ಮರಾಠಿ ಸಂಗೀತ ವಾಹಿನಿ ‘ಝೀ ವಾಜವಾ’ದ ಜಾಹಿರಾತು ಝೀ ಯುವಾ ವಾಹಿನಿಯಿಂದ ಪ್ರಸಾರ
ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ದೇವತೆಗಳ ಅವಮಾನವನ್ನು ತಡೆಗಟ್ಟಲು ಕೇಂದ್ರ ಸರಕಾರವು ಕಠಿಣ ಕಾನೂನು ಯಾವಾಗ ಮಾಡುವುದು ?’, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತಿದೆ ! ಹಿಂದೂಗಳು ಇಂತಹ ವಾಹಿನಿಯ ಮೇಲೆ ಬಹಿಷ್ಕಾರ ಹಾಕಿದರೆ ಆಶ್ಚರ್ಯ ಪಡಬೇಕಿಲ್ಲ ! |
ಮುಂಬಯಿ – ‘ಝೀ ವಾಹಿನಿ’ಯ ಸಮೂಹ ಪೈಕಿ ಒಂದಾಗಿರುವ ‘ಝೀ ವಾಜವಾ’ ಇದು ಮರಾಠಿ ಸಂಗೀತ ವಾಹಿನಿಯ ಬಗ್ಗೆ ಪ್ರಸಾರ ಮಾಡಲಾಗುತ್ತಿದೆ. ಅದರ ಜಾಹೀರಾತನ್ನು ‘ಝೀ ಯುವಾ’ ಈ ಮರಾಠಿ ವಾಹಿನಿಯಿಂದ ಪ್ರಸಾರ ಮಾಡಲಾಯಿತು. ಇದರಲ್ಲಿ ಕೀರ್ತನೆಯ ಅವಮಾನ ಮಾಡಲಾಗಿದೆ.
ಈ ವಿಡಿಯೋದಲ್ಲಿ ಕೆಲವು ಕೀರ್ತನಕಾರರು ದೇವತೆಗಳ ಮುಂದೆ ಕೀರ್ತನೆ ಮಾಡುತ್ತಿದ್ದಾರೆ. ಕೀರ್ತನಕಾರರ ಎದುರು ಕೆಲವು ಯುವಕರು ಹಾಗೂ ಯುವತಿಯರು ಕೀರ್ತನೆಯನ್ನು ಕೇಳುತ್ತಿದ್ದಾರೆ. ಆ ಸಮಯದಲ್ಲಿ ಅವರಿಗೆ ಬೇಸರ ಬರುತ್ತದೆ. ಅದೇ ಸಮಯದಲ್ಲಿ ಓರ್ವ ಯುವತಿ ಓರ್ವ ಯುವಕನನ್ನು ಸನ್ನೆ ಮಾಡುತ್ತಾ ಆಕರ್ಷಿಸುತ್ತಾಳೆ. ನಂತರ ಈ ಯುವತಿಯು ಕೀರ್ತನದಲ್ಲಿ ಸಹಭಾಗಿಯಾಗಿ ಕೀರ್ತನದ ತಾಳವನ್ನು ಪ್ರೇಮಪ್ರಸಂಗವನ್ನು ಸೇರಿಸಿ ಹಾಡತೊಡಗುತ್ತಾಳೆ. ಈ ಇಬ್ಬರ ಪ್ರೀತಿಯನ್ನು ನೋಡಿ ಕೀರ್ತನೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಕೀರ್ತನೆಯ ತಾಳಕ್ಕೆ ಕುಣಿಯಲು ಆರಂಭಿಸುತ್ತಾರೆ. ಈ ರೀತಿಯಲ್ಲಿ ಕೀರ್ತನೆಯನ್ನು ಅವಮಾನಿಸಲಾಗಿದೆ.
ಈ ಅವಮಾನವನ್ನು ಹಿಂದೂ ಧರ್ಮಾಭಿಮಾನಿಗಳು ಈ ಕೆಳಗಿನ ಸಂಪರ್ಕಸಂಖ್ಯೆಯಲ್ಲಿ ‘ಝೀ ವಾಜವಾ’ ಹಾಗೂ ‘ಝೀ ಯುವಾ’ ಈ ಎರಡೂ ವಾಹಿನಿಗಳಿಗೆ ಕಾನೂನಿನ ಮಾರ್ಗದಿಂದ ವಿರೋಧಿಸುತ್ತಿದ್ದಾರೆ.
ಝೀ ಯುವಾ ವಾಜವಾ : facebook.com/zeevajwa/
ಝೀ ಯುವಾ ಫೇಸ್‌ಬುಕ್ : facebook.com/ZeeYuva/
ಟ್ವಿಟರ್ : @zeeyuva