ಕಮ್ಯುನಿಸ್ಟ್ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ದೂರು ದಾಖಲು

ಸ್ವಂತ ಮಗನಿಂದ ಸ್ವತಃ ಅರೆನಗ್ನವಾಗಿ ಛಾಯಾಚಿತ್ರ ತಯಾರಿಸಿ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಪ್ರಸಾರ ಮಾಡಿದಳು

ರೆಹಾನಾ ಫಾತಿಮಾ ಶಬರಿಮಲಾ ದೇವಸ್ಥಾನದಲ್ಲಿ ಪ್ರವೇಶ ಮಾಡಲು ಪ್ರಯತ್ನಿಸಿದ್ದಳು. ಆಕೆಗೆ ವಿರೋಧಿಸಿದ್ದಾಗ ದೇಶದಲ್ಲಿಯ ತಥಾಕಥಿತ ಪ್ರಗತಿ(ಅಧೋಗತಿ)ಪರರು ಕಿರುಚಾಡಿದ್ದರು. ಅದೇ ರೆಹಾನಾದ ಈಗಿನ ಕೃತಿಯಿಂದಾಗಿ ಆಕೆಯ ವಿಕೃತ ಮಾನಸಿಕತೆ ಬಹಿರಂಗವಾಯಿತು. ಅದೇ ಪ್ರಗತಿ(ಅಧೋಗತಿ)ಪರರು ಈಗ ಇದರ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ ಅಥವಾ ರೆಹಾನಾಳ ಈ ವಿಕೃತಿ ಅವರಿಗೆ ಯೋಗ್ಯವೆನಿಸುತ್ತದೆಯೇ ?

ತಿರುವನಂತಪುರಮ್ (ಕೇರಳ) – ೨೦೧೮ ರಲ್ಲಿ ಶಬರಿಮಲೆ ದೇವಸ್ಥಾನವನ್ನು ಪ್ರವೇಶ ಮಾಡಲು ಪ್ರಯತ್ನಿಸಿದ ಕಮ್ಯುನಿಸ್ಟ್ ಕಾರ್ಯಕರ್ತೆ ರೆಹಾನಾ ಫಾತಿಮಾಳು ತನ್ನ ಸಣ್ಣ ಮಗನಿಂದ ತನ್ನ ಅರೆನಗ್ನ ಚಿತ್ರವನ್ನು ತಯಾರಿಸಿ ಅದರದೊಂದು ‘ವಿಡಿಯೋ’ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಪ್ರಸಾರ ಮಾಡಿದಳು. ಇದರಿಂದ ರೆಹಾನಾಳ ವಿರುದ್ಧ ಅಪರಾಧ ದಾಖಲಾಗಿದೆ. ಭಾಜಪದ ಇತರ ಹಿಂದುಳಿದವರ್ಗ ಶಾಖೆಯ ನಾಯಕ ಎ.ವಿ. ಅರುಣ ಪ್ರಕಾಶ ಇವರು ನೀಡಿದ ದೂರಿನ ನಂತರ ಪತನಮತಿಟ್ಠಾ ಜಿಲ್ಲೆಯ ತಿರುವಾಲಾ ಪೊಲೀಸರು ಈ ದೂರನ್ನು ನೊಂದಾಯಿಸಿಕೊಂಡರು.