‘ತಮ್ಮ ಸಂಚಾರವಾಣಿ, ಗಣಕಯಂತ್ರ ಮತ್ತು ಸಂಚಾರಿ ಗಣಕಯಂತ್ರದಲ್ಲಿರುವ ಅಮೂಲ್ಯ ಮಾಹಿತಿ ಕಳ್ಳತನವಾಗದಂತೆ ಮುಂದಿನ ಎಚ್ಚರಿಕೆಯನ್ನು ವಹಿಸಿರಿ !
ಈಗ ‘ಕೊರೋನಾ ಮಹಾಮಾರಿ, ಹಾಗೆಯೇ ಶೀಘ್ರದಲ್ಲಿಯೇ ಬರಲಿರುವ ಮೂರನೇಯ ಮಹಾಯುದ್ಧದ ಹಿನ್ನೆಲೆಯಲ್ಲಿ ಚೀನಾದ ‘ಸೈಬರ್ ಹ್ಯಾಕರ್ಸ್ ವಿವಿಧ ಮಾರ್ಗಗಳಿಂದ ಭಾರತದಲ್ಲಿನ ಮಹತ್ವದ ಸರಕಾರಿ ಜಾಲತಾಣಗಳ ಮೇಲೆ ಆಕ್ರಮಣ ಮಾಡುವ ಸಾಧ್ಯತೆಗಳಿವೆ, ಎಂಬ ಒಂದು ಸುದ್ಧಿ ಬಂದಿದೆ. ಒಂದು ಸಂಸ್ಥೆಯ (ಕಂಪನಿಯ) ಗಣಕಯಂತ್ರದ ತಂತ್ರಾಂಶದ ಮೇಲೆ (ಸಾಫ್ಟ್‌ವೇರ್ ಸಿಸ್ಟಮ್‌ನ ಮೇಲೆ) ‘ರ‍್ಯಾನಸಮವೇರ್ ಅಟ್ಯಾಕ್ (‘ವೈರಸ್’ನ ಆಕ್ರಮಣದ ಒಂದು ಪದ್ದತಿ) ಆಗಿರುವುದು ಗಮನಕ್ಕೆ ಬಂದಿದೆ.
‘ಗಣಕಯಂತ್ರ ಅಥವಾ ಸರ್ವರ್‌ನಲ್ಲಿನ ಝೋಂಬಿ (‘ಅಟ್ಯಾಕರ್ಸ್ನ ‘ಕ್ಲಾಯೆಂಟ್) ಯನ್ನು ಇತರ ಜಾಲತಾಣಗಳ ಮೇಲೆ ಆಕ್ರಮಣ ಮಾಡಲು ಬಳಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಮುಂದಿನ ಸೂಚನೆಗಳನ್ನು ಪಾಲಿಸಬೇಕು.
೧. ಸಂಚಾರವಾಣಿ, ಗಣಕಯಂತ್ರ ಇತ್ಯಾದಿಗಳ ವಿಷಯದಲ್ಲಿ ಸಾಮಾನ್ಯ ಸೂಚನೆಗಳು
ಅ. ಅಜ್ಞಾತ ವ್ಯಕ್ತಿಗಳಿಗೆ ತಮ್ಮ ಸಂಚಾರವಾಣಿ, ಗಣಕಯಂತ್ರ, ಹಾಗೆಯೇ ಸಂಚಾರಿ ಗಣಕಯಂತ್ರವನ್ನು ಬಳಸಲು ಕೊಡಬಾರದು.
ಆ. ಯಾವುದಾದರೂ ಜಾಲತಾಣದಲ್ಲಿ ತಮ್ಮ ಯಾವುದೇ ಮಾಹಿತಿಯನ್ನು (ಹೆಸರು, ಸಂಚಾರವಾಣಿ ಸಂಖ್ಯೆ, ವಿ-ಅಂಚೆ (ಈಮೇಲ್) ಐಡಿ, ಯು.ಪಿ.ಐ. (ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ಯಾದಿ)ಗಳನ್ನು ಕೇಳಿದರೆ ಅವುಗಳನ್ನು ನೀಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು.
ಇ. ಅಜ್ಞಾತ ವ್ಯಕ್ತಿಗಳಿಂದ ವಾಟ್ಸ್‌ಆಪ್, ಟೆಲಿಗ್ರಾಮ್, ಜೀ-ಮೇಲ್ ಇತ್ಯಾದಿಗಳಲ್ಲಿ ಬಂದಿರುವ ಎಲ್ಲ ರೀತಿಯ ಸಂದೇಶಗಳನ್ನು ಜಾಗರೂಕವಾಗಿ ತೆರೆಯಬೇಕು. ಸಂಬಂಧಪಟ್ಟ ವ್ಯಕ್ತಿಗಳಿಂದ ಬಂದ ಸಂದೇಶಗಳನ್ನು ಖಚಿತ ಪಡಿಸಿಕೊಳ್ಳದೇ ಯಾವುದೇ ಸಂಪರ್ಕಕೊಂಡಿಯನ್ನು (ಲಿಂಕ್) ನೇರವಾಗಿ ಕ್ಲಿಕ್ ಮಾಡಬಾರದು.
ಈ. ಅಂತರ್ಜಾಲವನ್ನು (ಇಂಟರ್‌ನೆಟ್) ಬಳಸಿದ ಬಳಿಕ ಅದನ್ನು ತಕ್ಷಣ ಬಂದ್ ಮಾಡಬೇಕು. ಅಂತರ್ಜಾಲದ ಅನಗತ್ಯ ಬಳಕೆ ಮಾಡಬಾರದು. ಅಗತ್ಯವಿರುವಷ್ಟು ಮಾತ್ರ ಜಾಲತಾಣಗಳಿಗೆ ಭೇಟಿ ನೀಡಬೇಕು. ಉಚಿತ ಗಣಕೀಯ ಪ್ರಣಾಲಿ (ಸಾಫ್ಟ್‌ವೇರ್) ಗಳಿರುವ, ಹಾಗೆಯೇ ಸಂಶಯಾಸ್ಪದ ಜಾಲತಾಣಗಳನ್ನು (ಉದಾ. ‘ಟೊರೆಂಟ್, ಫೈಲ್ ಡೌನ್‌ಲೋಡ್ ಮಾಡುವ ಜಾಲತಾಣಗಳನ್ನು) ನೋಡಬಾರದು.
ಉ. ಗಣಕಯಂತ್ರ ಅಥವಾ ಸಂಚಾರವಾಣಿ ಮುಂತಾದವುಗಳಲ್ಲಿ ಯಾವುದೇ ರೀತಿಯ ಸಂಶಯಾಸ್ಪದ ಘಟನೆಗಳು (ಉದಾ. ಸಂಚಾರವಾಣಿಗೆ ಹೆಚ್ಚು ಜಾಹೀರಾತುಗಳು ಬರುವುದು, ಅಜ್ಞಾತ ಗಣಕೀಯ ತಂತ್ರಾಂಶವು ಗಣಕಯಂತ್ರದಲ್ಲಿ ಕಾಣಿಸುವುದು, ಅಜ್ಞಾತ ‘ವೆಬ್‌ಪೇಜ್ (ಜಾಲತಾಣದ ಪುಟ) ತಾನಾಗಿಯೇ ತೆರೆದುಕೊಳ್ಳುವುದು) ಕಾಣಿಸಿದರೆ ಗಣಕಯಂತ್ರದ ಜ್ಞಾನವಿರುವವರ ಸಹಾಯವನ್ನು ಪಡೆದುಕೊಳ್ಳಬೇಕು.
ಊ. ಯಾವುದೇ ವ್ಯಕ್ತಿಯು ಎಷ್ಟೇ ಆಗ್ರಹಿಸಿದರೂ, ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ (ಬ್ಯಾಂಕ್ ಅಕೌಂಟ್ ನಂಬರ್), ಎಟಿಮ್ ಕಾರ್ಡ್, ಕ್ರೆಡಿಟ್ ಕಾರ್ಡ್, ಗೂಗಲ್ ಪೇ, ‘ಭೀಮ್ ಆಪ್ ಇತ್ಯಾದಿಗಳ ಸಂಕೇತಾಂಕಗಳನ್ನು (ಪಾಸ್‌ವರ್ಡ್‌ಗಳನ್ನು) ಅಥವಾ ‘ವನ್ ಟೈಮ್ ಪಾಸ್‌ವರ್ಡ್‌ಗಳನ್ನು (ಒ.ಟಿ.ಪಿ.) ಯಾರಿಗೂ ನೀಡಬಾರದು.
೨. ಸಂಚಾರವಾಣಿಯ ವಿಷಯದಲ್ಲಿ ವಹಿಸಬೇಕಾದ ಕಾಳಜಿಗಳು
ಅ. ಸಂಚಾರವಾಣಿಯಲ್ಲಿ ಅಗತ್ಯವಿರುವ ‘ಆಪ್ಲಿಕೇಶನ್ಗಳನ್ನು ಮಾತ್ರ ಇಡಬೇಕು. ‘ಅನಗತ್ಯ ‘ಆಪ್ಲಿಕೇಶನ್ಗಳು ತಾವಾಗಿಯೇ ಬಂದಿಲ್ಲವಲ್ಲ,
ಎಂಬುದನ್ನು ಖಚಿತ ಪಡಿಸಿಕೊಂಡು ಅವುಗಳನ್ನು ತಕ್ಷಣ ತೆಗೆದು ಹಾಕಬೇಕು (ಅನ್‌ಇನ್‌ಸ್ಟಾಲ್ ಮಾಡಬೇಕು).
ಆ. ಹೊರಗಿನಿಂದ ಉಚಿತವಾಗಿವೆ ಎಂದು ಅನಿಸುವ, ಆದರೆ ಜಾಹೀರಾತುಗಳನ್ನು ತೋರಿಸುವ ಗಣಕೀಯ ತಂತ್ರಾಶಗಳನ್ನು ಆಂಡ್ರಾಯ್ಡ್ ಸಂಚಾರವಾಣಿಯಲ್ಲಿ ಇನ್‌ಸ್ಟಾಲ್ ಮಾಡಬಾರದು. ಈ ರೀತಿಯ ತಂತ್ರಾಂಶಗಳಿಂದ (ಸಾಫ್ಟ್‌ವೇರ್‌ಗಳಿಂದ) ನಮ್ಮ ಮಾಹಿತಿಯು (ಡಾಟಾ) ಕಳ್ಳತನವಾಗುವ (ಹ್ಯಾಕ್ ಆಗುವ) ಸಾಧ್ಯತೆ ಹೆಚ್ಚಿರುತ್ತದೆ.
ಇ. ಸಂಚಾರವಾಣಿಯಲ್ಲಿ ಬರುವ ಎಲ್ಲ ರೀತಿಯ ಜಾಹೀರಾತನ್ನು ಜಾಗರೂಕತೆಯಿಂದ ತೆರೆಯಬೇಕು. ‘ನೀವು ಹಣವನ್ನು (ಕ್ಯಾಶ್) ಗೆದ್ದಿದ್ದೀರಿ, ಎಂಬ ಆಶಯದ ಯಾವುದೇ ಜಾಹೀರಾತುಗಳು ಬಂದರೆ ಅವುಗಳಿಗೆ ರಿಪ್ಲೈ ಮಾಡದೆ ತಕ್ಷಣ ಆ ಸಂದೇಶಗಳನ್ನು ಡಿಲೀಟ್ ಮಾಡಬೇಕು.
೩. ಗಣಕಯಂತ್ರವನ್ನು ಉಪಯೋಗಿಸುವಾಗ ಮುಂದಿನ ಜಾಗರೂಕತೆ ವಹಿಸಿರಿ !
ಅ. ಗಣಕೀಯ ಜ್ಞಾನವಿರುವವರನ್ನು ವಿಚಾರಿಸದೇ ಯಾವುದೇ ತಂತ್ರಾಂಶವನ್ನು (ಸ್ವಾಫ್ಟವೇರ್) ಇನ್‌ಸ್ಟಾಲ್ ಮಾಡಬಾರದು.
ಆ. ತಮ್ಮ ಗಣಕಯಂತ್ರ ಅಥವಾ ಸಂಚಾರಿ ಗಣಕಯಂತ್ರದಲ್ಲಿ ‘ಕ್ವಿಕ್ ಹೀಲ್ (Quick Heal), ‘ಕ್ಯಾಸ್ಪರಸ್ಕೀ (Kaspersky) ಇಂತಹ ಪೇಡ್ (ಹಣ ನೀಡಿ ಖರೀದಿಸುವ) ‘ಆಂಟಿವೈರಸನ್ನು ಹಾಕಿಸಿ ಕೊಳ್ಳಬೇಕು. ಉಚಿತವಾಗಿ ಸಿಗುವ ‘ಆಂಟಿವೈರಸ್ಗಳನ್ನು ಇನ್‌ಸ್ಟಾಲ್ ಮಾಡಬಾರದು. ‘ಆಂಟಿವೈರಸ್ ಆದಷ್ಟು ಸುಧಾರಿತ (ಅಪಡೇಟೆಡ್) ಆಗಿದೆಯೇ ?, ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
ಸಂಚಾರವಾಣಿ, ಗಣಕಯಂತ್ರ ಹಾಗೂ ಸಂಚಾರಿ ಗಣಕಯಂತ್ರದಲ್ಲಿನ ಅಮೂಲ್ಯ ಮಾಹಿತಿಯು ಕಳ್ಳತನವಾದರೆ ಆಗುವ ಹಾನಿಯನ್ನು ಗಮನ ದಲ್ಲಿಟ್ಟುಕೊಂಡು ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು !