‘ಸುರ-ತಾಲ ಹುನರ್ ಕಾ ಕಮಾಲ್’ ಈ ಜಾಗತಿಕ ‘ಆನ್‌ಲೈನ್’ ಸಂಗೀತ-ನೃತ್ಯ

ಕು. ತೇಜಲ ಪಾತ್ರೀಕರ
ಕು. ಪ್ರಿಯಾಂಕಾ ಲೋಟಲೀಕರ

ರಾಮನಾಥಿ (ಫೋಂಡಾ, ಗೋವಾ) – ‘ಊರ್ವಶಿ ಡಾನ್ಸ್ ಮ್ಯುಝಿಕ್ ಆರ್ಟ್ ಆಂಡ್ ಕಲ್ಚರಲ್ ಸೊಸೈಟಿ’ಯ ವತಿಯಿಂದ ‘ಸುರ-ತಾಲ ಹುನರ್ ಕಾ ಕಮಾಲ್’ ಈ ಜಾಗತಿಕ ಸ್ತರದ ‘ಆನ್‌ಲೈನ್’ ಸಂಗೀತ-ನೃತ್ಯ ಸ್ಪರ್ಧೆಯ ಆಯೋಜನೆಯನ್ನು ಮಾಡಲಾಗಿದೆ. ‘ಊರ್ವಶಿ ಡಾನ್ಸ್ ಮ್ಯುಝಿಕ್ ಆರ್ಟ್ ಆಂಡ್ ಕಲ್ಚರಲ್ ಸೊಸೈಟಿ’ಯ ಅಧ್ಯಕ್ಷರಾದ ಪ್ರಸಿದ್ಧ ಕಥ್ಥಕ್ ನ್ಯತ್ಯಾಂಗನೆ ಡಾ. ರೇಖಾ ಮೆಹರಾ ಇವರು ಈ ಕಾರ್ಯಕ್ರಮದ ಮುಖ್ಯ ಆಯೋಜಕರಾಗಿದ್ದಾರೆ ! ಕೊರೋನಾದ ಕಾಲದಲ್ಲಿ ಕಲಾವಿದರಿಗೆ ಹೊರಗಡೆ ಕಾರ್ಯಕ್ರಮಗಳಲ್ಲಿ ಕಲೆಯನ್ನು ಪ್ರಸ್ತುತ ಪಡಿಸಲು ಮಿತಿ ಬರುತ್ತದೆ. ಅದಕ್ಕಾಗಿ ಹೊಸ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸಲು ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಡಾ. ರೇಖಾ ಮೆಹರಾ ಇವರು ಈ ಸ್ಪರ್ಧೆಯ ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ  ಸಹಿತ ವಿವಿಧ ದೇಶಗಳ ನೃತ್ಯ-ಗಾಯನದ ಗುರುಗಳು, ಹೆಸರಾಂತ ಕಲಾವಿದರು ಪರೀಕ್ಷಕರೆಂದು ಕಾರ್ಯವನ್ನು ಮಾಡುವವರಿದ್ದಾರೆ. ಈ ಸ್ಪರ್ಧೆಗಾಗಿ ಪರೀಕ್ಷಕರೆಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಮನ್ವಯಕರಾದ ಕು. ತೇಜಲ ಪಾತ್ರೀಕರ ಮತ್ತು ಸಂಶೋಧನ ಸಮನ್ವಯಕರಾದ ಕು. ಪ್ರಿಯಾಂಕಾ ಲೋಟಲೀಕರ ಇವರ ಸಹಭಾಗ ಇತ್ತು.

