ಅರ್ಪಣೆದಾರರೇ, ಗುರುಪೂರ್ಣಿಮೆಯ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ ಗುರುತತ್ತ್ವದ ಲಾಭವನ್ನು ಪಡೆದುಕೊಳ್ಳಿ !

‘ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಶಿಷ್ಯನಿಗೆ ಅವಿಸ್ಮರಣೀಯವಿರುತ್ತದೆ. ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ  ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಹಾಗಾಗಿ ಈ ನಿಮಿತ್ತ, ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರಪಟ್ಟು ಹೆಚ್ಚಾಗುತ್ತದೆ.

ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ !

“೫.೭.೨೦೨೦ ರಂದು ವ್ಯಾಸ ಪೂರ್ಣಿಮೆ, ಅಂದರೆ ಗುರು ಪೂರ್ಣಿಮೆ ಇದೆ. ಪ್ರತಿವರ್ಷ ಅನೇಕ ಜನರು ಒಟ್ಟಾಗಿ ಅವರವರ ಸಂಪ್ರದಾಯಕ್ಕನುಸಾರ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸುತ್ತಾರೆ;  ಆದರೆ ಈ ವರ್ಷ ಕೊರೋನಾದ ವಿಷಾಣು ಹರಡಿರುವುದರಿಂದ ನಾವು ಒಟ್ಟಾಗಿ ಗುರುಪೂರ್ಣಿಮೆಯನ್ನು  ಆಚರಿಸಲು ಸಾಧ್ಯವಿಲ್ಲ.

ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮ್‌ಗೆ ಮತಾಂತರ

ಪಾಕಿಸ್ತಾನದ ಸಿಂಧ ಪ್ರಾಂತ್ರದ ಜಕೊಬಾಬಾದನ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ವಜೀರ ಹುಸೈನ್ ಹೆಸರಿನ ಮತಾಂಧನು ಅಪಹರಣ ಮಾಡಿ ಆಕೆಗೆ ಬಲವಂತವಾಗಿ ಇಸ್ಲಾಮ್‌ಗ ಮತಾಂತರಿಸಿದ, ಅದೇರೀತಿ ಆಕೆಯೊಂದಿಗೆ ನಿಕಾಹ ಮಾಡಿಕೊಂಡನು. ಜೂನ್ ೧೮ ರಂದು ಈ ಘಟನೆ ಘಟಿಸಿದೆ.

ಚೀನಾದಿಂದ ಅಪಾಯ ಹೆಚ್ಚಾಗಿದ್ದರಿಂದ  ದಕ್ಷಿಣ-ಪೂರ್ವ ಏಶಿಯಾದಲ್ಲಿ ತನ್ನ ಸೈನಿಕರನ್ನು ಕಳುಹಿಸಲಿರುವ ಅಮೇರಿಕಾ ! – ಅಮೇರಿಕಾ

ಭಾರತ ಹಾಗೂ ದಕ್ಷಿಣ-ಪೂರ್ವ ಏಶಿಯಾಗೆ ಚೀನಾದಿಂದ ದೊಡ್ಡ ಅಪಾಯವಿದೆ. ಚೀನಾ ಕಮ್ಯುನಿಸ್ಟ್ ಪಕ್ಷದ ಕಾರ್ಯಾಚರಣೆಯಿಂದ ಭಾರತ, ವಿಯೆಟ್ನಾಮ, ಇಂಡೋನೇಶಿಯಾ, ಮಲೇಷಿಯಾ, ಫಿಲಿಪಿನ್ಸ್ ಹಾಗೂ ದಕ್ಷಿಣ ಚೀನಾ ಸಮುದ್ರಕ್ಕೆ ದೊಡ್ಡ ಅಪಾಯವಿದೆ. ಮುಂಬರುವ ಸವಾಲನ್ನು ಎದುರಿಸಲು ಅಮೇರಿಕಾದ ಸೈನ್ಯ ದಕ್ಷಿಣ-ಪೂರ್ವ ಏಶಿಯಾದಲ್ಲಿ ಯೊಗ್ಯ ಸ್ಥಳದಲ್ಲಿ ನೇಮಿಸಲಾಗುವುದು

ಬಹಿಷ್ಕಾರದ ಭಯದಿಂದಾಗಿ ಭಾರತದಲ್ಲಿ ತನ್ನ ಅಂಗಡಿಯ ಎದುರು ‘ಮೇಡ್ ಇನ್ ಇಂಡಿಯಾ’ ಫಲಕ ಹಾಕುತ್ತಿರುವ ಚೀನಾದ ‘ಶಾವೋಮಿ’(Xiaomi) ಕಂಪನಿ !

ಬಹಿಷ್ಕಾರದ ಭಯದಿಂದಾಗಿ ಭಾರತದಲ್ಲಿನ ‘ಶಾವೋಮಿ’ ಈ ಸಂಚಾರವಾಣಿಯನ್ನು ನಿರ್ಮಿಸುವ ಚೀನಾದ ಕಂಪನಿಯು ದೆಹಲಿ-ಎನ್.ಸಿ.ಆರ್., ಮುಂಬಯಿ, ಪುಣೆ, ಚೆನ್ನೈ, ಪಟ್ನಾ, ಆಗ್ರಾ ಇತ್ಯಾದಿ ನಗರಗಳಲ್ಲಿಯ ತನ್ನ ಅಂಗಡಿಯ ಮುಂದೆ ‘ಮೇಡ್ ಇನ್ ಇಂಡಿಯಾ’ದ ಫಲಕವನ್ನು ಹಾಕಿದೆ. ಲಡಾಖ ಗಡಿಯಲ್ಲಿ ಚೀನಾದಿಂದ ಸತತವಾಗಿ ಆಗುತ್ತಿರುವ ಘರ್ಷಣೆಯಿಂದಾಗಿ ದೇಶಾದ್ಯಂತ ಚೀನಾ ವಿರೋಧಿ ವಾತಾವರಣ ನಿರ್ಮಾಣವಾಗಿದೆ.

