ನೆಲ್ಲೈ(ತಮಿಳನಾಡು)ನ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಬಂದ ಕ್ರೈಸ್ತ ಪಾದ್ರಿಗಳು ಹಾಗೂ ನನ್‌ಗಳು ಇವರ ನಿಯೋಗವನ್ನು ಎದ್ದು ನಿಂತು ಸ್ವಾಗತಿಸಿದ ಜಿಲ್ಲಾಧಿಕಾರಿ !

ನೆಲ್ಲೈ (ತಮಿಳನಾಡು) – ಇಲ್ಲಿಯ ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪಾರವರನ್ನು ಕ್ರೈಸ್ತ ಪಾದ್ರಿ ಹಾಗೂ ನನ್ ಮನವಿಯನ್ನು ನೀಡಲು ಹೋದಾಗ ಜಿಲ್ಲಾಧಿಕಾರಿಗಳು ಅವರನ್ನು ಸ್ವಾಗತಿಸಲು ಎದ್ದುನಿಂತರು. ಇದರಿಂದ ಅವರ ಭೂಮಿಕೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿದೆ. ‘ಹಿಂದೂಗಳ ಪುರೋಹಿತರು ಅಥವಾ ಹಿಂದೂತ್ವನಿಷ್ಠರ ನಿಯೋಗವು ಅವರನ್ನು ಭೇಟಿ ಮಾಡಲು ಹೋದಾಗ ಅವರು ಎದ್ದು ನಿಲ್ಲುವರೇ ?’, ‘ಕೊರೋನಾ ವಿಪತ್ತಿನ ಕಾಲದಲ್ಲಿ ಜನರನ್ನು ಭೇಟಿಯಾಗದ ಹಾಗೂ ಯಾವುದೇ ಅರ್ಜಿಯನ್ನು ಸ್ವೀಕಾರ ಮಾಡದ ಜಿಲ್ಲಾಧಿಕಾರಿಗಳು ಇಷ್ಟು ಜನರಿಗೆ ತಮ್ಮ ಕಛೇರಿಯಲ್ಲಿ ಹೇಗೆ ಪ್ರವೇಶ ನೀಡಿದರು ?’, ‘ಸಾಮಾಜಿಕ ಅಂತರ ಅಥವಾ ಮಾಸ್ಕ್ ಧರಿಸದೇ ಬಂದಂತಹ ಜನರನ್ನು ಅವರು ಹೇಗೆ ಭೇಟಿಯಾದರು ?’, ‘ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶವನ್ನು ಪಾಲಿಸುವ ಜವಾಬ್ದಾರಿಯಿರುವ ಜಿಲ್ಲಾಧಿಕಾರಿಗಳು ಅದನ್ನು ಹೇಗೆ ಉಲ್ಲಂಘಿಸಿದರು ?’ ‘ಅವರು ಸ್ವತಃ ಕ್ರೈಸ್ತರಾಗಿರುವುದರಿಂದ ಅವರು ಈ ವಿಶೇಷ ಅಧಿಕಾರವನ್ನು ಉಪಯೋಗಿಸಿರಬೇಕು’ ಇವೇ ಮುಂತಾದ ಪ್ರಶ್ನೆಗಳನ್ನು ವಿಚಾರಿಸಲಾಗುತ್ತಿದೆ.
ಕೆಲವು ತಿಂಗಳುಗಳ ಹಿಂದೆ, ಕ್ರೈಸ್ತರು ನೆಲೈನ ಅರುಲಮಿಗು ಮಣಿಮೂರ್ತಿಯಲ್ಲಿ ದೇವಾಲಯದ ಮುಂದೆ ಗೋರಿಗಳನ್ನು ಕಟ್ಟಿದ್ದರು. ಈ ಸ್ಥಳವು ದೇವಾಲಯಕ್ಕೆ ಸೇರಿದೆ. ೨ ಕ್ರೈಸ್ತ ಸಂಘಟನೆಗಳು ಈ ಸ್ಥಳವನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಈ ಪೈಕಿ ಒಂದು ಸಂಸ್ಥೆ ಅಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಿದರೆ, ಇನ್ನೊಂದು ಸಂಸ್ಥೆ ಕಳೆದ ಕೆಲವು ದಿನಗಳಿಂದ ಕ್ರೈಸ್ತರ ಶವಗಳನ್ನು ಹೂಳಲು ಪ್ರಾರಂಭಿಸಿದೆ. ಈ ಸಂಘಟನೆಗಳು ಜಿಲ್ಲಾಧಿಕಾರಿಗಳಲ್ಲಿ, ಹಿಂದೂಗಳು ಗೋರಿಗಳನ್ನು ಧ್ವಂಸ ಮಾಡಿದ್ದರಿಂದ ತಮಗೆ ಹಾನಿಯಾಗಿದೆ ಎಂದು ದೂರನ್ನು ನೀಡಿವೆ. (ಧೂರ್ತ ಕ್ರೈಸ್ತರು ! ಹಿಂದೂಗಳೇ, ಇಂತಹ ಕ್ರೈಸ್ತರಿಂದ ಎಚ್ಚರದಿಂದಿರಿ ! – ಸಂಪಾದಕ)