ಕರ್ನಾಟಕದ ಭಾಜಪ ಸರಕಾರವು ಗೋರಕ್ಷಕರ ಮೇಲಿನ ಅಪರಾಧಗಳನ್ನು ಹಿಂಪಡೆಯಲಿದೆ !

ಕರ್ನಾಟಕದ ಭಾಜಪ ಸರಕಾರದಿಂದ ಅಭಿನಂದನೀಯ ನಿರ್ಣಯ ! ಇಂತಹ ನಿರ್ಣಯವನ್ನು ಪ್ರತಿಯೊಂದು ಭಾಜಪದ ಆಡಳಿತವಿರುವ ರಾಜ್ಯಗಳಲ್ಲಿಯೂ ತೆಗೆದುಕೊಳ್ಳಬೇಕು’ ಎಂದು ಹಿಂದೂಗಳಿಗೆ ಅನಿಸುತ್ತದೆ !

ಪ್ರಭು ಚೌಹಾನ್

ಬೆಂಗಳೂರು – ರಾಜ್ಯದಲ್ಲಿ ಗೋರಕ್ಷಣೆಯನ್ನು ಮಾಡುವಾಗ ಗೋರಕ್ಷಕರ ವಿರುದ್ಧ ನೊಂದಾಯಿಸಲಾಗಿರುವ ಅಪರಾಧಗಳನ್ನು ಹಿಂಪಡೆಯುವ ನಿರ್ಣಯವನ್ನು ರಾಜ್ಯದ ಭಾಜಪ ಸರಕಾರವು ತೆಗೆದುಕೊಂಡಿದೆ. ರಾಜ್ಯದ ಪಶುಪಾಲನ ಮಂತ್ರಿ ಪ್ರಭು ಚೌಹಾನ ಇವರು ಈ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಗೋಹತ್ಯಾ ನಿರ್ಬಂಧ ಕಾನೂನು ಅನ್ವಯಿಸಿರುವುದರಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ವಿರುದ್ಧದ ಅಪರಾಧಗಳನ್ನು ಸಹ ಹಿಂಪಡೆಯಲಾಗುವುದು ಎಂದು ಅವರು ಹೇಳಿದರು.