ಅಮೆಝಾನ್‌ನ ‘ಅಲೆಕ್ಸಾ’ದ ಹಿಂದಿ ಆವೃತ್ತಿಯಿಂದ ‘ಕಾಶ್ಮೀರ ಚೀನಾದ ಭಾಗ’ ಎಂಬ ಹೇಳಿಕೆ

ಸಾಮಾಜಿಕ ಮಾಧ್ಯಮದಿಂದ ವಿರೋಧವಾದಾಗ ಸರಿಪಡಿಸುವುದಾಗಿ ಆಶ್ವಾಸನೆ

ನವ ದೆಹಲಿ – ‘ಅಮೆಝಾನ್’ ಈ ಆನ್‌ಲೈನ್ ಮಾರಾಟ ಮಾಡುವ ಸಂಸ್ಥೆಯ ‘ಆರ್ಟಿಫಿಶಿಯಲ್ ಇಂಟಲಿಜೆಂಸ್’ನ ಸೇವೆ ನೀಡುವ ‘ಅಲೆಕ್ಸಾ’ವು ಕಾಶ್ಮೀರವು ಚೀನಾದ ಭಾಗವೆಂದು ಹೇಳಿದೆ. ಈ ಬಗ್ಗೆ ಭಾರತೀಯರೊಬ್ಬರು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ, ಅದರಿಂದ ಇದು ಗಮನಕ್ಕೆ ಬಂದಿದೆ. ‘ಅಲೆಕ್ಸಾ’ದ ಹಿಂದಿ ಆವೃತ್ತಿಯಲ್ಲಿ ಕಾಶ್ಮೀರವನ್ನು ಚೀನಾದ ಭಾಗವಾಗಿದೆ ಎಂದು ಹೇಳಿದರೆ, ಇಂಗ್ಲಿಷ್ ಆವೃತ್ತಿಯು ಭಾರತದ ಭಾಗವಾಗಿದೆ ಎಂದು ಹೇಳುತ್ತಿದೆ. ಸಾಮಾಜಿಕ ಮಾಧ್ಯಮದಿಂದ ಅಲೆಕ್ಸಾಗೆ ವಿರೋಧವಾಗಲು ಆರಂಭವಾದಾಗ ಅಮೆಜಾನ್ ತನ್ನ ಟ್ವೀಟ್‌ನ ಮೂಲಕ ‘ತಪ್ಪನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು’ ತಾವು ಈ ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಿದ್ದೇವೆ ಹಾಗೂ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದೆ.