ವಿಶ್ವ ಆರೋಗ್ಯ ಸಂಸ್ಥೆಯು ‘ಕೊರೋನಾದ ಸೋಂಕಿಗೆ ಮನುಷ್ಯರು ಹೇಗೆ ತುತ್ತಾದರು ?’ ಎಂಬುದನ್ನು ಪತ್ತೆ ಹಚ್ಚಬೇಕು. – ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತದೊಂದಿಗೆ ೬೨ ಸದಸ್ಯ ರಾಷ್ಟ್ರಗಳ ಠರಾವು
‘ಪ್ರಾಣಿಗಳಿಂದ ಹರಡುವ ಕೊರೋನಾದ ರೋಗಾಣು ಮನುಷ್ಯರು ಹೇಗೆ ತುತ್ತಾದರು ?’, ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯು ನಿಷ್ಪಕ್ಷಪಾತವಾಗಿ ಪತ್ತೆಹಚ್ಚಬೇಕೆಂಬ ಠರಾವನ್ನು ಈ ಸಂಘಟನೆಯ ಸದಸ್ಯರಾಗಿರುವ ೬೨ ದೇಶಗಳು ಒಪ್ಪಿಗೆ ನೀಡಿವೆ. ಈ ಠರಾವನ್ನು ಸಂಘಟನೆಯ ವಾರ್ಷಿಕ ಸಭೆಯಲ್ಲಿ ಮಂಡಿಸಲಾಗುವುದು.