‘ಗುರುಗಳ ವಿಷಯದಲ್ಲಿ ಶಿಷ್ಯನ ವಿಚಾರಗಳಲ್ಲಿ ಹಂತ-ಹಂತವಾಗಿ ಹೇಗೆ ಬದಲಾವಣೆಯಾಗುತ್ತಾ ಹೋಗುತ್ತದೆ, ಎನ್ನುವುದರ ಅದ್ವಿತೀಯ ಮಾಹಿತಿಯನ್ನು ಸದ್ಗುರು ಚಾರುದತ್ತ ಪಿಂಗಳೆಯವರು ಈ ಲೇಖನದಲ್ಲಿ ನೀಡಿದ್ದಾರೆ. ನಾನು ಎಷ್ಟೇ ವಿಚಾರ ಮಾಡುತ್ತಿದ್ದರೂ ಇಂತಹ ವಿಚಾರಗಳು ಹೊಳೆಯುತ್ತಿರಲಿಲ್ಲ. ಸದ್ಗುರು ಚಾರುದತ್ತ ಪಿಂಗಳೆ ಇವರಿಂದ ಅಮೂಲ್ಯ ಜ್ಞಾನ ಪ್ರಾಪ್ತವಾಗಿರುವುದರಿಂದ ನಾನು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. – (ಪರಾತ್ಪರ ಗುರು) ಡಾ. ಆಠವಲೆ |
೧. ‘ಗುರುಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ, ಎಂಬುದು ಅರಿವಾಗುವುದು
೧ ಅ. ‘ಗುರುಗಳ ಋಣವನ್ನು ತೀರಿಸಬೇಕು, ಎನ್ನುವ ಅಹಂಕಾರವಿರುವುದು ಮತ್ತು ಸೇವೆ ಮಾಡುವಾಗ ‘ನಾವು ಗುರುಋಣವನ್ನು ತೀರಿಸಲು ಎಷ್ಟು ಪ್ರಯತ್ನಿಸುವೆವೋ, ಅಷ್ಟು ಅದು ಹೆಚ್ಚುತ್ತಾ ಹೋಗುತ್ತದೆ, ಎಂಬುದರ ಅರಿವಾಗುವುದು : ‘ನಾವು ಗುರುದೇವರ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ನನಗೆ ಕೆಲವು ಹಳೆಯ ಪ್ರಸಂಗಗಳು ನೆನಪಾಗುತ್ತವೆ. ಮೊದಲು ನನಗೆ ‘ಗುರುಗಳ ಋಣವನ್ನು ತೀರಿಸಬೇಕು, ಎನ್ನುವ ಅಹಂಕಾರದ ವಿಚಾರವಿತ್ತು. ‘ನಾವು ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಂತರ ಸೇವೆ ಮಾಡುತ್ತಿರುವಾಗ ನನಗೆ ಅರಿವಾಯಿತೇನೆಂದರೆ, ‘ನಾನು ಗುರುಗಳಿಗಾಗಿ ಏನೆಲ್ಲ ಮಾಡುತ್ತೇನೋ (ಸೇವೆ), ಅದರಿಂದ ನನಗೇನು ಸಿಗುತ್ತದೋ (ಆನಂದ), ಅದನ್ನು ಗುರುಗಳೇ ಕೊಡುತ್ತಾರೆ. ಆದ್ದರಿಂದ ನಾವು ಗುರುಋಣವನ್ನು ತೀರಿಸಲು ಎಷ್ಟು ಪ್ರಯತ್ನಿಸುತ್ತೇವೆಯೋ, ಅಷ್ಟು ನಮ್ಮ ಋಣ ಹೆಚ್ಚಾಗುತ್ತಾ ಹೋಗುತ್ತದೆ. ಆಗ ಗುರುಗಳು ಸೂಚಿಸಿದರು, ‘ನಿನಗೆ ತೀರಿಸಲಾಗದಷ್ಟು ಋಣ (ಸಾಲ)ವನ್ನು ಪಡೆದುಕೋ, ಅಂದರೆ ಅದನ್ನು ತೀರಿಸಲು ಸಾಧ್ಯವೇ ಆಗಲಿಕ್ಕಿಲ್ಲ.
