ಪತಿಯ ನಿಧನದ ನಂತರ ದುಃಖದ ಸಮಯದಲ್ಲೂ ಸಾಧಕಿಯು ಗುರುಕೃಪೆ ಮತ್ತು ಸಾಧನೆಯಿಂದ ಅತ್ಯುನ್ನತ ಮಟ್ಟದ ಮಾನಸಿಕ ಸ್ಥಿರ ಹಾಗೂ ಭಾವಾವಸ್ಥೆ ಅನುಭವಿಸುವುದು

(ಪೂ.) ಸೌ. ಉಮಾ ರವಿಚಂದ್ರನ್

೧. ಓರ್ವ ಸಾಧಕಿಯ ಪತಿಯು ಇತ್ತೀಚೆಗೆ ನಿಧನರಾಗಿದ್ದರು. ಸಿತಾರವಾದ ಪ್ರಯೋಗದಲ್ಲಿ ಸಿತಾರವಾದನ ಕೇಳುತ್ತಿದ್ದಂತೆ ಯಶೋದಾಮಾತೆಯ ಪಾತ್ರದಲ್ಲಿ ಆನಂದದಿಂದ ಬಾಲಕೃಷ್ಣನಿಗೆ ಸ್ನಾನವನ್ನು ಮಾಡಿಸುವುದು, ಉಡುಪುಗಳನ್ನು ತೊಡಿಸುವುದು ಮತ್ತು ಊಟ ಮಾಡಿಸುವುದು ಇಂತಹ ಕೃತಿಗಳನ್ನು ಮಾಡಲು ಪ್ರಾರ್ಥಿಸುವುದು ಮತ್ತು ಆ ಸಮಯದಲ್ಲಿ ಅವಳಲ್ಲಿ ಬಾಲಕೃಷ್ಣನ ಅಸ್ತಿತ್ವದ ಅರಿವು ಹೆಚ್ಚು ಪ್ರಮಾಣದಲ್ಲಾಗುವುದು.

‘೩.೯.೨೦೧೭ ರಂದು ಸನಾತನದ ರಾಮನಾಥಿ ಆಶ್ರಮದಲ್ಲಿ ಸಿತಾರವಾದನದ ಒಂದು ಪ್ರಯೋಗವನ್ನು ತೆಗೆದುಕೊಳ್ಳಲಾಗಿತ್ತು. ನನಗೆ ಆ ಪ್ರಯೋಗದ ಅಧ್ಯಯನ ಮಾಡುವ ಅವಕಾಶ ಸಿಕ್ಕಿತು. ಈ ಪ್ರಯೋಗದಲ್ಲಿ ಸಿತಾರವಾದನದಿಂದ ಸಾಧಕರ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ನೋಂದಣಿ ಮಾಡಲಾಗುತ್ತಿತ್ತು. ಸಿತಾರವಾದನವನ್ನು ಕೇಳಲು ಕೆಲವು ಸಾಧಕರು ಕುಳಿತಿದ್ದರು. ಸಿತಾರವಾದನವು ಪ್ರಾರಂಭವಾದ ನಂತರ ಸ್ವಲ್ಪ ಸಮಯದ ನಂತರ ಒಬ್ಬ ಸಾಧಕಿಯು ಎದ್ದು ನೃತ್ಯವನ್ನು ಮಾಡತೊಡಗಿದಳು. ಆಗ ಅವರು ಯಶೋದಾಮಾತೆಯ ಪಾತ್ರವನ್ನು ಮಾಡುತ್ತಿದ್ದರು. ಆಗ ಅವರ ಮುಖದ ಮೇಲೆ ಆನಂದವು ತುಂಬಿ ಹರಿಯುತ್ತಿತ್ತು. ಅವರು ಸ್ವತಃ ಯಶೋದಾಮಾತೆಯಾಗಿದ್ದೂ ಬಾಲಕೃಷ್ಣನೊಂದಿಗೆ ಸವಿಯಾಗಿ ಮಾತನಾಡುತ್ತ ಅವನಿಗೆ ಸ್ನಾನವನ್ನು ಮಾಡಿಸುವುದು, ಉಡುಪುಗಳನ್ನು ತೊಡಿಸುವುದು ಮತ್ತು ಊಟ ಮಾಡಿಸುವುದು ಇವುಗಳಿಗಾಗಿ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಅವರ ಮುಖದ ಮೇಲೆ ತುಂಬಾ ಪ್ರಮಾಣದಲ್ಲಿ ವಾತ್ಸಲ್ಯಭಾವ ಮತ್ತು ಆನಂದ ಈ ಎರಡೂ ಒಂದೇ ಸಮಯದಲ್ಲಿ ಕಂಡುಬರುತ್ತಿದ್ದವು. ಆ ಸಮಯದಲ್ಲಿ ಅವರಿಗೆ ತಮ್ಮ ಅಥವಾ ಇತರರ ಅರಿವಿರಲಿಲ್ಲ. ನನಗೆ ಅಲ್ಲಿ ಆ ಸಾಧಕಿಗಿಂತ ಬಾಲಕೃಷ್ಣನ ಅಸ್ತಿತ್ವದ ಹೆಚ್ಚು ಅರಿವಾಗುತ್ತಿತ್ತು. ಇತ್ತೀಚೆಗೆ ಆ ಸಾಧಕಿಯ ಪತಿಯ ನಿಧನವಾಗಿತ್ತು. ಅವರು ಅವರ ಇಬ್ಬರೂ ಹೆಣ್ಣುಮಕ್ಕಳನ್ನು ಕರೆದುಕೊಂಡು ಆಶ್ರಮದಲ್ಲಿರಲು ಬಂದಿದ್ದರು. ಇಂತಹ ಸ್ಥಿತಿಯಲ್ಲಿರುವಾಗಲೂ ಅವರ ಈ ಭಾವಾವಸ್ಥೆಯನ್ನು ನೋಡಿ ನನ್ನಲ್ಲಿ ಭಾವವು ಜಾಗೃತವಾಯಿತು ಮತ್ತು ಪರಾತ್ಪರ ಗುರು ಡಾಕ್ಟರರ ಬಗ್ಗೆ ಕೃತಜ್ಞತೆಯಿಂದ ಮನಸ್ಸು ತುಂಬಿ ಬಂದಿತು.

೨. ದೇವಸ್ಥಾನದಲ್ಲಿ ದೇವತೆಯ ಮೂರ್ತಿಯ ಪೂಜೆಯನ್ನು ಮಾಡುವಾಗ ಸಾಧಕಿಯ ಕಣ್ಣುಗಳಿಂದ ನಿರಂತರ ಭಾವಾಶ್ರು ಹರಿಯುವುದು ಮರುದಿನದ ಪ್ರಯೋಗದಲ್ಲಿ ಅವರು ದೇವಸ್ಥಾನದಲ್ಲಿ ದೇವತೆಯ ಮೂರ್ತಿಗೆ ಅಭಿಷೇಕವನ್ನು ಮಾಡುವುದು ಮತ್ತು ಅವಳಿಗೆ ಆಭರಣಗಳನ್ನು ತೊಡಿಸಿ ದೇವಿಯ ಪೂಜೆ ಮಾಡುವುದು ಈ ಪಾತ್ರವನ್ನು ನೃತ್ಯದಿಂದ ಪ್ರಸ್ತುತಪಡಿಸಿದರು. ಆ ಸಮಯದಲ್ಲಿ ಅವರ ಕಣ್ಣುಗಳಿಂದ ನಿರಂತರ ಭಾವಾಶ್ರುಗಳು ಹರಿಯುತ್ತಿತ್ತು. ಅವರ ಮುಖವು ಭಾವದಿಂದ ಕೂಡಿತ್ತು.

೩. ಎರಡು ದಿನಗಳಲ್ಲಿ ಅವರ ಮುಖದ ಮೇಲಿನ ವಿವಿಧ ಭಾವವನ್ನು ನೋಡಿದ ನಂತರ ‘ಮಾತೃವಾತ್ಸಲ್ಯ ಭಾವವು ಉಚ್ಚ ಸ್ತರದ ಭಾವವಾಗಿದ್ದರಿಂದ ಆನಂದದ ಅನುಭೂತಿ ಬರುತ್ತದೆ’, ಎಂದು ನನಗೆ ಅರಿವಾಯಿತು.

