ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣ) ದ ಹಳ್ಳಿಯ ದೇವಸ್ಥಾನದಲ್ಲಿದ್ದ ಶ್ರೀ ದುರ್ಗಾ ದೇವಿಯ ಮೂರ್ತಿಯ ಧ್ವಂಸ

ಇಲ್ಲಿಯ ನಾಗಿನಾ ಪ್ರದೇಶದ ಮಂಡಿಕೇಡ ಗ್ರಾಮದಲ್ಲಿ ನವರಾತ್ರಿಯಂದು ಶ್ರೀ ದುರ್ಗಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು; ಆದರೆ ಅಕ್ಟೋಬರ್ ೨೦ ರಂದು ಅಪರಿಚಿತ ವ್ಯಕ್ತಿಗಳು ಮೂರ್ತಿಯನ್ನು ಒಡೆದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ; ಆದರೆ ಘಟನೆ ನಡೆದ ಆರು ದಿನಗಳ ನಂತರವೂ ಯಾರನ್ನೂ ಬಂಧಿಸಿಲ್ಲ.

ದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ! – ಕೇಂದ್ರದ ರಾಜ್ಯಮಂತ್ರಿ ಪ್ರತಾಪ್ ಸಾರಂಗಿಯವರಿಂದ ಘೋಷಣೆ

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೊನಾ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆಗಾಗಿ ಸರ್ಕಾರ ೫೦೦ ರೂಪಾಯಿ ಖರ್ಚು ಮಾಡಲಿದೆ, ಎಂದು ಕೇಂದ್ರದ ರಾಜ್ಯ ಸಚಿವ ಪ್ರತಾಪ್ ಸಾರಂಗಿ ಘೋಷಿಸಿದರು.

ಅಮೆಝಾನ್‌ನ ‘ಅಲೆಕ್ಸಾ’ದ ಹಿಂದಿ ಆವೃತ್ತಿಯಿಂದ ‘ಕಾಶ್ಮೀರ ಚೀನಾದ ಭಾಗ’ ಎಂಬ ಹೇಳಿಕೆ

‘ಅಮೆಝಾನ್’ ಈ ಆನ್‌ಲೈನ್ ಮಾರಾಟ ಮಾಡುವ ಸಂಸ್ಥೆಯ ‘ಆರ್ಟಿಫಿಶಿಯಲ್ ಇಂಟಲಿಜೆಂಸ್’ನ ಸೇವೆ ನೀಡುವ ‘ಅಲೆಕ್ಸಾ’ವು ಕಾಶ್ಮೀರವು ಚೀನಾದ ಭಾಗವೆಂದು ಹೇಳಿದೆ. ಈ ಬಗ್ಗೆ ಭಾರತೀಯರೊಬ್ಬರು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ, ಅದರಿಂದ ಇದು ಗಮನಕ್ಕೆ ಬಂದಿದೆ. ‘ಅಲೆಕ್ಸಾ’ದ ಹಿಂದಿ ಆವೃತ್ತಿಯಲ್ಲಿ ಕಾಶ್ಮೀರವನ್ನು ಚೀನಾದ ಭಾಗವಾಗಿದೆ ಎಂದು ಹೇಳಿದರೆ, ಇಂಗ್ಲಿಷ್ ಆವೃತ್ತಿಯು ಭಾರತದ ಭಾಗವಾಗಿದೆ ಎಂದು ಹೇಳುತ್ತಿದೆ.

ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ‘ಸನಾತನ ಚೈತನ್ಯವಾಣಿ ಆಪ್’ನ ಲೋಕಾರ್ಪಣೆ !

