ಛತ್ರಪತಿ ಶಿವಾಜಿ ಮಹಾರಾಜರು ನಡೆಸಿದ ಮತಾಂತರಗೊಂಡವರ ಶುದ್ಧೀಕರಣಕ್ಕೆ ೩೫0 ವರ್ಷಗಳು ಪೂರ್ಣ!
ಹಿಂದೂ ಜನಜಾಗೃತಿ ಸಮಿತಿಯಿಂದ ಎಲ್ಲಾ ಹಿಂದೂ ಸಂಘಟನೆಗಳಿಗೆ ಕರೆ
(ಘರ್ ವಾಪ್ಸಿ ಎಂದರೆ ಹಿಂದೂ ಧರ್ಮಕ್ಕೆ ಮರುಪ್ರವೇಶ)

ಮುಂಬಯಿ – ಹಿಂದೂ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ಯೋಧರಷ್ಟೇ ಆಗಿರಲಿಲ್ಲ, ಅವರು ಒಬ್ಬ ಮಹಾನ್ ಧರ್ಮರಕ್ಷಕ ಮತ್ತು ದ್ರಷ್ಟಾ ಯುಗಪುರುಷರಾಗಿದ್ದರು. ೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು. ಈ ಅಭೂತಪೂರ್ವ ಮತ್ತು ಐತಿಹಾಸಿಕ ಘಟನೆಗೆ ಜೂನ್ ೧೯ ರಂದು ೩೫0 ವರ್ಷಗಳು ತುಂಬುತ್ತಿವೆ. ಈ ಐತಿಹಾಸಿಕ ತ್ರೀಶತಮಾನೋತ್ಸವ ಸುವರ್ಣ ಮಹೋತ್ಸವದ ಅಂಗವಾಗಿ ಈ ದಿನವನ್ನು ದೇಶಾದ್ಯಂತ ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಎಲ್ಲಾ ಹಿಂದೂ ಸಂಘಟನೆಗಳಿಗೆ ಕರೆ ನೀಡಿದೆ.
🚩 350 Years of a Historic Milestone! 🚩
On 19 June 1676, Chhatrapati Shivaji Maharaj welcomed Swarajya’s first Commander-in-chief back into Hindu Dharma through 'Shuddhikaran' after his forced conversion by the Mughals.
Marking the 350th anniversary of this historic event,… pic.twitter.com/095bq0tTLJ
— Sanatan Prabhat (@SanatanPrabhat) June 18, 2026
ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ ಅವರು ಈ ಕುರಿತು ಮಾತನಾಡಿ,
“ಇಂದು ೩೫0 ವರ್ಷಗಳ ನಂತರವೂ ಈ ಇತಿಹಾಸವು ನಮಗೆ ಅತ್ಯಂತ ಪ್ರಮುಖ ಹಾಗೂ ಮಾರ್ಗದರ್ಶಿಯಾಗಿದೆ. ವಿವಿಧ ಆಮಿಷಗಳು, ಒತ್ತಡ ಅಥವಾ ಕಿರುಕುಳಕ್ಕೆ ಬಲಿಯಾಗಿ ಲಕ್ಷಾಂತರ ಹಿಂದೂ ಬಂಧು-ಭಗಿನಿಯರು ಮತಾಂತರಗೊಂಡಿದ್ದಾರೆ. ಇಂದಿನ ಕಾಲದಲ್ಲಿ ‘ಲವ್ ಜಿಹಾದ್’ ನಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಿ ಅನೇಕ ಹಿಂದೂ ಯುವತಿಯರನ್ನು ಪರಧರ್ಮಕ್ಕೆ ಎಳೆಯಲಾಗುತ್ತಿದೆ. ‘ಅವಳು ಹೋದರೆ ಹೋಗಲಿ, ಇನ್ಮುಂದೆ ಅವಳಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂಬ ಮನಸ್ಥಿತಿಯನ್ನು ಹಿಂದೂ ಸಮಾಜ ತ್ಯಜಿಸಬೇಕಾಗಿದೆ. ಪ್ರೀತಿಯ ಸುಳ್ಳು ಜಾಲದಲ್ಲಿ ಸಿಲುಕಿ ವಂಚನೆಗೊಳಗಾದ ಹಿಂದೂ ಹೆಣ್ಣುಮಕ್ಕಳಿಗೆ ಮತ್ತು ಸಹೋದರಿಯರಿಗೆ ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮ ಹಾಗೂ ಸಮಾಜದಲ್ಲಿ ಸುರಕ್ಷಿತ ಸ್ಥಾನವನ್ನು ನೀಡಲು ಈ ಐತಿಹಾಸಿಕ ದಿನವನ್ನು ಸ್ಮರಿಸುವುದು ಅತ್ಯಂತ ಅವಶ್ಯಕವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಇದೇ ಆದರ್ಶವನ್ನು ಕಣ್ಣಮುಂದೆ ಇಟ್ಟುಕೊಂಡು ಇಡೀ ಹಿಂದೂ ಸಮಾಜ, ಸಂತರು ಮತ್ತು ಸಂಘಟನೆಗಳು ಮುಂದೆ ಬರಬೇಕಾದ ಅಗತ್ಯವಿದೆ. ಯಾವ ಬಂಧುಗಳು ಮತ್ತು ವಿಶೇಷವಾಗಿ ಸಹೋದರಿಯರು ಮೂಲ ಪ್ರವಾಹಕ್ಕೆ (ಹಿಂದೂ ಧರ್ಮಕ್ಕೆ) ಮರಳಿ ಬರಲು ಬಯಸುತ್ತಾರೋ, ಅವರಿಗಾಗಿ ನಾವು ನಮ್ಮ ಬಾಗಿಲುಗಳನ್ನು ಮತ್ತು ಮನಸ್ಸುಗಳನ್ನು ಮುಕ್ತವಾಗಿಡಬೇಕು” ಎಂದು ಶಿಂದೆ ಅವರು ಕರೆ ನೀಡಿದರು.
ನೇತಾಜಿ ಪಾಲ್ಕರ್ ಅವರ ಇತಿಹಾಸ
ಸ್ವರಾಜ್ಯದ ಮೊದಲ ಸೇನಾಪತಿಯಾಗಿದ್ದ ನೇತಾಜಿ ಪಾಲ್ಕರ್ ಅವರನ್ನು ಮೊಘಲರು ಕಪಟತನದಿಂದ ಸೆರೆಹಿಡಿದಿದ್ದರು. ಅವರಿಗೆ ಅತ್ಯಂತ ಕಠಿಣ ಹಿಂಸೆ ನೀಡಿ, ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ, ಅವರಿಗೆ ‘ಮಹಮ್ಮದ್ ಕುಲಿ ಖಾನ್’ ಎಂದು ಹೆಸರಿಡಲಾಗಿತ್ತು. ಹಲವು ವರ್ಷಗಳ ಕಾಲ ಪರಧರ್ಮ ಮತ್ತು ಪರಕೀಯರ ಭೂಮಿಯಲ್ಲಿದ್ದರೂ ನೇತಾಜಿ ಅವರ ಮನಸ್ಸು ಮಾತ್ರ ಸ್ವರಾಜ್ಯಕ್ಕಾಗಿ ಹಂಬಲಿಸುತ್ತಿತ್ತು. ಯಾವಾಗ ಅವರು ಮೊಘಲರ ವಶದಿಂದ ತಪ್ಪಿಸಿಕೊಂಡು ಮರಳಿ ರಾಯಗಡದಲ್ಲಿದ್ದ ಛತ್ರಪತಿ ಶಿವಾಜಿ ಮಹಾರಾಜರ ಚರಣಗಳಿಗೆ ಬಂದರೋ, ಆಗ ಮಹಾರಾಜರು ಧರ್ಮಶಾಸ್ತ್ರದ ಪ್ರಕಾರ ವಿಧಿ-ವಿಧಾನಗಳೊಂದಿಗೆ ಅವರ ‘ಶುದ್ಧೀಕರಣ’ ಮಾಡಿದರು. ‘ಜೇಧೆ ಶಕಾವಳಿ’ಯ ಪ್ರಕಾರ ಶಕೆ ೧೫೯೮, ಆಷಾಢ ವದ್ಯ ಚತುರ್ಥಿ (೧೯ ಜೂನ್ ೧೬೭೬) ರಂದು ನೇತಾಜಿ ಪಾಲ್ಕರ್ ಅವರನ್ನು ಮತ್ತೊಮ್ಮೆ ಹಿಂದೂ ಧರ್ಮಕ್ಕೆ ಸ್ವೀಕರಿಸಲಾಯಿತು.
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati