ವಿಶ್ವ ಹಿಂದೂ ಪರಿಷತ್ತಿನ ಜನಪ್ರಿಯ ಪಾಕ್ಷಿಕ ‘ಹಿಂದೂ ವಿಶ್ವ’ದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರ ವಿದ್ವತ್ಪೂರ್ಣ ಲೇಖನಗಳ ಪ್ರಕಟಣೆ !

ಶ್ರೀ. ರಮೇಶ ಶಿಂದೆ

ನವ ದೆಹಲಿ, ಮೇ ೧೩ (ಸುದ್ಧಿ.) – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಬರೆದ ಎರಡು ವಿದ್ವತ್ಪೂರ್ಣ ಲೇಖನಗಳನ್ನು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಪ್ರಕಾಶಿಸಲಾದ ‘ಹಿಂದು ವಿಶ್ವ’ ಈ ಹಿಂದಿ ಭಾಷೆಯ ಪಾಕ್ಷಿಕದಲ್ಲಿ ಪ್ರಕಟಿಸಲಾಗಿದೆ. ೧೬ ರಿಂದ ೨೯ ಫೆಬ್ರವರಿ ೨೦೨೦ ರ ಸಂಚಿಕೆಯಲ್ಲಿ, ‘ಸಂವಿಧಾನದಲ್ಲಿ ಜಾತ್ಯತೀತತೆ ಮತ್ತು ಅಲ್ಪಸಂಖ್ಯಾತರು ಒಟ್ಟಿಗೆ ಇರಲು ಸಾಧ್ಯವಿಲ್ಲ’ ಎಂಬ ವಿಷಯದ ಬಗ್ಗೆ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ೧೬ ರಿಂದ ೩೦ಏಪ್ರಿಲ್ ೨೦೨೦ ರ ಸಂಚಿಕೆಯಲ್ಲಿ ‘ಇತ್ಜೆಮಾ ಕ್ಯಾ ಹೈ ?’ ಎಂಬ ವಿಷಯದ ಬಗ್ಗೆ ವಿವರವಾದ ಲೇಖನವನ್ನು ಪ್ರಕಟಿಸಲಾಗಿದೆ.

೧. ೧೬ ರಿಂದ ೨೯ ಫೆಬ್ರವರಿ ೨೦೨೦ ರ ‘ಹಿಂದೂ ವಿಶ್ವ’ ಸಂಚಿಕೆಯನ್ನು ‘ಬಹುಸಂಖ್ಯಾತರಿಗೆ ಧಾರ್ಮಿಕ ಶಿಕ್ಷಣದ ಹಕ್ಕು ಸಿಗಬೇಕು’ ಎಂಬ ವಿಷಯದ ಮೇಲೆ ಪ್ರಕಟಿಸಲಾಗಿತ್ತು. ಇದು ‘ಕ್ರಿಶ್ಚಿಯನ್ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಪಾತ್ರ’, ‘ಪಠ್ಯಪುಸ್ತಕಗಳ ನಾಸ್ತಿಕತೆ’, ‘ವಿಭಜಕ ಶಿಕ್ಷಣ ಪದ್ದತಿ’, ‘ಸಂವಿಧಾನದ ೨೯ ಮತ್ತು ೩೦ ನೇ ವಿಧಿಗಳಲ್ಲಿ ತಿದ್ದುಪಡಿಗಳು’ ಇತ್ಯಾದಿಗಳ ಕುರಿತು ಪ್ರಮುಖ ಲೇಖನಗಳನ್ನು ಪ್ರಕಟಿಸಿದೆ. ಅದೇ ಸಂಚಿಕೆಯಲ್ಲಿ ‘ಸಂವಿಧಾನ ಮೇಂ ಸೇಕ್ಯುಲರವಾದ ಔರ ಅಲ್ಪಸಂಖ್ಯಾಂಕವಾದ ಏಕ ಸಾಥ ನಹೀ ಹೋ ಸಕತೇ’(ಹಿಂದಿ) (‘ಸಂವಿಧಾನದಲ್ಲಿ ಜಾತ್ಯತೀತತೆ ಮತ್ತು ಅಲ್ಪಸಂಖ್ಯಾತತೆಯು ಒಟ್ಟಿಗೆ ಇರಲು ಸಾಧ್ಯವಿಲ್ಲ’) ಎಂಬ ಶೀರ್ಷಿಕೆಯೊಂದಿಗೆ ಶ್ರೀ. ರಮೇಶ ಶಿಂದೆಯವರು ಬರೆದ ಲೇಖನವನ್ನು ಸಹ ಪ್ರಕಟಿಸಲಾಗಿದೆ. ಈ ಲೇಖನವು ‘ಸೆಕ್ಯಲರ್‌ವಾದ’ದ ಭ್ರಮೆಯನ್ನು ಹೊರಹಾಕಿತು. ‘ಜಾತ್ಯತೀತತೆ’ ಮೂಲ ಸಂವಿಧಾನದ ಭಾಗವಾಗಿರಲಿಲ್ಲ. ಅದೇರೀತಿ ಅದನ್ನು ಸಂವಿಧಾನಕ್ಕೆ ಹೇಗೆ ಸಂವಿಧಾನಬಾಹಿರವಾಗಿ ತುರುಕಿಸಲಾಯಿತು ? ಎಂದು ಅದು ಸ್ಪಷ್ಟಪಡಿಸುತ್ತದೆ. ಇದಲ್ಲದೆ, ಒಮ್ಮೆ ಜಾತ್ಯತೀತತೆಯನ್ನು ಒಪ್ಪಿಕೊಂಡರೆ, ದೇಶದಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ‘ಅಲ್ಪಸಂಖ್ಯಾತ’ ಮತ್ತು ಇನ್ನೊಂದಕ್ಕೆ ‘ಬಹುಸಂಖ್ಯಾತ’ ಎಂದು ಕರೆಯುವುದು ತಪ್ಪು. ಇದರ ಪರಿಣಾಮವಾಗಿ, ಹಿಂದೂಗಳೊಂದಿಗೆ ತಾರತಮ್ಯ ಮತ್ತು ಅನ್ಯಾಯ ನಡೆಯುತ್ತಿದೆ’ ಎಂದು ಶ್ರೀ. ಶಿಂದೆಯವರು ಉದಾಹರಣೆ ಸಹಿತ ಮನವರಿಕೆ ಮಾಡಿಸಿದರು.

