ಲಕ್ಷ್ಮಣಪುರಿ (ಉತ್ತರಪ್ರದೇಶ)ದಲ್ಲಿ ದೇವಸ್ಥಾನದ ಅರ್ಚಕರನ್ನು ಹತ್ಯೆಗೈದು ಲೂಟಿ !

ಇಲ್ಲಿನ ಶಿವಪುರಿ ಊರಿನಲ್ಲಿರುವ ಐತಿಹಾಸಿಕ ರಣಬಾಬಾ ಮಹಾದೇವ ದೇವಸ್ಥಾನದಲ್ಲಿ ೧೯ ಜನವರಿಯ ರಾತ್ರಿ ಅಪರಿಚಿತರು ಲೂಟಿ ಮಾಡಿ ಅಲ್ಲಿನ ೮೦ ವರ್ಷದ ಬಾಬಾ ಫಕೀರೆ ದಾಸ ಇವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇಲ್ಲಿನ ಅರ್ಪಣೆ ಪೆಟ್ಟಿಗೆಯಲ್ಲಿರುವ ಹಣವನ್ನು ಕದ್ದು ಪಲಾಯನ ಮಾಡಿದ್ದಾರೆ ಹಾಗೂ ೩ ಘಂಟೆಗಳು ಹಾಗೂ ದೇವಸ್ಥಾನದಲ್ಲಿರುವ ಧಾನ್ಯವನ್ನೂ ಸಹ ಕಳ್ಳರೂ ಕದ್ದೊಯ್ದಿದ್ದಾರೆ.

ಗುಜರಾತ ಸರಕಾರದಿಂದ `ಡ್ರಾಗನ್ ಫ್ರೂಟ್’ ಹಣ್ಣಿಗೆ `ಕಮಲಮ್’ ಎಂದು ನಾಮಕರಣ !

ಗುಜರಾತನ ಭಾಜಪ ಸರಕಾರವು `ಡ್ರಾಗನ್ ಫ್ರೂಟ್’ ಎಂದು ಪ್ರಸಿದ್ಧವಾಗಿರುವ ಹಣ್ಣಿಗೆ `ಕಮಲಮ್’ ನಾಮಕರಣ ಮಾಡಿದೆ. ಈ ಹಣ್ಣಿಗೆ ಡ್ರಾಗನ್ ಎಂಬ ಶಬ್ದವನ್ನು ಉಪಯೋಗಿಸುವುದು ಯೋಗ್ಯವಲ್ಲ. ಡ್ರಾಗನ್ ಹಣ್ಣು ಕಮಲದಂತೆ ಕಾಣುತ್ತದೆ. ಹಾಗಾಗಿ ಈ ಹಣ್ಣಿಗೆ ಸಂಸ್ಕೃತ ಭಾಷೆಗನುಸಾರ `ಕಮಲಮ್’ ಎಂದು ಹೆಸರು ನೀಡಲಾಗಿದೆ. ಈ ಮಾಹಿತಿಯನ್ನು ಮುಖ್ಯಮಂತ್ರಿ ವಿಜಯ ರೂಪಾಣಿ ಇವರು ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ಮರಾಠಾ ಮೀಸಲಾತಿಯ ಆಲಿಕೆಯನ್ನು ೫ ಫೆಬ್ರವರಿ ತನಕ ಮುಂದೂಡಿದೆ

ಮರಾಠಾ ಮೀಸಲಾತಿಯ ಪ್ರಕರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ(ಖಂಡ) ಪೀಠದೆದುರು 20 ಜನವರಿಯಂದು ಅಂತಿಮ ಆಲಿಕೆಯು ಪ್ರಾರಂಭವಾಗಲಿತ್ತು; ಆದರೆ ನ್ಯಾಯಾಲಯವು ಆಲಿಕೆಗೆ ಸ್ಥಗಿತಿಯನ್ನು ನೀಡಿದೆ. ಈಗ ಈ ಪ್ರಕರಣದ ಬಗ್ಗೆ 5 ಫೆಬ್ರವರಿಯಂದು ಆಲಿಕೆಯಾಗಲಿದೆ.

ಕರ್ನಾಟಕದ ಭಾಜಪ ಸರಕಾರವು ಗೋರಕ್ಷಕರ ಮೇಲಿನ ಅಪರಾಧಗಳನ್ನು ಹಿಂಪಡೆಯಲಿದೆ !

