‘ಸನಾತನ ಚೈತನ್ಯವಾಣಿ’ಯ ಮಾಧ್ಯಮದಿಂದ ನಾದದ ಅಂದರೆ ಆಕಾಶತತ್ತ್ವದ ಸ್ತರದಲ್ಲಿ ಕಾರ್ಯ ನಡೆಯುತ್ತಿದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ರಾಮನಾಥಿ (ಗೋವಾ) – ಸಮಾಜಕ್ಕೆ ಶಾಸ್ತ್ರೋಕ್ತವಾಗಿ ಪದ್ದತಿಯಿಂದ ಹಾಗೂ ಭಾವಪೂರ್ಣ ಧ್ವನಿಯಲ್ಲಿ ಹೇಳಿದ ಹಾಗೂ ಸಂತರ, ಸಾಧನೆ ಮಾಡುತ್ತಿರುವ ಸಾಧಕರ ಸಾತ್ತ್ವಿಕ ವಾಣಿಯಿಂದ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗಾಗಿ ಲಭ್ಯವಾಗಬೇಕೆಂದು ಸನಾತನ ಸಂಸ್ಥೆಯು ಅಕ್ಷಯ ತದಿಗೆಯಂದು ‘ಸನಾತನ ಚೈತನ್ಯವಾಣಿ’ ಆಡಿಯೋ ಆಪ್‌ಅನ್ನು ಪ್ರಪ್ರಥಮಬಾರಿ ಮರಾಠಿ ಭಾಷೆಯಲ್ಲಿ ಲಭ್ಯ ಮಾಡಿಕೊಟ್ಟಿತು. ಸಮಾಜದಿಂದ ಸಿಗುತ್ತಿರುವ ಒಳ್ಳೆಯ ಅಭಿಪ್ರಾಯದಿಂದ ಈ ಆಪ್ ಈಗ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಗಳಲ್ಲಿ ಲಭ್ಯವಾಗಿದೆ. ಅಕ್ಟೊಬರ್ ೨೫ ರ ದಸರಾದ ಶುಭಮುಹೂರ್ತದಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಈ ಮೂರು ಭಾಷೆಗಳ ಆಡಿಯೋ ಆಪ್‌ಅನ್ನು ಇಲ್ಲಿಯ ಸನಾತನ ಆಶ್ರಮದಲ್ಲಿ ಪ್ರಕಾಶನ ಮಾಡಲಾಯಿತು.
ಈ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು, “ಸನಾತನ ಚೈತನ್ಯವಾಣಿ’ ಈ ಆಡಿಯೋ ಆಪ್‌ನ ಮಾಧ್ಯಮದಿಂದ ನಾದದ ಅಂದರೆ ಆಕಾಶತತ್ತ್ವದ ಮಟ್ಟದಲ್ಲಿ ಕಾರ್ಯ ಆರಂಭವಾಗಿದೆ. ೪ ಭಾಷೆಗಳಲ್ಲಿರುವ ಈ ಆಪ್‌ನಿಂದ ಇನ್ನು ಬೃಹತ್ ಪ್ರಮಾಣದಲ್ಲಿ ಧರ್ಮಪ್ರಸಾರವಾಗಲಿದೆ. ಗುರುಗಳ ಆಶೀರ್ವಾದದಿಂದಾಗಿ ಎಲ್ಲ ಮಟ್ಟದಲ್ಲಿಯೂ ರಾಷ್ಟ್ರ ಹಾಗೂ ಧರ್ಮಗಳ ಕಾರ್ಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ” ಎಂದು ಹೇಳಿದರು.
‘ಸನಾತನ ಚೈತನ್ಯವಾಣಿ’ ಆಪ್ ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ಎಲ್ಲರಿಗಾಗಿ ಲಭ್ಯವಾಗಿದೆ. ಹೆಚ್ಚೆಚ್ಚು ಜನರು ಈ ಆಪ್‌ಅನ್ನು ಡೌನ್‌ಲೋಡ್ ಮಾಡಿ ಇದನ್ನು ಉಪಯೋಗಿಸಬೇಕು ಹಾಗೂ ಸಾತ್ತ್ವಿಕ ಸ್ತೋತ್ರ, ಆರತಿ, ಶ್ಲೋಕ, ಮಂತ್ರ, ನಾಮಜಪ ಇತ್ಯಾದಿಗಳ ಲಾಭ ಪಡೆದುಕೊಳ್ಳಬೇಕು. ಇಲ್ಲಿಯವರೆಗೆ ಮರಾಠಿ ಭಾಷೆಯಲ್ಲಿ ಈ ಆಪ್ ೨೪ ಸಾವಿರಕ್ಕಿಂತಲೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.


‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ
ಅಶ್ಲೀಲತೆ ಹರಡುವ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳಿಗೆ ಸೆನ್ಸಾರ್ ಮಂಡಳಿಯ ಪೂರ್ವಾನ್ಮತಿ ಕಡ್ಡಾಯಗೊಳಿಸಿ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
Muslims Oppose Yoga Day : ‘ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಯೋಗ ದಿನ ಏತಕ್ಕೆ ?’
ಚಿಕ್ಕ ಮಕ್ಕಳಿಗೆ ಗೋಮಾಂಸ ತಿನ್ನಲು ಸಲಹೆ ನೀಡುವವರ ವಿರುದ್ಧ ಮೊಕದ್ದಮೆ ದಾಖಲಿಸಿ ! – ವಿಶ್ವ ಹಿಂದೂ ಪರಿಷತ್