ಸಮಾಜಕ್ಕೆ ಶಾಸ್ತ್ರೋಕ್ತವಾಗಿ ಪದ್ದತಿಯಿಂದ ಹಾಗೂ ಭಾವಪೂರ್ಣ ಧ್ವನಿಯಲ್ಲಿ ಹೇಳಿದ ಹಾಗೂ ಸಂತರ, ಸಾಧನೆ ಮಾಡುತ್ತಿರುವ ಸಾಧಕರ ಸಾತ್ತ್ವಿಕ ವಾಣಿಯಿಂದ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗಾಗಿ ಲಭ್ಯವಾಗಬೇಕೆಂದು ಸನಾತನ ಸಂಸ್ಥೆಯು ಅಕ್ಷಯ ತದಿಗೆಯಂದು ‘ಸನಾತನ ಚೈತನ್ಯವಾಣಿ’ ಆಡಿಯೋ ಆಪ್‌ಅನ್ನು ಪ್ರಪ್ರಥಮಬಾರಿ ಮರಾಠಿ ಭಾಷೆಯಲ್ಲಿ ಲಭ್ಯ ಮಾಡಿಕೊಟ್ಟಿತು.

ಕೀರ್ತನೆಯನ್ನು ಪ್ರೇಮಪ್ರಸಂಗದ ರೂಪದಲ್ಲಿ ತೋರಿಸಿ ಅವಮಾನ

‘ಝೀ ವಾಹಿನಿ’ಯ ಸಮೂಹ ಪೈಕಿ ಒಂದಾಗಿರುವ ‘ಝೀ ವಾಜವಾ’ ಇದು ಮರಾಠಿ ಸಂಗೀತ ವಾಹಿನಿಯ ಬಗ್ಗೆ ಪ್ರಸಾರ ಮಾಡಲಾಗುತ್ತಿದೆ. ಅದರ ಜಾಹೀರಾತನ್ನು ‘ಝೀ ಯುವಾ’ ಈ ಮರಾಠಿ ವಾಹಿನಿಯಿಂದ ಪ್ರಸಾರ ಮಾಡಲಾಯಿತು. ಇದರಲ್ಲಿ ಕೀರ್ತನೆಯ ಅವಮಾನ ಮಾಡಲಾಗಿದೆ.

ಪಾಕಿಸ್ತಾನದಲ್ಲಿ ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಧ್ವಂಸಗೊಳಿಸಿದ ಮತಾಂಧರು

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿನ ಥಾರಪಾರಕರದ ನಗರಪರಕರದಲ್ಲಿನ ಸಿಂಹವಾಹಿನಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮತಾಂಧರು ಧ್ವಂಸ ಮಾಡಿಬಿಟ್ಟಿದ್ದಾರೆ. ಪಾಕಿಸ್ತಾನದಲ್ಲಿನ ಡಾ. ರೇಖಾ ಮಾಹೇಶ್ವರಿಯವರು ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಧ್ವಂಸ ಮಾಡಿದ ಮೂರ್ತಿಯ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ನೆಲ್ಲೈ(ತಮಿಳನಾಡು)ನ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಬಂದ ಕ್ರೈಸ್ತ ಪಾದ್ರಿಗಳು ಹಾಗೂ ನನ್‌ಗಳು ಇವರ ನಿಯೋಗವನ್ನು ಎದ್ದು ನಿಂತು ಸ್ವಾಗತಿಸಿದ ಜಿಲ್ಲಾಧಿಕಾರಿ !

ಇಲ್ಲಿಯ ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪಾರವರನ್ನು ಕ್ರೈಸ್ತ ಪಾದ್ರಿ ಹಾಗೂ ನನ್ ಮನವಿಯನ್ನು ನೀಡಲು ಹೋದಾಗ ಜಿಲ್ಲಾಧಿಕಾರಿಗಳು ಅವರನ್ನು ಸ್ವಾಗತಿಸಲು ಎದ್ದುನಿಂತರು. ಇದರಿಂದ ಅವರ ಭೂಮಿಕೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿದೆ. ‘ಹಿಂದೂಗಳ ಪುರೋಹಿತರು ಅಥವಾ ಹಿಂದೂತ್ವನಿಷ್ಠರ ನಿಯೋಗವು ಅವರನ್ನು ಭೇಟಿ ಮಾಡಲು ಹೋದಾಗ ಅವರು ಎದ್ದು ನಿಲ್ಲುವರೇ ?’

