೧. ಶ್ರೀಕೃಷ್ಣನ ಅನೇಕ ಸಾವಿರ ಗೋಪಿಯರಲ್ಲಿ ರಾಧಾರಾಣಿ ಶ್ರೇಷ್ಠ !
ಭಗವಾನ ಶ್ರೀಕೃಷ್ಣನ ಅನೇಕ ಸಾವಿರ ಗೋಪಿಯರಲ್ಲಿ ೧೬ ಸಾವಿರ ಗೋಪಿಯರು ಪ್ರಮುಖರು. ಈ ೧೬ ಸಾವಿರದಲ್ಲಿ ೧೦೮ ಜನ ವಿಶೇಷವಾಗಿ ಪ್ರಖ್ಯಾತರಾಗಿದ್ದಾರೆ. ಈ ೧೦೮ ರಲ್ಲಿ ೮ ಜನ ಪ್ರಧಾನರಾಗಿದ್ದಾರೆ ಹಾಗೂ ಈ ೮ ಪ್ರಧಾನ ಗೋಪಿಯರಲ್ಲಿ ರಾಧಾರಾಣಿ ಮತ್ತು ಚಂದ್ರಾವಲಿ ಪ್ರಮುಖರಾಗಿದ್ದಾರೆ ಹಾಗೂ ಈ ಇಬ್ಬರು ಗೋಪಿಯರಲ್ಲಿ ರಾಧಾರಾಣಿ ಶ್ರೇಷ್ಠಳಾಗಿದ್ದಾಳೆ. (ಆಧಾರ: ಸ್ಕಂದಪುರಾಣ)
೨. ಗೋಪಿಯರ ಜನ್ಮರಹಸ್ಯ !
ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು, ಋಷಿಗಳಾಗಿದ್ದರು ಹಾಗೂ ಅವರು ಮಾಧುರ್ಯ-ಪ್ರೇಮಭಕ್ತಿಯಿಂದ ಪ್ರಭು ಶ್ರೀರಾಮನ ಸಾನಿಧ್ಯದ ಇಚ್ಛೆ ಇಟ್ಟಿದ್ದರು. ಆಗ ರಾಮನು ಅವರಿಗೆ ದ್ವಾಪಾರಯುಗದಲ್ಲಿ ಶ್ರೀಕೃಷ್ಣಜನ್ಮದಲ್ಲಿ ಅವರ ಈ ಇಚ್ಛೆಯನ್ನು ಗೋಪಾಲ ಕೃಷ್ಣನು ಪೂರ್ಣಗೊಳಿಸುವನು, ಎಂದು ಆಶೀರ್ವಾದ ನೀಡಿದ್ದರು. ಆ ಆಶೀರ್ವಾದಕ್ಕನುಸಾರ ಆ ಎಲ್ಲ ವೈದಿಕ ವಿದ್ವಾಂಸರು ಶ್ರೀಕೃಷ್ಣನ ಅವತಾರದಲ್ಲಿ ವೃಂದಾವನದಲ್ಲಿನ ಗೋಪಿಯರ ರೂಪದಲ್ಲಿ ಜನ್ಮ ಪಡೆದು ಶ್ರೀಕೃಷ್ಣನ ಸಾನಿಧ್ಯವನ್ನುಗಳಿಸಿದ್ದರು. ಅವರ ಶುದ್ಧ ಇಚ್ಛೆ ಸಾಧನೆಯಿಂದ ಸಫಲವಾಗಿತ್ತು. ಇದು ಗೋಪಿಯರ ಜನ್ಮರಹಸ್ಯವಾಗಿದೆ.
೩. ಗೋಪಿಯರ ಶ್ರೀಕೃಷ್ಣಭಕ್ತಿ !
ಶ್ರೀಕೃಷ್ಣನ ಪ್ರಾಪ್ತಿಯಾದ ತಕ್ಷಣ ಅವರಿಗೆ ಇನ್ನೇನೂಗಳಿಸುವ ಇಚ್ಛೆಯೇ ಉಳಿಯದಿರುವುದರಿಂದ ಅವರಲ್ಲಿ ಶುದ್ಧ ಭಾವ (ಪರಮೇಶ್ವರೀ ತತ್ತ್ವ) ನಿರ್ಮಾಣವಾಗಿ ಅವರು ಕೃಷ್ಣನೊಂದಿಗೆ ಅಖಂಡ ಅನುಸಂಧಾನ (ತನು, ಮನ, ಧನ, ಮತ್ತು ಪ್ರಾಣಸಹಿತ)ವನ್ನು ಉಳಿಸಿಕೊಂಡಿದ್ದರು; ಆದ್ದರಿಂದ ಶ್ರೀಕೃಷ್ಣ ಗೋಪಿಯರಿಗೆ ಪ್ರಾಣಸಮಾನನಿದ್ದನು. ಗೋಪಿಯರ ನಿವಾಸ ನಿತ್ಯ ಶ್ರೀಕೃಷ್ಣನ ಹೃದಯ ಕಮಲದಲ್ಲಿರುತ್ತಿತ್ತು. ಈ ಭಕ್ತಿಗೇ ಆತ್ಮಾರಾಮಿ ಮಧುರಭಕ್ತಿ ಎನ್ನಲಾಗಿದೆ. ಇವೆಲ್ಲ ಸಾಧನೆಗಳನ್ನು ಪೂರ್ಣಗೊಳಿಸಲು ಗೋಪಿಯರು ಪ್ರೇಮಭಕ್ತಿಯ ಗಂಗೆಯನ್ನು ಅಖಂಡವಾಗಿ ಹರಿಸಿದ್ದರು. – ಶ್ರೀ. ಶ್ರೀಕಾಂತ ಭಟ್.

ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ಸಂತ ಕಬೀರ ಜಯಂತಿ
ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ( ೨೧.೬.೨೦೨೬ )
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !