ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!

ವಿಮಾನ ನಿಲ್ದಾಣದ ಆವರಣದಲ್ಲಿ ಮಾತಮ್‌ಗೆ ಅನುಮತಿ ನೀಡಿದ್ದಕ್ಕಾಗಿ ಹಲವರಿಂದ ಟೀಕೆ!

(ಮಾತಮ್ ಎಂದರೆ: ಮರಣ, ದುರಂತ ಘಟನೆ ಅಥವಾ ಬಲಿದಾನದ ನೆನಪಿಗಾಗಿ ಎದೆಯ ಮೇಲೆ ಕೈಯಿಂದ ಹೊಡೆದುಕೊಂಡು ಸಾರ್ವಜನಿಕವಾಗಿ ಶೋಕ ವ್ಯಕ್ತಪಡಿಸುವ ಮುಸ್ಲಿಮರ ಪದ್ಧತಿ.)

​ಮುಂಬಯಿ – ವಿಮಾನ ನಿಲ್ದಾಣವೊಂದರ ಆವರಣದಲ್ಲಿ ಶಿಯಾ ಸಮುದಾಯದ ಕೆಲವು ಸದಸ್ಯರು ಮಾತಮ್ ಆಚರಿಸಿರುವುದು ಒಂದು ವಿಡಿಯೋ ಮೂಲಕ ಬೆಳಕಿಗೆ ಬಂದಿದೆ. ಈ ವಿಡಿಯೋ ನಿಖರವಾಗಿ ಯಾವ ವಿಮಾನ ನಿಲ್ದಾಣದ್ದು?, ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಒಂದು ವೇಳೆ ಇದು ಮುಂಬಯಿ ವಿಮಾನ ನಿಲ್ದಾಣದ ಆವರಣದ್ದೇ ಆಗಿದ್ದರೆ, ಈ ಘಟನೆ ಯಾವಾಗ ನಡೆಯಿತು? ಮತ್ತು ಇದಕ್ಕೆ ಅಧಿಕೃತ ಅನುಮತಿ ಪಡೆಯಲಾಗಿತ್ತೇ? ಎಂಬ ಬಗ್ಗೆ ವಿಮಾನ ನಿಲ್ದಾಣದ ಆಡಳಿತ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟೀಕರಣ ಅಥವಾ ಪ್ರಕಟಣೆ ಮಾಡಿಲ್ಲ.

​೧. ಮಾತಮ್ ಎನ್ನುವುದು ಮುಖ್ಯವಾಗಿ ಶಿಯಾ ಮುಸ್ಲಿಂ ಸಮುದಾಯದಲ್ಲಿ ಆಚರಿಸಲಾಗುವ, ಶೋಕ ವ್ಯಕ್ತಪಡಿಸುವ ಒಂದು ಧಾರ್ಮಿಕ ಸಂಪ್ರದಾಯವಾಗಿದೆ. ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಸಹಚರರು ೭ನೇ ಶತಮಾನದ ಕರ್ಬಲಾ ಯುದ್ಧದಲ್ಲಿ ನೀಡಿದ ಬಲಿದಾನದ ಸ್ಮರಣಾರ್ಥ ಈ ರೀತಿಯಾಗಿ ದುಃಖ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಲಾಗುತ್ತದೆ.

​೨. ವಿಮಾನ ನಿಲ್ದಾಣದ ಆವರಣದಲ್ಲಿ ಇಂತಹ ಆಚರಣೆಗಳಿಗೆ ಅನುಮತಿ ಹೇಗೆ ನೀಡಲಾಯಿತು? ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ ಸಾರ್ವಜನಿಕರು ಇನ್ನಷ್ಟು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.