ಹಾಗಾದರೆ ಇದರ ಅವಶ್ಯಕತೆ ಏನು ?

೧. ನಮ್ಮ ಮನಸ್ಸಿನಲ್ಲಿ ದುರಾಸೆ, ಕಳ್ಳತನ ಮಾಡುವ, ಲಂಚ ಮತ್ತು ವರದಕ್ಷಿಣೆ ತೆಗೆದುಕೊಳ್ಳುವ ಇಚ್ಛೆ ಇದ್ದರೆ, ನರಕ ಪ್ರಾಪ್ತಿಯಾಗಲು ಬೇರೆ ಪಾಪಗಳನ್ನು ಮಾಡುವ ಅವಶ್ಯಕತೆಯೇನಿದೆ ?

೨. ತನ್ನಲ್ಲಿ ಉತ್ತಮ ಜ್ಞಾನ ಮತ್ತು ಉತ್ತಮ ಕಲೆ ಇದ್ದರೆ, ಧನ ಸಂಗ್ರಹಿಸುವ ಅಥವಾ ಅದನ್ನು ಪಡೆಯುವ ಅವಶ್ಯಕತೆಯೇನಿದೆ ?

೩. ತಮ್ಮ ಮನಸ್ಸಿನಲ್ಲಿ ಪ್ರೀತಿ, ದಯೆ ಮತ್ತು ಕ್ಷಮೆಗಳಂತಹ ಸದ್ಗುಣಗಳಿದ್ದರೆ, ಶಾಂತಿ ಮತ್ತು ನಿರ್ಭಯತೆಯನ್ನು ಹುಡುಕಲು ಶಸ್ತ್ರವನ್ನಿಟ್ಟುಕೊಳ್ಳುವ ಆವಶ್ಯಕತೆಯೇನಿದೆ ?

೪. ನಮ್ಮ ಮನಸ್ಸಿನಲ್ಲಿ ಅಭಿಮಾನ (ಅಹಂ)ವಿದ್ದರೆ ಮತ್ತು ತಮಗೆ ಕೋಪ ಬಂದಾಗ ಇತರರನ್ನು ನೋಯಿಸುವ ವಿಚಾರ ಇದ್ದರೆ, ತಮ್ಮ ಸರ್ವನಾಶಕ್ಕೆ ಬೇರೆ ಶತ್ರುಗಳ ಅಗತ್ಯವಿಲ್ಲ.

೫. ಮನಸ್ಸಿನಲ್ಲಿರುವ ಚಿಂತೆಯು ನಿಮ್ಮನ್ನು ಸುಡುತ್ತಿದ್ದರೆ, ನಿಮ್ಮನ್ನು ಸುಡಲು ಕಟ್ಟಿಗೆಯನ್ನು ಹುಡುಕುವ ಮತ್ತು ಚಿತೆಯ ಮೇಲೆ ಮಲಗುವ ಅಗತ್ಯವಿಲ್ಲ.

೬. ನಿಮ್ಮ ಭೋಜನ ಸಾತ್ತ್ವಿಕವಾಗಿದ್ದರೆ ಮತ್ತು ನೀವು ಸದ್ಗುಣಶೀಲ ಸ್ನೇಹಿತರಿದ್ದರೆ, ನಿಮಗೆ ಔಷಧಿಯ ಅವಶ್ಯಕತೆಯೇನಿದೆ ?

– ಚೈತನ್ಯ (ಸಾಂಕೃತ್ಯ, ೨೮.೫.೨೦೧೨)