೨. ಏಪ್ರಿಲ್ ೧೬ ರಿಂದ ೩೦ ರ ಸಂಚಿಕೆಯಲ್ಲಿ ಶ್ರೀ. ರಮೇಶ ಶಿಂದೆಯವರು ಬರೆದ ‘ಇಜ್ಟೆಮಾ ಕ್ಯಾ ಹೈ ?’ ಎಂಬ ಲೇಖನ ಪ್ರಕಟವಾಯಿತು. ಈ ಲೇಖನದಲ್ಲಿ ಅವರು, ‘ಇಜ್ಟೆಮಾ ಅನೇಕ ಸ್ಥಳಗಳಲ್ಲಿ ನಡೆಯುತ್ತಿರುವಾಗ, ಅಲ್ಲಿ ಗಲಭೆಗಳು ನಡೆದಿವೆ ಮತ್ತು ಹಿಂದೂಗಳನ್ನು ಗುರಿಯಾಗಿಸಲಾಗಿದೆ. ಉಜ್ಬೇಕಿಸ್ತಾನ್, ತಜಾಕಿಸ್ತಾನ್ ಮತ್ತು ಕಜಾಕಿಸ್ತಾನಗಳಲ್ಲಿ ಇಜ್ಟೆಮಾವನ್ನು ನಿಷೇಧಿಸಲಾಗಿದೆ. ಹಿಂದೂಗಳನ್ನು ಇಜ್ಟೆಮಾ ಮೂಲಕ ಮತಾಂತರ ಮಾಡಲಾಗುತ್ತಿದೆ. ಕರೋನಾ ಸಾಂಕ್ರಾಮಿಕ ರೋಗದಲ್ಲಿ ಸರ್ಕಾರದೊಂದಿಗೆ ಸಹಕರಿಸದೆ ವೈದ್ಯರು ಮತ್ತು ದಾದಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಇಜ್ತೆಮಾಗೆ ಬಂದಿದ್ದ ತಬಲೀಗಿಯವರು ಮಾಡಿದ್ದರು. ಆದ್ದರಿಂದ ಇಜ್ಟೆಮಾವನ್ನು ನಿಷೇಧಿಸಬೇಕು ಎಂದರು.

ಪಾಕ್ಷಿಕ ‘ಹಿಂದೂ ವಿಶ್ವ’ದ ಬಗ್ಗೆ ಸ್ವಲ್ಪ ಮಾಹಿತಿ…

ಕಳೆದ ೩೨ ವರ್ಷಗಳಿಂದ ಪ್ರಕಟವಾಗುತ್ತಿರುವ ವಿಶ್ವ ಹಿಂದೂ ಪರಿಷತ್ತಿನ ‘ಹಿಂದೂ ವಿಶ್ವ’ ಎಂಬ ಪಾಕ್ಷಿಕ ಜನಪ್ರಿಯ ಪತ್ರಿಕೆಯು ಭಾರತದೊಂದಿಗೆ ವಿದೇಶಗಳಲ್ಲಿಯೂ ವಾಚಕರಿದ್ದಾರೆ. ರಾಷ್ಟ್ರವನ್ನು ಪುನರುಜ್ಜೀವನಗೊಳಿಸುವ, ಹಿಂದೂಗಳನ್ನು ಸಂಘಟಿಸುವ ಮತ್ತು ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ೨೮ ಪುಟಗಳ ಪಾಕ್ಷಿಕ ವಿವಿಧ ಕ್ಷೇತ್ರಗಳ ತಜ್ಞರಿಂದ ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸುತ್ತವೆ.