ಇದೇ ಮೊದಲ ಬಾರಿ ‘ಡಿಡಿ ನ್ಯಾಶನಲ್’ ವಾಹಿನಿಯಿಂದ ಅಮರನಾಥ ಯಾತ್ರೆಯ ನೇರ ಪ್ರಸಾರ

ಇದೇ ಮೊದಲ ಬಾರಿ ‘ಡಿಡಿ ನ್ಯಾಶನಲ್’ ವಾಹಿನಿಯಲ್ಲಿ ಅಮರನಾಥ ಯಾತ್ರೆಯ ನೇರ ಪ್ರಸಾರ ಮಾಡಲಾಗುವುದು. ‘ಶ್ರೀ ಅಮರನಾಥ ಶ್ರೈನ್ ಬೋರ್ಡ್’ವು ದೂರದರ್ಶನಕ್ಕೆ ನೀಡಿದ ಕರೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಯಾತ್ರೆಯ ಬಗ್ಗೆ ಬೆಳಗ್ಗೆ ಹಾಗೂ ಸಂಜೆ ಅರ್ಧಗಂಟೆ ನೇರ ಪ್ರಸಾರ ಮಾಡಲಾಗುವುದು.

ಗಡಿವಿವಾದ ಹಾಗೂ ಪೌರತ್ವ ತಿದ್ದುಪಡಿ ಮಸೂದೆಯಿಂದ ನೇಪಾಳದ ಆಡಳಿತಾರೂಢ ಪಕ್ಷದಲ್ಲಿ ಬಿರುಕು ನಿಶ್ಚಿತ

ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಭಾರತದೊಂದಿಗಿನ ಗಡಿ ವಿವಾದದಿಂದ ಭಾರತವನ್ನು ವಿರೋಧಿಸುವ ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಓಲಿ ಶರ್ಮಾ ಇವರಿಗೆ ತಮ್ಮ ಕಮ್ಯುನಿಸ್ಟ್ ಪಕ್ಷದಿಂದಲೇ ವಿರೋಧವಾಗಲಾರಂಭಿಸಿದೆ. ಈ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಪ್ರಧಾನಮಂತ್ರಿ ಪುಷ್ಪಕಮಲ ದಹಲ ಪ್ರಚಂಡ ಇವರು ಪ್ರಧಾನಮಂತ್ರಿ ಓಲಿಯವರನ್ನು ಟೀಕಿಸುತ್ತ ಅವರು ರಾಜೀನಾಮೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಮ್ಯುನಿಸ್ಟ್ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ದೂರು ದಾಖಲು

೨೦೧೮ ರಲ್ಲಿ ಶಬರಿಮಲೆ ದೇವಸ್ಥಾನವನ್ನು ಪ್ರವೇಶ ಮಾಡಲು ಪ್ರಯತ್ನಿಸಿದ ಕಮ್ಯುನಿಸ್ಟ್ ಕಾರ್ಯಕರ್ತೆ ರೆಹಾನಾ ಫಾತಿಮಾಳು ತನ್ನ ಸಣ್ಣ ಮಗನಿಂದ ತನ್ನ ಅರೆನಗ್ನ ಚಿತ್ರವನ್ನು ತಯಾರಿಸಿ ಅದರದೊಂದು ‘ವಿಡಿಯೋ’ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಪ್ರಸಾರ ಮಾಡಿದಳು.

ಚೀನಾ ಭಾರತೀಯ ಸೈನಿಕರ ಮೇಲೆ ಜೈವಿಕ ದಾಳಿ ಮಾಡಬಹುದು ! – ಗುಪ್ತಚರ ಇಲಾಖೆಯಿಂದ ಮಾಹಿತಿ

ಚೀನಾ ಭಾರತದ ವಿರುದ್ಧ ಜೈವಿಕ ದಾಳಿ ಮಾಡಬಹುದು, ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಚೀನಾ ಭಾರತದ ಮೇಲೆ ಹಲ್ಲೆ ಮಾಡುವುದನ್ನು ತಡೆಗಟ್ಟಿ ಇತರ ಭಾರತವಿರೋಧಿ ದೇಶಗಳ ಮಾಧ್ಯಮದಿಂದ ಅಥವಾ ಭಯೋತ್ಪಾದಕರ ಮಾಧ್ಯಮದಿಂದ ಜೈವಿಕ ಆಕ್ರಮಣ ಮಾಡಬಹುದು.

ಸೊಪೊರದಲ್ಲಿ ೨ ಭಯೋತ್ಪಾದಕರ ಹತ್ಯೆ

ಇಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಯವರು ೨ ಭಯೋತ್ಪಾದಕರ ಹತ್ಯೆ ಮಾಡಿದ್ದಾರೆ. ಇಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿಯು ಸಿಕ್ಕಿದಾಕ್ಷಣ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದಾಗ ಈ ಚಕಮಕಿ ಆರಂಭವಾಯಿತು.