ರಾಜ್ಯದಲ್ಲಿ ಗೋರಕ್ಷಣೆಯನ್ನು ಮಾಡುವಾಗ ಗೋರಕ್ಷಕರ ವಿರುದ್ಧ ನೊಂದಾಯಿಸಲಾಗಿರುವ ಅಪರಾಧಗಳನ್ನು ಹಿಂಪಡೆಯುವ ನಿರ್ಣಯವನ್ನು ರಾಜ್ಯದ ಭಾಜಪ ಸರಕಾರವು ತೆಗೆದುಕೊಂಡಿದೆ. ರಾಜ್ಯದ ಪಶುಪಾಲನ ಮಂತ್ರಿ ಪ್ರಭು ಚೌಹಾನ ಇವರು ಈ ಮಾಹಿತಿಯನ್ನು ನೀಡಿದ್ದಾರೆ.

ಈಗ `ಅಮೆಝಾನ್ ಪ್ರೈಮ್’ ನ `ಮಿರ್ಝಾಪುರ’ ಈ ವೆಬ್ ಸಿರಿಸ್ ನ ಮೇಲೆ ನಿರ್ಬಂಧದ ಬೇಡಿಕೆ!

`ಅಮೆಝಾನ್ ಪ್ರೈಮ್’ನ `ಒಟಿಟಿ; ಆಪ್‍ನ `ತಾಂಡವ’ ವೆಬ್ ಸಿರಿಸ್ ನ ನಂತರ ಈಗ `ಮಿರ್ಝಾಪುರ’ ಈ ವೆಬ್ ಸಿರಿಸ್ ಅನ್ನು ಸಹ ನಿರ್ಬಂಧಿಸಬೇಕೆಂಬ ಬೇಡಿಕೆಯಾಗತೊಡಗಿದೆ. ಈ ವೆಬ್ ಸಿರಿಸ್‍ನ ವಿರುದ್ಧ ಅರವಿಂದ ಚತುರ್ವೇದಿ ಇವರು ಕೊತವಾಲಿ ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ನೊಂದಾಯಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಪರಿಷತ್ತಿನ ಸಭಾಗೃಹದಿಂದ ಸ್ವಾತಂತ್ರ್ಯವೀರ ಸಾವರಕರರ ಛಾಯಾಚಿತ್ರವನ್ನು ತೆಗೆಯಿರಿ (ಯಂತೆ) ! – ಕಾಂಗ್ರೆಸ್ ಶಾಸಕ ದೀಪಕ ಸಿಂಗರ ಬೇಡಿಕೆ

ರಾಜ್ಯದ ಕಾಂಗ್ರೆಸ್ ನೇತಾರ ದೀಪಕ ಸಿಂಹ ಇವರು ವಿಧಾನಪರಿಷತ್ತಿನ ಸಭಾಗೃಹದಲ್ಲಿ ಹಾಕಿರುವ ಸ್ವಾತಂತ್ರ್ಯವೀರ ಸಾವರಕರರ ಛಾಯಾಚಿತ್ರವನ್ನು ತೆಗೆದುಹಾಕಬೇಕೆಂದು ಸಭಾಪತಿಗಳಿಗೆ ಪತ್ರವನ್ನು ಬರೆದು ಬೇಡಿಕೆಯನ್ನಿಟ್ಟಿದ್ದಾರೆ. `ಆಂಗ್ಲರಲ್ಲಿ ಕ್ಷಮಾಯಾಚನೆಯನ್ನು ಮಾಡುವ ಸಾವರಕರರ ಛಾಯಾಚಿತ್ರವನ್ನು ಸ್ವಾತಂತ್ರ್ಯ ಸೈನಿಕರ ಜೊತೆಗೆ ಹಾಕುವುದು ಇದು ಅವರಿಗಾದ ಅವಮಾನವಾಗಿದೆ.

ನಮಗಿಂತ ಮೇಲೆ ಇನ್ನೊಂದು ನ್ಯಾಯಾಲಯವಿರುತ್ತಿದ್ದರೆ ಶೇ. ೫೦ ರಷ್ಟು ತೀರ್ಪುಗಳನ್ನು ಬದಲಾಯಿಸಿ ಬಿಡಲಾಗುತ್ತಿತ್ತು! – ಸರ್ವೋಚ್ಚ ನ್ಯಾಯಾಲಯ

ದೇಶದಲ್ಲಿ ನ್ಯಾಯಾಲಯಗಳಲ್ಲಿ ನೀಡಲಾಗುವ ಪ್ರತಿಯೊಂದು ತೀರ್ಪಿನ ವಿರುದ್ಧ ಆಹ್ವಾನ ನೀಡುವುದಕ್ಕೆ ಒಂದು ಮುಕ್ತಾಯ ಹಾಡಲೇಬೇಕು. ಒಂದು ವೇಳೆ ನಮ್ಮ ಮೇಲೆ ಇನ್ನೊಂದು ನ್ಯಾಯಾಲಯವಿದ್ದಿದ್ದಲ್ಲಿ ನಾವು ನೀಡಿದ ಅರ್ಧಕ್ಕಿಂತಲೂ ಹೆಚ್ಚು ತೀರ್ಪುಗಳನ್ನು ಸಹ ಬದಲಾಯಿಸಿ ಬಿಡಲಾಗುತ್ತಿತ್ತು ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ಆಲಿಕೆಯಲ್ಲಿ ನೀಡಿದೆ.

