ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮ್‌ಗೆ ಮತಾಂತರ

  • ಬಲವಂತವಾಗಿ ವಿವಾಹ ಮಾಡಿಸಿದರು

  • ಪಾಕಿಸ್ತಾನದಂತೆ ಭಾರತದಿಂದಲೂ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಎತ್ತುವುದಿಲ್ಲ, ಎಂಬುದು ಗಮನದಲ್ಲಿಟ್ಟುಕೊಳ್ಳಿ !

ಇಸ್ಲಾಮಾಬಾದ್ – ಪಾಕಿಸ್ತಾನದ ಸಿಂಧ ಪ್ರಾಂತ್ರದ ಜಕೊಬಾಬಾದನ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ವಜೀರ ಹುಸೈನ್ ಹೆಸರಿನ ಮತಾಂಧನು ಅಪಹರಣ ಮಾಡಿ ಆಕೆಗೆ ಬಲವಂತವಾಗಿ ಇಸ್ಲಾಮ್‌ಗ ಮತಾಂತರಿಸಿದ, ಅದೇರೀತಿ ಆಕೆಯೊಂದಿಗೆ ನಿಕಾಹ ಮಾಡಿಕೊಂಡನು. ಜೂನ್ ೧೮ ರಂದು ಈ ಘಟನೆ ಘಟಿಸಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವಾಗ ಹುಸೈನ ಪೀಡಿತೆ ಹಿಂದೂ ಹುಡುಗಿಯ ಮೇಲೆ ಒತ್ತಡತಂದು ಆಕೆಯಿಂದ ಪ್ರಮಾಣಪತ್ರವನ್ನು ಬರೆಸಿಕೊಂಡನು. ಅದರಲ್ಲಿ ‘ನಾನು ೧೯ ವರ್ಷ ವಯಸ್ಸಿನವಳಾಗಿದ್ದು ನಾನು ನನ್ನ ಇಚ್ಛೆಯಂತೆ ಇಸ್ಲಾಮ್ ಅನ್ನು ಸ್ವೀಕಾರ ಮಾಡಿದ್ದೇನೆ’, ಎಂದು ಆಕೆಯಿಂದ ಬಲವಂತವಾಗಿ ಬರೆಸಿಕೊಂಡನು. ಈಗ ಅಕೆಯ ಹೆಸರು ಬಶಿರನ ಎಂದು ಇಡಲಾಗಿದೆ. ಪಾಕಿಸ್ತಾನದ ಮಾನವಹಕ್ಕುಗಳ ಆಯೋಗದ ವರದಿಗನುಸಾರ, ‘ಪಾಕಿಸ್ತಾನದಲ್ಲಿ ಪ್ರತಿವರ್ಷ ಕಡಿಮೆ ಪಕ್ಷ ೧ ಸಾವಿರ ಮುಸಲ್ಮಾನರೇತರ ಹುಡುಗಿಯರನ್ನು ಇಸ್ಲಾಮ್ ಸ್ವೀಕಾರ ಮಾಡಿಸಲಾಗುತ್ತದೆ. ಅದರಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಸಿಂಧ ಪ್ರಾಂತದ ಹಿಂದೂ ಧರ್ಮದವರಾಗಿರುತ್ತಾರೆ.’