ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ದೇವರಿಗೆ ಆಹಾರದ ನೈವೇದ್ಯವನ್ನು ತೋರಿಸಿ ಅದನ್ನು ಪ್ರಸಾದ ರೂಪದಲ್ಲಿ ಸೇವಿಸುವುದು ಮತ್ತು ನೈವೇದ್ಯವನ್ನು ತೋರಿಸದೇ ಆಹಾರವನ್ನು ಸೇವಿಸುವುದು ಇವುಗಳಲ್ಲಿ ಅರಿವಾದ ವ್ಯತ್ಯಾಸ

ನಮ್ಮ ಸಂಸ್ಕೃತಿಯಲ್ಲಿ ದೇವರಿಗೆ ನೈವೇದ್ಯವನ್ನು ತೋರಿಸಿ ಆ ನೈವೇದ್ಯವನ್ನೇ ಪ್ರಸಾದವೆಂದು ಸೇವಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ದೇವರಿಗೆ ಆಹಾರದ ನೈವೇದ್ಯವನ್ನು ತೋರಿಸಿಯೇ ಭೋಜನವನ್ನು ಸೇವಿಸುತ್ತಿದ್ದರು; ಆದರೆ ಇತ್ತೀಚೆಗೆ ಈ ಕೃತಿಯು ಹಬ್ಬ ಮತ್ತು ಧಾರ್ಮಿಕ ಉತ್ಸವಗಳ ಸಮಯಕ್ಕಷ್ಟೇ ಸೀಮಿತವಾಗಿ ಬಿಟ್ಟಿದೆ. ಪ್ರಸ್ತುತ ಕಾಲದಲ್ಲಿ ನೈವೇದ್ಯವಷ್ಟೇ ಅಲ್ಲದೇ ಪೂಜೆ ಮಾಡುವ ಪ್ರಮಾಣವೂ ಕಡಿಮೆಯಾಗಿದೆ. ನೈವೇದ್ಯ ಮತ್ತು ಪ್ರಸಾದ ಈ ಪದಗಳು ದೇವಸ್ಥಾನಗಳಲ್ಲಿ ಮಾತ್ರವೇ ಕೇಳಿಬರುತ್ತದೆ. ಇದು ಸದ್ಯದ ಪರಿಸ್ಥಿತಿಯಾಗಿದೆ. ದೇವರಿಗೆ ನೈವೇದ್ಯವನ್ನು ತೋರಿಸಿ ಆಹಾರವನ್ನು ಸೇವಿಸುವುದು ಮತ್ತು ನೈವೇದ್ಯವನ್ನು ತೋರಿಸದೇ ಆಹಾರವನ್ನು ಸೇವಿಸುವ ಕುರಿತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಒಂದು ಪ್ರಯೋಗವನ್ನು ಮಾಡಲಾಯಿತು. ಆ ಕುರಿತಾದ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ.

ಶ್ರೀ. ಋತ್ವಿಜ ಢವಣ

೧. ನೈವೇದ್ಯದ ಮಹತ್ವ

‘ನೈವೇದ್ಯವು ಷೋಡಶೋಪಚಾರ ಪೂಜೆಯ ಒಂದು ಉಪಚಾರವಾಗಿದೆ. ಇದರಲ್ಲಿ ದೇವರ ಪೂಜೆಯಾದ ನಂತರ ಆರತಿಯನ್ನು ಮಾಡುವ ಮೊದಲು ದೇವರಿಗೆ ನೈವೇದ್ಯವನ್ನು ತೋರಿಸಲಾಗುತ್ತದೆ. ಸಾತ್ತ್ವಿಕ ಆಹಾರದ ನೈವೇದ್ಯವನ್ನು ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿ ದೇವರಿಗೆ ಅರ್ಪಿಸಿದರೆ ಆ ನೈವೇದ್ಯದ ಪದಾರ್ಥದ ಸಾತ್ತ್ವಿಕತೆಯಿಂದ ದೇವರಿಂದ ಪ್ರಕ್ಷೇಪಿತವಾಗುವ ಚೈತನ್ಯ-ಲಹರಿಗಳು ನೈವೇದ್ಯದಲ್ಲಿ ಆಕರ್ಷಿತವಾಗುತ್ತವೆ.ಆದ್ದರಿಂದ ನೈವೇದ್ಯಕ್ಕಾಗಿ ಆಹಾರವನ್ನು ಬೇಯಿಸುವಾಗ ಅದರಲ್ಲಿ ತುಪ್ಪದಂತಹ ಸಾತ್ತ್ವಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ದೇವರಿಗೆ ನೈವೇದ್ಯವನ್ನು ತೋರಿಸುವುದರಿಂದ ಅದರಲ್ಲಿ ಆಕರ್ಷಿತಗೊಂಡ ಚೈತನ್ಯದಿಂದ ಆ ನೈವೇದ್ಯದ ಅಕ್ಕಪಕ್ಕದ ವಾಯು ಮಂಡಲವು ಶುದ್ಧವಾಗುತ್ತದೆ. ವಾಯು ಮಂಡಲವು ಶುದ್ಧವಾಗುವುದರಿಂದ ಇಂತಹ ಆಹಾರದ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣವಾಗುವ ಪ್ರಮಾಣವು ಕಡಿಮೆ ಇರುತ್ತದೆ.

೨. ನೈವೇದ್ಯವನ್ನು ಸೇವಿಸುವುದರಿಂದಾಗುವ ಲಾಭ

ಅ. ಭಾವಪೂರ್ಣವಾಗಿ ಪೂಜೆ ಮತ್ತು ಪ್ರಾರ್ಥನೆಯನ್ನು ಮಾಡಿ ದೇವರಿಗೆ ಆಹಾರದ ನೈವೇದ್ಯವನ್ನು ತೋರಿಸಿದರೆ, ಆ ಮೂಲಕ ಆ ದೇವತೆಯ ತತ್ತ್ವ ಮತ್ತು ಚೈತನ್ಯವು ಆ ಆಹಾರದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ. ಪ್ರಸಾದವನ್ನು ಸೇವಿಸುವವನಿಗೆ ಅದರ ಲಾಭವಾಗುತ್ತದೆ.

ಆ. ದೇವರಿಗೆ ಆಹಾರದ ನೈವೇದ್ಯವನ್ನು ತೋರಿಸಿದರೆ ದೇವತೆಯ ಚೈತನ್ಯದಿಂದ ಆಹಾರದ ಮೇಲೆ ಬಂದಿರುವ ಆವರಣವು ನಾಶವಾಗಲು ಸಹಾಯವಾಗುತ್ತದೆ.

ಇ. ಆ ನೈವೇದ್ಯದಲ್ಲಿ ಆಕರ್ಷಿತವಾದ ಚೈತನ್ಯದಿಂದ ಅದನ್ನು ಪ್ರಸಾದರೂಪದಲ್ಲಿ ಸೇವಿಸುವ ವ್ಯಕ್ತಿಯ ಮೇಲಿರುವ ಆವರಣವು ಕಡಿಮೆಯಾಗುತ್ತದೆ.

೩. ದೇವರಿಗೆ ತೋರಿಸಿದ ನೈವೇದ್ಯವನ್ನು ಪ್ರಸಾದರೂಪದಲ್ಲಿ ಸೇವಿಸುವುದು ಮತ್ತು ನೈವೇದ್ಯವನ್ನು ತೋರಿಸದೇ ಸೇವಿಸುವುದು ಈ ಪ್ರಯೋಗ ಮಾಡುವಾಗ ಬಂದ ಅನುಭೂತಿ

– ಶ್ರೀ. ಋತ್ವಿಜ ನಿತೀನ ಢವಣ, (‘ಹೊಟೇಲ್ ಮ್ಯಾನೇಜಮೆಂಟ್’ ಕಲಿತ ವಿದ್ಯಾರ್ಥಿ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೧.೧೧.೨೦೨೦)

ದೇವರಿಗೆ ‘ನೈವೇದ್ಯ ತೋರಿಸಿದ ಹಾಗೂ ತೋರಿಸದಿರುವ ಆಹಾರ ಸೇವಿಸುವುದು

ಸದ್ಗುರು (ಡಾ.) ಮುಕುಲ ಗಾಡಗೀಳ

‘೧.೧೧.೨೦೨೦ ರಂದು ಶಿರಾ ಮಾಡಲಾಗಿತ್ತು. ಅದರ ಎರಡು ಭಾಗಗಳನ್ನು ಮಾಡಲಾಯಿತು. ಒಂದು ಭಾಗವನ್ನು ದೇವರಿಗೆ ‘ನೈವೇದ್ಯ ತೋರಿಸಲಾಯಿತು. ನಂತರ ‘ಆ ಶಿರಾವನ್ನು ಸೇವಿಸಿದಾಗ ಯಾವ ಸ್ಪಂದನಗಳ ಅರಿವಾಯಿತು ?, ಎಂಬುದನ್ನು ನೋಡ ಲಾಯಿತು. ಶಿರಾದ ಇನ್ನೊಂದು ಭಾಗವನ್ನು ದೇವರಿಗೆ ‘ನೈವೇದ್ಯ ತೋರಿಸದ (ದೇವರಿಗೆ ‘ನೈವೇದ್ಯ ತೋರಿಸದಿರುವ) ಶಿರಾವನ್ನು ಸೇವಿಸಿದ ನಂತರ ಯಾವ ಸ್ಪಂದನಗಳ ಅರಿವಾಯಿತು ?, ಎಂಬುದನ್ನು ಸಹ ನೋಡಲಾಯಿತು. ಈ ಬಗ್ಗೆ ನನಗೆ ಈ ಮುಂದಿನಂತೆ ಅರಿವಾಯಿತು.

೧. ದೇವರಿಗೆ ‘ನೈವೇದ್ಯ ತೋರಿಸಿ ಶಿರಾ ಸೇವಿಸುವುದು

ಅ. ದೇವರಿಗೆ ‘ನೈವೇದ್ಯ ತೋರಿಸಿದ ಶಿರಾವನ್ನು ನೋಡಿದಾಗ ನನಗೆ ತುಂಬಾ ಹಗುರವೆನಿಸಿತು, ಹಾಗೂ ತಂಪೆನಿಸಿತು.

ಆ. ಆ ಶಿರಾ ಪ್ರಸಾದದ ಮೊದಲ ತುತ್ತು ಸೇವಿಸಿದ ಕೂಡಲೇ ನನ್ನ ಅನಾಹತಚಕ್ರ ಹಾಗೂ ಅದರ ಮೇಲಿನ ಚಕ್ರಗಳಿಗೆ ಚೈತನ್ಯ ಸಿಗುತ್ತಿದೆ ಎಂದು ಅರಿವಾಯಿತು. ‘ಆ ಚಕ್ರಗಳ ಮೇಲೆ ಪ್ರಕಾಶ ಹರಡಿತು, ಎಂದು ನನಗೆ ಅನಿಸಿತು.

ಇ. ಅನಂತರ ಶಿರಾ ಪ್ರಸಾದದ ಸ್ಪಂದನಗಳು ಅನಾಹತಚಕ್ರದ ಕೆಳಗಿನ ಚಕ್ರಗಳಲ್ಲಿ ಅರಿವಾಗಿ ಕೊನೆಯಲ್ಲಿ ಮೂಲಾಧಾರ ಚಕ್ರದಲ್ಲಿ ಅರಿವಾಯಿತು. ನನ್ನ ಸುಷುಮ್ನಾ ನಾಡಿ ಸಕ್ರಿಯವಾಯಿತು.

ಈ. ನನ್ನ ಕುಂಡಲಿನಿ ಶಕ್ತಿ ಜಾಗೃತವಾಗಿ ಅದು ಮಣಿಪುರ ಚಕ್ರದ ತನಕ ತಲುಪಿತು. ನಂತರ ನನ್ನ ಸೂರ್ಯನಾಡಿ ಸಕ್ರಿಯವಾಯಿತು.

ಉ. ಪ್ರಸಾದದ ಶಿರಾ ಸೇವಿಸಿದ ಮೇಲೆ ಮನಸ್ಸಿಗೆ ಶಾಂತಿ ಹಾಗೂ ತೃಪ್ತಿ ಸಿಕ್ಕಿತು.

೨. ದೇವರಿಗೆ ‘ನೈವೇದ್ಯ ತೋರಿಸದ ಶಿರಾ ಸೇವಿಸುವುದು

ಅ. ದೇವರಿಗೆ ‘ನೈವೇದ್ಯ ತೋರಿಸದ ಶಿರಾವನ್ನು ನೋಡಿದಾಗ ನನಗೆ ಒತ್ತಡದ ಅರಿವಾಯಿತು.

ಆ. ನಾನು ಆ ಶಿರಾದ ಮೊದಲ ತುತ್ತು ತಿಂದೆನು, ಆಗಲೂ ನನಗೆ ಒತ್ತಡದ ಅರಿವಾಗುತ್ತಿತ್ತು. ಆ ತುತ್ತು ನನಗೆ ತಕ್ಷಣ ನುಂಗಲು ಆಗುತ್ತಿರಲಿಲ್ಲ.

ಇ. ತುತ್ತು ನುಂಗಿದ ಮೇಲೆಯೂ ‘ಅದು ಹೊಟ್ಟೆಗೆ ಹೋಗಿದೆ, ಎಂಬುದು ನನಗೆ ಅರಿವಾಗಲಿಲ್ಲ.

ಈ. ನನಗೆ ಶಿರಾ ತಿಂದಿರುವ ಬಗ್ಗೆ ಸಮಾಧಾನ ಸಿಗಲಿಲ್ಲ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.(೨.೧೧.೨೦೨೦)

‘ಈ ಲೇಖನದಿಂದ ದೇವತೆಗಳಿಗೆ ನೈವೇದ್ಯವನ್ನು ತೋರಿಸಿ ಅಥವಾ ಅರ್ಪಿಸಿ ಸೇವಿಸುವುದರ ಮಹತ್ವ ಎಷ್ಟಿದೆ, ಎಂಬುದು ಗಮನಕ್ಕೆ ಬರುತ್ತದೆ. – (ಪರಾತ್ಪರ ಗುರು ಡಾ. ಆಠವಲೆ)