ಅಲಿಗಡ್ (ಉತ್ತರ ಪ್ರದೇಶ)ದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಗೋ ಕಳ್ಳರನ್ನು ಬಿಡಿಸಿದ ಮತಾಂಧರು

  • ೨ ಮತಾಂಧ ಮಹಿಳಾ ದಾಳಿಕೋರಳ ಬಂಧನ

  • ಮತಾಂಧರಿಂದ ನಿರಂತರವಾಗಿ ಪೆಟ್ಟು ತಿನ್ನುವ ಜಗತ್ತಿನ ಏಕೈಕ ಭಾರತೀಯ ಪೊಲೀಸ ! ಇಂತಹ ಘಟನೆಗಳನ್ನು ನಿಲ್ಲಿಸಬೇಕು ಎಂದು ಪೊಲೀಸ ಪಡೆಯಲ್ಲಿರುವ ಯಾರಿಗೂ ಅನಿಸುವುದಿಲ್ಲವೇ ?

ಅಲಿಗಡ (ಉತ್ತರ ಪ್ರದೇಶ) – ಇಲ್ಲಿನ ಕಾಸಿಮ್ ನಗರದಲ್ಲಿ, ಗೋ ಕಳ್ಳರನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಕಾಸೀಮ್ ಬಾಬಾ ಮಸೀದಿ ಬಳಿಯ ಮತಾಂಧರು ಹಲ್ಲೆ ನಡೆಸಿದರು. ಪೊಲೀಸರು ಕೆಲವು ಕಳ್ಳಸಾಗಾಣಿಕೆದಾರರನ್ನು ಸಹ ಹಿಡಿದಿದ್ದರು; ಆದರೆ ಮತಾಂಧರು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಳ್ಳಸಾಗಾಣಿಕೆದಾರರನ್ನು ಬಿಡಿಸಿದರು ಹಾಗೂ ತಪ್ಪಿಸಿಕೊಳ್ಳಲು ಸಹಾಯ ಮಾಡಿದರು. ಈ ದಾಳಿಯಲ್ಲಿ ಪೊಲೀಸರ ಬಟ್ಟೆಯನ್ನೂ ಹರಿಯಲಾಯಿತು, ಅದೇರೀತಿ ಓರ್ವ ಮಹಿಳಾ ಮತಾಂಧಳು ಓರ್ವ ಪೊಲೀಸರ ಕೈಯನ್ನು ಕಚ್ಚಿದಳು. (ಅಪರಾಧದಲ್ಲಿ ಹೆಚ್ಚುತ್ತಿರುವ ಮತಾಂಧ ಮಹಿಳೆಯರ ಸಹಭಾಗ ! – ಸಂಪಾದಕರು) ಅನಂತರ, ಪೊಲೀಸರು ದೊಡ್ಡ ಪಡೆಯನ್ನು ಕರೆತಂದು ರುಖ್ಸರ್ ಮತ್ತು ಶಬಾನಾ ಅವರನ್ನು ಬಂಧಿಸಿದರು, ಉಳಿದ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಭುಜಪುರದಲ್ಲಿ ಹಸುವನ್ನು ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮುಸ್ತಾಕಿನ್ ಮತ್ತು ಮುನ್ನಾ ಅವರನ್ನು ಹುಡುಕುತ್ತಿದ್ದರು. ಅವರನ್ನು ಬಂಧಿಸಲು ಪೊಲೀಸರು ಆ ಪ್ರದೇಶಕ್ಕೆ ಹೋಗಿದ್ದರು. ಆಗ ಈ ಘಟನೆ ಸಂಭವಿಸಿತು. ಅದೇ ಭುಜಪುರದಲ್ಲಿ, ಏಪ್ರಿಲ್ ೨೨ ರಂದು, ಸಂಚಾರ ನಿಷೇಧ ಸಡಿಲಿಕೆ ಮುಗಿದ ನಂತರವೂ ಅಂಗಡಿಗಳು ತೆರೆದಿರುವುದನ್ನು ಮುಚ್ಚಲು ಹೋದ ಪೊಲೀಸರ ಮೇಲೆಯೂ ಮತಾಂಧರು ಕಲ್ಲು ತೂರಾಟ ನಡೆಸಿದರು ಮತ್ತು ಇದರಲ್ಲಿ ಒಬ್ಬ ಪೊಲೀಸ್ ಗಾಯಗೊಂಡರು. (ಹಿಂದಿನ ಘಟನೆಯ ಅನುಭವವಿರುವಾಗಲೂ ಪೊಲೀಸರು ಈ ಪ್ರದೇಶದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ಏಕೆ ಹೋಗಿರಲಿಲ್ಲ ? ಇಂತಹ ಮೊಹಲ್ಲಾಗಳಿಂದ ಪೊಲೀಸರ ಮೇಲಾಗುವ ದಾಳಿಯ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು ಹಾಗೂ ಪ್ರಗತಿಪರರು ಏಕೆ ಧ್ವನಿ ಎತ್ತುವುದಿಲ್ಲ ? – ಸಂಪಾದಕರು)