ಆಪತ್ಕಾಲದಲ್ಲಿ ಜೀವನರಕ್ಷಣೆ ಮಾಡಿಕೊಳ್ಳಲು ಸ್ವತಃ ಸಕ್ಷಮರಾಗಿ !

ಗ್ರಂಥ ಮಾಲಿಕೆ : ಆಪತ್ಕಾಲದ ಸಂಜೀವಿನಿ

ಮುಂಬರುವ ಆಪತ್ಕಾಲದಲ್ಲಿ ವಿಶ್ವಯುದ್ಧ ಸಹಿತ, ನೆರೆ, ಭೂಕಂಪ ಇತ್ಯಾದಿ ನೈಸರ್ಗಿಕ ವಿಪತ್ತುಗಳು ಬರುಲಿವೆ. ಆಗ ಡಾಕ್ಟರ್, ವೈದ್ಯರು, ಔಷಧಿಗಳು ಇತ್ಯಾದಿಗಳು ಸಿಗುವುದು ಕಠಿಣವಾಗುವುದು. ಅಂತಹ ಸಂದರ್ಭದಲ್ಲಿ ರೋಗ ಮತ್ತು ವಿಪತ್ತುಗಳನ್ನು ಎದುರಿಸುವ ಪೂರ್ವ ತಯಾರಿಯ ದೃಷ್ಟಿಯಿಂದ ಈ ಗ್ರಂಥ ಮಾಲಿಕೆಯನ್ನು ಓದಿ. ಈ ಗ್ರಂಥ ದಿನನಿತ್ಯಕ್ಕೂ ಉಪಯುಕ್ತವಾಗಿದೆ.

ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ !

ಮನೆಯ ಬಾಲ್ಕನಿ, ಅಂಗಳ, ಹೊಲ ಇತ್ಯಾದಿಗಳಲ್ಲಿ ಬೆಳೆಸುವ ೨೦೦ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಈ ಸಸ್ಯಗಳಿಂದ ೧೦೦ ರೋಗಗಳ ನಿವಾರಣೆಗೆ ಹೇಗೆ ಬಳಸಬೇಕು ಎಂಬ  ಮಾಹಿತಿ ಗ್ರಂಥದಲ್ಲಿ ಕೊಡಲಾಗಿದೆ. ಭಾವೀ ಮಹಾಯುದ್ಧದಲ್ಲಿ ಆಗಬಹುದಾದ ಔಷಧಿಗಳ ಕೊರತೆ ಗಮನದಲ್ಲಿಟ್ಟು ಈಗಲೇ ಸಸ್ಯಗಳನ್ನು ಬೆಳೆಸಿ !

ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ? (ಮಂತ್ರ, ಆಧ್ಯಾತ್ಮಿಕ ಯಂತ್ರ ಮತ್ತು ಆಧ್ಯಾತ್ಮಿಕ ಉಪಾಯಗಳ ಸಹಿತ)

ಕಡಿಮೆ ಮಣ್ಣಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವುದು, ದೊಡ್ಡ ಸಸಿಗಳಿಗಾಗಿ ನರ್ಸರಿ ಮಾಡುವುದು, ಹಾಗೆಯೇ ಮಣ್ಣಿನ ಪರೀಕ್ಷೆ, ಸಾವಯವ (ನೈಸರ್ಗಿಕ) ಗೊಬ್ಬರ, ಔಷಧೀಯ ಸಸ್ಯಗಳ ಕೊಯ್ಲು ಮತ್ತು ಸಂಗ್ರಹ ಮುಂತಾದವುಗಳ ಬಗ್ಗೆ ಸುಲಭ ಮಾರ್ಗದರ್ಶನ ಮಾಡುವ ಗ್ರಂಥ !