
ಈಗಿನ ಸ್ವಾತಂತ್ರ್ಯದಿನವೆಂದರೆ, ಔಪಚಾರಿಕ ರೀತಿಯಿಂದ ಪಾಲಿಸುವಂತಹ ಸ್ವಾತಂತ್ರ್ಯದಿನವಾಗಿದೆ. ಪ್ರತಿವರ್ಷ ಭಯೋತ್ಪಾದಕರ ಕರಿನೆರಳಿನಲ್ಲಿ ಸ್ವಾತಂತ್ರ್ಯದಿನವನ್ನು ಆಚರಿಸಲಾಗುತ್ತದೆ ! ‘ಇದಕ್ಕೆ ಸ್ವಾತಂತ್ರ್ಯ ಎನ್ನಬೇಕೇ ?, ಎಂಬ ಪ್ರಶ್ನೆಯಾಗಿದೆ. ಭಗವಂತನು ನಮಗೆ ಈಶ್ವರಪ್ರಾಪ್ತಿಗಾಗಿ ಮಾನವನ ಜನ್ಮ ನೀಡಿ ಭಾರತದಂತಹ ಪವಿತ್ರ ಭೂಮಿಗೆ ಕಳುಹಿಸಿದ್ದಾನೆ ಮತ್ತು ಅದನ್ನು ಸಾಧಿಸಲು ನಾವು ಗುರುಗಳ ಸಾನ್ನಿಧ್ಯದಲ್ಲಿದ್ದು ಸಾಧನೆ ಮಾಡಿ ನಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಜನನ-ಮರಣದ ಚಕ್ರದಿಂದ ಮುಕ್ತರಾದರೆ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಪ್ರಾಪ್ತವಾಯಿತು ಎಂದು ಹೇಳಬಹುದು. ಇಂತಹ ಸಾಧಕರ ವೃತ್ತಿಯಿಂದ ಆಗುವ ಕಾರ್ಯ, ಇದು ಭಗವಂತನ ಸೇವೆ ಎಂದು ಆಗುತ್ತಿದ್ದರೆ ಆ ಕಾರ್ಯವು ಕೌಶಲ್ಯಪೂರ್ಣ ಮತ್ತು ಚೈತನ್ಯದಾಯಕವಾಗುವುದು. ಇದರಿಂದಾಗಿ ಎಲ್ಲರಿಗೂ ಆನಂದ ಸಿಗುವುದು. ಇದರಿಂದ ವ್ಯಕ್ತಿ, ಕುಟುಂಬ, ಸಮಾಜ ಮತ್ತು ರಾಷ್ಟ್ರಗಳು ನಿಜವಾದ ಅರ್ಥದಿಂದ ಬಲಿಷ್ಠವಾಗುವುದು. ಆ ಆದರ್ಶಪ್ರಾಯ ರಾಜ್ಯದಿಂದ ಎಲ್ಲರ ಕಲ್ಯಾಣವಾಗುವುದು. – (ಪರಾತ್ಪರ ಗುರು) ಪರಶರಾಮ ಪಾಂಡೆ (೭.೮.೨೦೧೯)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು