ಅವಕಾಶವಾದಿ ಕಾಂಗ್ರೆಸ್ !

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಂದಿನ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಸಂಪೂರ್ಣ ಸಮಾಜವನ್ನು ಒತ್ತೆ ಇಟ್ಟುಕೊಳ್ಳುವ ಕಾಂಗ್ರೆಸ್ಸಿಗರ ಉದ್ಯೋಗವು ನಿರಂತರ ನಡೆಯುತ್ತಿದೆ. ಸದ್ಯ ಕಾಂಗ್ರೆಸ್ಸಿಗೆ ಅನಿರೀಕ್ಷಿತ ರೈತಪ್ರೇಮವು ಜಾಗೃತವಾಗಿದೆ. ಕಾಂಗ್ರೆಸ್‌ನವರು ದೆಹಲಿಯ ರೈತರ ಆಂದೋಲನವನ್ನು ಬಂಡವಾಳವನ್ನಾಗಿಸುತ್ತಿರುವುದು ಕಾಣಿಸುತ್ತಿದೆ. ಪ್ರತಿದಿನ ಈ ಆಂದೋಲನದ ಹೊಸ ಹೊಸ ರೂಪ ಮುಂದೆ ಬರುತ್ತಿದೆ. ಡಿಸೆಂಬರ್ ೨೪ ರಂದು ಕಾಂಗ್ರೆಸ್ಸಿನ ನೇತಾರರು ರಾಷ್ಟ್ರಪತಿ ರಾಮನಾಥ ಕೋವಿಂದರನ್ನು ಭೇಟಿಯಾಗಲು ರಾಷ್ಟ್ರಪತಿ ಭವನಕ್ಕೆ ಹೋದರು. ಪೊಲೀಸರು ಕೇವಲ ರಾಹುಲ ಗಾಂಧಿ, ಗುಲಾಮ ನಬೀ ಆಝಾದ ಮತ್ತು ಅಧೀರ ರಂಜನ ಚೌಧರಿ ಈ ಮೂರು ನಾಯಕರಿಗೆ ಮಾತ್ರ ರಾಷ್ಟ್ರಪತಿಯವರನ್ನು ಭೇಟಿಯಾಗಲು ಅನುಮತಿ ನೀಡಿದರು. ಈ ಮೂವರು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಅವರಿಗೆ ಕೇಂದ್ರ ಸರಕಾರದ ರೈತ ಕಾನೂನಿನ ವಿರುದ್ಧ ಕೆಲವು ಕೋಟಿ ಹಸ್ತಾಕ್ಷರವಿರುವ ಮನವಿಪತ್ರವನ್ನು ನೀಡಿದರು. ಇತರ ಕಾಂಗ್ರೆಸ್ಸಿಗರಿಗೆ ಭೇಟಿಯನ್ನು ನಿರಾಕರಿಸಲಾಯಿತು. ಅದರಲ್ಲಿ ಕಾಂಗ್ರೆಸ್ಸಿನ ನಾಯಕಿ ಪ್ರಿಯಾಂಕಾ ವಾದ್ರಾ ಇವರು ರೈತರ ಆಂದೋಲನದಲ್ಲಿ ಭಾಗವಹಿಸಲು ತೆರಳುವಾಗ ಅವರನ್ನು ಪೊಲೀಸರು ವಶಪಡಿಸಿಕೊಂಡರು. ಕಾಂಗ್ರೆಸ್ಸಿಗರು ಮೂಲತಃ ಕೇವಲ ತಮ್ಮ ಪ್ರಸಿದ್ಧಿಗಾಗಿ ಇಂತಹ ಆಂದೋಲನಗಳ ನೇತೃತ್ವವನ್ನು ವಹಿಸುತ್ತಾರೆ. ಪ್ರಿಯಾಂಕಾ ವಾದ್ರಾ ಇವರನ್ನು ಪೊಲೀಸರು ವಶಪಡಿಸಿಕೊಂಡಿರುವುದರಿಂದ ಕಾಂಗ್ರೆಸ್ಸಿಗೆ ಅಗ್ಗದ ಪ್ರಸಿದ್ಧಿ ಸಿಕ್ಕಿತು. ಇನ್ನೊಂದೆಡೆ ಪ್ರಿಯಾಂಕಾ ವಾದ್ರಾ ಇವರ ಸಹೋದರ ಅಂದರೆ ರಾಹುಲ ಗಾಂಧಿಯವರು ರಾಷ್ಟ್ರಪತಿಯವರನ್ನು ಭೇಟಿಯಾಗಿ ಅವರಿಗೆ ಮನವಿಯನ್ನು ನೀಡಿದರು, ಅದರಿಂದ ‘ನಾವೇ ರೈತರ ನಿಜವಾದ ಬೆಂಬಲಿಗರು, ಎಂದು ತೋರಿಸಲು ಸಾಧ್ಯವಾಯಿತು. ಆದರೂ ಇಂತಹ ಆಡಂಬರದ ಕೃತಿಯಿಂದ ಏನೂ ಸಾಧ್ಯವಾಗುವುದಿಲ್ಲ, ಎನ್ನುವ ಇತಿಹಾಸವೇ ಇದೆ. ವಾಸ್ತವದಲ್ಲಿ ಭಾರತದಂತಹ ಕೃಷಿಪ್ರಧಾನ ದೇಶದಲ್ಲಿ ರೈತರು ಹೇಗೆ ಹಿಂದುಳಿದರು ? ಎಂದು ದೇಶದಲ್ಲಿ ೬ ದಶಕಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸೇ ಉತ್ತರಿಸಬೇಕು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ರೈತರ ಕಲ್ಯಾಣವಂತೂ ಆಗಿಲ್ಲ. ತದ್ವಿರುದ್ಧ ಅವರು ದಿವಾಳಿಯಾದರು. ರೈತರ ಈ ದುರವಸ್ಥೆಗೆ ಕಾಂಗ್ರೆಸ್ಸೇ ಹೊಣೆಯಾಗಿದೆ. ಹೀಗಿರುವಾಗ ಈಗ ಅಧಿಕಾರ ಇಲ್ಲದಿರುವಾಗ ರೈತಪರ ಕಳವಳವನ್ನು ತೋರಿಸುವ ನೈತಿಕ ಅಧಿಕಾರ ಕಾಂಗ್ರೆಸ್ಸಿಗೆ ಇದೆಯೇ ? ಎಂಬುದು ನಿಜವಾದ ಪ್ರಶ್ನೆಯಾಗಿದೆ. ಯಾವುದೇ ವೈಚಾರಿಕ ವಿಷಯವನ್ನು ಮಂಡಿಸದೆ ಎಲ್ಲೆಲ್ಲಿ ಸರಕಾರವಿರೋಧಿ ಆಂದೋಲನ ನಡೆಯುತ್ತದೆಯೋ, ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡುವುದೆಂದರೆ, ಇದು ತನ್ನ ನಿಜ ಸ್ವರೂಪವನ್ನು ತೋರಿಸುವ ಹಾಗಿದೆ. ಈ ಹಿಂದೆ ಕಾಂಗ್ರೆಸ್ ಕನ್ಹಯ್ಯಾ ಕುಮಾರ ಮತ್ತು ‘ತುಕಡೆ ತುಕಡೆ ಗ್ಯಾಂಗ್‌ನ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿತ್ತು, ರೋಹಿತ ವೆಮುಲಾ ಪ್ರಕರಣದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿತ್ತು, ಶಾಹೀನಬಾಗ್‌ನ ಆಂದೋಲನದಲ್ಲಿ ಕಾಂಗ್ರೆಸ್ ಮತಾಂಧರ ಪರವಾಗಿ ನಿಂತಿತ್ತು ಹಾಗೂ ಈಗ ರೈತರ ಆಂದೋಲನಗಳನ್ನು ದಾಳವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ಸಿಗೆ ತನ್ನದೇ ಆದ ನಿಲುವು ಇಲ್ಲವೇ ? ಅಥವಾ ಕೇವಲ ಸರಕಾರವಿರೋಧಿ ಆಂದೋಲನದಲ್ಲಿ ಕೈಹಾಕಿ ಕಾಂಗ್ರೆಸ್ ತನ್ನ ಮಾಸುತ್ತಿರುವ ಪರಿಚಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆಯೇ ? ಮರಣಶಯ್ಯೆಯಲ್ಲಿರುವ ಪಕ್ಷದಲ್ಲಿ ಪುನಃ ಉತ್ಸಾಹ ತುಂಬಿಸಲು ಕಾಂಗ್ರೆಸ್ಸಿಗೆ ಅವಕಾಶ ಬೇಕಾಗಿತ್ತು, ಅದು ರೈತರ ಆಂದೋಲನದ ಮೂಲಕ ಸಿದ್ಧವಾಗಿ ಸಿಕ್ಕಿತು.

ಕಾಂಗ್ರೆಸ್ಸಿನ ಪ್ರಜಾಪ್ರಭುತ್ವವಿರೋಧಿ ವೃತ್ತಿ !

ಯಾವಾಗಲೂ ಪ್ರಜಾಪ್ರಭುತ್ವದ ಡಂಗುರ ಸಾರುವ ಕಾಂಗ್ರೆಸ್ ತನ್ನ ಸ್ವಾರ್ಥವನ್ನು ಸಾಧಿಸುವಾಗ ಪ್ರಜಾಪ್ರಭುತ್ವದ ಕತ್ತನ್ನು ಹಿಸುಕುತ್ತದೆ, ಎಂಬುದು ಕೂಡ ಇತಿಹಾಸವಾಗಿದೆ. ಕೃಷಿ ಕಾನೂನನ್ನೇ ನೋಡಿದರೆ, ಈ ಕಾನೂನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಸಾರ್ವಭೌಮ ಸಂಸತ್ತಿನಲ್ಲಿ ಸಮ್ಮತವಾಗಿದೆ. ಆದರೂ ಕಾಂಗ್ರೆಸ್ ಇದನ್ನು ವಿರೋಧಿಸಿ ಒಂದು ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಅವಮಾನಿಸುತ್ತಿದೆಯಲ್ಲವೇ ? ಪ್ರಜಾಪ್ರಭುತ್ವವು ವಿರೋಧಿಪಕ್ಷಗಳಿಗೆ ಕೆಲವು ಸಂಸತ್ತಿನ ಆಯುಧಗಳನ್ನು ಕೊಟ್ಟಿದ್ದರೂ, ಅದನ್ನು ಸದ್ವಿವೇಕಬುದ್ಧಿಯ ಆಧಾರದಲ್ಲಿ ಉಪಯೋಗಿಸಬೇಕು. ಈ ಆಯುಧಗಳ ಉಪಯೋಗದಿಂದ ಪರೋಕ್ಷವಾಗಿಯೂ ಹಿಂಸೆಯಾಗಬಾರದು ಅಥವಾ ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ಉದ್ಭವಿಸಬಾರದು. ಈಗ ಕಾಂಗ್ರೆಸ್ ರೈತರ ಆಂದೋಲನದಲ್ಲಿ ತನ್ನ ಸಹಭಾಗವನ್ನು ಸಂಸತ್ತಿನ ಆಯುಧವೆಂದು ಸಂಬೋಧಿಸುತ್ತಿದ್ದರೆ ಅದು ಕೂಡ ಪರೋಕ್ಷವಾಗಿ ಪ್ರಜಾಪ್ರಭುತ್ವದ ಅವಮಾನವಲ್ಲವೇ ? ಏಕೆಂದರೆ ಈ ಆಂದೋಲನದ ಮರೆಯಲ್ಲಿ ದೇಶದ ಪ್ರಧಾನಮಂತ್ರಿಯವರಿಗೆ ವೈಯಕ್ತಿಕವಾಗಿ ಎಷ್ಟು ಅವಮಾನ ಮಾಡಬಹುದೋ, ಅಷ್ಟು ಅವಮಾನ ಮಾಡಲಾಯಿತು. ಇದನ್ನು ನಿಲ್ಲಿಸಿ ಕಾಂಗ್ರೆಸ್ ಪ್ರಜಾಪ್ರಭುತ್ವದ ಅವಮಾನವನ್ನು ತಡೆಗಟ್ಟಬೇಕಾಗಿತ್ತು. ಅದು ಹಾಗೆ ಮಾಡದೆ ತದ್ವಿರುದ್ಧ ಅದಕ್ಕೆ ಮೂಕಸಮ್ಮತಿಯನ್ನು ನೀಡಿತು. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೃತ್ಯವಲ್ಲವೇ ? ಪ್ರಧಾನಮಂತ್ರಿಯವರ ವಿವರಣೆಯ ನಂತರ ಕಾಂಗ್ರೆಸ್ಸಿನ ನಿಜಸ್ವರೂಪವು ಪುನಃ ಬೆಳಕಿಗೆ ಬಂದಿತು. ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಮಂತ್ರಿಗಳು ‘ಕೃಷಿ ಕಾನೂನು ಒಂದೇ ರಾತ್ರಿಯೊಳಗೆ ಸಿದ್ಧವಾಗಿಲ್ಲ. ಅದರ ಬಗ್ಗೆ ಇಂದಿನವರೆಗಿನ ಅನೇಕ ಸರಕಾರಗಳು ಸಂಸತ್ತಿನಲ್ಲಿ ಚರ್ಚೆ ಮಾಡಿವೆ. ನಮ್ಮ ಸರಕಾರದ ಆಡಳಿತಾವಧಿಯಲ್ಲಿ ಈ ಕಾನೂನು ಸಂಸತ್ತಿನಲ್ಲಿ ಸಮ್ಮತವಾಗಿ ಅನೇಕ ತಿಂಗಳು ಕಳೆದಿವೆ. ಆದರೆ ಈಗ ಅದಕ್ಕೆ ಏಕೆ ವಿರೋಧವಾಗುತ್ತಿದೆ ? ಯಾವ ಯಾವ ಪಕ್ಷಗಳು ಈ ಕಾನೂನನ್ನು ವಿರೋಧಿಸುತ್ತವೆಯೋ, ಆ ಪಕ್ಷಗಳೇ ಈ ಹಿಂದೆ ಅವರ ಚುನಾವಣೆಯ ಘೋಷಣಾಪತ್ರದಲ್ಲಿ ಈ ಕಾನೂನನ್ನು ಸಮ್ಮತಗೊಳಿಸುವ ಆಶ್ವಾಸನೆಯನ್ನು ನೀಡಿವೆ, ಇಂತಹ ಅನೇಕ ವಿಷಯಗಳನ್ನು ಮುಂದಿಟ್ಟು ವಿರೋಧಿಗಳಿಗೆ ಮುಖಭಂಗ ಮಾಡಿದರು. ಆದರೂ ಕಾಂಗ್ರೆಸ್ ಸಹಿತ ಯಾವುದೇ ವಿರೋಧ ಪಕ್ಷವೂ ಇಂದಿನವರೆಗೆ ಇವುಗಳಲ್ಲಿ ಯಾವುದೇ ವಿಷಯವನ್ನು ಅಭ್ಯಾಸಪೂರ್ವಕ ಖಂಡನೆ ಮಾಡಿಲ್ಲ. ಇದರಿಂದ ಎಲ್ಲವೂ ಅರ್ಥವಾಗುತ್ತದೆ. ಸರಕಾರದ ವಿವರಣೆಯ ಬಗ್ಗೆ ಏನೂ ವಿಶ್ಲೇಷಣೆ ಮಾಡದೆ ಕೇವಲ ‘ಈ ಕಾನೂನು ರೈತವಿರೋಧಿಯಾಗಿದೆ, ಎನ್ನುವ ಒಂದೇ ವಾಕ್ಯವನ್ನು ಹಿಡಿದು ಎಳೆಯುತ್ತಾ ಇರುವುದರಿಂದ ಸತ್ಯ ಎಷ್ಟು ಕಾಲ ಅಡಗಿಸಿಡಬಹುದು ? ಎಂಬುದನ್ನು ಕೂಡ ಕಾಂಗ್ರೆಸ್ ವಿಚಾರ ಮಾಡಬೇಕು. ಈ ವಿಷಯಗಳನ್ನು ಕಂಕುಳಲ್ಲಿಟ್ಟುಕೊಳ್ಳುವ ಕಾಂಗ್ರೆಸ್ಸಿನ ಭೂಮಿಕೆಯ ಅರ್ಥ ಹೀಗೂ ಆಗುತ್ತದೆ, ಅಂದರೆ ಪ್ರಧಾನಮಂತ್ರಿಯವರು ಮಂಡಿಸಿದ ಎಲ್ಲ ವಿಷಯಗಳು ಯೋಗ್ಯವಾಗಿವೆ ಹಾಗೂ ಅದನ್ನು ಬಹಿರಂಗಪಡಿಸುವುದು ಕಾಂಗ್ರೆಸ್ಸಿಗೆ ಬೇಡವಾಗಿದೆ. ಅಂತೂ ಮಧ್ಯರಾತ್ರಿಯಲ್ಲಿ ಶಹಾಬಾನೋ ಪ್ರಕರಣದಂತಹ ಕಾನೂನು ಜ್ಯಾರಿ ಮಾಡುವ ಕಾಂಗ್ರೆಸ್ಸಿಗರಿಂದ ಸ್ವಚ್ಛ ಸೂರ್ಯಪ್ರಕಾಶದಲ್ಲಿ ಸಮ್ಮತಿಸಿದ ಕೃಷಿ ಕಾನೂನಿಗೆ ಸಮರ್ಥನೆ ಹೇಗೆ ಇರಲು ಸಾಧ್ಯ ?