‘ಒಮ್ಮೆ ನಾನು ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡಲು ಕುಳಿತಿದ್ದೆನು. ಅತ್ಯಂತ ದಣಿವು ಮತ್ತು ನೋವಿನಿಂದಾಗಿ ಉಪಾಯಗಳ ಕಡೆಗೆ ಗಮನವಿರುತ್ತಿರಲಿಲ್ಲ. ಆಗ ದೇವರ ಕೃಪೆಯಿಂದ ಮನಸ್ಸಿನಲ್ಲಿ ಸಕಾರಾತ್ಮಕ ವಿಚಾರ ಬಂದಿತು. ಅನಂತರ ಮನಸ್ಸಿನ ಶಕ್ತಿಯು ಸ್ವಲ್ಪ ಹೆಚ್ಚಾಯಿತು. ಆದುದರಿಂದ ಉಪಾಯಗಳ ಕಡೆಗೆ ಸ್ವಲ್ಪ ಗಮನ ಹೋಗತೊಡಗಿತು. ಆದುದರಿಂದ ಮನಸ್ಸಿನ ಶಕ್ತಿಯು ಇನ್ನೂ ಹೆಚ್ಚಾಯಿತು. ಆದ್ದರಿಂದ ಉಪಾಯವು ಇನ್ನೂ ಒಳ್ಳೆಯದಾಗತೊಡಗಿತು. ಹೀಗಾಗುತ್ತ ಮುಂದೆ ಒಂದು ಗಂಟೆಯವರೆಗೆ ಉಪಾಯವು ಚೆನ್ನಾಗಿ ಆಯಿತು. ಇದರಿಂದ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಲು ಸಕಾರಾತ್ಮಕ ವಿಚಾರಗಳು ಎಷ್ಟು ಅವಶ್ಯಕವಿರುತ್ತವೆ, ಎಂಬುದು ತಿಳಿಯಿತು. ಇದರಿಂದ ಜೀವನದಲ್ಲಿ ಸತತವಾಗಿ ಸಕಾರಾತ್ಮಕ ದೃಷ್ಟಿಕೋನವಿಡುವ ಮಹತ್ವವು ಗಮನಕ್ಕೆ ಬರುತ್ತದೆ.
‘ಯಾವುದೊಂದು ವಿಷಯವು ನನ್ನಿಂದ ಆಗುವುದಿಲ್ಲ’, ಎಂದು ನಕಾರಾತ್ಮಕ ವಿಚಾರವನ್ನು ಮಾಡಿದರೆ, ಆ ವಿಷಯವು ಎಷ್ಟೇ ಸುಲಭವಾಗಿದ್ದರೂ ಆಗುವುದೇ ಇಲ್ಲ. ತದ್ವಿರುದ್ಧ ‘ಯಾವುದೊಂದು ವಿಷಯವು ನನ್ನಿಂದ ಆಗುತ್ತದೆ’, ಎಂಬ ಸಕಾರಾತ್ಮಕ ವಿಚಾರವನ್ನು ಮಾಡಿದರೆ, ಆ ವಿಷಯವು ಎಷ್ಟೇ ಕಠಿಣವಾಗಿದ್ದರೂ, ಮಾಡಲು ಆಗುತ್ತದೆ !’
– (ಪೂ.) ಶ್ರೀ. ಸಂದೀಪ ಆಳಶಿ (೧೬.೧೦.೨೦೨೦)