ನಮಗಿಂತ ಮೇಲೆ ಇನ್ನೊಂದು ನ್ಯಾಯಾಲಯವಿರುತ್ತಿದ್ದರೆ ಶೇ. ೫೦ ರಷ್ಟು ತೀರ್ಪುಗಳನ್ನು ಬದಲಾಯಿಸಿ ಬಿಡಲಾಗುತ್ತಿತ್ತು! – ಸರ್ವೋಚ್ಚ ನ್ಯಾಯಾಲಯ


ನವ ದೆಹಲಿ – ದೇಶದಲ್ಲಿ ನ್ಯಾಯಾಲಯಗಳಲ್ಲಿ ನೀಡಲಾಗುವ ಪ್ರತಿಯೊಂದು ತೀರ್ಪಿನ ವಿರುದ್ಧ ಆಹ್ವಾನ ನೀಡುವುದಕ್ಕೆ ಒಂದು ಮುಕ್ತಾಯ ಹಾಡಲೇಬೇಕು. ಒಂದು ವೇಳೆ ನಮ್ಮ ಮೇಲೆ ಇನ್ನೊಂದು ನ್ಯಾಯಾಲಯವಿದ್ದಿದ್ದಲ್ಲಿ ನಾವು ನೀಡಿದ ಅರ್ಧಕ್ಕಿಂತಲೂ ಹೆಚ್ಚು ತೀರ್ಪುಗಳನ್ನು ಸಹ ಬದಲಾಯಿಸಿ ಬಿಡಲಾಗುತ್ತಿತ್ತು ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ಆಲಿಕೆಯಲ್ಲಿ ನೀಡಿದೆ. ಒಬ್ಬ ಬಾಡಿಗೆದಾರನಿಗೆ ಜಾಗವನ್ನು ಖಾಲಿ ಮಾಡಲು ಆದೇಶ ನೀಡುವಾಗ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದೆ

ನ್ಯಾಯಾಲಯವು ಇದರ ಬಗ್ಗೆ ಹೇಳುವಾಗ, ಯಾವಾಗ ಕನಿಷ್ಠ ನ್ಯಾಯಾಲಯಗಳು ಒಂದೇ ರೀತಿಯ ನಿರ್ಣಯ ನೀಡಿದ್ದಲ್ಲಿ ಸರ್ವೋಚ್ಚ ನ್ಯಾಯಾಲಯವು ಅದರಲ್ಲಿ ಬದಲಾವಣೆ ಮಾಡುವಾಗ ಜಾಗರೂಕತೆಯನ್ನು ವಹಿಸಿ ತನ್ನ ಹಸ್ತಕ್ಷೇಪವನ್ನು ತಡೆಗಟ್ಟಬೇಕು. ಹೀಗೆ ಪ್ರತಿಯೊಂದು ಪ್ರಕರಣವನ್ನು ಸೂಕ್ಷ್ಮ ಸ್ತರದಲ್ಲಿ ನೋಡತೊಡಗಿದರೆ ಹೇಗೆ ಈ ನ್ಯಾಯಾಲಯಕ್ಕೆ ನಮ್ಮಿಂದ ಅಪೇಕ್ಷೆಯಿದೆಯೋ ಹಾಗೆ ನಾವು ಕರ್ತವ್ಯವನ್ನು ನಿಭಾಯಿಸಲಾರೆವು. ಸರ್ವೋಚ್ಚ ನ್ಯಾಯಾಲಯದಿಂದ ಕೆಲವು ನಿಗದಿತ ಸಿದ್ಧಾಂತಗಳ ಪಾಲನೆಯಾಗಬೇಕು. ಇದರ ಬಗ್ಗೆ ನಾಲ್ಕನೆಯ ನ್ಯಾಯಾಲಯಕ್ಕೆ ಹಸ್ತಕ್ಷೇಪ ಮಾಡಿ ಎಂದು ಹೇಳಲು ಆಗುವುದಿಲ್ಲ ಎಲ್ಲಿಯೋ ಒಂದೆಡೆ ಈ ಪ್ರಕ್ರಿಯೆ ನಿಲ್ಲಬೇಕು ಎಂದು ಹೇಳಿದೆ.