ಕರ್ನಾಟಕದಲ್ಲಿ, ಆರ್ಥಿಕವಾಗಿ ದುರ್ಬಲರಾಗಿರುವ ಸ್ವಜಾತಿಯ ಅರ್ಚಕನನ್ನು ಮದುವೆಯಾಗುವ ಬ್ರಾಹ್ಮಣ ವಧುಗೆ ೩ ಲಕ್ಷ ರೂಪಾಯಿಯ ಆರ್ಥಿಕ ಸಹಾಯ ಸಿಗಲಿದೆ

ರಾಜ್ಯದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬ್ರಾಹ್ಮಣ ಸಮುದಾಯದ ಹುಡುಗಿಯರಿಗಾಗಿ ‘ಅರುಂಧತಿ’ ಮತ್ತು ‘ಮೈತ್ರೇಯಿ’ ಎಂಬ ಹೆಸರಿನ ಎರಡು ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಬ್ರಾಹ್ಮಣ ಸಮುದಾಯದ, ಆರ್ಥಿಕವಾಗಿ ದುರ್ಬಲ ವರ್ಗದ ಹುಡುಗಿಯರಿಗೆ ಆರ್ಥಿಕ ನೆರವು ಸಿಗಲಿದೆ.

ಅವಕಾಶವಾದಿ ಕಾಂಗ್ರೆಸ್ !

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಂದಿನ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಸಂಪೂರ್ಣ ಸಮಾಜವನ್ನು ಒತ್ತೆ ಇಟ್ಟುಕೊಳ್ಳುವ ಕಾಂಗ್ರೆಸ್ಸಿಗರ ಉದ್ಯೋಗವು ನಿರಂತರ ನಡೆಯುತ್ತಿದೆ. ಸದ್ಯ ಕಾಂಗ್ರೆಸ್ಸಿಗೆ ಅನಿರೀಕ್ಷಿತ ರೈತಪ್ರೇಮವು ಜಾಗೃತವಾಗಿದೆ. ಕಾಂಗ್ರೆಸ್‌ನವರು ದೆಹಲಿಯ ರೈತರ ಆಂದೋಲನವನ್ನು ಬಂಡವಾಳವನ್ನಾಗಿಸುತ್ತಿರುವುದು ಕಾಣಿಸುತ್ತಿದೆ. ಪ್ರತಿದಿನ ಈ ಆಂದೋಲನದ ಹೊಸ ಹೊಸ ರೂಪ ಮುಂದೆ ಬರುತ್ತಿದೆ.

ಅಭಿವೃದ್ಧಿಯ(ವಿಕಾಸದ) ಬಗ್ಗೆ ಪ್ರಶ್ನೆಯನ್ನು ವಿಚಾರಿಸಿದ ಆಗದಿರುವ ಬಗ್ಗೆ ಗ್ರಾಮಪಂಚಾಯತಿ ಸದಸ್ಯನನ್ನು ವೇದಿಕೆಯಿಂದ ಕೆಳದಬ್ಬಿದ (ದೂಡಿದ) ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ!

ಗ್ರಾಮಪಂಚಾಯತಿಯ ನೂತನ ಸದಸ್ಯನು ರಾಜ್ಯದ ವಿಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ‘ಸಿದ್ಧರಾಮಯ್ಯರವರು ನಮ್ಮೂರಿಗೆ ಬಂದುಹೋದರೂ ನಮ್ಮ ಊರಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದೊಡನೆ ಸಿಟ್ಟುಗೊಂಡ ಸಿದ್ಧರಾಮಯ್ಯರವರು ಆತನನ್ನು ವೇದಿಕೆಯಿಂದ ಕೆಳಗೆ ದೂಡಿದರು.

ಕೇಂದ್ರ ಸರಕಾರದ ಪ್ರಾಧಿಕಾರವು ‘ಹಲಾಲ್’ ಪದವನ್ನು ಸರಕಾರಿ ನಿಯಮಗಳಿಂದ ತೆಗೆದುಹಾಕಿದೆ !

ಕೇಂದ್ರ ಸರಕಾರದ ‘ಅಗ್ರಿಕಲ್ಚರಲ್ ಅಂಡ್ ಪ್ರೊಸೆಸ್ಡ್ ಫುಡ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪ್‌ಮೆಂಟ್’ಯು (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ)ಅಂದರೆ ‘ಆಪೆಡಾ’ವು ತನ್ನ ‘ರೆಡ ಮೀಟ್ ಮ್ಯಾನುಯಲ್’ ನಿಂದ ‘ಹಲಾಲ್’ ಪದವನ್ನೇ ತೆಗೆದುಹಾಕಿದೆ.

ನುಸುಳಿ ಬಂದ ರೊಹಿಂಗ್ಯಾ ವ್ಯಕ್ತಿಯ ಬಂಧನ

ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ ಮ್ಯಾನ್ಮಾರ್‌ನ ನಿವಾಸಿ, ರೋಹಿಂಗ್ಯಾ ಮುಸ್ಲಿಂ ವ್ಯಕ್ತಿ ಅಜೀಜುಲ್ಲಾ ಹಕ್ ಅಲಿಯಾಸ್ ಅಜೀಜುಲ್ಲಾಹನನ್ನು ಖಲೀಲಾಬಾದ್‌ನಿಂದ ಬಂಧಿಸಿದೆ. ಅವನ ಬಳಿ ೨ ನಕಲಿ ಭಾರತೀಯ ಪಾಸ್‌ಪೋರ್ಟ್‌ಗಳು, ೩ ಆಧಾರ್ ಕಾರ್ಡ್‌ಗಳು, ೧ ಪ್ಯಾನ್ ಕಾರ್ಡ್, ೫ ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ.

