ನವಿ ಮುಂಬಯಿ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ಸಣ್ಣ ಮಕ್ಕಳಿಗೆ ಗೋಮಾಂಸ ನೀಡುವಂತೆ ಸಲಹೆ ನೀಡಿದ ಪ್ರಕರಣ
ಹಿಂದೂ ಜನಜಾಗೃತಿ ಸಮಿತಿಯಿಂದ ನವಿ ಮುಂಬಯಿ ಪೊಲೀಸ್ ಆಯುಕ್ತರು ಮತ್ತು ನವಿ ಮುಂಬಯಿ ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯ

ನವಿ ಮುಂಬಯಿ – ನವಿ ಮುಂಬಯಿನ ವಾಶಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಮನವಿಯ ಮೂಲಕ ನವಿ ಮುಂಬಯಿ ಪೊಲೀಸ್ ಆಯುಕ್ತರು ಮತ್ತು ನವಿ ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತರಲ್ಲಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಮಿತಿಯ ಡಾ. ಉದಯ್ ಧುರಿ, ಶ್ರೀಯುತರಾದ ರವೀಂದ್ರ ನಲಾವಡೆ, ಅಶೋಕ್ ಸಾವಂತ್, ಗೋವಿಂದ್ ದುಬೆ ಉಪಸ್ಥಿತರಿದ್ದರು. ಈ ಪ್ರಕರಣದ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಜಂಟಿ ಪೊಲೀಸ್ ಆಯುಕ್ತ ದೀಪಕ್ ಸಾಕೋರೆ ಅವರು ಆದೇಶ ನೀಡಿದ್ದಾರೆ.

೧. ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ (ಭಾರತೀಯ ಬಾಲರೋಗ ಅಕಾಡೆಮಿ) ವಿಭಾಗದ ವತಿಯಿಂದ ‘೯ ರಿಂದ ೧೧ ತಿಂಗಳ ಮಗುವಿನ ಪೂರಕ ಆಹಾರ ಮಾರ್ಗದರ್ಶಿ’ ಎಂಬ ಅಧಿಕೃತ ಬಣ್ಣದ ಮಾಹಿತಿ ಭಿತ್ತಿಪತ್ರವನ್ನು ಮಹಾನಗರಾಡಳಿತದ ಆಸ್ಪತ್ರೆಯಲ್ಲಿ ಹಾಕಲಾಗಿತ್ತು. ಈ ಭಿತ್ತಿಪತ್ರದಲ್ಲಿ ಎಳೆಯ ಮಕ್ಕಳಿಗೆ ನೀಡುವ ಆಹಾರದಲ್ಲಿ ‘ಗೋಮಾಂಸ’ವನ್ನು ಸೇರಿಸುವಂತೆ ಸ್ಪಷ್ಟವಾಗಿ ಉಲ್ಲೇಖಿಸಿ ಶಿಫಾರಸು ಮಾಡಲಾಗಿತ್ತು. ಆ ನಿಟ್ಟಿನಲ್ಲಿ ನಾವು ಪ್ರಮುಖ ಅಂಶಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.
೨. ಮಹಾರಾಷ್ಟ್ರದಲ್ಲಿ ‘ಮಹಾರಾಷ್ಟ್ರ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಕಾಯ್ದೆ, ೧೯೯೫’ ರ ಅಡಿಯಲ್ಲಿ ಗೋವಂಶ (ಹಸು, ಎತ್ತು, ಹೋರಿ) ಹತ್ಯೆ, ಅವುಗಳ ಸಾಗಾಣಿಕೆ, ಮಾರಾಟ ಮತ್ತು ಗೋಮಾಂಸ ಹೊಂದುವುದನ್ನು ನಿಷೇಧಿಸಲಾಗಿದೆ. ಹಾಗಿರುವಾಗ, ಒಂದು ಸರಕಾರಿ ಆರೋಗ್ಯ ಕೇಂದ್ರದಲ್ಲಿ ನಾಗರಿಕರಿಗೆ ಇಂತಹ ಕಾನೂನುಬಾಹಿರ ಕೆಲಸ ಮಾಡುವಂತೆ ಬಹಿರಂಗವಾಗಿ ಕರೆ ನೀಡುವುದು ಕಾನೂನಿನ ನೇರ ಉಲ್ಲಂಘನೆ ಮತ್ತು ಆಡಳಿತ ವ್ಯವಸ್ಥೆಗೆ ಹಾಕಿದ ಬಹಿರಂಗ ಸವಾಲಾಗಿದೆ.
೩. ಮಹಾರಾಷ್ಟ್ರ ಸರಕಾರವು ಗೋಮಾತೆಗೆ ‘ರಾಜ್ಯಮಾತೆ’ ಎಂದು ಅಧಿಕೃತ ಸ್ಥಾನಮಾನ ನೀಡಿದೆ. ಇಂತಹ ಅತ್ಯುನ್ನತ ಸಾಂಸ್ಕೃತಿಕ ಮತ್ತು ಕಾನೂನು ರಕ್ಷಣೆ ಇರುವ ರಾಜ್ಯದಲ್ಲಿ, ಮಹಾನಗರ ಪಾಲಿಕೆಯ ಆರೋಗ್ಯ ಕೇಂದ್ರದಲ್ಲೇ ನೇರವಾಗಿ ‘ರಾಜ್ಯಮಾತೆ’ಯ ಮಾಂಸಾಹಾರವನ್ನು ಸೇವಿಸುವಂತೆ ಬಹಿರಂಗವಾಗಿ ಕರೆ ನೀಡುವುದು ರಾಜ್ಯದ ನೀತಿಗಳು, ಕಾಯ್ದೆಗಳು ಮತ್ತು ಸಾರ್ವಭೌಮ ಸರಕಾರಕ್ಕೆ ಮಾಡಿದ ನೇರ ಅಪಮಾನವಾಗಿದೆ.
೪. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಈ ಆಕ್ಷೇಪಾರ್ಹ ಭಿತ್ತಿಪತ್ರ ಕೇವಲ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸುವುದಷ್ಟೇ ಅಲ್ಲದೆ, ಕೋಟ್ಯಂತರ ನಾಗರಿಕರ ಧಾರ್ಮಿಕ ಮತ್ತು ಭಾವನಾತ್ಮಕ ಅಸ್ಮಿತೆಯ ಮೇಲಿನ ದಾಳಿಯಾಗಿದೆ. ಹಿಂದೂ ಧರ್ಮದಲ್ಲಿ ಹಸುವಿಗೆ ಅನನ್ಯ ಧಾರ್ಮಿಕ ಮಹತ್ವವಿದ್ದು, ಗೋಹತ್ಯೆಯನ್ನು ‘ಬ್ರಹ್ಮಹತ್ಯೆಯ ಮಹಾಪಾಪ’ ಎಂದು ಪರಿಗಣಿಸಲಾಗಿದೆ. ಗೋಮಾತೆಯಲ್ಲಿ ೩೩ ಕೋಟಿ ದೇವತೆಗಳು ವಾಸಿಸುವುದರಿಂದ ಗೋಮೂತ್ರದಿಂದ ಹಿಡಿದು ಸಗಣಿಯವರೆಗೆ ಅನೇಕ ವಸ್ತುಗಳನ್ನು ಧಾರ್ಮಿಕ ಪೂಜೆಯಲ್ಲಿ ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ವಿದೇಶಿ ಶಕ್ತಿಗಳ ವಿರುದ್ಧ ನಡೆದ ೧೮೫೭ ರ ಮೊದಲ ಸ್ವಾತಂತ್ರ್ಯ ಸಂಗ್ರಾಮವು ಬಂದೂಕಿನ ಕಾರ್ಟ್ರಿಡ್ಜ್‌ಗೆ ಗೋಮಾಂಸ ಸವರಿದ ಕಾರಣದಿಂದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದ ಹಿನ್ನೆಲೆಯಲ್ಲೇ ಭುಗಿಲೆದ್ದಿತ್ತು ಎಂಬ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ.
೫. ದುರದೃಷ್ಟವಶಾತ್ ಯಾವ ಮಕ್ಕಳಿಗೆ ತಾಯಿಯ ಹಾಲು ಸಿಗುವುದಿಲ್ಲವೋ, ಅವರಿಗೆ ಗೋಮಾತೆಯೇ ಎರಡನೇ ತಾಯಿಯಾಗುತ್ತಾಳೆ. ಇಂತಹ ಹಿನ್ನೆಲೆಯಲ್ಲಿ ‘ಒಬ್ಬ ತಾಯಿ ಮತ್ತೊಬ್ಬ ತಾಯಿಯ ಮಾಂಸವನ್ನು ತಿನ್ನಬೇಕು’ ಅಥವಾ ಎಳೆಯ ಮಕ್ಕಳಿಗೆ ಅದನ್ನು ತಿನ್ನಲು ಪ್ರೇರೇಪಿಸಬೇಕು ಎನ್ನುವಂತಹ ವಿಕೃತ ಸಿದ್ಧಾಂತವನ್ನು ಸರಕಾರಿ ಆವರಣದಲ್ಲಿ ಪ್ರಚಾರ ಮಾಡುವುದು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುವ ಮತ್ತು ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗುವ ಕೆಲಸವಾಗಿದೆ.