‘ಸುರ-ತಾಲ ಹುನರ್ ಕಾ ಕಮಾಲ್’ ಈ ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭವು ೧೫ ನವಂಬರ್‌ದಂದು ನೆರವೇರಿತು. ಈ ಸಮಯದಲ್ಲಿ ಡಾ. ರೇಖಾ ಮೆಹರಾ ಇವರು ಕಾರ್ಯಕ್ರಮದ ಉದ್ದೇಶವನ್ನು ಹೇಳಿದರು. ಅವರೊಂದಿಗೆ ಗಾಯನ ಮತ್ತು ನೃತ್ಯ ಕ್ಷೇತ್ರದ ಗುರುಜನರು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ. ರಾಹುಲ ಇವರು ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಈ ಕಾರ್ಯಕ್ರಮಕ್ಕೆ ಭಾರತ ಸರಕಾರದ ಸಾಂಸ್ಕೃತಿಕ ಸಚಿವಾಲಯದ ಬೆಂಬಲವೂ ಇರಲಿದೆ. ಈ ಸ್ಪರ್ಧೆಯಲ್ಲಿ ೩೦೦ ಕ್ಕಿಂತ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದಾರೆ.

ಭಾರತೀಯ ಕಲೆಗಳಿಗೆ ಪ್ರೋತ್ಸಾಹ ಸಿಗಬೇಕೆಂದು, ಈ ಸ್ಪರ್ಧೆಯಲ್ಲಿ ಕೇವಲ ಭಾರತೀಯ ಶಾಸ್ತ್ರೀಯ ಮತ್ತು ಉಪಶಾಸ್ತ್ರೀಯ ಗಾಯನ ಮತ್ತು ನೃತ್ಯ ಇವುಗಳೇ ಇರುವವು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ನೃತ್ಯದ ಮಾಧ್ಯಮದಿಂದ ಸಾಧನೆಯನ್ನು ಮಾಡುವ ದುರ್ಗ (ಛತ್ತಿಸಗಡ)ದ ಕು. ಶರ್ವರಿ ಕಾನಸ್ಕರ ಮತ್ತು ಕು.ಅಂಜಲಿ ಕಾನಸ್ಕರ, ರತ್ನಾಗಿರಿ (ಮಹಾರಾಷ್ಟ್ರ)ಯ ಕು. ಅಪಾಲಾ ಔಂಧಕರ, ಹಾಗೆಯೇ ಜೋಧಪೂರ (ರಾಜಸ್ಥಾನ)ನ ಕು. ವೇದಿಕಾ ಮೋದಿ ಇವರೂ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದ ಆಡಿಶನ್‌ನ (ಕಲಾವಿದರ ಪರೀಕ್ಷೆ) ಮೊದಲ ಪ್ರಯೋಗವು ೧೮ ರಿಂದ ೨೦ ನವೆಂಬರ್ ಈ ಕಾಲಾವಧಿಯಲ್ಲಿ ಆಗಲಿದೆ. ಹಾಗೆಯೇ ಇಂತಹ ಆಡಿಶನ್ಸ್‌ಗಳು ಮುಂದೆಯೂ ಇರಲಿವೆ. ಈ ಕಾರ್ಯಕ್ರಮದ ಮುಖ್ಯ ಆಯೋಜನ ಸಮಿತಿಯ ಸದಸ್ಯರು ಹಾಗೂ ದೆಹಲಿಯ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಉಮೇಶಕುಮಾರ ಶರ್ಮಾ ಇವರು ಈ ಕಾರ್ಯಕ್ರಮದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲದ ಸಹಭಾಗ ಇರಬೇಕೆಂದು ಪ್ರಯತ್ನಿಸಿದರು ಮತ್ತು ಅವರು ಅವಕಾಶವನ್ನು ನೀಡಿದರು. ನಾವು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಅವರಿಗೆ ಆಭಾರಿಯಾಗಿದ್ದೇವೆ.

ಸ್ಪರ್ಧೆಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಶಾಖೆಯ ಸಮನ್ವಯಕರಾದ ಕು. ತೇಜಲ ಪಾತ್ರೀಕರ ಮತ್ತು ಸಂಶೋಧನ ಶಾಖೆಯ ಸಮನ್ವಯಕರಾದ ಕು. ಪ್ರಿಯಾಂಕಾ ಲೋಟಲೀಕರ ಇವರು ‘ಪರೀಕ್ಷಕ’ರೆಂದು ಭಾಗವಹಿಸಿದ್ದಾರೆ !