ದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ! – ಕೇಂದ್ರದ ರಾಜ್ಯಮಂತ್ರಿ ಪ್ರತಾಪ್ ಸಾರಂಗಿಯವರಿಂದ ಘೋಷಣೆ

ನವ ದೆಹಲಿ – ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೊನಾ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆಗಾಗಿ ಸರ್ಕಾರ ೫೦೦ ರೂಪಾಯಿ ಖರ್ಚು ಮಾಡಲಿದೆ, ಎಂದು ಕೇಂದ್ರದ ರಾಜ್ಯ ಸಚಿವ ಪ್ರತಾಪ್ ಸಾರಂಗಿ ಘೋಷಿಸಿದರು.

ಬಿಹಾರದ ಚುನಾವಣೆಯ ಪ್ರಸಾರದ ಸಮಯದಲ್ಲಿ ಭಾಜಪದಿಂದ ‘ಬಿಹಾರದ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು’, ಎಂದು ಘೋಷಿಸಿದ ನಂತರ ಈ ಬಗ್ಗೆ ದೇಶಾದ್ಯಂತ ವಿರೋಧವಾಗಲು ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಸಾರಂಗಿಯ ಘೋಷಣೆಯನ್ನು ಮಹತ್ವದ್ದೆಂದು ಪರಿಗಣಿಸಲಾಗುತ್ತಿದೆ.