ಚೀನಾ ಭಾರತೀಯ ಸೈನಿಕರ ಮೇಲೆ ಜೈವಿಕ ದಾಳಿ ಮಾಡಬಹುದು ! – ಗುಪ್ತಚರ ಇಲಾಖೆಯಿಂದ ಮಾಹಿತಿ

ನವ ದೆಹಲಿ – ಚೀನಾ ಭಾರತದ ವಿರುದ್ಧ ಜೈವಿಕ ದಾಳಿ ಮಾಡಬಹುದು, ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಚೀನಾ ಭಾರತದ ಮೇಲೆ ಹಲ್ಲೆ ಮಾಡುವುದನ್ನು ತಡೆಗಟ್ಟಿ ಇತರ ಭಾರತವಿರೋಧಿ ದೇಶಗಳ ಮಾಧ್ಯಮದಿಂದ ಅಥವಾ ಭಯೋತ್ಪಾದಕರ ಮಾಧ್ಯಮದಿಂದ ಜೈವಿಕ ಆಕ್ರಮಣ ಮಾಡಬಹುದು. ಕೆಲವು ದಿನಗಳ ಹಿಂದೆ ಪಾಕಿಸ್ತಾನದಿಂದ ಭಯೋತ್ಪಾದಕರಿಗಾಗಿ ಶಸ್ತ್ರವನ್ನು ಡ್ರೋನ್ ಮೂಲಕ ಸಾಗಿಸುತ್ತಿದ್ದದ್ದನ್ನು ಭಾರತೀಯ ಸೈನಿಕರು ಹಿಡಿದಿದ್ದರು. ಹೀಗೆ ಡ್ರೋನ್ ಮೂಲಕ ಜೈವಿಕ ಆಕ್ರಮಣ ಮಾಡಬಹುದು. ಇಂತಹ ಆಕ್ರಮಣದ ಬಗೆಗಿನ ಮಾಹಿತಿ ಕೂಡಲೇ ಸಿಗುವುದಿಲ್ಲ. ಓರ್ವ ಹಿರಿಯ ಸೈನಿಕಾಧಿಕಾರಿಯ ಪ್ರಕಾರ. ‘ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಚೀನಾ ಜೈವಿಕ ಆಕ್ರಮಣದಂತಹ ಕೃತಿ ಮಾಡಬಹುದು.’
೧. ರಾಸಾಯನಿಕ ಹಾಗೂ ಜೈವಿಕ ಆಕ್ರಮಣದಿಂದ ಪಾರಾಗುವ ಪದ್ದತಿಯ ಬಗ್ಗೆ ಸಂಶೋಧನೆ ಮಾಡುವ ಗ್ವಾಲ್ಹೆರನ ‘ಡಿ.ಆರ್.ಡಿ.ಒ.’ನ ಪ್ರಯೋಗಾಲಯದ ಅಧಿಕಾರಿಗಳು, ‘ಇಂತಹ ಜೈವಿಕ ಆಕ್ರಮಣದಿಂದ ಪಾರಾಗಲು ಸೈನಿಕರಲ್ಲಿ ಬೇಕಾಗುವ ವಸ್ತುಗಳು ಇವೆ. ಅದೇರೀತಿ ‘ಡಿ.ಆರ್.ಡಿ.ಓ.’ನ ಬೇರೆ ಬೇರೆ ಪ್ರಯೋಗಾಲಯದಲ್ಲಿ ವಿಶೇಷ ಉಪಕರಣಗಳು, ಉದಾ. ನ್ಯೂಕ್ಲಿಯರ್, ಕೆಮಿಕಲ್ ಹಾಗೂ ಜೈವಿಕ ಯುದ್ಧಕ್ಕಾಗಿ ಬಟ್ಟೆ; ವಿಶೇಷ ಮಾಸ್ಕ್ ಇತ್ಯಾದಿಗಳನ್ನು ನಿರ್ಮಿಸಿದ್ದೇವೆ. ಸೈನಿಕರು ಇದನ್ನು ಉಪಯೋಗಿಸುತ್ತಿದ್ದಾರೆ. ಅದರ ಬಗ್ಗೆ ಅವರಿಗೆ ಪ್ರಶಿಕ್ಷಣವನ್ನು ನೀಡಲಾಗಿದೆ’ ಎಂದು ಹೇಳಿದ್ದಾರೆ.
೨. ಆಕ್ರಮಣ ಯಾವ ವಿಷಾಣುವಿನಿಂದ ಮಾಡಲಾಗಿದೆ, ಎಂಬುದರ ಮಾಹಿತಿ ಪಡೆಯಲಾಗುತ್ತದೆ ಹಾಗೂ ಅದನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಲಾಗುತ್ತದೆ. ಅದಕ್ಕಾಗಿ ‘ಡಿ.ಆರ್.ಡಿ.ಓ.’ನಿಂದ ವಿಶೇಷ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ. ಇದರ ಉಪಯೋಗ ನ್ಯಾಶನಲ್ ಸೆಕ್ಯೂರಟಿ ಗಾರ್ಡ್’ ಹಾಗೂ ‘ಸ್ಪೆಶಲ್ ಪ್ರೊಟೆಕ್ಷನ್ ಗಾರ್ಡ್’ ಮಾಡುತ್ತಿದ್ದಾರೆ.