ಚೀನಾದಿಂದ ಅರುಣಾಚಲ ಪ್ರದೇಶದಲ್ಲಿರುವ ಭಾರತೀಯ ಗಡಿಯಲ್ಲಿ ಅತಿಕ್ರಮಣ ಮಾಡಿ ವಸತಿ ನಿರ್ಮಾಣ ಕಾಂಗ್ರೆಸ್ ಅವಧಿಯಲ್ಲಿ ಅಂದರೆ ೧೯೮೦ರ ದಶಮಾನದಿಂದಲೇ ಚೀನಾವು ಭಾರತೀಯ ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದೆ ! – ಭಾಜಪದ ಶಾಸಕ ತಾಪಿರ ತಾಓ ಇವರ ದಾವೆ

೯೮೦ರಿಂದ ಚೀನಾವು ನಿರಂತರವಾಗಿ ಭಾರತೀಯ ಭೂಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತಿದೆ. ಚೀನಾವು ಊರುಗಳನ್ನು ಕಬಳಿಸುವುದು, ಸೇನಾ ನೆಲೆಗಳನ್ನು ಕಟ್ಟುವುದು ಇವೆಲ್ಲ ಹೊಸ ಸಂಗತಿಗಳೇನಲ್ಲ. ಕಾಂಗ್ರೆಸ್‌ನ ಅಯೋಗ್ಯ ನಿಲುವಿನಿಂದ ದೇಶವು ಇದರ ಬೆಲೆಯನ್ನು ತೆರಬೇಕಾಗುತ್ತಿದೆ, ಎಂದು ಭಾಜಪದ ಶಾಸಕ ತಾಪಿರ ಗಾಓ ಇವರು ಆರೋಪಿಸಿದ್ದಾರೆ.

ಭಗವಾನ್ ಶಿವನನ್ನು ಅವಮಾನಿಸಿದ ಪ್ರಕರಣದಲ್ಲಿ ಬಂಗಾಲಿ ನಟಿ ಸಯಾನಿ ಘೋಷ ವಿರುದ್ಧ ದೂರು

ಸಯಾನಿ ಘೋಷ ಇವರು ೧೮ ಫೆಬ್ರವರಿ ೨೦೧೫ ರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಓರ್ವ ಮಹಿಳೆಯು ಶಿವಲಿಂಗಕ್ಕೆ ನಿರೋಧ ಹಾಕುತ್ತಿರುವುದನ್ನು ತೋರಿಸಲಾಗಿದೆ. ಆ ಚಿತ್ರದಲ್ಲಿ, ‘ದೇವರು ಈಗ ಇನ್ನು ಹೆಚ್ಚು ಉಪಕಾರಿಯಾಗಲಾರರು’, ಎಂದು ಬರೆಯಲಾಗಿತ್ತು.

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿವಿವಾದ ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪ ನವರಿಂದ ಉದ್ಧವ ಠಾಕರೆ ಇವರಿಗೆ ಪ್ರತ್ಯುತ್ತರ ಕರ್ನಾಟಕದ ಒಂದಿಂಚೂ ಭೂಮಿಯನ್ನು ಸಹ ಕೊಡಲಾರೆವು

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿವಿವಾದದ ಬಗ್ಗೆ ಮಾತನಾಡುವಾಗ ಉದ್ಧವ ಠಾಕರೆಯವರು, ‘ಕರ್ನಾಟಕದಲ್ಲಿರುವ ಮರಾಠಿ ಭಾಷಾ ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಳಗೆ ತರುವುದೇ ಈ ಗಡಿ ಹೋರಾಟದಲ್ಲಿ ಹುತಾತ್ಮರಾದ ಸೈನಿಕರಿಗೆ ಸಲ್ಲಿಸುವಂತಹ ಶ್ರದ್ಧಾಂಜಲಿಯಾಗುವುದು. ಅದಕ್ಕಾಗಿ ನಾವು ಸಂಘಟಿತ ಹಾಗೂ ಕಟಿಬದ್ಧರಾಗಿದ್ದೇವೆ’ ಎಂದು ಹೇಳಿದ್ದರು