೨೦೦೮ ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಫೋಟದ ಸಂಚಿನ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೆ ! – ಲೆ. ಕರ್ನಲ್ ಪ್ರಸಾದ ಶ್ರೀಕಾಂತ ಪುರೋಹಿತ

೨೦೦೮ ರಲ್ಲಿ ಮಾಲೆಗಾಂವ್ ಬಾಂಬ್ ಸ್ಫೋಟದ ಸಂಚಿನ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೆ, ಎಂಬ ವಾದವನ್ನು ಈ ಪ್ರಕರಣದ ಆರೋಪಿ ಲೆ. ಕರ್ನಲ ಪ್ರಸಾದ ಶ್ರೀಕಾಂತ ಪುರೋಹಿತ ಇವರ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಮಾಡಲಾಯಿತು. ನ್ಯಾಯಮೂರ್ತಿ ಎಸ್.ಎಸ್. ಶಿಂದೆ ಹಾಗೂ ನ್ಯಾಯಮೂರ್ತಿ ಮಕರಂದ ಕರ್ಣಿಕ ಅವರ ನ್ಯಾಯಪೀಠವು ಪುರೋಹಿತ ಇವರ ಮನವಿಯನ್ನು ಆಲಿಸಿತು.

ಹಿಂದೂ ಜನಜಾಗೃತಿ ಸಮಿತಿಯ ಪ್ರಬೋಧನೆ, ಶ್ರೀ ಹನುಮಂತನ ವಿಡಂಬನೆಗೆ ತಡೆ

ಸ್ಥಳೀಯ ಎಸ್.ಆರ್.ಜೆ. ಎಂಬ ಹೆಸರಿನ ಖಾಸಗಿ ಸಂಸ್ಥೆಯು ಉಪ್ಪಿನ ಪೊಟ್ಟಣದ ಮೇಲೆ ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುತ್ತಿತ್ತು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದಾಗ ‘ಇದರಿಂದ ದೇವತೆಗಳ ಅವಮಾನ ಹೇಗಾಗುತ್ತಿದೆ?’, ಎಂಬುವುದರ ಬಗ್ಗೆ ಪ್ರಬೋಧನೆ ಮಾಡಿದ ನಂತರ ಅವರು ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುವುದನ್ನು ನಿಲ್ಲಿಸಲು ಒಪ್ಪಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವಾಗ ‘ನಾನು ಮಾಡುತ್ತೇನೆ, ಎಂಬ ಅಹಂ ಇಟ್ಟುಕೊಳ್ಳುವ ಆವಶ್ಯಕತೆ ಇಲ್ಲ; ಏಕೆಂದರೆ ಕಾಲ ಮಹಾತ್ಮೆಗನುಸಾರ ಆ ಕಾರ್ಯವು ಖಂಡಿತವಾಗಿಯೂ ಆಗಲಿದೆ; ಆದರೆ ಈ ಕಾರ್ಯದಲ್ಲಿ ತನು-ಮನ-ಧನ ಇವುಗಳನ್ನು ನಿಸ್ವಾರ್ಥವಾಗಿ ತ್ಯಾಗ ಮಾಡಿ ಅದರಲ್ಲಿ ಪಾಲ್ಗೊಳ್ಳುವವರ ಸಾಧನೆಯಾಗಿ ಅವರು ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುವರು.

ಪಾಕಿಸ್ತಾಮದಲ್ಲಿ ಅಲ್ಪಸಂಖ್ಯಾರ ಮೇಲಿನ ಅತ್ಯಾಚಾರದ ಬಗ್ಗೆ ಮಾಹಿತಿಯನ್ನು ನೀಡುವ ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತ ರಾಹತ ಆಸ್ಟಿನ್ ಇವರ ಮೇಲೆ ಮಾರಣಾಂತಿಕ ಹಲ್ಲೆ

ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿರುವ ವಕೀಲರಾದ ರಹತ್ ಆಸ್ಟಿನ್ ಅವರ ಮೇಲೆ ಮತಾಂಧರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಒಡಿಶಾದ ದೇವಾಲಯಗಳಲ್ಲಿ ಅಜ್ಞಾತರಿಂದ ದೇವತೆಗಳ ವಿಗ್ರಹಗಳ ಧ್ವಂಸ !

ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಗಡ ಜಿಲ್ಲೆಯ ಹುಕುಮಾಟೊಲಾ ಗ್ರಾಮದಲ್ಲಿರುವ ಭಗವಾನ ರಾಮೇಶ್ವರ ಮಹಾದೇವ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಗಳು ಶ್ರೀ ಸರಸ್ವತಿ ದೇವಿ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ವೃಂದಾವತಿ ದೇವಿ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ.