ವೈಷ್ಣೋದೇವಿ ಯಾತ್ರೆ ಪ್ರಾರಂಭ: ಪ್ರತಿದಿನ ೨ ಸಾವಿರ ಭಕ್ತರಿಗೆ ಭೇಟಿ ನೀಡಲು ಅನುಮತಿ

ಜಮ್ಮು: ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆಯನ್ನು ಜಮ್ಮು ಕಾಶ್ಮೀರ ಆಡಳಿತದ ಅನುಮತಿಯೊಂದಿಗೆ ಆಗಸ್ಟ್ ೧೬ ರಂದು ಪುನರಾರಂಭಿಸಲಾಯಿತು. ಪ್ರತಿದಿನ ೨ ಸಾವಿರ ಭಕ್ತರಿಗೆ ಯಾತ್ರೆಗೆ ಅವಕಾಶ ಕಲ್ಪಿಸಲಾಗುವುದು. ಅವರಲ್ಲಿ ೧ ಸಾವಿರದ ೯೦೦ ಭಾರತೀಯ ಮತ್ತು ೧೦೦ ವಿದೇಶಿ ಭಕ್ತರಿಗೆ ಅವಕಾಶ ನೀಡಲಾಗುವುದು.
ಯಾತ್ರೆಯ ಸಮಯದಲ್ಲಿ, ಭಕ್ತರು ಸಾಮಾಜಿಕ ಅಂತರವನ್ನು ಕಾಪಾಡುವುದು ಮತ್ತು ಮಾಸ್ಕ್ ತೊಡುವುದು ಇಂತಹ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇದಲ್ಲದೆ, ಪ್ರವೇಶದ್ವಾರದಲ್ಲಿ ಎಲ್ಲ ಭಕ್ತರ ‘ಥರ್ಮಲ್ ಸ್ಕ್ರೀನಿಂಗ್’ ಮಾಡಲಾಗುವುದು. ಭಕ್ತರು ತಮ್ಮ ಮೊಬೈಲ್‌ನಲ್ಲಿ ’ಆರೋಗ್ಯ ಸೇತು’ ‘ಆಪ್ ಡೌನ್‌ಲೋಡ್’ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ೬೦ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಅನಾರೋಗ್ಯ ಪೀಡಿತ ವ್ಯಕ್ತಿಗಳು, ಗರ್ಭಿಣಿಯರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ನೀಡಲಾಗುವುದಿಲ್ಲ.