೪. ಪರಮೇಶ್ವರನು ನೀಡಿದ ಆಧಾರದಿಂದಲೇ ಸಾಧಕಿಯು ದೇಹಬುದ್ಧಿಯನ್ನು ಮರೆತು ಮತ್ತು ಕಲೆಯೊಂದಿಗೆ ಏಕರೂಪಳಾಗಿ ಆನಂದದಿಂದ ನೃತ್ಯ ಮಾಡಿ ತನ್ನ ಪ್ರತಿಭೆಯನ್ನು ಭಗವಂತನ ಚರಣಗಳಲ್ಲಿ ಸಮರ್ಪಣೆ ಮಾಡುತ್ತಿದ್ದಾಳೆಂದು ಅರಿವಾಗುವುದು ಆ ಸಾಧಕಿಗೆ ಇಷ್ಟೊಂದು ಅಲ್ಪ ಅವಧಿಯಲ್ಲಿ ಹೀಗೆ ಆಧಾರ ಮತ್ತು ಆನಂದವನ್ನು ಕೊಡಲು ಇತರ ಯಾರಿಗಾದರೂ ಸಾಧ್ಯವಿದೆಯೇ ? ಆದರೆ ‘ಸಮಯವು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ’, ಎಂದು ಹೇಳಲಾಗುತ್ತದೆ; ಆದರೆ ಗಮನದಲ್ಲಿ ತೆಗೆದುಕೊಳ್ಳುವ ವಿಷಯವೆಂದರೆ ಕಾಲವು ಕೇವಲ ನೋವನ್ನು ನಿವಾರಿಸಬಹುದು, ಅದು ಭಾವನೆಗಳ ಜಾಗದಲ್ಲಿ ಆನಂದವನ್ನು ನೀಡಲಾರದು. ಆ ಸಾಧಕಿಯ ಸಾಧನೆ ಮತ್ತು ತಳಮಳ ಇವುಗಳಿಂದಲೇ ಅವರಿಗೆ ಭಗವಂತನ ಪ್ರೀತಿಯುಕ್ತ ಆಧಾರವು ಲಭಿಸಿತು. ಪರಮೇಶ್ವರನು ನೀಡಿದ ಆಧಾರದಿಂದಲೇ ಅವರು ದೇಹಬುದ್ಧಿಯನ್ನು ಮರೆತು, ಕಲೆಯೊಂದಿಗೆ ಏಕರೂಪವಾಗಿ ಆನಂದದಿಂದ ನೃತ್ಯವನ್ನು ಮಾಡಲು ಸಾಧ್ಯವಾಯಿತು. ಅವರು ಭಗವಂತನ ಚರಣಗಳಲ್ಲಿ ತನ್ನ ಪ್ರತಿಭೆಯನ್ನು ಸಮರ್ಪಿಸಿ ದರು. ಎಷ್ಟೇ ಹಣ, ಸಂಪತ್ತು ಮತ್ತು ಅನೇಕ ಸಂಬಂಧಿಕರು ದೊರಕಿದರೂ ಅವರ‍್ಯಾರೂ ಆಕೆಗೆ ಈ ಅನುಭೂತಿಯನ್ನು ಕೊಡಲು ಸಾಧ್ಯವಿಲ್ಲ. ಅವರ ಮುಖದ ಮೇಲೆ ತನ್ನ ಭವಿಷ್ಯ, ತನ್ನ ವಿಷಯ ಮತ್ತು ಹೆಣ್ಣುಮಕ್ಕಳ ಕುರಿತಾದ ಚಿಂತೆ ಹಾಗೂ ಕಾಳಜಿಯು ಎಳ್ಳಷ್ಟೂ ಇರಲಿಲ್ಲ. ಈ ಒಂದು ಪ್ರಸಂಗದಿಂದ ಪ.ಪೂ. ಗುರುದೇವರು ನನಗೆ ಬಹಳಷ್ಟನ್ನು ಕಲಿಸಿದರು. ಇಂತಹ ಅನುಭೂತಿಯು ಕೇವಲ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿಯೇ ಬರಲು ಸಾಧ್ಯ. ಜಾಗತಿಕ ಸ್ತರದಲ್ಲಿ ಶಿಕ್ಷಣ ನೀಡುವ ಯಾವುದೇ ವಿಶ್ವವಿದ್ಯಾಲಯ ಅಥವಾ ಸಾವಿರಾರು ಸಂಶೋಧನಾಪ್ರಬಂಧವು ಇಷ್ಟೊಂದು ಆಳವಾಗಿ, ಅಂತರ್ಮುಖ ಮಾಡುವ ಮತ್ತು ಕಾರ್ಯರೂಪದಲ್ಲಿನ (ಕೃತಿಯ ಸ್ತರದಲ್ಲಿ) ಅನುಭೂತಿಯನ್ನು ನೀಡಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಯಾರಾದರೊಬ್ಬ ವ್ಯಕ್ತಿಯು ಕರ್ಮಕಾಂಡದ ಕೃತಿಗಳನ್ನು ಭಕ್ತಿಭಾವದಿಂದ ಮಾಡಿದರೆ ಅವನಲ್ಲಿ ಭಾವಜಾಗೃತವಾಗಬಹುದು; ಆದರೆ ಸಮಷ್ಟಿ ಸೇವೆಯನ್ನು ಮಾಡಲು ಮಾತೃವಾತ್ಸಲ್ಯಭಾವವು ಹೆಚ್ಚು ಆವಶ್ಯಕವಾಗಿದೆ. ನಮ್ಮೆದುರಿಗೆ ಇದರ ಆದರ್ಶ ಉದಾಹರಣೆಯೆಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರು (ಎಲ್ಲ ಸಾಧಕರ ತಾಯಿ) ಇದ್ದಾರೆ.

‘ಹೇ ಪರಮೇಶ್ವರಾ, ಹೇ ಪ್ರಭೋ, ನಾವು ಎಷ್ಟೊಂದು ವಿಷಯಗಳನ್ನು ಗ್ರಹಿಸುತ್ತೇವೆ. ತಮ್ಮ ಕೃಪೆಯ ಸ್ರೋತವನ್ನು ಪಡೆಯಲು ನಾವು ಕಡಿಮೆ ಬೀಳುತ್ತೇವೆ. ಕೃಪೆ ಮಾಡಿ ನೀವೇ ನಮ್ಮಿಂದಾಗುವ ಅಯೋಗ್ಯ ಕೃತಿಯನ್ನು ನಿಲ್ಲಿಸಿರಿ, ಅಂತರ್ಮುಖರಾಗಿ ಮಾಡಿರಿ, ನಮಗೆ ಈ ನಿರಂತರ ಕೃಪಾಪ್ರವಾಹವನ್ನು ಅನುಭವಿಸಲು ಕೊಡಿರಿ ಮತ್ತು ನಮ್ಮ ಮನಸ್ಸನ್ನು ಕೃತಜ್ಞತೆಗಳಿಂದ ತುಂಬಿಸಿ. ನಾವು ಕಾರ್ಯದ ಪ್ರವಾಹದಲ್ಲಿ ಹರಿಯುತ್ತ ಹೋಗುತ್ತಿರುವುದನ್ನು ತಡೆಯಿರಿ. ಯಾವುದೊಂದು ರೆಕ್ಕೆಯಂತೆ ಹಗುರವಾಗಿ ನಮಗೆ ಅನೇಕ ಸ್ಥಳಗಳಿಗೆ ಹೋಗಲು ಸಾಧ್ಯವಾಗಲಿ ಮತ್ತು ಈಶ್ವರನ ಇಚ್ಛೆಗನುಸಾರ ಕಾರ್ಯವನ್ನು ಮಾಡುವಂತಾಗಲಿ’, ಎಂಬುದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆಯಾಗಿದೆ.’

– (ಪೂ.) ಸೌ. ಉಮಾ ರವಿಚಂದ್ರನ, ಚೆನ್ನೈ, ತಮಿಳುನಾಡು. (೧೪.೯.೨೦೧೭)