ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣ) ದ ಹಳ್ಳಿಯ ದೇವಸ್ಥಾನದಲ್ಲಿದ್ದ ಶ್ರೀ ದುರ್ಗಾ ದೇವಿಯ ಮೂರ್ತಿಯ ಧ್ವಂಸ

ಮದರಸಾ ಮೌಲ್ವಿಯ ಆದೇಶದ ಮೇರೆಗೆ ಮೂರ್ತಿಯನ್ನು ಧ್ವಂಸ ಮಾಡಲಾಗಿದೆ ಎಂದು ಹಿಂದೂಗಳಿಂದ ಆರೋಪ

ಹರಿಯಾಣದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಇಂತಹ ಘಟನೆಗಳು ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಮುಸಲ್ಮಾನರು ಬಹುಸಂಖ್ಯಾತರಿರುವ ಮೇವಾತ್‌ನ ಹಿಂದೂಗಳನ್ನು ಹಾಗೂ ದೇವಾಲಯಗಳನ್ನು ಭಾಜಪ ಸರಕಾರ ರಕ್ಷಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಮೇವಾತ್ (ಹರಿಯಾಣ) – ಇಲ್ಲಿಯ ನಾಗಿನಾ ಪ್ರದೇಶದ ಮಂಡಿಕೇಡ ಗ್ರಾಮದಲ್ಲಿ ನವರಾತ್ರಿಯಂದು ಶ್ರೀ ದುರ್ಗಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು; ಆದರೆ ಅಕ್ಟೋಬರ್ ೨೦ ರಂದು ಅಪರಿಚಿತ ವ್ಯಕ್ತಿಗಳು ಮೂರ್ತಿಯನ್ನು ಒಡೆದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ; ಆದರೆ ಘಟನೆ ನಡೆದ ಆರು ದಿನಗಳ ನಂತರವೂ ಯಾರನ್ನೂ ಬಂಧಿಸಿಲ್ಲ.

ಇದೇ ರೀತಿ ೨೦೧೬ ರಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು ಎಂದು ಸ್ಥಳೀಯ ಹಿಂದೂಗಳು ಹೇಳಿದ್ದಾರೆ. ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಮದರಸಾದ ಮೌಲ್ವಿಯ ಆದೇಶದ ಮೇರೆಗೆ ಈ ದಾಳಿಗಳಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.