ಸೀತಾ ಮಾತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದ ವಿರುದ್ಧ ಅಪರಾಧ ದಾಖಲು
ರಾಜ್ಯದ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ವಕೀಲರಾದ ಕಲ್ಯಾಣ ಬ್ಯಾನರ್ಜಿಯವರು ಸೀತಾ ಮಾತೆಯ ಬಗ್ಗೆ ಅಗೌರವ ತೋರಿರುವ ವಿರುದ್ಧ ಅಪರಾಧ ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಆಶಿಷ ಜೈಸ್ವಾಲ್ ಅವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.