‘ಹೆಚ್ಚಿನ ಸಾಧಕರಿಗೆ ‘ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕೆ ತಲುಪುವುದು ಎಂದರೆ ಪ್ರಗತಿಯಾಗುವುದು’, ಎಂದು ಅನಿಸುತ್ತದೆ. ಸಾಧಕರು ಮುಂಬರುವ ಯಾವುದಾದರೊಂದು ವಿಶೇಷ ದಿನದವರೆಗೆ (ಉದಾ. ಗುರುಪೂರ್ಣಿಮೆ, ಶ್ರೀಕೃಷ್ಣ ಜನ್ಮಾಷ್ಟಮಿ ಈ ದಿನಗಳವರೆಗೆ) ಅಥವಾ ತಮ್ಮ ಹುಟ್ಟುಹಬ್ಬದವರೆಗೆ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಬೇಕು ಎಂದು ಧ್ಯೇಯವನ್ನು ಇಡುತ್ತಾರೆ ಮತ್ತು ಅದಕ್ಕೂ ಮೊದಲು ಅವರು ಕೆಲವು ದಿನಗಳ ಮೊದಲು ಸಾಧನೆಯ ಪ್ರಯತ್ನಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ‘ನಿರ್ಧರಿಸಿದ ಸಮಯಮಿತಿಯೊಳಗೆ ಧ್ಯೇಯಪೂರ್ತಿ ಆಗಲೇ ಬೇಕು’, ಎಂದು ಕೆಲವು ಸಾಧಕರಿಗೆ ಅಪೇಕ್ಷೆ ಇರುತ್ತದೆ ಮತ್ತು ಅದು ಆಗದಿದ್ದರೆ ಅದರ ದುಃಖವಾಗುತ್ತದೆ. ಸಾಧಕರು ಖಂಡಿತವಾಗಿಯೂ ಧ್ಯೇಯವನ್ನು ಇಡಬೇಕು; ಆದರೆ ಧ್ಯೇಯಪೂರ್ತಿಯ ಅಪೇಕ್ಷೆಯನ್ನಿಟ್ಟು ಅದೇ ವಿಚಾರಗಳಲ್ಲಿ ಸಿಲುಕಬಾರದು.
ಶೇ. ೬೦ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪುವುದು ಆಧ್ಯಾತ್ಮಿಕ ಉನ್ನತಿಯ ದೃಶ್ಯ ಸ್ವರೂಪವಾಗಿದೆ; ಆದರೆ ನಿಜವಾದ ಪ್ರಗತಿ ಎಂದರೆ ಭಗವಂತನು ಆಗಾಗ ಘಟಿಸಿದ ಸಾಧನೆಯ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ! ಪ್ರತಿಕ್ಷಣವೂ ತಮ್ಮ ಅಂತರ್ಮನಸ್ಸಿನ ನಿರೀಕ್ಷಣೆ ಮಾಡುವುದು, ಮನಸ್ಸಿನ ಅಯೋಗ್ಯ ವಿಚಾರ, ನಿರಾಶೆ ಇತ್ಯಾದಿಗಳು ಕಡಿಮೆಯಾಗಲು, ಹಾಗೆಯೇ ಅಯೋಗ್ಯ ಕೃತಿಗಳನ್ನು ಸುಧಾರಿಸಲು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆ ಮಾಡುವುದು ಹಾಗೂ ಭಾವವೃದ್ಧಿಗಾಗಿ ಪ್ರಯತ್ನಿಸುವುದು, ಇದು ಪ್ರತಿದಿನ ಮಾಡಿದ ಪ್ರಗತಿಯೇ ಆಗಿದೆ.
ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟಕ್ಕೆ ತಲುಪುವುದು ನಮ್ಮ ಕೈಯಲ್ಲಿ ಇಲ್ಲ; ಆದರೆ ಪ್ರತಿದಿನ ಯಾವುದೇ ಅಪೇಕ್ಷೆಯನ್ನಿಡದೇ ಮತ್ತು ಸತತವಾಗಿ ಸಾಧನೆಯ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿದೆ. ಆದುದರಿಂದ ತಳಮಳದಿಂದ ಪ್ರಯತ್ನ ಮಾಡಿದರೆ ಗುರುಕೃಪೆಯಿಂದ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಲು ಸಾಧ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ !’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)
‘ಫಲದ ಅಪೇಕ್ಷೆಯನ್ನಿಡದೇ ಕರ್ಮ ಮಾಡುತ್ತಿದ್ದರೆ ಶೀಘ್ರವಾಗಿ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ! – (ಪರಾತ್ಪರ ಗುರು) ಡಾ. ಆಠವಲೆ