೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಪರಾತ್ಪರ ಗುರು ಡಾ. ಆಠವಲೆ
ಪೂ. ಶಿವಾಜಿ ವಟಕರ

‘ನನಗೆ ೧೯೮೯ ರಿಂದ ಮುಂಬೈಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಭ್ಯಾಸವರ್ಗಗಳಲ್ಲಿ ಸಹಭಾಗಿಯಾಗುವ ಭಾಗ್ಯ ಲಭಿಸಿತು. ಅವರು ತಮ್ಮ ನಿವಾಸದಲ್ಲಿ ಸಮ್ಮೋಹನ-ಉಪಚಾರ ‘ಚಿಕಿತ್ಸಾಲಯ’ದ ಒಂದು ಕೋಣೆಯಲ್ಲಿ ಅಭ್ಯಾಸ ವರ್ಗ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗ ಅವರು ವಿಶ್ವರೂಪವನ್ನು ಧರಿಸಿದ್ದು ಮಹರ್ಷಿಗಳು ಹೇಳಿದಂತೆ, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ವು ಸಂಪೂರ್ಣ ಜಗತ್ತಿಗಾಗಿ ಒಂದು ಆದರ್ಶ ಗುರುಕುಲ ಮತ್ತು ದೀಪಸ್ತಂಭವಾಗುತ್ತಿದೆ. ಆದುದರಿಂದ ನನ್ನ ಆನಂದವು ಈಗ ಗಗನದಲ್ಲಿ ಹಿಡಿಸಲಾರದಷ್ಟಾಗಿದೆ. ಪರಾತ್ಪರ ಗುರು ಡಾಕ್ಟರರ ಅಭ್ಯಾಸವರ್ಗಗಳಲ್ಲಿ ಕಲಿಯುವಾಗ, ಹಾಗೆಯೇ ಸೇವೆ ಮತ್ತು ಪ್ರಸಾರವನ್ನು ಮಾಡುವಾಗ ನನಗೆ ಅವರನ್ನು ಬಹಳ ಹತ್ತಿರದಿಂದ ನೋಡಲು ಮತ್ತು ಅನುಭವಿಸಲು ಸಿಕ್ಕಿತ್ತು. ಅವರ ಅಭ್ಯಾಸವರ್ಗದಿಂದಲೇ ನಾನು ‘ಅಧ್ಯಾತ್ಮಶಾಸ್ತ್ರ ಮತ್ತು ಸಾಧನೆ’ಯನ್ನು ಆರಂಭಿಸಿದೆನು. ಮೊದಲ ಭೇಟಿಯಿಂದಲೇ ನನಗೆ ‘ಅವರು ಒಬ್ಬ ಅಸಾಮಾನ್ಯ ಮಹಾಪುರುಷರಾಗಿದ್ದಾರೆ’ ಮತ್ತು ‘ನನ್ನ ಸರ್ವಸ್ವರಾಗಿದ್ದಾರೆ’, ಎಂದು ಅನಿಸಿತ್ತು.

ಮಹರ್ಷಿಗಳು ಮತ್ತು ಉಚ್ಚ ಕೋಟಿಯ ಸಂತರು ಅವರನ್ನು ಗುರುತಿಸಿ ‘ಅವರು ಸಾಕ್ಷಾತ್ ವಿಷ್ಣುವಿನ ಅವತಾರವಾಗಿದ್ದಾರೆ’, ಎಂದು ಹೇಳಿದ್ದಾರೆ. ಆರಂಭದಲ್ಲಿ ನನಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕ್ಷಮೆಯಾಚನೆ ಮಾಡುತ್ತೇನೆ. ಅವರು ಅಧ್ಯಾತ್ಮಶಾಸ್ತ್ರದಲ್ಲಿನ ಮುಖ್ಯ ಮತ್ತು ಆವಶ್ಯಕ ಜ್ಞಾನವನ್ನು ಅವರ ಅಭ್ಯಾಸವರ್ಗಗಳು, ಸತ್ಸಂಗಗಳು ಮತ್ತು ಗ್ರಂಥಗಳ ಮೂಲಕ ಕಲಿಸಿದ್ದಾರೆ. ಅವರು ಮೊದಲು ಸ್ವತಃ ತಮ್ಮ ಆಚರಣೆಯಿಂದ, ಮಾತುಗಳಿಂದ ಮತ್ತು ಕೃತಿಗಳಿಂದ ಕಲಿಸಿದರು ‘ಬೊಲೆ ತೈಸಾ ಚಾಲೆ, ತ್ಯಾಚಿ ವಂದಾವಿ ಪಾವೂಲೆ |’, ಎಂಬ ಮರಾಠಿ ವಚನಕ್ಕನುಸಾರ ನಾನು ಅವರ ಚರಣಗಳಲ್ಲಿ ನಿರಂತರ ನತಮಸ್ತಕನಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈಗ ನನ್ನ ವಯಸ್ಸು ೭೧, ಆದುದರಿಂದ ನನಗೆ ಕೆಲವು ವಿಷಯಗಳು ನೆನಪಾಗುವುದಿಲ್ಲ. ‘ನಾನು ಸನಾತನ ಸಂಸ್ಥೆಯ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಕಳೆದ ೨೭ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದೇನೆ, ಎಂದು ಯಾವಾಗಲೂ ಹೇಳುತ್ತಿರುತ್ತೇನೆ; ಆದರೆ ‘ಅದು ಯಾವುದರ ಮೇಲಿನಿಂದ ?’, ಎಂದು ನನಗೆ ಆಗಾಗ ಸಂಶಯ ಬರುತ್ತಿತ್ತು. ‘೧೧.೨.೧೯೮೯ ರಿಂದ ಪರಾತ್ಪರ ಗುರು ಡಾಕ್ಟರರು ಏನು ಕಲಿಸಿದರು ?’, ಎಂಬ ಟಿಪ್ಪಣಿಗಳ ವಹಿಗಳು ನನಗೆ ದೊರಕಿದ ನಂತರ ನಾನು ಹೇಳುವುದು ಸರಿ ಅನಿಸಿತು. ಆಗ ನನ್ನ ಭಾವಜಾಗೃತವಾಗಿ ನನಗೆ ತುಂಬಾ ಆನಂದವಾಯಿತು. ಆ ಟಿಪ್ಪಣಿಗಳ ವಹಿಗಳ ಆಧಾರದಲ್ಲಿ ನಾನು ಮುಂದಿನ ಮಾಹಿತಿ ಯನ್ನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕೊಡುತ್ತಿದ್ದೇನೆ.

ಕಳೆದವಾರ ನಾವು ಅಭ್ಯಾಸವರ್ಗದ ಕೆಲವು ಅಂಶಗಳನ್ನು ನೋಡಿದೆವು. ಇಂದು ನಾವು ಅದರ ಮುಂದಿನ ಅಂಶಗಳನ್ನು ನೋಡೋಣ.

೪. ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ವಿವಿಧ ಅಭ್ಯಾಸವರ್ಗಗಳ ಅಂಶಗಳು

೪ ಅ. ೨೫.೮.೧೯೯೧, ದಾದರ, ಮುಂಬಯಿ.