೧ ಆ. ‘ಗುರುದೇವರ ಸೇವಾಕಾರ್ಯ ಹೆಚ್ಚುತ್ತಲೇ ಇರುತ್ತದೆ, ಅದಕ್ಕಾಗಿ ಗುರುದೇವರಿಂದ ಶಕ್ತಿಯನ್ನು ಬೇಡಬೇಕು, ಎನ್ನುವ ಭಾವ ಉತ್ಪನ್ನವಾಗಿ ಇದರಿಂದಲೇ ತನ್ನ ಅಕಾರ್ಯಕ್ಷಮತೆಯ ಅರಿವಾಗಿ ‘ಎಲ್ಲವನ್ನೂ ಗುರುಗಳೇ ಮಾಡುತ್ತಾರೆ, ಎಂಬುದರ ಅನುಭೂತಿ ಬರುವುದು : ನನ್ನಲ್ಲಿ ಇಂತಹ ಭಾವ ಉತ್ಪನ್ನವಾದಾಗ ‘ಈಗ ಋಣವನ್ನು ತೀರಿಸುವುದೆಂದರೆ, ಅವರ ಸೇವಾಕಾರ್ಯವನ್ನು ಹೆಚ್ಚಿಸುವುದು ಹಾಗೂ ಅದಕ್ಕಾಗಿ ಏನೆಲ್ಲ ಬೇಕೋ, ಅದನ್ನು ಅವರಿಂದಲೇ ಬೇಡುವುದು. ಅದನ್ನು ಎಷ್ಟು ಬೇಡಬೇಕೆಂದರೆ, ‘ಈಗ ನೀನು ಅದನ್ನು ತೀರಿಸಲು ಸಾಧ್ಯವೇ ಇಲ್ಲ, ಎಂದು ಗುರುಗಳು ಹೇಳಬೇಕು. ಆಗ ನನಗೆ ನನ್ನ ಅಕಾರ್ಯಕ್ಷಮತೆಯ ಅರಿವಾಗಿ ‘ನಾನಂತೂ ಏನೂ ಮಾಡಲು ಸಾಧ್ಯವಿಲ್ಲ, ಎಂಬುದು ನನಗೆ ಅರಿವಾಯಿತು. ‘ಎಲ್ಲವನ್ನೂ ಗುರುಗಳೇ ಮಾಡುತ್ತಿದ್ದಾರೆ, ಎನ್ನುವ ಅನುಭೂತಿಯನ್ನು ಗುರುದೇವರೇ ಕೊಡುತ್ತಾರೆ.
೨. ‘ನಾವು ಅಸಮರ್ಥರಾಗಿದ್ದೇವೆ, ಎಂಬುದರ ವಿಸ್ಮರಣೆಯಾದಾಗ ಗುರುಗಳೇ ಅದರ ಸ್ಮರಣೆ ಮಾಡಿಕೊಡುತ್ತಾರೆ
೨ ಅ. ಸಂಪೂರ್ಣ ವಿಶ್ವದಲ್ಲಿ ಯಾರ ಚರಣ ಶರಣಾಗಬೇಕು? ಕೇವಲ ಗುರುದೇವರೊಬ್ಬರೇ ಅಷ್ಟು ಸಮರ್ಥರಾಗಿದ್ದಾರೆ : ದೈನಿಕ ‘ಸನಾತನ ಪ್ರಭಾತದಲ್ಲಿ ಬರುವ ಬೋಧಚಿತ್ರಗಳು ತುಂಬಾ ಗಹನವಾಗಿವೆ. ಅದರಲ್ಲಿ ‘ಸಮರ್ಥ ಈ ಮೂರು ಅಕ್ಷರಗಳ ಶಬ್ದವು ತುಂಬಾ ಗಹನವಾಗಿದೆ. ಸಂಪೂರ್ಣ ವಿಶ್ವದಲ್ಲಿ ನಾವು ಯಾರ ಚರಣಗಳಿಗೆ ಶರಣಾಗಬಹುದೋ, ಅಂತಹ ಸಮರ್ಥರು ಕೇವಲ ಒಬ್ಬರೇ ಇದ್ದಾರೆ, ಅವರೇ ಗುರುದೇವರು !
