೆ ವಸಿಷ್ಠ ಋಷಿಗಳಿಗೆ ‘ನಮ್ಮ ರಾಜ್ಯದಲ್ಲಿ ನದಿಗಳಿಲ್ಲ. ಇದರಿಂದ ಇಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ಸಫಲವಾಗುತ್ತಿಲ್ಲ ಎಂದು ಪ್ರಾರ್ಥಿಸಿದನು. ಆಗ ಮಹರ್ಷಿ ವಸಿಷ್ಠರು ಮಾನಸ ಸರೋವರಕ್ಕೆ ಹೋದರು. ಅವರು ಶರಯೂ ಮಾತೆಯನ್ನು ಆಹ್ವಾನಿಸಿದರು ಮತ್ತು ಅಲ್ಲಿದ್ದ ಬ್ರಹ್ಮದೇವರ ಕಮಂಡಲವನ್ನು ತೆಗೆದುಕೊಂಡು ಅಯೋಧ್ಯೆಗೆ ಬಂದರು. ಇದೇ ಕಮಂಡಲುವಿನಲ್ಲಿ ಶ್ರೀವಿಷ್ಣುವಿನ ನೇತ್ರಜಲ ವಿತ್ತು, ಅದೇ ಜಲದಿಂದ ಮಾನಸ ಸರೋವರ ನಿರ್ಮಾಣವಾಗಿತ್ತು. ಇಂತಹ ದಿವ್ಯ ಕಮಂಡಲುವಿನಲ್ಲಿದ್ದ ತೀರ್ಥವನ್ನು ಅವರು ಆಶ್ರಮದ ಕುಂಡದೊಳಗೆ  ಹಾಕಿದರು ಮತ್ತು ಅಲ್ಲಿ ಶರಯೂ ನದಿ ಪ್ರಕಟಗೊಂಡಳು. ವಸಿಷ್ಠ ಋಷಿಗಳು ಶರಯೂ ನದಿಯನ್ನು ಆಹ್ವಾನಿಸಲು ಹೋದಾಗ, ಅವಳು ಮಹರ್ಷಿಗಳಿಗೆ “ನೀವು ನನ್ನನ್ನು ಯಾವ ಭಾವದಿಂದ ಕರೆದುಕೊಂಡು ಹೋಗುತ್ತಿದ್ದೀರಿ ? ಎಂದು ಕೇಳಿದಳು. ಆಗ ಮಹರ್ಷಿ ವಸಿಷ್ಠರು “ನಾನು ನಿನ್ನನ್ನು ನನ್ನ ಪುತ್ರಿಯೆಂದು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು. ಆದುದರಿಂದ ಶರಯೂ ನದಿ ‘ವಸಿಷ್ಠಿ ಎನ್ನುವ ಹೆಸರಿನಿಂದಲೂ ಗುರುತಿಸಲ್ಪಡುತ್ತಾಳೆ. ಮುಂದೆ ಇದೇ ಶರಯೂವಿನಲ್ಲಿ ಪ್ರಭು ಶ್ರೀರಾಮಚಂದ್ರ ತಮ್ಮ ಅವತಾರವನ್ನು ಸಮಾಪ್ತಗೊಳಿಸಿದರು.

೩. ‘ಅಯೋಧ್ಯೆಯ ರಾಜಾ ಶ್ರೀ ಹನುಮಂತನ ಮಂದಿರ : ಶ್ರೀ ಹನುಮಾನಗಢಿ !

ಶ್ರೀ ಹನುಮಾನಗಢಿ ಎಂದರೆ ಶ್ರೀ ಹನುಮಂತನ ಮಂದಿರ. ಪ್ರಭು ಶ್ರೀರಾಮ ಅವತಾರವನ್ನು ಸಮಾಪ್ತಗೊಳಿಸಲು ನಿರ್ಧರಿಸಿದಾಗ, ಅವರು ಹನುಮಂತನ ಮೇಲೆ ಅಯೋಧ್ಯೆಯ ರಕ್ಷಣೆಯ ಹೊಣೆಯನ್ನು ವಹಿಸಿದರು ಮತ್ತು ಅಯೋಧ್ಯೆಯ ಹೊರಗಿನ ಊರುಗಳನ್ನು ಭರತ, ಶತ್ರುಘ್ನ ಮತ್ತು ಲಕ್ಷ್ಮಣನ ಮಕ್ಕಳಿಗೆ ಕೊಟ್ಟರು. ಆಗಿನಿಂದ ಇಂದಿನವರೆಗೆ ಹನುಮಾನನು ಅಯೋಧ್ಯೆಯ ರಕ್ಷಣೆ ಮಾಡುತ್ತಿದ್ದಾನೆ. ಹನುಮಂತನಿಗೆ ‘ಅಯೋಧ್ಯೆಯ ರಾಜಾ, ಎಂದು ಹೇಳಲಾಗುತ್ತದೆ. ಎಲ್ಲೆಡೆ ಹನುಮಂತನ ಮಂದಿರದ ಮೂರ್ತಿ ವೀರಮುದ್ರೆಯಲ್ಲಿ ಅಥವಾ ದಾಸ್ಯಮುದ್ರೆಯಲ್ಲಿರುತ್ತದೆ. ಅಯೋಧ್ಯೆಯಲ್ಲಿ ಮಾತ್ರ ಹನುಮಂತ ಸಿಂಹಾಸನಾಧಿಷ್ಠಿತ ಮೂರ್ತಿಯಾಗಿದ್ದಾನೆ. ‘ಅಯೋಧ್ಯಾ ನಗರದ ರಕ್ಷಣೆ ಮಾಡಲು ಭಗವಂತನು ಅಯೋಧ್ಯೆಯನ್ನು ಹನುಮಂತನಿಗೆ ನೀಡಿದಾಗಿನಿಂದ ಈ ಸ್ಥಾನ ‘ಹನುಮಾನಗಢಿ, ಹೆಸರಿನಿಂದ ಗುರುತಿಸಲ್ಪಡುತ್ತಿದೆ. ಅಯೋಧ್ಯೆಗೆ ಹೋದ ಬಳಿಕ ಶರಯೂ ನದಿಯಲ್ಲಿ ಸ್ನಾನವನ್ನು ಮಾಡಿ ಪಾಪಮುಕ್ತರಾಗುವ ಮೊದಲು ಹನುಮಾನ ಗಢಿಗೆ ಹೋಗಿ ಶ್ರೀ ಹನುಮಂತನ ಆಜ್ಞೆ ಪಡೆಯಬೇಕು ಎನ್ನುವ ಹೇಳಿಕೆಯಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಯೋಧ್ಯೆಯ ಪ್ರವಾಸದಲ್ಲಿ ಮೊದಲು ಹನುಮಾನನ ದರ್ಶನವನ್ನು ಪಡೆದಿದ್ದರು.

ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಇಲ್ಲಿಯವರೆಗೆ ಸುಮಾರು ೮ ಲಕ್ಷಕ್ಕಿಂತ ಅಧಿಕ ಕಿ.ಮೀ. ಪ್ರವಾಸ ಮಾಡಿ, ಇಂತಹ ಪ್ರಾಚೀನ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇದರಿಂದ ನಮಗೆ ಅಯೋಧ್ಯೆಯ ಕೆಲವು ಸ್ಮೃತಿಗಳ ಛಾಯಾಚಿತ್ರಮಯ ದರ್ಶನ ಲಭ್ಯವಾಗುತ್ತಿದೆ. ಇದು ಅಖಿಲ ಮನುಕುಲಕ್ಕೆ ಅವರ ಅತುಲನೀಯ ಯೋಗದಾನವಾಗಿದೆ. ಇದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಿಗೆ ಕೋಟಿಕೋಟಿ ಕೃತಜ್ಞತೆಗಳು !