೬. ಗೋವಂಶ ರಕ್ಷಣೆ ಎಂಬುದು ಕೇವಲ ಧಾರ್ಮಿಕ ಕರ್ತವ್ಯ ಮಾತ್ರವಲ್ಲ, ಅದು ಭಾರತೀಯ ಕೃಷಿ ವ್ಯವಸ್ಥೆ ಮತ್ತು ಗ್ರಾಮೀಣ ಆರ್ಥಿಕತೆಯ ಮುಖ್ಯ ಬೆನ್ನೆಲುಬಾಗಿದೆ. ಪ್ರಭು ಶ್ರೀರಾಮನ ಪೂರ್ವಜರಾದ ದಿಲೀಪ ರಾಜನು ಗೋಮಾತೆಯ ರಕ್ಷಣೆಗಾಗಿ ಸಿಂಹದ ಮುಂದೆ ತನ್ನ ಪ್ರಾಣವನ್ನೇ ಅರ್ಪಿಸಲು ಸಿದ್ಧನಾಗಿದ್ದನು ಎಂಬುದು ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಆದರ್ಶವಾಗಿದೆ.
೭. ಅನನ್ಯಸಾಧಾರಣ ಮಹತ್ವವಿರುವ ಹಸುವಿನ ತಳಿಯನ್ನು ನಾಶ ಮಾಡುವುದು ಕೃತಘ್ನತೆಯೇ ಸರಿ. ಇಂದು ಪಾಶ್ಚಿಮಾತ್ಯ ದೇಶಗಳು ಭಾರತೀಯ ಮೂಲದ ದೇಶಿ ಹಸುಗಳನ್ನು ‘ಕೌ ಥೆರಪಿ’ (ಗೋ ಚಿಕಿತ್ಸೆ) ಮೂಲಕ ಮಾನಸಿಕ ಶಾಂತಿ, ಒತ್ತಡ ಮುಕ್ತಿ ಮತ್ತು ದೈಹಿಕ ಆರೋಗ್ಯಕ್ಕಾಗಿ ಅತ್ಯುನ್ನತ ಆದ್ಯತೆ ನೀಡುತ್ತಿರುವಾಗ, ಸರಕಾರದ ಬೆಂಬಲದೊಂದಿಗೆ ಗೋವಂಶದ ವಿನಾಶವನ್ನು ಬೆಂಬಲಿಸುವುದು ಕೃತಘ್ನತೆಯಾಗಿದೆ. ಇಂದು ಅನೇಕ ದೇಶಗಳು ಭಾರತೀಯ ಹಸುಗಳನ್ನು ತಮ್ಮ ದೇಶಕ್ಕೆ ಕೊಂಡೊಯ್ದು ವಿಶೇಷವಾಗಿ ಸಾಕುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಗೀರ್, ಸಾಹಿವಾಲ್ ಮತ್ತು ದೇವಣಿಯಂತಹ ಅಪರೂಪದ ದೇಶಿ ಗೋವಂಶಗಳ ಸಂಖ್ಯೆ ಆತಂಕಕಾರಿಯಾಗಿ ಕುಸಿಯುತ್ತಿದೆ. ಹೀಗಿರುವಾಗ, ಆರೋಗ್ಯ ಸಂಸ್ಥೆಯೊಂದು ಗೋಮಾಂಸ ಭಕ್ಷಣೆಗೆ ಪ್ರೋತ್ಸಾಹ ನೀಡುತ್ತಿರುವುದು ಒಂದು ದೊಡ್ಡ ಪಿತೂರಿಯಾಗಿದೆ. ಈ ಘಟನೆಯಿಂದ ಸಮಾಜದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಇದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
ಮನವಿಯಲ್ಲಿ ಮಾಡಲಾದ ಬೇಡಿಕೆಗಳು!೧. ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ ಸಂಸ್ಥೆಯ ವಿರುದ್ಧ, ಹಾಗೂ ವಾಶಿ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ಈ ವಿಧ್ವಂಸಕ ಭಿತ್ತಿಪತ್ರ ಅಂಟಿಸಲು ಅನುಮತಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು. ೨. ನವಿ ಮುಂಬಯಿ ವ್ಯಾಪ್ತಿಯಲ್ಲಿರುವ ಮತ್ತು ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಿಂದ ಈ ವಿವಾದಾತ್ಮಕ ಹಾಗೂ ಆಕ್ಷೇಪಾರ್ಹ ಪತ್ರಕಗಳನ್ನು ತಕ್ಷಣವೇ ವಶಕ್ಕೆ ಪಡೆದು, ಅವುಗಳನ್ನು ನಾಶಪಡಿಸಲು ಆಡಳಿತ ಮಂಡಳಿಗೆ ಆದೇಶ ನೀಡಬೇಕು. ಆಡಳಿತ ವ್ಯವಸ್ಥೆಯು ಇದರ ವಿರುದ್ಧ ಸಮಯಕ್ಕೆ ಸರಿಯಾಗಿ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತೀವ್ರ ಜನ ಆಂದೋಲನ ನಡೆಸಲಾಗುವುದು, ಇದರ ಸಂಪೂರ್ಣ ಜವಾಬ್ದಾರಿ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂಬುದು ಗಮನದಲ್ಲಿಡಬೇಕು. |
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