೪ ಅ ೧. ಪ್ರತ್ಯಕ್ಷ ಉದಾಹರಣೆಯಿಂದ ‘ಸಂತಸಹವಾಸದಿಂದ ಹೇಗೆ ಆಧ್ಯಾತ್ಮಿಕ ಪರಿಣಾಮವಾಗುತ್ತದೆ ?’, ಎಂಬುದನ್ನು ಕಲಿಸುವುದು : ‘೧೯೯೧ ರಲ್ಲಿ ಅಂಬರನಾಥದಲ್ಲಿ ಗುರುಪೂರ್ಣಿಮೆಯ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಅಭ್ಯಾಸ ವರ್ಗದ ಸಾಧಕರನ್ನು ಸಂತಸಹವಾಸದ ಆಧ್ಯಾತ್ಮಿಕ ಪರಿಣಾಮ ಹೇಗಿರುತ್ತದೆ ಎಂದು ಕಲಿಸಲು ಪ.ಪೂ. ಭಕ್ತರಾಜ ಮಹಾರಾಜರ ಬಳಿ ಕರೆದುಕೊಂಡು ಹೋಗುವವರಿದ್ದರು, ಆದರೆ ಪ.ಪೂ. ಭಕ್ತರಾಜ ಮಹಾರಾಜರು ಅವರಿಗೆ, ‘ಎಲ್ಲರೂ ನನ್ನ ಬಳಿ ಬರುವ ಬದಲು ನಾನೇ ನಿಮ್ಮ ಬಳಿ ಬರುತ್ತೇನೆ”, ಎಂದು ಹೇಳಿದರು. ಈ ರೀತಿ ಅವರು ಬಿಡುವಿಲ್ಲದ ಮತ್ತು ಬಡ ಭಕ್ತರನ್ನು ಭೇಟಿಯಾಗಲು ಹೋಗುತ್ತಿದ್ದರು. ೨೫.೮.೧೯೯೧ ರಂದು ಮುಂಬಯಿಯ ದಾದರದಲ್ಲಿ ಸಮರ್ಥ ವ್ಯಾಯಾಮ ದೇವಸ್ಥಾನದಲ್ಲಿ ಅಭ್ಯಾಸವರ್ಗದಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ಬಂದು ನಾಮಸ್ಮರಣೆಯ ಮಹತ್ವವನ್ನು ಹೇಳಿದರು. ಹೆಚ್ಚೇನು ಹೇಳದೇ ಅವರು ‘ಪ್ರಭು ಯಾ ಮಾಯಾ ಬಾಜಾರಿ, ಧರೂ ಮಿ ಆಸ ಕೋಣಾಚಿ |’, ಎಂಬ ತಮ್ಮ ಎಲ್ಲಕ್ಕಿಂತ ಇಷ್ಟವಾದ ಭಜನೆಯನ್ನು ಹಾಡಿದರು. ಅದರ ನಂತರ ಪರಾತ್ಪರ ಗುರು ಡಾಕ್ಟರರು ‘ಸಂತಸಹವಾಸದಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಪರಿಣಾಮವಾಗುತ್ತದೆ ?’, ಎಂಬುದನ್ನು ಕಲಿಸಿದರು.

೪ ಆ. ೮.೯.೧೯೯೧ : ‘ನಾಮಸ್ಮರಣೆ, ಶ್ರದ್ಧೆ, ತ್ಯಾಗ, ಪ್ರೀತಿ, ಸೇವೆ, ಗುರುಗಳ ಆಜ್ಞಾಪಾಲನೆ, ಇತರರಿಗೆ ಆನಂದ ಸಿಗಬೇಕೆಂದು ಪ್ರಯತ್ನಿಸುವುದು ಇತ್ಯಾದಿಗಳ ಬಗ್ಗೆ ಪ್ರಯತ್ನಿಸಬೇಕು ಮತ್ತು ಪ್ರತಿ ೬ ತಿಂಗಳಿಗೊಮ್ಮೆ ಸಾಧಕರು ಇದರ ಅಭ್ಯಾಸ ಮಾಡಿ, ನಾವು ‘ಎಲ್ಲಿ ಕಡಿಮೆ ಬಿದ್ದೆವು ?’, ಎಂದು ನೋಡಿ ಪ್ರಯತ್ನವನ್ನು ಹೆಚ್ಚಿಸಬೇಕು ಎಂದು ಹೇಳಿದರು.

೪ ಇ. ೫.೧೦.೧೯೯೧

೪ ಇ ೧. ಅಭ್ಯಾಸವರ್ಗದಲ್ಲಿ ಹೇಳಿದ ಅಂಶಗಳು ಮತ್ತು ತೆಗೆದುಕೊಂಡ ಸೂಕ್ಷ್ಮದ ಪ್ರಯೋಗ

ಅ. ನಾಮಸ್ಮರಣೆಯು ಸಾಧನೆಯ ಅಡಿಪಾಯವಾಗಿದೆ.

ಆ. ಸಾಧನೆಯನ್ನು ಮಾಡುವಾಗ ಶೇ. ೮೦ ರಷ್ಟು ಆಧ್ಯಾತ್ಮಿಕ ಮಟ್ಟದ ಮುಂದೆ ‘ನಾನು’, ಎಂಬ (ಅಹಂನ) ಭಾವನೆಯನ್ನು ಇಟ್ಟುಕೊಳ್ಳಬಾರದು. ‘ನಾನು ನಾಮಸ್ಮರಣೆ ಮಾಡುತ್ತೇನೆ’, ಇದರ ಬದಲು ‘ನಾನು ನಾಮಸ್ಮರಣೆಯನ್ನು ಕೇಳುತ್ತೇನೆ’, ಹೀಗೆ ಇರಬೇಕು.

ಇ. ಸಮರ್ಥ ರಾಮದಾಸಸ್ವಾಮಿಗಳ ಮನಸ್ಸಿನ ತತ್ತ್ವಗಳ ‘ರೆಝೋನನ್ಸ್ ಇಫೆಕ್ಟ್’ ಇತರರ ಮೇಲಾಗಬೇಕೆಂದು ಸಮರ್ಥ ರಾಮದಾಸಸ್ವಾಮಿಗಳು ಮನಾಚೆ ಶ್ಲೋಕಗಳನ್ನು ಹೇಳಿದ್ದಾರೆ. ಇದರಲ್ಲಿ ಮಾನಸಶಾಸ್ತ್ರದ ಅಭ್ಯಾಸವಿದೆ.

ಈ. ಲಕೋಟೆಯಲ್ಲಿನ ಖಾಲಿ ಕಾಗದದ ಕಡೆಗೆ ನೋಡಿ ಹೆಚ್ಚಿನವರಿಗೆ ಒಳ್ಳೆಯದೆನಿಸಿತು. ದೇವರ ಹೆಸರುಗಳು ಮತ್ತು ಪ್ರಶ್ನೋತ್ತರಗಳನ್ನು ಬರೆದ ಲಕೋಟೆಯಲ್ಲಿನ ಕಾಗದದ ಕಡೆಗೆ ನೋಡಿ ಅನೇಕರಿಗೆ ತೊಂದರೆದಾಯಕವೆನಿಸಿತು. ಅದಕ್ಕೆ ಪರಾತ್ಪರ ಗುರು ಡಾಕ್ಟರರು, “ಒಳ್ಳೆಯ ಮತ್ತು ಕೆಟ್ಟ ಇವುಗಳ ಮಿಶ್ರಣವಿದ್ದರೆ, ತೊಂದರೆದಾಯಕವೆನಿಸುತ್ತದೆ”, ಎಂದು ಹೇಳಿದರು.

೪ ಇ ೨. ಅಭ್ಯಾಸವರ್ಗಕ್ಕೆ ಬರುವ ಸಾಧಕರಿಗೆ ಬಂದಿರುವ ಅನುಭೂತಿಗಳು

೧. ೭೮ ವರ್ಷ ವಯಸ್ಸಿನ ಸಾಧಕರಾದ ಡಾ. ನಾಯಿಕ ಇವರು ಅಭ್ಯಾಸವರ್ಗಕ್ಕೆ ಬರುತ್ತಿದ್ದರು. ಅವರು, ನಾನು ೫೦ ವರ್ಷಗಳ ವರೆಗೆ ವೈದ್ಯಕೀಯ ವ್ಯವಸಾಯ ಮಾಡಿದೆ. ನಾನು ಶಾರೀರಿಕ ದೃಷ್ಟಿಯಿಂದ ಸ್ವಾವಲಂಬಿಯಾಗಿದ್ದೇನೆ. ನನಗೆ ಇತರರ ಸಹಾಯದ ಆವಶ್ಯಕತೆ ಇಲ್ಲ. “ಕಳೆದ ಅನೇಕ ವರ್ಷಗಳಿಂದ ನಾನು ಮಾಡುತ್ತಿರುವ ಸಾಧನೆಯಿಂದ ನನಗೆ ಯಾವುದೇ ಲಾಭವಾಗಲಿಲ್ಲ. ಈ ಅಭ್ಯಾಸವರ್ಗದಿಂದ ನನ್ನ ಸಾಧನೆಯಾಯಿತು. ಇಲ್ಲಿಯವರೆಗೆ ನನಗೆ ಜೀವನದಲ್ಲಿ ಸಿಗದ ಸಮಾಧಾನ ಇಲ್ಲಿ ಸಿಕ್ಕಿತು. ಇಷ್ಟು ವರ್ಷ ನನ್ನ ಜೀವನದಲ್ಲಿ ನಿರ್ಮಾಣವಾಗಿರುವ ಟೊಳ್ಳು ತುಂಬಿಹೋಯಿತು”, ಎಂದು ಹೇಳಿದರು.

೨. ಸೌ. ಬೈಜೂ ಶಿವಾಜಿ ವಟಕರ ಇವರು, ‘ನಾನು ಕನಸಿನಲ್ಲಿ ಬೆಚ್ಚಿಬಿದ್ದು ಏಳುತ್ತೇನೆ. ನನಗೆ ರಾಕ್ಷಸರು ಕಾಣಿಸುತ್ತಾರೆ.  ನಮ್ಮ ಸಾಧನೆ ಎಷ್ಟು ಹೆಚ್ಚಾಗಬೇಕೆಂದರೆ, ನಮ್ಮನ್ನು ಕರೆದೊಯ್ಯಲು ದೇವದೂತರು ಬರಬೇಕು”, ಎಂದು ಹೇಳಿದರು.

೩. ಅಭ್ಯಾಸವರ್ಗಕ್ಕೆ ಓರ್ವ ವಯೋವೃದ್ಧ ಗೃಹಸ್ಥರಾದ ಶ್ರೀ. ರೆಡಕರ ಇವರು ಬರುತ್ತಿದ್ದರು. ಅವರು, ‘ನನ್ನ ಜೀವನದ ಸಂಜೆಯಾಗಿದೆ. ನನ್ನ ಸಂಸಾರದಲ್ಲಿನ ಆಸಕ್ತಿ ಮುಗಿದಿದ್ದರೂ ನಾನು ಸಂಸಾರದಲ್ಲಿಯೇ ಇದ್ದೇನೆ. ನನಗೆ ಕೆಲವೊಮ್ಮೆ ‘ದೇಹ ಮತ್ತು ಮನಸ್ಸು ಇಲ್ಲ, ನನಗೆ ಕೇವಲ ಆತ್ಮಾ ಇದೆ’, ಎಂದು ಅನಿಸುತ್ತದೆ. ಬಾಹ್ಯ ವಿಚಾರಗಳ ಕಡೆಗೆ ಸಾಕ್ಷಿಭಾವದಿಂದ ನೋಡಲು ಸಾಧ್ಯವಾಗುತ್ತದೆ. ನನಗೆ ಅಭ್ಯಾಸವರ್ಗದಿಂದಾಗಿ ಬಹಳ ಅನುಭೂತಿಗಳು ಬರುತ್ತಿವೆ”, ಎಂದು ಹೇಳಿದರು.

೪. ಅಭ್ಯಾಸವರ್ಗಕ್ಕೆ ಓರ್ವ ವಯೋವೃದ್ಧ ಗ್ರಹಸ್ಥ ಶ್ರೀ. ಜಹಾಗೀರದಾರ ಇವರು ಬರುತ್ತಿದ್ದರು. ಅವರು, “ಒಂದು ಸಲ ನನ್ನನ್ನು ಗೂಂಡಾಗಳು ಸುತ್ತುವರೆದಿದ್ದರು. ಆಗ ಗುರುಗಳ ಛಾಯಾಚಿತ್ರ ಮತ್ತು ಕುಲದೇವತೆಯ ಚಿತ್ರವನ್ನು ನೋಡಿದಾಗ, ನನ್ನ ಬಳಿಯಿದ್ದ ಉಂಗುರವನ್ನು ಆ ಐದು ಗೂಂಡಾಗಳ ಪೈಕಿ ಒಬ್ಬರಿಗೆ ಕೊಡಬೇಕು, ಎಂಬ ವಿಚಾರ ಬಂದಿತು. ಅದರಂತೆ ನಾನು ನನ್ನ ಉಂಗುರವನ್ನು ಒಬ್ಬ ಗೂಂಡಾನಿಗೆ ಕೊಟ್ಟೆನು. ಅದರಿಂದ ಅವರು ನನ್ನನ್ನು ಬಿಟ್ಟರು. ಆ ಸಮಯದಲ್ಲಿ ಕುಲದೇವತೆಯೇ ನನ್ನನ್ನು ಕಾಪಾಡಿದಳು. ಅಭ್ಯಾಸವರ್ಗದಿಂದಾಗಿ ನನಗೆ ಈ ಅನುಭೂತಿ ಬಂದಿತು”, ಎಂದು ಹೇಳಿದರು.

– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ. (೧೬.೮.೨೦೧೭)

(ಮುಂದುವರಿಯುವುದು)