೨ ಆ. ‘ನಾನು ನಿನ್ನ ಮೂಲಕ ಕಾರ್ಯ ಮಾಡುತ್ತಿದ್ದೇನೆ, ಎಂಬುದನ್ನು ಗುರುದೇವರೇ ಸ್ಮರಣೆ ಮಾಡಿಕೊಡುವುದು : ‘ನಿನ್ನ ಮೂಲಕ ನಾನೇ ಕಾರ್ಯ ಮಾಡುತ್ತಿದ್ದೇನೆ. ನೀನು ಕೇವಲ ನಿಮಿತ್ತಮಾತ್ರನಾಗಿದ್ದೀಯ, ಎನ್ನುವುದರ ಅನುಭೂತಿಯನ್ನು ಗುರುದೇವರು ಕೊಡುತ್ತಾರೆ. ಈ ಭಾವವನ್ನು ನಾನು ಇತ್ತೀಚೆಗೆ ಮರೆತು ಬಿಟ್ಟಿದ್ದೆನು. ಗುರುದೇವರು ನನಗೆ ಈ ವಿಷಯವನ್ನು ಒಳಗಿಂದ ಸ್ಮರಣೆ ಮಾಡಿಕೊಟ್ಟರು. ಅವರು ಹೇಳಿದರು, ‘ಈಗ ನೀನಲ್ಲ, ನಾನೇ ಕಾರ್ಯ ಮಾಡುತ್ತಿದ್ದೇನೆ, ಎನ್ನುವ ಅನುಭೂತಿಯನ್ನು ತೆಗೆದುಕೋ.
೩. ‘ರಾಮನಾಥಿ ಆಶ್ರಮಕ್ಕೆ ಹೋಗಿ ಗುರುಗಳನ್ನು ಭೇಟಿಯಾಗಬೇಕು, ಎಂದು ಅನಿಸುವುದು, ಆಗ ‘ನಾವು ಸ್ಥೂಲದಲ್ಲಿ ರಾಮನಾಥಿಯಲ್ಲಿ ಮತ್ತು ಗುರುದೇವರ ದೇಹದಲ್ಲಿಯೂ ಸಿಲುಕಿದ್ದೇವೆ, ಎಂಬುದು ಅರಿವಾಗುವುದು
ನನ್ನ ಮನಸ್ಸಿನಲ್ಲಿ ನಡುನಡುವೆ ‘ರಾಮನಾಥಿ ಆಶ್ರಮಕ್ಕೆ ಹೋಗಬೇಕು, ಎನ್ನುವ ವಿಚಾರ ಬರುತ್ತಿತ್ತು. ನನಗೆ ‘ನಾಮಜಪಾದಿ ಉಪಾಯಕ್ಕಾಗಿ ರಾಮನಾಥಿಗೆ ಹೋಗಬೇಕು. ಆಗ ಗುರುದೇವರ ದರ್ಶನವಾದರೂ ಆಗಬಹುದು, ಎನ್ನುವ ವಿಚಾರ ಬರುತ್ತಿತ್ತು. ಆಗ ‘ನಾನು ಸ್ಥೂಲದಲ್ಲಿ ರಾಮನಾಥಿಯಲ್ಲಿ ಮತ್ತು ಗುರುದೇವರ ದೇಹದಲ್ಲಿಯೂ ಸಿಲುಕಿದ್ದೇನೆ, ಎನ್ನುವುದು ನನಗೆ ಅರಿವಾಯಿತು. ‘ಅವರ ದರ್ಶನ ಅಥವಾ ಭೇಟಿಯಾಗಬೇಕು, ಎಂದು ನನಗೆ ಅನಿಸುತ್ತಿತ್ತು. ಇದರ ಅವಶ್ಯಕತೆಯಿಲ್ಲ, ಎನ್ನುವುದು ಸಹ ನನಗೆ ತಿಳಿದಿತ್ತು, ಆದರೂ ನನಗೆ ಆ ಆಕರ್ಷಣೆಯನ್ನು ತಡೆಯಲು ಆಗುತ್ತಿರಲಿಲ್ಲ.
