‘ಹಿಂದೂಸ್ಥಾನವೆಂದು ಗುರುತಿಸಲ್ಪಡುವ ಈ ಭೂಮಿಯು ಸ್ವಾತಂತ್ರ್ಯ ಸಿಕ್ಕಿದ ನಂತರ ಸಂವಿಧಾನದ ಮೂಲಕ ಪುನಃ ‘ಭಾರತ ಮತ್ತು ‘ಇಂಡಿಯಾ ಎಂದು ಗುರುತಿಸಲ್ಪಡುವುದು ಹಾಗೂ ‘ಭಾರತ ಎಂಬ ಹೆಸರಿಗೆ ಭವ್ಯವಾದ ಹಿನ್ನೆಲೆ ಇರುವುದು 

ಪ್ರಾಚೀನ ಕಾಲದಲ್ಲಿ ಜಂಬೂದ್ವೀಪ, ಆರ್ಯಾವರ್ತ, ಭಾರತವರ್ಷ, ಭಾರತ ಪುನಃ ‘ಹಿಂದೂಸ್ಥಾನ ಎಂದು ಗುರುತಿಸಲ್ಪಡುವ ಈ ಭೂಮಿ ಸ್ವಾತಂತ್ರ್ಯಪ್ರಾಪ್ತಿಯ ನಂತರ ಸಂವಿಧಾನದ ಮೂಲಕ ‘ಭಾರತ ಮತ್ತು ‘ಇಂಡಿಯಾ ಎಂದು ಗುರುತಿಸಲು ಆರಂಭವಾಯಿತು. ಈ ನಾಮಾಂತರಕ್ಕೆ ವಾಸ್ತವದಲ್ಲಿ ಯಾರಿಂದಲೂ ವಿರೋಧವಾಗಲಿಲ್ಲ; ಏಕೆಂದರೆ ಭಾರತ ಎಂಬ ಹೆಸರಿಗೆ ಭವ್ಯವಾದ ಹಿನ್ನೆಲೆಯಿದೆ. ಶ್ರೀರಾಮಬಂಧು ಭರತ, ಮಹಾಭಾರತದಲ್ಲಿನ ಶಕುಂತಲ ಪುತ್ರ ಭರತ ಮತ್ತು ಮುಂದೆ ಭಾಗವತದಲ್ಲಿನ ಜಡಭಾರತ ಇವರ ಹೆಸರಿನಿಂದ ‘ಭಾರತ ಈ ಹೆಸರು ಪ್ರಾಪ್ತಿಯಾಗಿದೆ. ಆದರೂ ಸ್ವಾತಂತ್ರ್ಯೋತ್ತರ ನಂತರವಾದ ಈ ನಾಮಾಂತರಕ್ಕೆ ವೃತ್ತಿ ಕಾರಣವಿದೆ, ಅದು ೧೯೨೦ ರಲ್ಲಿ ಗಾಂಧಿಯುಗದ ಪ್ರಾರಂಭವಾದ ನಂತರ ಸ್ವಾತಂತ್ರ್ಯಪ್ರಾಪ್ತಿಯ ಕಾಲದಲ್ಲಿ ‘ಹಿಂದೂ ಶಬ್ದದ ವಿಷಯ ನಿರ್ಮಾಣ ಮಾಡಿರುವ ಅಪರಾಧಿ, ಪರಾಭವಿ ದುಷ್ಟಪ್ರವೃತ್ತಿಯಾಗಿದೆ ! ಈ ಮಾನಸಿಕತೆಯು ಈಗ ಎಷ್ಟು ದೃಢವಾಗಿದೆಯೆಂದರೆ, ಹಿಂದುತ್ವನಿಷ್ಠ ಸಂಘಟನೆಗಳನ್ನು ಬಿಟ್ಟರೆ ಪ್ರಚಂಡ ಸಂಖ್ಯೆಯಲ್ಲಿ ಇಂದು ಕೂಡ ಅಸ್ತಿತ್ವದಲ್ಲಿರುವ ಹಿಂದೂ ಸಮಾಜಕ್ಕೆ ‘ಹಿಂದೂ ಶಬ್ದವು ಭಯ ಹುಟ್ಟಿಸುವ, ಕೋಮುವಾದಿ ಹಾಗೂ ಕೆಲವು ಪ್ರಸಂಗಗಳಲ್ಲಿ ರಾಷ್ಟ್ರವಿರೋಧಿಯೆಂದು ಅನ್ನಿಸುತ್ತದೆ.

– ಶ್ರೀ. ರಾ. ಭಾ. ಕುಲಕರ್ಣಿ (ಸ್ವಾತಂತ್ರ್ಯವೀರ, ದೀಪಾವಳಿ ವಿಶೇಷಾಂಕ ೨೦೦೮, ಪುಟ ಸಂಖ್ಯೆ ೪೪-೪೫)