ಭಯೋತ್ಪಾದಕರೊಂದಿಗೆ ನಂಟಿರುವ ಶಂಕೆ
ದೇವಸ್ಥಾನಗಳ ಆಡಳಿತವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಸರಕಾರ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತದೆ; ಹಾಗಿದ್ದರೆ ಅನೇಕ ಮದರಸಾಗಳು, ಮಸೀದಿಗಳು ಮತ್ತು ದರ್ಗಾಗಳಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವಾಗ ಅವುಗಳನ್ನೇಕೆ ವಶಪಡಿಸಿಕೊಳ್ಳುವುದಿಲ್ಲ ? ಬದಲಾಗಿ ಸರಕಾರ ಅವುಗಳಿಗೆ ಅನುದಾನ ಸೀಡುತ್ತದೆ !
ಫತೇಹಗಡ (ಪಂಜಾಬ್) – ಉತ್ತರ ಭಾರತದ ಮುಖ್ಯ ಧಾರ್ಮಿಕಸ್ಥಳವಾದ ಫತೇಹಗಡನ ’ರೋಜಾ ಷರೀಫ್’ ದರ್ಗಾದಿಂದ ಮೂವರು ಮತಾಂಧ ಯುವಕರನ್ನು ಬಂಧಿಸಲಾಗಿದೆ. ಅವರ ಹೆಸರುಗಳು ಸೊಹೇಲ್ ಖಾನ್, ಇಮ್ರಾನ್ ಖಾನ್ ಮತ್ತು ಕಮ್ರಾನ್ ಖಾನ್ ಇದ್ದು ಅವರೆಲ್ಲರೂ ಸಹೋದರರಿದ್ದು ಭಯೋತ್ಪಾದಕರೊಂದಿಗೆ ಅವರ ನಂಟಿದೆ ಎಂದು ಶಂಕಿಸಲಾಗಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆರೋಪಿಗಳು ಆರು ದಿನಗಳಿಂದ ಇಲ್ಲಿಯೇ ಇದ್ದಾರೆ. ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ, ಅವರ ವಿರುದ್ಧ ಸುಲಿಗೆಯ ಪ್ರಕರಣಗಳಿವೆ. ಅದರ ತನಿಖೆ ನಡೆಸಲಾಗುತ್ತಿದೆ. ಅವರ ಸುಲಿಗೆ ಹಣದಿಂದ ಜಮ್ಮು-ಕಾಶ್ಮೀರದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದರು ಎಂದು ಹೇಳಲಾಗಿದೆ. ಜಮ್ಮು-ಕಾಶ್ಮೀರದ ಕೆಲವು ಅಪರಾಧ ಹಿನ್ನೆಲೆಯಿರುವ ವ್ಯಕ್ತಿಗಳೊಂದಿಗೆ ಅವರ ನಂಟಿದೆ. ಈ ಪ್ರಕರಣದ ಬಗ್ಗೆ ಪಂಜಾಬ್ ಮತ್ತು ಉತ್ತರ ಪ್ರದೇಶ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
’ರೋಜಾ ಷರೀಫ್’ ಮುಖ್ಯಸ್ಥರ ಬಗ್ಗೆ ವಿಚಾರಣೆ
ಈ ಬಗ್ಗೆ ಶಹಜಹಾನಪುರದ ಉಪನಿರೀಕ್ಷಕ ದಿಲೀಪ್ ಕುಮಾರ್ ಮಾತನಾಡುತ್ತಾ, ‘ಆರೋಪಿಗಳು ತಮ್ಮ ದುಷ್ಕೃತ್ಯಗಳನ್ನು ಮಾಡಿದ ನಂತರ ಈ ’ರೋಜಾ ಷರೀಫ್’ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ’ ಎಂದು ಹೇಳಿದರು. ಇದರಿಂದಾಗಿ ಪೊಲೀಸರು ’ರೋಜಾ ಷರೀಫ್’ದ ಖಲೀಫಾ ಖಲೀಫಾ ಸಯ್ಯದ್ ಮೊಹಮ್ಮದ್ ಸಾದಿಕ್ ರಜಾ ಮುಜಾದ್ದಿ ಅವರ ವಿಚಾರಣೆ ನಡೆಸಿದರು. ಮುಜದ್ದೀಯವರು, ‘ಈ ಮೂವರು ಆಗಸ್ಟ್ ೯ ರಂದು ಇಲ್ಲಿಗೆ ಬಂದರು; ಆದರೆ ಅವರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. (ಆದರೂ ಮುಜದ್ದಿ ಅವರನ್ನು ಹೇಗೆ ಇಟ್ಟುಕೊಂಡಿದ್ದರು? – ಸಂಪಾದಕರು) ಅವರು ಇಲ್ಲಿ ಯಾರನ್ನೂ ಭೇಟಿ ಮಾಡಿಲ್ಲ. ’ಪೊಲೀಸರು ಷರೀಫ್ ಅವರ ‘ಗೆಸ್ಟ್ ಹೌಸ್’ನ ವಿವರಗಳನ್ನು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.