ಬೆಳಗಾವಿಯ ಸನಾತನದ ಸಂತರಾದ ಪೂ. (ಡಾ.) ನೀಲಕಂಠ ಅಮೃತ ದೀಕ್ಷಿತ (ವಯಸ್ಸು ೯೨) ಇವರ ದೇಹತ್ಯಾಗ !

‘ಪೂ. ದೀಕ್ಷಿತ ಅಜ್ಜನವರು ಜುಲೈ ೨೭ ರಂದು ರಾತ್ರಿ ೯.೩೦ ಕ್ಕೆ ದೇಹತ್ಯಾಗ ಮಾಡಿದ ನಂತರ ಅವರ ಮುಖವು ಅತ್ಯಂತ ಶಾಂತ ಹಾಗೂ ತೇಜಸ್ವಿಯಾಗಿ ಕಾಣಿಸುತ್ತಿತ್ತು, ಅದೇರೀತಿ ವಾತಾವರಣದಲ್ಲಿ ಚೈತನ್ಯವು ಅರಿವಾಗುತ್ತಿತ್ತು. ಕುಟುಂಬದವರೆಲ್ಲರ ಊಟ ಆದಮೇಲೆ ಪೂ. ಅಜ್ಜ ದೇಹತ್ಯಾಗ ಮಾಡಿದರು. ಇದರಿಂದ ‘ಪೂ. ಅಜ್ಜನವರು ದೇಹತ್ಯಾಗ ಮಾಡುವಾಗಲೂ ಇತರರ ವಿಚಾರ ಮಾಡಿದರು, ಎಂದು ಅರಿವಾಯಿತು.

ಚಾತುರ್ಮಾಸ

ಚಾತುರ್ಮಾಸದಲ್ಲಿ ಹವಿಷ್ಯಾನ್ನವನ್ನು ಸೇವಿಸಬೇಕೆಂದು ಹೇಳಲಾಗಿದೆ. ಅಕ್ಕಿ, ಹೆಸರು, ಜವೆ, ಎಳ್ಳು, ಬಟಾಣಿ, ಗೋಧಿ, ಸಮುದ್ರದ ಉಪ್ಪು, ಹಸುವಿನ ಹಾಲು, ಮೊಸರು, ತುಪ್ಪ, ಹಲಸು, ಮಾವು, ತೆಂಗಿನಕಾಯಿ, ಬಾಳೆಹಣ್ಣು ಮುಂತಾದ ಪದಾರ್ಥಗಳನ್ನು ಹವಿಷ್ಯಾನ್ನಗಳೆಂದು ತಿಳಿಯಬೇಕು. 

ನ್ಯೂರೋಸೈನ್ಸ್‌ಗನುಸಾರ ಸಂಸ್ಕೃತ ಭಾಷೆಯಿಂದ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು !

ಡಾ. ಹಾರ್ಟ್‌ಝೇಲ್ ಇವರು ಸಂಸ್ಕೃತ ಭಾಷೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಸ್ಪೇನ್ ದೇಶದ ಬಾಸ್ಕ್‌ನಲ್ಲಿರುವ ‘ಸೆಂಟರ್ ಆನ್ ಕಾಗ್ನಿಶನ್, ಬ್ರೇನ್ ಎಂಡ್ ಲ್ಯಾಂಗ್ವೇಜ್ ಈ ವಿಭಾಗದ ಪದವ್ಯೋತ್ತರ ಸಂಶೋಧಕರಾಗಿದ್ದಾರೆ. ಅವರು ಸಂಸ್ಕೃತ ಭಾಷೆಯ ಅಧ್ಯಯನ ಮತ್ತು ಭಾಷಾಂತರ ಮಾಡುವುದರಲ್ಲಿ ಬಹಳಷ್ಟು ವರ್ಷಗಳನ್ನು ವ್ಯಯಿಸಿದ್ದು, ಸಂಸ್ಕೃತ ಭಾಷೆಯಿಂದ ಮೆದುಳಿನ ಮೇಲಾಗುವ ಪರಿಣಾಮಗಳಿಂದ ಅವರು ಆಶ್ಚರ್ಯಚಕಿತರಾಗಿದ್ದಾರೆ.

ಸದ್ಗುರು ನಂದಕುಮಾರ ಜಾಧವ ಕಾಕಾರವರ ಅಮೂಲ್ಯ ಮಾರ್ಗದರ್ಶನ

‘ನನ್ನಲ್ಲಿ ಏನಾದರೂ ಒಳ್ಳೆಯದಿದೆ; ಆದುದರಿಂದ ನನಗೆ ಈ ಸೇವೆಯನ್ನು ನೀಡಿದ್ದಾರೆ’, ಎನ್ನುವ ಬದಲು ‘ನನ್ನಲ್ಲಿ ಏನೋ ಕೊರತೆಯಿದೆ ಆದುದರಿಂದ ನನಗೆ ಕಲಿಯಲು ಈ ಸೇವೆಯನ್ನು ನೀಡಿದ್ದಾರೆ, ಈ ಸೇವೆಯ ಮಾಧ್ಯಮದಿಂದ ಕಲಿತು ನನಗೆ ಉತ್ತಮ ರೀತಿಯಲ್ಲಿ ಸಾಧನೆಯನ್ನು ಮಾಡುವುದಿದೆ’, ಎಂಬುದನ್ನು ಯಾವಾಗಲೂ ಮನಸ್ಸಿಗೆ ಹೇಳುತ್ತಿರಬೇಕು.

‘ಧರ್ಮರಾಜ್ಯದ ಸ್ಥಾಪನೆಯಲ್ಲಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ಮುಂದಾಳತ್ವ ವಹಿಸುವರು, ಎಂಬ ಗುರುದೇವರ ವಿಚಾರವನ್ನು ದೃಢಪಡಿಸುವ ೨೦೧೭ ರಿಂದ ೨೦೨೦ ರ ತನಕದಲ್ಲಿ ಆಧ್ಯಾತ್ಮಿಕ ಪ್ರಗತಿಯಲ್ಲಿ ಪುರುಷರಿಗಿಂತ ಸ್ತ್ರೀಯರೇ ಮೇಲುಗೈ !

‘ಪುರುಷರು ಕೈಗಳಲ್ಲಿ (ಅಹಂನ) ಬಳೆಗಳನ್ನು ಧರಿಸಿರುವುದರಿಂದ ಸ್ತ್ರೀಯರೇ ಧರ್ಮಕ್ರಾಂತಿಯನ್ನು ಮಾಡುವರು, ಎಂದು ನಾನು ೧೯೯೪ ನೇ ಇಸವಿಯಲ್ಲಿ ಹೇಳಿದ್ದೆನು. ಕಲಿಯುಗದಲ್ಲಿ ಹಿಂದೂ ರಾಷ್ಟ್ರದ, ಅಂದರೆ ರಾಮರಾಜ್ಯದ, ಧರ್ಮರಾಜ್ಯದ ಸ್ಥಾಪನೆಗಾಗಿ ಈಗ ಸ್ತ್ರೀಯರೇ ಮುಂದಾಳತ್ವವನ್ನು ವಹಿಸುತ್ತಿದ್ದಾರೆ. ಇದರ ಪ್ರತ್ಯಕ್ಷ ಅನುಭವವು ಬರುತ್ತಿದೆ

ಭಕ್ತಿಭಾವದಿಂದ ಅಸಾಧ್ಯವಾದದ್ದು ಏನೂ ಇಲ್ಲ !

ಭಗವಂತನ ಕೀರ್ತನೆಯಲ್ಲಿ ವ್ಯತ್ಯಯವಾದುದಕ್ಕೆ ಕಂಠ ತುಂಬಿದ ಅಂತಃಕರಣದಿಂದ ಅವರು ಪಾಂಡುರಂಗನಿಗೆ ಮೊರೆ ಇಟ್ಟರು. ಅವರ ವಿಠ್ಠಲನಾಮದಲ್ಲಿನ ತಳಮಳವು ಎಷ್ಟು ಹೆಚ್ಚಾಯಿತೆಂದರೆ, ಅವರ ಆರ್ತ ಕೂಗು ಭಗವಂತನಿಗೆ ಕೇಳಿಸಿತು. ಪೂರ್ವ ದಿಕ್ಕಿಗೆ ಮುಖವಿರುವ ಶಂಕರನ ದೇವಸ್ಥಾನವು ನಾಮದೇವರ ಎದುರು ಬಂದು ನಿಂತಿತು.

ಸಂತ ತುಲಸೀದಾಸರ ಜಯಂತಿ ನಿಮಿತ್ತ ಶ್ರಾವಣ ಶುಕ್ಲ ಪಕ್ಷ ಸಪ್ತಮಿ (ಜುಲೈ ೨೭)

ವಾಲ್ಮೀಕಿಯು ತುಲಸೀದಾಸರ ಅವತಾರ ತಾಳಿ ಬಂದಿರುವರೆಂದು ಹನುಮಂತನು ಗುರುತಿಸಿದನು. ಅವರನ್ನು ಪ್ರೀತಿಯಿಂದ ಆಲಿಂಗಿಸಿದ ಹನುಮಂತನು ‘ಬೇಗನೇ ಶ್ರೀರಾಮನ ಭೇಟಿ ಮಾಡಿಸುವೆ’ ಎಂದು ಹೇಳಿ ಅದೃಶ್ಯನಾದನು. ಹನುಮಂತನು ಶ್ರೀರಾಮಚಂದ್ರನಿಗೆ ಹೇಳಿದನು, ‘ನಿಮ್ಮ ಆಜ್ಞೆಯಂತೆ ವಾಲ್ಮೀಕಿಯು ತುಲಸೀದಾಸ ಎಂಬ ಹೆಸರಿನಿಂದ ಅವತಾರ ತಾಳಿರುವರು.

ಯಾರು ಏನು ಇದ್ದಾರೆ ?

ಆನಂದ ಯಾವುದು ? ‘ಯಾವುದು ಇಂದ್ರಿಯಗಳಿಲ್ಲದೇ ಪ್ರಾಪ್ತಿಯಾಗುತ್ತದೆ ಮತ್ತು ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದಿಲ್ಲವೋ, ಅದು ಆನಂದ ! ಪಂಡಿತರು ಯಾರು ? ಸಕಲ ಪ್ರಾಣಿಗಳಲ್ಲಿ ಒಬ್ಬನೇ ಪರಮಾತ್ಮನನ್ನು ನೋಡುವವನು ಮತ್ತು ‘ಬಂಧನ ಮತ್ತು ಮೋಕ್ಷ’ ಇವುಗಳಲ್ಲಿನ ವ್ಯತ್ಯಾಸವನ್ನು ತಿಳಿದಿರುವವನೇ, ಅವನೇ ನಿಜವಾದ ಪಂಡಿತನು.

ಸಾಧನೆಯ ಬಗ್ಗೆ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರ ಮಾರ್ಗದರ್ಶನ

‘ಯಾವುದು ನಮ್ಮ ಬಳಿಯಿದೆಯೋ, ಅದನ್ನೇ ನಾವು ಇತರರಿಗೆ ಕೊಡುತ್ತೇವೆ. ನಮ್ಮಲ್ಲಿ ದೋಷಗಳಿದ್ದರೆ, ಪ್ರತಿಕ್ರಿಯೆಗಳನ್ನು ಕೊಡುತ್ತೇವೆ ಮತ್ತು ಗುಣಗಳಿದ್ದರೆ ಪ್ರೇಮವನ್ನು ಕೊಡುತ್ತೇವೆ. ನಾವು ಇತರರಿಗೆ ಏನು ಕೊಡುತ್ತೇವೆಯೋ, ಅದೇ ನಮಗೆ ಅವರಿಂದ ತಿರುಗಿ ಸಿಗುತ್ತದೆ.

ಸಾಧಕರೇ, ಆಧ್ಯಾತ್ಮಿಕ ಮಟ್ಟ ಹೆಚ್ಚಾಗದಿದ್ದರೆ ನಿರಾಶರಾಗಬೇಡಿ !

ನಮಗೂ ‘ಹಿಂದೂ ರಾಷ್ಟ್ರವನ್ನು ಸ್ಥಾಪನೆ ಮಾಡುವುದಿದೆ. ಅದಕ್ಕಾಗಿ ‘ನಿಃಸ್ವಾರ್ಥ ವೃತ್ತಿಯಿಂದ ಪ್ರಯತ್ನಿಸುತ್ತಿರುವುದು, ಇದೇ ಸಾಧನೆಯಾಗಿದೆ. ‘ಸಾಧನೆಯಲ್ಲಿ ಇದುವರೆಗೆ ಯಾವುದು ಮಾಡಲು ಸಾಧ್ಯವಾಗುತ್ತಿರಲಿಲ್ಲ ಅದನ್ನು ಮಾಡುತ್ತಿರುವುದು, ಇದೇ ಸಾಧನೆಯಾಗಿದೆ. ‘ತನ್ನಲ್ಲಿ ಸಾಧಕತ್ವವನ್ನು ನಿರ್ಮಾಣ ಮಾಡುವುದು, ಇದೇ ಆಧ್ಯಾತ್ಮಿಕ ಪ್ರಗತಿಯಾಗಿದೆ.