೪. ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಾನಿಧ್ಯದಲ್ಲಿ ವಿಚಾರ ಪ್ರಕ್ರಿಯೆಯಲ್ಲಿ ಬದಲಾವಣೆಯಾಗುತ್ತಿರುವುದು ಅರಿವಾಗುವುದು
ನಾಲ್ಕು ತಿಂಗಳ ಹಿಂದೆ ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ದೆಹಲಿ ಸೇವಾಕೇಂದ್ರಕ್ಕೆ ಬಂದಿದ್ದರು. ಆಗ ನನ್ನ ಆಂತರಿಕ ಪ್ರಕ್ರಿಯೆಯಲ್ಲಿ ಬದಲಾವಣೆಯಾಗುತ್ತಿರುವುದು ಅರಿವಾಯಿತು. ಆಗ ಏನೋ ಪರಿವರ್ತನೆಯ ಪ್ರಕ್ರಿಯೆಯು ಆರಂಭವಾಗಿತ್ತು. ನಾನು ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಾನಿಧ್ಯದಲ್ಲಿದ್ದೆನು. ಆಗ ನನ್ನ ಮನಸ್ಸಿನಲ್ಲಿ ಭಿನ್ನವಾದ ಪ್ರಕ್ರಿಯೆಯು ಆರಂಭವಾಯಿತು, ‘ಸ್ಥೂಲದಲ್ಲಿ ಏಕೆ ಸಿಲುಕಬೇಕು ? ರಾಮನಾಥಿ ಆಶ್ರಮವೆಂದರೆ, ಆ ಗೋಡೆಗಳ ಹೆಸರು, ವಾಸ್ತುವಿನ ಹೆಸರಾಗಿದೆ. ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ, ‘ಈ ಗೋಡೆಗಳಿಗೆ ಆಶ್ರಮವೆನ್ನುವುದಿಲ್ಲ. ಪ.ಪೂ. ಭಕ್ತರಾಜ ಮಹಾರಾಜರ ಗುರುಗಳು (ಶ್ರೀ ಅನಂತಾನಂದ ಸಾಯೀಶ ಇವರು) ಹೇಳಿದ್ದರು, “ನನ್ನ ಆಶ್ರಮ ನಿರ್ಮಾಣವಾಗುತ್ತಿದೆ; ಆದರೆ ನಾನು ಸ್ಥೂಲ ಆಶ್ರಮಕ್ಕೆ ಸ್ಥೂಲವೆಂದು ಹೇಳುವುದಿಲ್ಲ, ನಾನು ಸಗುಣ ಎಂದು ಹೇಳುವೆನು.
