ಬಹಿಷ್ಕಾರದ ಭಯದಿಂದಾಗಿ ಭಾರತದಲ್ಲಿ ತನ್ನ ಅಂಗಡಿಯ ಎದುರು ‘ಮೇಡ್ ಇನ್ ಇಂಡಿಯಾ’ ಫಲಕ ಹಾಕುತ್ತಿರುವ ಚೀನಾದ ‘ಶಾವೋಮಿ’(Xiaomi) ಕಂಪನಿ !

  • ಇದು ಭಾರತೀಯ ಗ್ರಾಹಕರ ನೇರ ವಂಚನೆಯೇ ಆಗಿದೆ. ಅದಕ್ಕಾಗಿ ಸರಕಾರವು ಚೀನಾದ ಕಂಪನಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

  • ಇದರಿಂದ ಕಪಟಿ ಚೀನಾಗೆ ಕೇವಲ ಬಹಿಷ್ಕಾರದ ಭಾಷೆಯೇ ಅರ್ಥವಾಗುತ್ತದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ – ಬಹಿಷ್ಕಾರದ ಭಯದಿಂದಾಗಿ ಭಾರತದಲ್ಲಿನ ‘ಶಾವೋಮಿ’(Xiaomi) ಈ ಸಂಚಾರವಾಣಿಯನ್ನು ನಿರ್ಮಿಸುವ ಚೀನಾದ ಕಂಪನಿಯು ದೆಹಲಿ-ಎನ್.ಸಿ.ಆರ್., ಮುಂಬಯಿ, ಪುಣೆ, ಚೆನ್ನೈ, ಪಟ್ನಾ, ಆಗ್ರಾ ಇತ್ಯಾದಿ ನಗರಗಳಲ್ಲಿಯ ತನ್ನ ಅಂಗಡಿಯ ಮುಂದೆ ‘ಮೇಡ್ ಇನ್ ಇಂಡಿಯಾ’ದ ಫಲಕವನ್ನು ಹಾಕಿದೆ. ಲಡಾಖ ಗಡಿಯಲ್ಲಿ ಚೀನಾದಿಂದ ಸತತವಾಗಿ ಆಗುತ್ತಿರುವ ಘರ್ಷಣೆಯಿಂದಾಗಿ ದೇಶಾದ್ಯಂತ ಚೀನಾ ವಿರೋಧಿ ವಾತಾವರಣ ನಿರ್ಮಾಣವಾಗಿದೆ. ಇದರಿಂದಲೇ ಅನೇಕ ಕಂಪನಿ, ಸಂಘಟನೆ ಹಾಗೂ ವ್ಯಕ್ತಿಯು ಚೀನಾದ ಉತ್ಪಾದನೆಯ ಮೇಲೆ ಬಹಿಷ್ಕಾರ ಹಾಕಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ‘ಶಾವೋಮಿ’(Xiaomi)ಯು ಈ ಕೃತಿಯನ್ನು ಮಾಡಿದೆ. ಇಷ್ಟೇ ಅಲ್ಲದೇ ಅದು ತನ್ನ ಕಾರ್ಮಿಕರನ್ನು ‘ಶಾವೋಮಿ’ಯ ಗಣವೇಶವನ್ನೂ ಹಾಕದಂತೆ ಸೂಚಿಸಿದೆ.

‘ಆಲ್ ಇಂಡಿಯಾ ಮೊಬೈಲ್ ರಿಟೆಲರ್ಸ್ ಅಸೋಸಿಯೇಷನ್’ನಿಂದ ಚೀನಾ ಕಂಪನಿಗೆ ತನ್ನ ‘ಲೋಗೊ’ವನ್ನು ಮುಚ್ಚಿಡಲು ಸೂಚಿಸಿದೆ

‘ಆಲ್ ಇಂಡಿಯಾ ಮೊಬೈಲ್ ರಿಟೆಲರ್ಸ್ ಅಸೋಸಿಎಷನ್’ ಇದು ಭಾರತದ್ದೋ ಅಥವಾ ಚೀನಾದ್ದೋ ?

‘ಆಲ್ ಇಂಡಿಯಾ ಮೊಬೈಲ್ ರಿಟೆಲರ್ಸ್ ಅಸೋಸಿಯೇಷನ್’ವು ಸಂಚಾರವಾಣಿಯನ್ನು ಉತ್ಪಾದಿಸುವ ಶಾವೋಮಿ, ಓಪೊ, ವಿವೊ, ವನ್ ಪ್ಲಸ್, ರಿಯಲ್‌ಮಿ, ಲೆನೊವೊ, ಮೊಟೊ ಹಾಗೂ ಹುವೈ ಈ ಚೀನಾದ ಕಂಪನಿಗಳಿಗೆ ಪತ್ರವನ್ನು ಬರೆದು ಭಾರತದ ಸದ್ಯದ ಚೀನಾವಿರೋಧಿ ವಾತಾವರಣದ ಹಿನ್ನಲೆಯಲ್ಲಿ ತನ್ನ ಅಂಗಡಿಯನ್ನು ಕಾಪಾಡಲು ಕೆಲವು ತಿಂಗಳು ಅಂಗಡಿಯ ಮೇಲೆ ತನ್ನ ಮೂಲ ‘ಲೋಗೊ’ ಮುಚ್ಚಿಡಿ ಎಂದು ಸೂಚನೆ ನೀಡಿದೆ.