ಚೀನಾದಿಂದ ಅಪಾಯ ಹೆಚ್ಚಾಗಿದ್ದರಿಂದ  ದಕ್ಷಿಣ-ಪೂರ್ವ ಏಶಿಯಾದಲ್ಲಿ ತನ್ನ ಸೈನಿಕರನ್ನು ಕಳುಹಿಸಲಿರುವ ಅಮೇರಿಕಾ ! – ಅಮೇರಿಕಾ

ಇದರಿಂದಲೇ ‘ಜಗತ್ತು ಅತಿವೇಗವಾಗಿ ಮೂರನೇ ಮಹಾಯುದ್ದದತ್ತ ಸಾಗುತ್ತಿದೆ’, ಎಂಬುದೇ ಕಾಣಿಸುತ್ತದೆ !

ವಾಶಿಂಗ್ಟನ್ (ಅಮೇರಿಕಾ) – ಭಾರತ ಹಾಗೂ ದಕ್ಷಿಣ-ಪೂರ್ವ ಏಶಿಯಾಗೆ ಚೀನಾದಿಂದ ದೊಡ್ಡ ಅಪಾಯವಿದೆ. ಚೀನಾ ಕಮ್ಯುನಿಸ್ಟ್ ಪಕ್ಷದ ಕಾರ್ಯಾಚರಣೆಯಿಂದ ಭಾರತ, ವಿಯೆಟ್ನಾಮ, ಇಂಡೋನೇಶಿಯಾ, ಮಲೇಷಿಯಾ, ಫಿಲಿಪಿನ್ಸ್ ಹಾಗೂ ದಕ್ಷಿಣ ಚೀನಾ ಸಮುದ್ರಕ್ಕೆ ದೊಡ್ಡ ಅಪಾಯವಿದೆ. ಮುಂಬರುವ ಸವಾಲನ್ನು ಎದುರಿಸಲು ಅಮೇರಿಕಾದ ಸೈನ್ಯ ದಕ್ಷಿಣ-ಪೂರ್ವ ಏಶಿಯಾದಲ್ಲಿ ಯೊಗ್ಯ ಸ್ಥಳದಲ್ಲಿ ನೇಮಿಸಲಾಗುವುದು, ಎಂಬ ಮಾಹಿತಿಯನ್ನು ಅಮೇರಿಕಾದ ವಿದೇಶಾಂದ ಸಚಿವ ಮಾಯಿಕ ಪಾಂಪೊಯೋರವರು ನೀಡಿದರು.
ಪಾಂಪಿಯೋಪಿಯೋ ತಮ್ಮ ಮಾತನ್ನು ಮುಂದುವರೆಸುತ್ತ, ‘ಚೀನಾದ ಸೈನಿಕರೊಂದಿಗೆ ನಮಗೆ ಹೋರಾಡಲು ಸಾಧ್ಯವಾಗಲಿ ಆ ರೀತಿಯಲ್ಲಿ ನೇಮಿಸುವೆವು, ಇದು ನಮಗೆ ದೊಡ್ಡ ಸವಾಲಾಗಿದ್ದು ಅದನ್ನು ಎದುರಿಸಲು ಎಲ್ಲಾರೀತಿಯ ಸಿದ್ಧತೆಯು ಲಭ್ಯವಿದೆ ಎಂದು ಖಾತ್ರಿ ಪಡಿಸಿಕೊಳ್ಳುವೆವು. ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಸೂಚನೆಗನುಸಾರ ಸೈನ್ಯದ ನೇಮಕದ ವರದಿ ಪಡೆಯುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಅಮೇರಿಕಾ ತನ್ನ ಜರ್ಮನಿಯಲ್ಲಿನ ಸೈನಿಕರ ಸಂಖ್ಯೆ ಕಡಿಮೆ ಮಾಡಲಿದೆ

ಚೀನಾವನ್ನು ನಿಯಂತ್ರಿಸಲು ದಕ್ಷಿಣ-ಪೂರ್ವ ಏಶಿಯಾದಲ್ಲಿ ಸೈನಿಕರನ್ನು ಕಳುಹಿಸಲು ಅಮೇರಿಕಾವು ಯುರೋಪಿನಲ್ಲಿಯ ತನ್ನ ಸೈನ್ಯವನ್ನು ಕಡಿಮೆ ಮಾಡುವಂತೆ ನಿರ್ಧರಿಸಿದೆ. ಅಮೇರಿಕಾ ತನ್ನ ಜರ್ಮನಿಯಲ್ಲಿನ ಸೈನಿಕರ ಸಂಖ್ಯೆ ೫೨ ಸಾವಿರದಿಂದ ೨೫ ಸಾವಿರದ ತನಕ ಇಡಲಿದೆ.