೫. ‘ನಾನು ರಾಮನಾಥಿ ಆಶ್ರಮದಲ್ಲಿಯೇ ಇದ್ದೇನೆ, ಎನ್ನುವ ಭಾವವನ್ನು ಅನುಭವಿಸಲು ಸಾಧ್ಯವಾಗುವುದು, ಆದರೂ ‘ಗುರುದೇವರನ್ನು ಒಮ್ಮೆ ಭೇಟಿಯಾಗಬೇಕೆನ್ನುವ ಇಚ್ಛೆ ಇರುವುದು
ರಾಮನಾಥಿ ಆಶ್ರಮವು ಈಶ್ವರನ ಸಗುಣ ರೂಪವಾಗಿದೆ. ಆಗ ನನಗೆ ಒಳಗಿಂದ ಹೊಳೆಯಿತು, ‘ಹೇಗೆ ಸಂಚಾರಿವಾಣಿಯಲ್ಲಿ ಚಿತ್ರವನ್ನು ‘ಝೂಮ್ ಮಾಡಿದಾಗ ಚಿತ್ರ ದೊಡ್ಡದಾಗುತ್ತದೆಯೋ, ಹಾಗೆಯೇ ರಾಮನಾಥಿ ಆಶ್ರಮದ ಸ್ವರೂಪವು ವ್ಯಾಪಕವಾಗಿದೆ. ‘ನಾವು ಯಾವಾಗಲೂ ರಾಮನಾಥಿ ಆಶ್ರಮದಲ್ಲಿರುತ್ತೇವೆ, ಎನ್ನುವ ಭಾವವನ್ನಿಡಬೇಕು. ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಾನಿಧ್ಯದಲ್ಲಿ ಈ ವಿಚಾರವು ನನ್ನ ಮನಸ್ಸಿನಲ್ಲಿ ಬಂತು. ಆಗ ನನಗೆ ‘ಈಗ ನಾನು ರಾಮನಾಥಿ ಆಶ್ರಮದಲ್ಲಿಯೇ ಇದ್ದೇನೆ, ಎನ್ನುವ ಭಾವವನ್ನು ಅನುಭವಿಸಲು ಸಾಧ್ಯವಾಯಿತು, ಆದರೂ ‘ಒಮ್ಮೆ ಗುರುದೇವರನ್ನು ಭೇಟಿಯಾಗಬೇಕು, ಎನ್ನುವ ಇಚ್ಛೆ ಇತ್ತು !
೬. ಸಾವಿರಾರು ಸಾಧಕರು ಗುರುದೇವರನ್ನು ಭೇಟಿಯೇ ಆಗಲ್ಲ ಅಥವಾ ಕೆಲವು ಸಾಧಕರಿಗೆ ರಾಮನಾಥಿ ಆಶ್ರಮಕ್ಕೆ ಬರುವ ಅವಕಾಶವೇ ಸಿಕ್ಕಿಲ್ಲ, ಈ ವಿಷಯದ ವಿಚಾರ ಮಾಡುವ ಬದಲು ಕೇವಲ ‘ತನಗೆ ಗುರುದೇವರ ಭೇಟಿಯಾಗಬೇಕು, ಎಂಬ ಇಚ್ಛೆಯು ಅಯೋಗ್ಯವಿದೆ, ಎಂದು ಅರಿವಾಗುವುದು.
ಗುರುದೇವರು ಕೇವಲ ಸಂಚಾರಿವಾಣಿ ಕರೆ ಮಾಡಿದಾಗಲೇ ತೊಂದರೆ ದೂರವಾಗುತ್ತಿತ್ತು. ಅವರು ಹೇಳಿದರು, “ಅಲ್ಲಿ ಎಲ್ಲ ಸಾಧಕರಿದ್ದಾರೆ. ಅವರಿಗೆ ನಿಮ್ಮ ಅವಶ್ಯಕತೆಯಿದೆ ಹಾಗೂ ನಿಮಗೆ ಇಲ್ಲಿಗೆ ಬರಬೇಕೆಂದು ಏಕೆ ಅನಿಸುತ್ತದೆ ? ಈಗ ನನಗೆ, ‘ನಾನು ಕೇವಲ ನನ್ನದೇ ವಿಚಾರ ಮಾಡುತ್ತಿದ್ದೇನೆ, ಅಂದರೆ ನನಗೆ ಗುರುದೇವರನ್ನು ಭೇಟಿಯಾಗಲಿಕ್ಕಿದೆ; ಆದರೆ ಸಮಾಜದಲ್ಲಿ ಸಾವಿರಾರು ಸಾಧಕರಿದ್ದಾರೆ, ಅವರು ಗುರುದೇವರನ್ನು ಭೇಟಿಯೇ ಆಗಿಲ್ಲ, ಕೆಲವರಿಗೆ ರಾಮನಾಥಿ ಆಶ್ರಮಕ್ಕೆ ಬರುವ ಅವಕಾಶ ಸಿಗುವುದಿಲ್ಲ ಅಥವಾ ಕಾರಣಾಂತರದಿಂದ ಬರಲು ಆಗುವುದಿಲ್ಲ. ಆಗ ‘ಗುರುದೇವರಲ್ಲಿಗೆ ಹೋಗಿ ನಾನು ಅವರನ್ನು ಕೇವಲ ಸಗುಣದಲ್ಲಿ ನೋಡುವೆನು, ಎನ್ನುವ ವಿಚಾರ ಮಾಡುವುದು ಅಥವಾ ಸಗುಣದಲ್ಲಿ ಸಿಲುಕುವುದು, ಇದಂತೂ ತಪ್ಪಾಗುತ್ತದೆ ಯಲ್ಲವೇ ?, ಎಂದು ಮನದಟ್ಟಾಯಿತು.
೭. ‘ಗುರುದೇವರು ನಮ್ಮೊಂದಿಗೇ ಇದ್ದಾರೆ, ಎನ್ನುವ ಅನುಭೂತಿ ಬಂದರೂ ಅವರನ್ನು ನೋಡದೇ ಸಮಾಧಾನವಾಗದಿರುವುದು
ನನಗೆ ‘ನನ್ನ ಜೊತೆಗೆ ಹಾಗೂ ನನ್ನ ಅಂತರ್ಮನಸ್ಸಿನಲ್ಲಿ ಗುರುದೇವರು ಇದ್ದಾರೆ, ಎನ್ನುವ ಅನುಭೂತಿ ಬರುತ್ತದೆ, ಆದರೂ ನನ್ನಿಂದ ಆ ಮೂಲಕ ಅನುಸಂಧಾನವನ್ನು ಸಾಧಿಸುವ ಪ್ರಯತ್ನ ಏಕೆ ಆಗುವುದಿಲ್ಲ ?, ಎನ್ನುವ ವಿಚಾರಪ್ರಕ್ರಿಯೆಯಾಗಿ ನಂತರ ನಾನು ಹಾಗೆ ಪ್ರಯತ್ನ ಆರಂಭಿಸಿದೆನು, ಆದರೂ ‘ನನಗೆ ರಾಮನಾಥಿಗೆ ಬರಲಿಕ್ಕಿದೆ, ಗುರುದೇವರನ್ನು ಸಗುಣದಿಂದ ಭೇಟಿಯಾಗಲಿಕ್ಕಿದೆ, ಎನ್ನುವ ವಿಚಾರ ಬರುತ್ತಿದ್ದರೂ ನಾನು ಸ್ಥಿರವಾಗಿದ್ದು ಸೇವೆ ಮಾಡಲು ಸಾಧ್ಯವಾಯಿತು. ಮನಸ್ಸಿನ ಈ ಪ್ರಕ್ರಿಯೆಯಾಗಿ ‘ನಾನು ಸಗುಣವನ್ನು ಬಿಡುವುದಿಲ್ಲ, ಎಂದು ನಿರ್ಧರಿಸಿದೆನು. ಉಳಿದದ್ದೆಲ್ಲ ಸರಿಯಾಗಿದೆ. ನನ್ನ ಸೇವೆ ಮಾಡುವುದಕ್ಕಾಗಿ ನಾನು ಇದನ್ನು ಮಾಡುವೆನು; ಆದರೆ ಸಾಕ್ಷಾತ್ ಈಶ್ವರನು ಸಂಪೂರ್ಣ ವಿಶ್ವದ, ಬ್ರಹ್ಮಾಂಡದ ಉದ್ಧಾರ ಮಾಡಲು ಬಂದಿದ್ದಾನೆ. ಕಾರ್ಯದ ದೃಷ್ಟಿಯಲ್ಲಿ ಅವರು ನನಗೆ, ‘ನಾನು ನಿಮ್ಮ ಸಮೀಪವಿದ್ದೇನೆ, ಎಂದು ಹೇಳುತ್ತಿದ್ದಾರೆ, ಆದರೂ ಅವರನ್ನು ನೋಡದೇ ಕೆಲವೊಮ್ಮೆ ಸಮಾಧಾನವಾಗುವುದಿಲ್ಲವಲ್ಲ ?
೮.‘ಸಗುಣ ಹಾಗೂ ನಿರ್ಗುಣದಲ್ಲಿ ಭೇದವಿಲ್ಲ, ಎನ್ನುವ ಗುರುದೇವರ ವಾಕ್ಯವನ್ನು ಸ್ಮರಿಸಿ ಎಲ್ಲರಲ್ಲಿಯೂ ಗುರುದೇವರ ರೂಪವನ್ನೇ ನೋಡಲು ಸಾಧ್ಯವಾಗುವುದು ಹಾಗೂ ಸಗುಣದ ಸೆಳೆತ ನಿರಂತರ ಇರುವುದು
ನಮಗೆ ಸಗುಣದ ಲಾಭವನ್ನು ಮಾಡಿಕೊಳ್ಳಲಿಕ್ಕಿದೆ. ಒಮ್ಮೆ ಗುರುದೇವರೇ ಹೇಳಿದ್ದರು, ‘ಸಗುಣ ಹಾಗೂ ನಿರ್ಗುಣದಲ್ಲಿ ಭೇದವಿಲ್ಲ | ನಾನು ದೂರವಿರುತ್ತೇನೆ, ಆಗ ನನಗೆ ಹಿಂದುತ್ವನಿಷ್ಠರು, ಸಾಧಕರು ಮತ್ತು ಈಗ ಎಲ್ಲ ಸಮಾಜ ದಲ್ಲಿಯೂ ಗುರುದೇವರು ಕಾಣಿಸುತ್ತಿದ್ದಾರೆ. ಅವರು ಗುರುದೇವರ ನಿರ್ಗುಣರೂಪವಾಗಿದ್ದಾರೆ; ಏಕೆಂದರೆ ಅವರು ಪ್ರತ್ಯಕ್ಷ ಅವರ ರೂಪವಲ್ಲ. ಅವರ ಅನುಭೂತಿ ಬರುತ್ತದೆ. ಹೇಗೆ ಸಗುಣ ಮತ್ತು ನಿರ್ಗುಣದಲ್ಲಿ ಭೇದವಿಲ್ಲವೋ, ಹಾಗೆಯೇ ನಿರ್ಗುಣ ಮತ್ತು ಸಗುಣಗಳಲ್ಲಿಯೂ ಭೇದವಿಲ್ಲವಲ್ಲ ? ಹಾಗಿರುವಾಗ ಅವರನ್ನು ನೋಡುವುದರಲ್ಲಿ ಮತ್ತು ಆನಂದ ಪಡೆಯುವುದರಲ್ಲಿ ನನಗೇನು ಅಡಚಣೆ ? ಆದರೆ ಸಗುಣದ ಅಥವಾ ನಿರ್ಗುಣದ ಸೆಳೆತವಿರುವುದು ಕೂಡ ಒಂದು ಸೂಕ್ಷ್ಮ ಅಹಂಕಾರವಾಗಿತ್ತು. ಇದು ಸಹ ನನ್ನ ಅಜ್ಞಾನದ ಭಾಗವಾಗಿತ್ತು. ಸಗುಣದಲ್ಲಿ ಅವರಲ್ಲಿ ಸಂಪೂರ್ಣ ಬ್ರಹ್ಮಾಂಡದ ದರ್ಶನವಾಗುತ್ತದೆ. ಇದನ್ನು ಪ್ರಯತ್ನಿಸುತ್ತಾ ನಾನು ಅನಿರೀಕ್ಷಿತವಾಗಿ ಹೇಳಿದೆ, ‘ಇಲ್ಲ. ಇವೆಲ್ಲವೂ ಸರಿಯಾಗಿದೆ, ಅಂದರೆ ನಾನು ಪ್ರಯತ್ನ ಮಾಡುವೆನು; ಆದರೆ ಯಾವಾಗ ಅವಕಾಶ ಸಿಗುವುದೋ, ಅವರು ಅವಕಾಶವನ್ನು ಕೊಡುವರು, ನನ್ನೊಂದಿಗೆ ಮಾತನಾಡುವರು, ಆಗ ನನಗೆ ಅವರ ದರ್ಶನ ಪಡೆಯಲಿಕ್ಕಿದೆ. ಯಾವುದು ಆವಶ್ಯಕವಿದೆಯೋ, ಆ ಇಚ್ಛೆಯನ್ನು ಸಹ ಅವರೇ ಮೂಡಿಸುತ್ತಾರೆ. ಅಧ್ಯಾತ್ಮಪ್ರಸಾರದ ಕಾರ್ಯದ ದೃಷ್ಟಿಯಲ್ಲಿರ ಬಹುದು, ನನ್ನ ಸಾಧನೆಯ ದೃಷ್ಟಿಯಲ್ಲಿರಬಹುದು ಅಥವಾ ಹಿಂದೂ ರಾಷ್ಟ್ರದ ದೃಷ್ಟಿಯಲ್ಲಿರಬಹುದು, ಅವರಿಗೆ ಏನು ಅಪೇಕ್ಷೆ ಯಿದೆಯೋ, ಅದೇ ವಿಚಾರವನ್ನು ಅವರು ನನಗೆ ಕೊಡಬೇಕು.
ಪ್ರಾರ್ಥನೆ
‘ಗುರುದೇವರೆ, ನನ್ನನ್ನು ಶೇ. ೧೦೦ ರಷ್ಟು ವಶಪಡಿಸಿಕೊಂಡಾಗಿದೆ. ನನ್ನಲ್ಲಿ ಗುರುಗಳ ಇಚ್ಛೆಗಿಂತ ಭಿನ್ನವಾದ ಯಾವುದೇ ಇಚ್ಛೆ ಇರಬಾರದು. ಗುರುಗಳು ಯಾವ ಕಾರ್ಯವನ್ನು ಮಾಡಲು ಇಚ್ಛಿಸುತ್ತಾರೋ, ಅದರಲ್ಲಿ ನನ್ನ ಇಚ್ಛೆಯ ಅಡಚಣೆ ಬರಬಾರದು. ಕೇವಲ ನನ್ನದೇ ಅಲ್ಲ, ಯಾರು ಅವರ ಚರಣಗಳಲ್ಲಿ ಅಸೀಮ ಶ್ರದ್ಧೆಯನ್ನಿಡುತ್ತಾರೋ, ಯಾರು ಈಶ್ವರ ಪ್ರಾಪ್ತಿಯ ಅಥವಾ ಹಿಂದೂ ರಾಷ್ಟ್ರದ ವಿಚಾರ ಮಾಡಿ ತಮ್ಮ ಕ್ಷಮತೆಗನುಸಾರ ಪ್ರಯತ್ನ ಮಾಡುತ್ತಿದ್ದಾರೋ, ಅವರೆಲ್ಲರ ಮೇಲ ತಾವು ತಮ್ಮ ಕೃಪಾದೃಷ್ಟಿಯನ್ನು ತೋರಿಸಿ ಹಾಗೂ ನಮ್ಮೆಲ್ಲರ ಉದ್ಧಾರ ಮಾಡಿರಿ, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೨೫.೬.೨೦೧೮)