ಪಕ್ಷದ ಕಾರ್ಯಾಧ್ಯಕ್ಷ ಪ್ರಚಂಡ ಇವರಿಂದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿಯವರ ರಾಜೀನಾಮೆಗೆ ಒತ್ತಾಯ
ಈಗ ನೇಪಾಳಿ ಹಿಂದೂಗಳು ಸಂಘಟಿತರಾಗಿ ಚೀನಾಬೆಂಬಲಿತ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಹಾಗೂ ಭಾರತವು ಅದಕ್ಕೆ ಬೆಂಬಲಿಸಬೇಕು !
ಕಾಠಮಾಂಡು (ನೇಪಾಳ) – ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಭಾರತದೊಂದಿಗಿನ ಗಡಿ ವಿವಾದದಿಂದ ಭಾರತವನ್ನು ವಿರೋಧಿಸುವ ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಓಲಿ ಶರ್ಮಾ ಇವರಿಗೆ ತಮ್ಮ ಕಮ್ಯುನಿಸ್ಟ್ ಪಕ್ಷದಿಂದಲೇ ವಿರೋಧವಾಗಲಾರಂಭಿಸಿದೆ. ಈ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಪ್ರಧಾನಮಂತ್ರಿ ಪುಷ್ಪಕಮಲ ದಹಲ ಪ್ರಚಂಡ ಇವರು ಪ್ರಧಾನಮಂತ್ರಿ ಓಲಿಯವರನ್ನು ಟೀಕಿಸುತ್ತ ಅವರು ರಾಜೀನಾಮೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಓಲಿಯವರು ರಾಜೀನಾಮೆ ನೀಡದಿದ್ದಲ್ಲಿ ಪಕ್ಷದಲ್ಲಿ ಬಿರುಕು ಉಂಟುಮಾಡುವ ಎಚ್ಚರಿಕೆಯನ್ನು ಪ್ರಚಂಡರವರು ನೀಡಿದ್ದಾರೆ. ಪ್ರಧಾನಮಂತ್ರಿ ಕೆ.ಪಿ. ಓಲಿ ಶರ್ಮಾ ಅವರು ರಾಜೀನಾಮೆಯನ್ನು ನೀಡಲು ನಿರಾಕರಿಸಿದ್ದಾರೆ. ಇನ್ನೊಂದು ಕಡೆ ಪ್ರಚಂಡ ಇವರಿಗೆ ಪಕ್ಷದಿಂದ ಬೃಹತ್ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ. ಪಕ್ಷದ ಅನೇಕ ಶಾಸಕರು ಓಲಿಯವರ ವಿರುದ್ಧ ಬಹಿರಂಗವಾದಿ ಅಸಮಾಧಾನ ವ್ಯಕ್ತಮಾಡಿದ್ದಾರೆ. ಇದರೊಂದಿಗೆ ಕೊರೋನಾ ಸಂಕಟದಿಂದಲೂ ಸರಕಾರದ ವಿರುದ್ಧ ಜನರಲ್ಲಿ ಅಸಮಧಾನ ಕಾಣಿಸುತ್ತಿದೆ.
೧. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿಯ ಸಭೆಯಲ್ಲಿ ಪ್ರಚಂಡರವರು, ‘ಸರಕಾರ ಜನರ ಅಪೇಕ್ಷೆಯನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಸಮಜವಾದವನ್ನು ಸಾಧಿಸುವ ಸ್ವಂತದ ಧ್ಯೇಯ ಸಾಕಾರಗೊಳಿಸಲು ಸರಕಾರ ವಿಫಲವಾದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಣ್ಣಬೇಕಾಗುತ್ತದೆ. ಸರಕಾರ ಹಾಗೂ ಪಕ್ಷ ಎರಡೂ ಕೂಡ ಸಂಕಟದಲ್ಲಿದೆ’ ಎಂದು ಹೇಳಿದರು.
೨. ಓಲಿಯವರು ಸರಕಾರವನ್ನು ಬಚಾವ ಮಾಡುತ್ತ, ‘ಸರಕಾರ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿದೆ.’ ‘ಆಡಳಿತಾರೂಢ ಪಕ್ಷದ ನಾಯಕರು ವಿರೋಧಿ ಪಕ್ಷದಂತೆ ಕೆಲಸ ಮಾಡುತ್ತಿದ್ದಾರೆ’, ಎಂದು ಆರೋಪಿಸಿದ್ದಾರೆ.