‘ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ವೇಶ್ಯೆಯೆಂದು ಪರಿಗಣಿಸಲಾಗುತ್ತದೆ !’(ಅಂತೆ)

ಇಲ್ಲಿಯ ದಲಿತರ ಪಕ್ಷವೆಂದು ಪರಿಗಣಿಸಲ್ಪಟ್ಟ ವಿದುಥಲೈ ಚಿರುಥಾಯಗಲ ಕಾಚಿ(ವಿಸಿಕೆ) ಪಕ್ಷದ ಮುಖಂಡ ಹಾಗೂ ಸಾಂಸದ ಥೋಲ್ ತಿರುಮಾವಲವನ್ ಅವರು ಪೆರಿಯಾರವಾದಿ ಸಮೂಹದಿಂದ ಆಯೋಜಿಸಲಾಗಿದ್ದ ಆನ್‌ಲೈನ್ ಚರ್ಚಾಕೂಟದಲ್ಲಿ ಹಿಂದೂ ಧರ್ಮಗ್ರಂಥ ಮನುಸ್ಮೃತಿಯ ಆಧಾರವನ್ನು ನೀಡುತ್ತಾ ‘ಹಿಂದೂ ಧರ್ಮದಲ್ಲಿ ವಿಶೇಷವಾಗಿ ಬ್ರಾಹ್ಮಣರಲ್ಲಿ ಮಹಿಳೆಯರನ್ನು ವೇಶ್ಯೆರೆಂದು ಪರಿಗಣಿಸಲಾಗುತ್ತದೆ.

ಸುಳ್ಳು ಹಾಗೂ ಅಯೋಗ್ಯ ವಾರ್ತೆ ಪ್ರಸಾರ ಮಾಡಿದ ‘ಆಜ್ ತಕ್’, ‘ಝೀ ನ್ಯೂಸ್’, ‘ಇಂಡಿಯಾ ಟಿವಿ’ ಹಾಗೂ ‘ನ್ಯೂಸ್ ೨೪’ ಇವುಗಳಿಗೆ ಕ್ಷಮೆಯಾಚಿಸುವಂತೆ ಎನ್.ಬಿ.ಎಸ್.ಎ. ನಿಂದ ಆದೇಶ.

ನಟ ಸುಶಾಂತ್ ಸಿಂಗ ರಜಪೂತ ಅವರ ಆತ್ಮಹತ್ಯೆ ಪ್ರಕರಣದಲ್ಲಿ ‘ಆಜ್ ತಕ್’ ಈ ಹಿಂದಿ ವಾರ್ತಾವಾಹಿನಿಯು ಸುಳ್ಳು ವಾರ್ತೆಯನ್ನು ಪ್ರಕಟಿಸಿದ್ದರಿಂದ ‘ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಸ್ಟೆಂಡರ್ಡ ಅಸೊಸಿಯೇಶನ್’ ಇದು (ಎನ್.ಬಿ.ಎಸ್.ಎ.ಯು) ಅಕ್ಟೋಬರ್ ೨೭ ರ ರಾತ್ರಿ ೮ ಗಂಟೆಗೆ ವಾರ್ತಾವಾಹಿನಿಗಳಿಗೆ ಕ್ಷಮೆಯಾಚಿಸುವಂತೆ ಹಾಗೆಯೇ ೧ ಲಕ್ಷ ರೂಪಾಯಿ ದಂಡ ಕಟ್ಟುವಂತೆ ಆದೇಶಿಸಿದೆ.

ಬಾಡಮೆರ್ (ರಾಜಸ್ಥಾನ)ದಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಶನ ಲಾಲ ಭೀಲ ಎಂಬ ೩೫ ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ರೋಶನ ಲಾಲನು ಅನೇಕ ದಿನಗಳಿಂದ ಗಡಿಯಲ್ಲಿರುವ ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದನು.